ರೆಡಿ ಗೊ; ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

By Nagaraja

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಕೊಂಡಿರುವ ರೆನೊ, ತನ್ನ ಅತ್ಯಾಕರ್ಷಕ ಡಸ್ಟರ್ ಎಡಿಷನ್‌ನ ಅಡ್ವೆಂಚರ್ ಆವೃತ್ತಿ ಬಿಡುಗಡೆಗೊಳಿಸಿದೆ.

2014 ಆಟೋ ಎಕ್ಸ್ ಪೋ ಹೈಲೆಟ್ಸ್

ಇದೀಗಷ್ಟೇ ಅಂತ್ಯಗೊಂಡ 2014 ಆಟೋ ಎಕ್ಸ್ ಪೋದಲ್ಲಿ ಡಸ್ಟರ್ ಅಡ್ವೆಂಚರ್ ಎಡಿಷನ್ ಪ್ರದರ್ಶಿಸಿದ್ದ ರೆನೊ, ಇದೀಗ ಈ ಬಹುನಿರೀಕ್ಷಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ದೇಶದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಇದನ್ನು ಗಮನಿಸಿರುವ ರೆನೊ, ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಡ್ವೆಂಚರ್ ಎಡಿಷನ್ ಪರಿಚಯಿಸಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಡಸ್ಟರ್ ಆರ್‌ಎಕ್ಸ್‌ಎಲ್ ವೆರಿಯಂಟ್‌ನಲ್ಲಿ ಮಾತ್ರ ಅಡ್ವೆಂಚರ್ ಎಡಿಷನ್ ಆಗಮನವಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 12.18 ಲಕ್ಷ ರು.ಗಳಾಗಿವೆ. ನೂತನ ಡಸ್ಟರ್ ಅಡ್ವೆಂಚರ್ ಕಾರು ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ ಹೆಚ್ಚು ಆಕ್ಸೆಸರಿ ಕೂಡಾ ಲಭ್ಯವಾಗಲಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ನೀವು ನೋಡುತ್ತಿರುವಂತೆಯೇ ಮುಂದುಗಡೆ ಹೆಡ್‌ಲ್ಯಾಂಪ್ ವಿಶಿಷ್ಟ ವಿನ್ಯಾಸ ಪಡೆದುಕೊಂಡಿದೆ. ಹಾಗೆಯೇ ಹಾರ್ಮರ್‌ನಲ್ಲಿ ಲೈಟ್ ಕೂಡಾ ಲಗತ್ತಿಸಲಾಗಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಇನ್ನು ಆಫ್ ರೋಡ್‌ಗೆ ಅನುಗುಣವಾಗುವ ರೀತಿಯಲ್ಲಿ ಬದಿಯಲ್ಲಿ ಸೈಡ್ ಹಿಲ್ಸ್, ವೀಲ್ ಆರ್ಚ್ ಪಡೆದುಕೊಂಡಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಅಂತೆಯೇ ಡಿ ಪಿಲ್ಲರ್ ಹಿಂದುಗಡೆ ಸಾಹಸ ಎಡಿಷನ್ ಭಾಸವಾಗುವ ರೀತಿಯಲ್ಲಿ ದಿಕ್ಸೂಚಿಯನ್ನು ರಚಿಸಲಾಗಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಇಷ್ಟೆಲ್ಲ ಆದ ಮೇಲೆ ಹೊಸ ಅಲಾಯ್ ವೀಲ್ ಅಂತೂ ಇದ್ದೇ ಇರುತ್ತದೆ ಅಲ್ಲವೇ!

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಕಾರಿನೊಳಗಡೆ ಕೂಡಾ ಪರಿಷ್ಕೃತಗೊಳಿಸಲಾಗಿದ್ದು ಲೈಮ್ ಗ್ರೀನ್ ಸೀಟು ಕವರ್, ಡೋರ್ ಟ್ರಿಮ್ ಫ್ಯಾಬ್ರಿಕ್ ಮತ್ತು ಮೆಟಲ್ ಫಿನಿಶ್ ಗ್ರಾಬ್ ಹ್ಯಾಂಡಲ್ ಪಡೆದಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಅದೇ ರೀತಿ ಕಾರಿನೊಳಗಿನ ಕಾರ್ಪೆಟ್‌ನಲ್ಲೂ ಡಸ್ಟರ್ ಬ್ಯಾಡ್ಜ್ ಗುರುತಿಸಿಕೊಳ್ಳಬಹುದಾಗಿದೆ. ಇಲ್ಲೂ ಹಳದಿ ಬಣ್ಣದ ಫಿನಿಶಿಂಗ್ ಟಚ್ ನೀಡಲಾಗಿದೆ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಅಂತಿಮವಾಗಿ ಸೆಂಟರ್ ಕನ್ಸೋಲ್ ಹಾಗೂ ಸ್ಟೀರಿಂಗ್ ವೀಲ್‌ಗೆ ಬ್ಲ್ಯಾಕ್ ಫಿನಿಶಿಂಗ್ ನೀಡಲಾಗಿದೆ.

ಇತರ ಫೀಚರ್ಸ್‌ಗಳು

ಇತರ ಫೀಚರ್ಸ್‌ಗಳು

ಆಡಿಯೋ ಸಿಸ್ಟಂ, ಯುಎಸ್‌ಬಿ ಪೋರ್ಡ್, ನಾಲ್ಕು ಸ್ಪೀಕರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್. ಇನ್ನು ಸುರಕ್ಷತೆಗಾಗಿ ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್. ಮೀಡಿಯಾ ನೇವಿಗೇಷನ್ ಮಾಹಿತಿ ಮನರಂಜನಾ ಸಿಸ್ಟಂ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಒಆರ್‌ವಿಎಂ.

ರೆನೊ ಡಸ್ಟರ್ ಅಡ್ವೆಂಚರ್ ಎಡಿಷನ್ ಲಾಂಚ್

ಹಾಗಿದ್ದರೂ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ನೂತನ ಡಸ್ಟರ್ ಅಡ್ವೆಂಚರ್ ಎಡಿಷನ್ 1.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 110 ಪಿಎಸ್ ಪವರ್ (248 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಲಗತ್ತಿಸಲಾಗಿದೆ.

Most Read Articles

Kannada
English summary
Following the preview of the Renault Duster Adventure Edition at the Auto Expo 2014 the carmaker has launched the special edition compact SUV in India.
Story first published: Friday, February 14, 2014, 12:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X