ನಿಸ್ಸಾನ್ ಮೈಕ್ರಾ ಡೀಸೆಲ್ ಬೇಸ್ ವೆರಿಯಂಟ್ ಲಾಂಚ್

By Nagaraja

ಇತ್ತೀಚೆಗಷ್ಟೇ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್ ಲಾಂಚ್ ಆಗಿರುವುದರ ಬಗ್ಗೆ ನಾವು ವರದಿ ಮಾಡಿದ್ದೆವು. ಇದರ ಬೆನ್ನಲ್ಲೇ ನಿಸ್ಸಾನ್ ಮೈಕ್ರಾ ಎಕ್ಸ್‌ಇ ಡೀಸೆಲ್ ಬೇಸ್ ವೆರಿಯಂಟ್‌ನ್ನು ಈ ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯು ದೇಶಕ್ಕೆ ಪರಿಚಯಿಸಿದೆ.

ಕಂಪನಿಯ ಪ್ರಕಾರ ನೂತನ ಮೈಕ್ರಾ ಡೀಸೆಲ್ ಎಂಟ್ರಿ ಲೆವೆಲ್ ಎಕ್ಸ್‌ಇ ವೆರಿಯಂಟ್, ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ನೀಡಿರುವಂತೆಯೇ ಪ್ರತಿ ಲೀಟರ್‌ಗೆ 23.08 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇಷ್ಟಕ್ಕೂ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್‌ ಎಕ್ಸ್ ಶೋ ರೂಂ ದರ ಎಷ್ಟು? ಮತ್ತು ಏನೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಡೀಸೆಲ್ ಬೇಸ್ ವೆರಿಯಂಟ್

ಡೀಸೆಲ್ ಬೇಸ್ ವೆರಿಯಂಟ್

ನೂತನ ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ಎಕ್ಸ್‌ಇ ಡೀಸೆಲ್ ಬೇಸ್ ವೆರಿಯಂಟ್‌ನಲ್ಲಿ ಕ್ರೋಮ್ ಹೋದಿಕೆಯ ರೇಡಿಯೇಟರ್ ಗ್ರಿಲ್, ಹೊಂದಾಣಿಸಬಹುದಾದ ಸ್ಟೀರಿಂಗ್, ಚಾಲಕನ ಬದಿಯ ಏರ್ ಬ್ಯಾಗ್, ಪವರ್ ಸ್ಟೀರಿಂಗ್ ಮತ್ತು ಮ್ಯಾನುವಲ್ ಏರ್-ಕಾನ್ ಕಂಟ್ರೋಲ್ ಸೌಲಭ್ಯಗಳು ಲಭ್ಯವಿರಲಿದೆ.

ನಿಸ್ಸಾನ್ ಮೈಕ್ರಾ ಪೆಟ್ರೋಲ್ ವೆರಿಯಂಟ್, ದರ ಮಾಹಿತಿ

ನಿಸ್ಸಾನ್ ಮೈಕ್ರಾ ಪೆಟ್ರೋಲ್ ವೆರಿಯಂಟ್, ದರ ಮಾಹಿತಿ

ಎಕ್ಸ್ ಶೋ ರೂಂ ದೆಹಲಿ

  • ಎಕ್ಸ್‌ಎಲ್: 4.79 ಲಕ್ಷ ರು.
  • ಎಕ್ಸ್‌ಎಲ್ (ಆಪ್ಷನ್): 5.42 ಲಕ್ಷ ರು.
  • ಎಕ್ಸ್‌ವಿ (ಸಿವಿಟಿ): 6.39 ಲಕ್ಷ ರು.
  • ನಿಸ್ಸಾನ್ ಮೈಕ್ರಾ ಡೀಸೆಲ್ ವೆರಿಯಂಟ್, ದರ ಮಾಹಿತಿ

    ನಿಸ್ಸಾನ್ ಮೈಕ್ರಾ ಡೀಸೆಲ್ ವೆರಿಯಂಟ್, ದರ ಮಾಹಿತಿ

    ಎಕ್ಸ್ ಶೋ ರೂಂ ದೆಹಲಿ

    • ಎಕ್ಸ್‌ಇ: 5.57 ಲಕ್ಷ ರು. (ಇದೀಗಷ್ಟೇ ಲಾಂಚ್)
    • ಎಕ್ಸ್‌ಎಲ್: 5.99 ಲಕ್ಷ ರು.
    • ಎಕ್ಸ್‌ಎಲ್ (ಆಪ್ಷನ್): 6.89 ಲಕ್ಷ ರು.
    • ಎಕ್ಸ್‌ವಿ (ಪಿ): 7.14 ಲಕ್ಷ ರು.
    • ಇಂಟಿರಿಯರ್

