ಬೆಂಝ್ ಸಿಎಲ್‌ಎ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

By Nagaraja

ಸಿರಿವಂತರಿಗೆ ಮಗದೊಂದು ಆಕರ್ಷಕ ಕಾರಿನ ಪರಿಚಯವಾಗಿದೆ. ಸದಾ ಹೊಸ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿರುವ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಹೊಸತಾದ ಸಿಎಲ್‌ಎ ಎಂಟ್ರಿ ಲೆವೆಲ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಪ್ರಾರಂಭಿಕ ಬೆಲೆ - 31.5 ಲಕ್ಷ ರು.(ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್ - ಸ್ಟೈಲ್ ಮತ್ತು ಸ್ಪೋರ್ಟ್

ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಹೊಸ ಬೆಂಝ್ ಸಿಎಲ್‌ಎ ಜರ್ಮನಿಯದ್ದೇ ಆಗಿರುವ ಮಗದೊಂದು ಐಷಾರಾಮಿ ಕಾರು ಆಡಿ ಎ3 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ.

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ವೆರಿಯಂಟ್, ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಸಿಎಲ್‌ಎ200 ಸಿಡಿಐ ಸ್ಟೈಲ್ (ಡಿ) - 31.5 ಲಕ್ಷ ರು.
  • ಸಿಎಲ್‌ಎ200 ಸ್ಪೋರ್ಟ್ (ಪಿ) - 35 ಲಕ್ಷ ರು.
  • ಸಿಎಲ್‌ಎ200 ಸಿಡಿಐ ಸ್ಪೋರ್ಟ್ (ಡಿ) - 37.9 ಲಕ್ಷ ರು.
  • ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಸಿಎಲ್‌ಎ ಆಗಮನವಾಗಿದೆ. ಇದು ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯಿಂದ ಬಿಡುಗಡೆಯಾಗಲಿರುವ 15 ಹೊಸ ಮಾದರಿಗಳ ಭಾಗವಾಗಿದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಆಕರ್ಷಕ ವಿನ್ಯಾಸ, ಕೂಪೆ ತರಹದ ಬಾಡಿ ರೇಖೆಗಳು ಹಾಗೂ ಪರಿಣಾಮಕಾರಿ 17 ಇಂಚಿನ ಫೈವ್ ಸ್ಪೋಕ್ ಅಲಾಯ್ ವೀಲ್‌ಗಳು ಕಾರಿಗೆ ಕ್ರೀಡಾತ್ಮಕ ವಿನ್ಯಾಸ ನೀಡುತ್ತದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಹಿಂದುಗಡೆಯಿಂದ ನೋಡಿದರೆ ಎಲ್‌ಇಡಿ ಬಳಕೆ, ಇಳಿಜಾರಿನಂತಹ ಬೂಟ್ ಸ್ಪೇಸ್ ಕಾರಿಗೆ ಚಾರ್ಮಿಂಗ್ ಲುಕ್ ನೀಡುತ್ತದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಕಾರಿನ ಹೊರಮೈ ತರಹನೇ ಒಳಮೈ ಸಹ ಅಷ್ಟೇ ಆಕರ್ಷಕವಾಗಿದ್ದು, ಐಷಾರಾಮಿ ಸೌಲಭ್ಯಗಳಿಂದ ಕೂಡಿರುತ್ತದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಬೆಂಝ್‌ನ ಫ್ರಂಟ್ ವೀಲ್ ಡ್ರೈವ್ ಎಂಎಫ್‌ಎ ಫ್ಲ್ಯಾಟ್‌ಫಾರ್ಮ್ ತಳಹದಿಯಲ್ಲಿ ಹೊಸ ಸಿಎಲ್‌ಎ ಕ್ಲಾಸ್ ಅಭಿವೃದ್ಧಿಪಡಿಸಲಾಗಿದೆ. ಇದು ಎ ಕ್ಲಾಸ್, ಬಿ ಕ್ಲಾಸ್ ಹಾಗೂ ಜಿಎಲ್‌ಎ ಕ್ಲಾಸ್ ಎಸ್‌ಯುವಿ ಜೊತೆಗೆ ವಿನ್ಯಾಸ ಹಂಚಿಕೊಂಡಿದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಕಾರಿನಡಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್ 183.5 ಅಶ್ವಶಕ್ತಿ ಉತ್ಪಾದಿಸುವ (300 ಎನ್‌ಎಂ) ಸಾಮರ್ಥ್ಯ ಹೊಂದಿದೆ. ಹಾಗೆಯೇ 2.2 ಲೀಟರ್ ಡೀಸೆಲ್ ಎಂಜಿನ್ 136 ಅಶ್ವಶಕ್ತಿ (300 ಎನ್‌ಎಂ) ಉತ್ಪಾದಿಸಲಿದೆ. ಎರಡೂ ಎಂಜಿನ್‌ಗಳು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಪಡೆಯಲಿದೆ.

