ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

By Nagaraja

ಎಎಂಜಿ ಅಂದರೆ ಮರ್ಸಿಡಿಸ್ ಬೆಂಝ್‌ನ ಅತ್ಯಂತ ಶಕ್ತಿಶಾಲಿ ವಿಭಾಗ ಎಂಬುದು ಎಲ್ಲರಿಗೂ ತಿಳಿದೇ ಇದೆ. ಪ್ರಸ್ತುತ ಜರ್ಮನಿ ಮೂಲದ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಅತಿ ದುಬಾರಿ ಜಿಎಲ್63 ಎಎಂಜಿ ಭಾರತ ಮಾರುಕಟ್ಟೆಗೆ ಪರಿಚಯಿಸಿದೆ.

ಇದರ ಮುಂಬೈ ಎಕ್ಸ್ ಶೋ ರೂಂ ದರ 1.66 ಕೋಟಿ ರು.ಗಳಾಗಿವೆ. ಈ ಮೂಲಕ ಎಎಂಜಿ ರೇಂಜ್‌ಗೆ ಮಗದೊಂದು ಕಾರು ಸೇರ್ಪಡೆಯಾಗಿದೆ. ಇದು ಮುಖ್ಯವಾಗಿಯೂ ರೇಂಜ್ ರೋವರ್ ಸ್ಪೋರ್ಟ್ ಹಾಗೂ ಪೋರ್ಷೆ ಕೇಯೆನ್ ಟರ್ಬೊ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

ಇದು 5.5 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 565 ಅಶ್ವಶಕ್ತಿ ಜತೆಗೆ 760 ಎನ್‌ಎಂ ಉತ್ಪಾದಿಸಲಿದೆ. ಹಾಗೆಯೇ ಆಲ್ ವೀಲ್ ಡ್ರೈವ್ ಜತೆಗೆ 7ಜಿ ಟ್ರಾನಿಕ್ ಟ್ರಾನ್ಸ್‌ಮಿಷನ್ ಹಾಗೂ ಸ್ಪೀಡ್ ಶಿಫ್ಟ್ ಪ್ಲಸ್ ಹೊಂದಿರಲಿದೆ.

ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

ಈ ಏಳು ಸೀಟಿನ ಜಿಎಲ್ ಕ್ಲಾಸ್ ಕೇವಲ 4.9 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ. ಮೀ. ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.

ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಬೆಂಝ್ ಜಿಎಲ್63 ಎಎಂಜಿ ಕ್ಲಾಸ್ ಭಾರತ ಪ್ರವೇಶ ಪಡೆಯಲಿದೆ. ಇದು ಪರಿಷ್ಕೃತ ಬಂಪರ್ ಜತೆಗೆ ಫ್ರಂಟ್ ಗ್ರಿಲ್ ಹಾಗೂ ಬೆಂಝ್ ಲೊಗೊ ಪಡೆದುಕೊಳ್ಳಲಿದೆ.

ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

ಬೆಂಝ್ ಜಿಎಲ್63 ಮೂರು ವರ್ಷಗಳ ಸ್ಟಾಂಡರ್ಡ್ ವಾರಂಟಿ ಸೌಲಭ್ಯವಿದ್ದು, ಹೆಚ್ಚುವರಿ 1.7 ಲಕ್ಷದಲ್ಲಿ ನಾಲ್ಕನೇ ವರ್ಷಕ್ಕೂ ವಾರಂಟಿ ಸೌಲಭ್ಯವಿರಲಿದೆ.

ಬೆಂಝ್‌ನಿಂದ ದುಬಾರಿ ಜಿಎಲ್63 ಎಎಂಜಿ ಎಸ್‌ಯುವಿ ಲಾಂಚ್

ಈ ಮೂಲಕ ಜಿಎಲ್63, ಎಸ್‌ಎಲ್‌ಎಸ್ ಎಎಂಜಿ, ಎಸ್‌ಎಲ್‌ಕೆ55 ಎಎಂಜಿ, ಸಿ63, ಜಿ63 ಮತ್ತು ಇ63 ಎಎಂಜಿ ಸಾಲಿಗೆ ಸೇರಿಕೊಂಡಿದೆ. ಹಾಗೆಯೇ ಮುಂಬರುವ ತಿಂಗಳಲ್ಲಿ ಎ45, ಸಿಎಲ್‌ಎ45, ಸಿಎಲ್‌ಎಸ್63 ಹಾಗೂ ಎಂಎಲ್63 ಎಎಂಜಿ ಆವೃತ್ತಿಗಳನ್ನು ಲಾಂಚ್ ಮಾಡಲಿದೆ.

Most Read Articles

Kannada
English summary
Mercedes-Benz launches the AMG version of its full sized GL SUV in India at Rs 1.66 crore (ex-showroom, Mumbai )
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X