      ಇಂಟಿರಿಯರ್

      ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಿಸ್ಸಾನ್ ಮೋಟಾರ್ ಇಂಡಿಯಾ ಮಹಾನಿರ್ದೇಶಕ ಹಾಗೂ ಸಿಇಒ ಆಗಿರುವ ಕೆನಿಚಿರೊ ಯೋಮುರಾ, ಜುಲೈನಲ್ಲಿ ಲಾಂಚ್ ಆಗಿರುವ ಮೈಕ್ರಾ ಪರಿವರ್ತಿತ ಆವೃತ್ತಿಗೆ ಭಾರತೀಯ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದ್ದು, ಈ ನಿಟ್ಟಿನಲ್ಲಿ ನೂತನ ಡೀಸೆಲ್ ವೆರಿಯಂಟ್ ಕೂಡಾ ಗ್ರಾಹಕರಿಗೆ ಉತ್ತಮ ಆಯ್ಕೆಯನ್ನು ಒದಗಿಸಲಿದೆ ಎಂದಿದ್ದಾರೆ.

      ಕಲರ್ ವೆರಿಯಂಟ್

      ಕಲರ್ ವೆರಿಯಂಟ್

      ನೂತನ ನಿಸ್ಸಾನ್ ಮೈಕ್ರಾ ಎಕ್ಸ್‌ಇ ವೆರಿಯಂಟ್ ಒಟ್ಟು ಆರು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

      • Olive green,
      • Turquoise blue,
      • Blade silver,
      • Storm white,
      • Onyx black ಮತ್ತು
      • Brick red.
      • ಎಂಜಿನ್ ಮಾಹಿತಿ

        ಎಂಜಿನ್ ಮಾಹಿತಿ

        ನಿಸ್ಸಾನ್ ಮೈಕ್ರಾ ಫೇಸ್‌ಲಿಫ್ಟ್ ವರ್ಷನ್ 1.2 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ ನಿಸ್ಸಾನ್ ಮೈಕ್ರಾ ಖರೀದಿ ವೇಳೆ 50,000 ಕೀ.ಮೀ. ಅಥವಾ ಎರಡು ವರ್ಷಗಳ ವಾರಂಟಿ ಕೂಡಾ ಒದಗಿಸಲಾಗುತ್ತಿದೆ.

        ವೈಶಿಷ್ಟ್ಯಗಳೇನು?

        ವೈಶಿಷ್ಟ್ಯಗಳೇನು?

        • ಕ್ರೋಮ್ ಹೋದಿಕೆಯ ರೇಡಿಯೇಟರ್ ಗ್ರಿಲ್,
        • ಟಿಲ್ಟ್ ಸ್ಟೀರಿಂಗ್
        • ಡ್ರೈವ್ ಕಂಪ್ಯೂಟರ್
        • ಡ್ರೈವರ್ ಏರ್ ಬ್ಯಾಗ್
        • ಸುರಕ್ಷತೆ

          ಸುರಕ್ಷತೆ

          • ಇಂಮೊಬಿಲೈಜರ್,
          • ಡ್ರೈವರ್ ಸೀಟ್ ಬೆಲ್ಟ್ ವಾರ್ನಿಂಗ್ ಇಂಡಿಕೇಟರ್,
          • ಡೋರ್ ವಾರ್ನಿಂಗ್ ಇಂಡಿಕೇಟರ್,
          • ಲೊ ಫ್ಯೂಯಲ್ ಲೆವೆಲ್ ವಾರ್ನಿಂಗ್ ಇಂಡಿಕೇಟರ್,
          • ಹೆಡ್‌ಲೈಟ್ ಆನ್,
          • ಕೀ ರಿಮೂವಿಂಗ್ ಇಂಡಿಕೇಟರ್ ಇತ್ಯಾದಿ.
          • ಯಾವೆಲ್ಲ ಫೀಚರ್ಸ್‌ಗಳಿಲ್ಲ...

            ಯಾವೆಲ್ಲ ಫೀಚರ್ಸ್‌ಗಳಿಲ್ಲ...

            ಹಾಗಿದ್ದರೂ ನಿಸ್ಸಾನ್ ಮೈಕ್ರಾ ಡೀಸೆಲ್ ಬೇಸ್ ವೆರಿಯಂಟ್, ಮುಂಭಾಗ ಹಾಗೂ ಹಿಂಭಾಗದ ಪವರ್ ವಿಂಡೋಸ್, ಆಡಿಯೋ ಸಿಸ್ಟಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳಂತಹ ಫೀಚರ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದೆ.

Most Read Articles

Kannada
English summary
Japanese car maker Nissan has launched a new base diesel XE variant for the recently launched Micra facelift, which is priced at Rs 5.57 lakh (ex-showroom, Delhi).
Story first published: Wednesday, September 4, 2013, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X