    ಬೆಂಝ್ ಸಿಎಲ್‌ಎ ಕ್ಲಾಸ್ ಎಂಟ್ರಿ ಲೆವೆಲ್ ಐಷಾರಾಮಿ ಕಾರು ಬಿಡುಗಡೆ

    ಅಚ್ಚರಿಯೆಂದರೆ ಕಳೆದ ವರ್ಷವೇ ಸಿಎಲ್‌ಎ45 ಎಎಂಜಿ ವರ್ಷನ್ ದೇಶದಲ್ಲಿ ಬಿಡುಗಡೆಯಾಗಿತ್ತು. ಇದೀಗ ಸಾಮಾನ್ಯ ಆವೃತ್ತಿಯ ಪ್ರವೇಶವಾಗಿದೆ. ಅಂತೆಯೇ ಬೆಂಝ್ ಸಿಎಲ್‌ಇ ಕ್ಲಾಸ್ ಬುಕ್ಕಿಂಗ್ ದರ 2 ಲಕ್ಷ ರು.ಗಳಾಗಿದೆ.

    ಸ್ಟೈಲ್ ವಿಶಿಷ್ಟತೆ

    ಸ್ಟೈಲ್ ವಿಶಿಷ್ಟತೆ

    16 ಇಂಚಿನ ಅಲಾಯ್ ವೀಲ್,

    ಚಾಲಕ ಬದಿಯ ಸೀಟು ಮೆಮೆರಿ,

    ಇನ್ನು ಈ ಎರಡು ವೆರಿಯಂಟ್‌‍ಗಳು ಪೆಡಲ್ ಶಿಫ್ಟರ್, ರಿವರ್ಸ್ ಕ್ಯಾಮೆರಾ ಮತ್ತು ಬೈ ಕ್ಸೆನಾನ್ ಹೆಡ್ ಲ್ಯಾಂಪ್ ಪಡೆಯಲಿದೆ.

    ಸ್ಪೋರ್ಟ್ ವಿಶಿಷ್ಟತೆ

    ಸ್ಪೋರ್ಟ್ ವಿಶಿಷ್ಟತೆ

    • ಕ್ರೋಮ್ ಸ್ಪರ್ಶದ ಸ್ಟೀರಿಂಗ್ ವೀಲ್,
    • ಪ್ಯಾನರೋಮಿಕ್ ಸನ್ ರೂಫ್,
    • ಡೈಮಂಡ್ ಗ್ರಿಲ್,
    • ಹರ್ಮಾನ್ ಕರ್ಡಾನ್ ಸೌರಂಡ್ ಸೌಂಡ್ ಸಿಸ್ಟಂ,
    • ಸ್ಯಾಟಲೈಟ್ ನೇವಿಗೇಷನ್ ಡ್ರೈಮ್,
    • ಪ್ರಯಾಣಿಕ ಸೀಟು ಮೆಮರಿ,
    • 17 ಇಂಚಿನ ಅಲಾಯ್ ವೀಲ್

Most Read Articles

Kannada
English summary
Mercedes-Benz CLA Class launched in India at price Rs 31.5 lakh (ex-showroom Delhi) available at two trims - Style and Sport. 
Story first published: Thursday, January 22, 2015, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X