ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಜಪಾನ್‌ನ ಅಗ್ರಗಣ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಪ್ರತಿಷ್ಠಿತ 2015 ಜಿನೆವಾ ಮೋಟಾರು ಶೋದಲ್ಲಿ ನೂತನ 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ.

ಮುಂದಿನ ಪೀಳಿಗೆಯ ಮೈಕ್ರಾ ಎಂದೇ ವಿಶ್ಲೇಷಿಸಲಾಗುತ್ತಿರುವ ನಿಸ್ಸಾನ್ ಸ್ವೇ ಒಂದೇ ನೋಟದಲ್ಲಿ ಮೈಕ್ರಾ ಸೂಪರ್ ಮಿನಿ ಎಂದೆನಿಸಿಕೊಳ್ಳಲಿದೆ.

(ಕೊನೆಯಲ್ಲಿ ನೀಡಿರುವ ಟೀಸರ್ ವೀಡಿಯೋ ನೋಡಲು ಮರೆಯದಿರಿ)

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ನಿಸ್ಸಾನ್ ನೂತನ ವಿನ್ಯಾಸ ತಂತ್ರಜ್ಞಾನವನ್ನು ಸ್ವೇ ಕಾರಲ್ಲಿ ಆಳವಡಿಸಲಾಗಿದೆ. ಇದನ್ನು ಮೊದಲ ಬಾರಿಗೆ ಮುರನೊ ಕಾರಿನಲ್ಲಿ ಹೊರತರಲಾಗಿತ್ತು.

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ನೂತನ ನಿಸ್ಸಾನ್ ಸ್ವೇ ಬಗ್ಗೆ ಮಾತನಾಡುವುದಾದ್ದಲ್ಲಿ ಈ ಹೊಸ ಕಾರು 4010ಎಂಎಂ ಉದ್ದ, 1780ಎಂಎಂ ಅಗಲ ಹಾಗೂ 1385 ಎಂಎಂ ಎತ್ತರವನ್ನು ಹೊಂದಿರಲಿದೆ.

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ನೆಕ್ಸ್ಟ್ ಜನರೇಷನ್ ಮೈಕ್ರಾ ಕಾರಾಗಿರುವ ನಿಸ್ಸಾನ್ ಸ್ವೇ, 2016 ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಯನ್ನು ತಲುಪಲಿದೆ.

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಪ್ರಮುಖವಾಗಿಯೂ ಯುರೋಪ್ ಗ್ರಾಹಕರನ್ನು ಗುರಿಯಾರಿಸಿಕೊಂಡು ಇಂತಹದೊಂದು ಕಾನ್ಸೆಪ್ಟ್ ರಚಿಸಲಾಗಿದೆ. ಹಾಗಾಗಿ ಸದ್ಯಕ್ಕೆ ಭಾರತಕ್ಕೆ ಪರಿಚಯವಾಗುವ ಮಾತು ದೂರವೆನಿಸಿದೆ.

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ವಿ ಆಕಾರದ ಗ್ರಿಲ್, ತೇಲುವಂತಹ ಮೇಲ್ಚಾವಣಿ, ಬೂಮ್‌ರಂಗ್ ಹೆಡ್ ಲ್ಯಾಂಪ್, ಎಲ್‌ಇಡಿ ಲ್ಯಾಂಪ್, ಆಕರ್ಷಕ ಮೈ ಬಣ್ಣ, ಹಗುರ ಭಾರದ ಅಲ್ಯೂಮಿನಿಯಂ ರಚನೆ ಮುಂತಾದ ವೈಶಿಷ್ಟ್ಯಗಳು ಹೊಸ ಸ್ವೇ ಕಾರಿನಲ್ಲಿ ಕಾಣಸಿಗಬಹುದಾಗಿದೆ.

ಇದುವೇ ಮೈಕ್ರಾ ಸೂಪರ್ ಮಿನಿ ಕಾರು - 'ಸ್ವೇ' ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಒಟ್ಟಿನಲ್ಲಿ ನಿಸ್ಸಾನ್ ಸ್ವೇ ನಿರ್ಮಾಣ ಮಾದರಿಯಲ್ಲಿ ಎಷ್ಟು ಬದಲಾವಣೆ ಕಂಡಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೂ ಸದ್ಯ ಪ್ರದರ್ಶಿಸಿರುವ ಮಾದರಿಯು ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿರುವುದಂತೂ ನಿಜ.

ನಿಸ್ಸಾನ್ ಸ್ವೇ - ರೋಚಕ ಟೀಸರ್ ವೀಡಿಯೋ ವೀಕ್ಷಿಸಿ

Most Read Articles

Kannada
English summary
Nissan Introduces SWAY Compact Hatchback concept at Geneva Motor Show 2015
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X