ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

By Nagaraja

ಈ ಬಾರಿಯ ಪ್ಯಾರಿಸ್ ಮೋಟಾರು ಶೋ ಹಲವು ಕಾರಣಗಳಿಂದಾಗಿ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ. ಈ ಹಿಂದೆ ಪಸ್ಸಾಟ್ ಆಲ್ ಟ್ರ್ಯಾಕ್ ಪರಿಚಯಿಸಿದ್ದ ಫೋಕ್ಸ್‌ವ್ಯಾಗನ್ ಆನ್ ರೋಡ್ ಮತ್ತು ಆಫ್ ರೋಡ್ ನಡುವಣ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿತ್ತು.

ಇದೀಗ ಫೋಕ್ಸ್‌ವ್ಯಾಗನ್ ಮಾದರಿಯನ್ನು ಅಭಿವೃದ್ಧಪಡಿಸುತ್ತಿದ್ದು, 2014 ಪ್ಯಾರಿಸ್ ಮೋಟಾರು ಶೋದಲ್ಲಿ ಪಾದಾರ್ಪಣೆಗೈಯಲಿದೆ. ಫೋಕ್ಸ್‌ವ್ಯಾಗನ್ ಹೊಸ ಮಾದರಿ ಗಾಲ್ಫ್ ಆಲ್‌ಟ್ರ್ಯಾಕ್ ಎಂದು ಅರಿಯಲ್ಪಡಲಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

ಯುರೋಪ್‌ನ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ 2014 ಅಕ್ಟೋಬರ್ 2ರಿಂದ 19ರ ವರೆಗೆ ನಡೆಯಲಿರುವ ಪ್ಯಾರಿಸ್ ಮೋಟಾರು ಶೋದಲ್ಲಿ ತನ್ನ ಹೊಚ್ಚ ಹೊಸ ಆಳ್ ವೀಲ್ ಡ್ರೈವ್ ಮಾದರಿಯನ್ನು ಪರಿಚಯಿಸಲಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

ಆಲ್ ವೀಲ್ ಡ್ರೈವ್ ಜೊತೆಗೆ ಅಧಿಕ ಗ್ರೌಂಡ್ ಕ್ಲಿಯರನ್ಸ್, ವೀಲ್ ಆರ್ಚ್ ಮೌಲ್ಡಿಂಗ್ಸ್, ದೇಹ ಸಂರಕ್ಷಣೆ, ಹೊಸತಾಗಿ ವಿನ್ಯಾಸಗೊಳಿಸಲಾದ ಬಂಪರ್ ಮತ್ತು ಸ್ವಂತಂತ್ರ್ಯ ಹೊರಮೈ ಮತ್ತು ಇಂಟಿರಿಯರ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

ಹೊಸ ಗಾಲ್ಫ್ ಆಲ್ ಟ್ರ್ಯಾಕ್ ಮಾದರಿಯಲ್ಲಿ ಟಿಎಸ್‌ಐ ಪೆಟ್ರೋಲ್ ಎಂಜಿನ್ ಮತ್ತು ಮೂರು ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಇದರ 1.8 ಲೀಟರ್ ಟಿಎಸ್‌ಐ ಎಂಜಿನ್ (180 ಪಿಎಸ್) ಗಾಲ್ಫ್ ರೇಂಜ್ ಕಾರುಗಳಿಗೆ ಹೊಸ ಅನುಭವಾಗಲಿದೆ. ಅದೇ ರೀತಿ 1.6 ಟಿಡಿಐ ಡೀಸೆಲ್ ಎಂಜಿನ್ (110ಪಿಎಸ್ ಜೊತೆಗೆ ಎರಡು ವಿಭಿನ್ನ ಚೈತ್ಯನ್ಯ ಉತ್ಪಾದಿಸುವ 2.0 ಲೀಟರ್ ಟಿಡಿಐ ಎಂಜಿನ್ (150 ಹಾಗೂ 184 ಅಶ್ವಶಕ್ತಿ) ಇರಲಿದೆ. ಇದರ 180 ಮತ್ತು 184 ಪಿಎಸ್ ಎಂಜಿನ್‌ಗಳು ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರಲಿದ್ದು ಆರು ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ (ಡಿಎಸ್‌ಜಿ) ಸಹ ಪಡೆಯಲಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

4 ಮೋಷನ್ ಆಲ್ ವೀಲ್ ಡ್ರೈವ್ ತಂತ್ರಗಾರಿಕೆಯನ್ನು ಹೊಂದಿರುವ ಹೊಸ ಗಾಲ್ಫ್ ಆಲ್‌ಟ್ರ್ಯಾಕ್ ಉತ್ತಮ ನಿರ್ವಹಣೆಯನ್ನು ನೀಡಲಿದೆ. ಇದು ಹೊಸ ತಲೆಮಾರಿನ ಹಾಲ್ಡೆಕ್ಸ್ ಕಪ್ಲಿಂಗ್ ವ್ಯವಸ್ಥೆ ಹೊಂದಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

ಕಾರಿನ ಹೊರಗಡೆ ಕ್ರೀಡಾತ್ಮ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸಿಸ್ಟಂ ಮುಂತಾದ ವ್ಯವಸ್ಥೆಗಳನ್ನು ಪಡೆದುಕೊಳ್ಳಲಿದೆ.

ಪ್ಯಾರಿಸ್‌ನತ್ತ ಮುಖ ಮಾಡಿದ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್

ಒಟ್ಟಿನಲ್ಲಿ ಹೊಸ ಫೋಕ್ಸ್‌ವ್ಯಾಗನ್ ಗಾಲ್ಫ್ ಆಲ್‌ಟ್ರ್ಯಾಕ್ ಮಾದರಿ ಅಭಿಮಾನಿಗಳಲ್ಲಿ ಹೊಸ ಅನುಭವಕ್ಕೆ ಕಾರಣವಾಗಲಿದೆ.

Most Read Articles

Kannada
English summary
When Volkswagen introduced the Passat Alltrack, it closed the gap between the on-road and off-road worlds. Now Volkswagen is transferring this concept to another vehicle class with the new Golf Alltrack.
Story first published: Friday, September 26, 2014, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X