ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

By Nagaraja

ದೇಶದ ಕಾರು ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿರುವ ರೆನೊ ಡಸ್ಟರ್, ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆಗಿ ಪರಿಣಮಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭರ್ಜರಿ ಮಾರಾಟ ಸಾಧಿಸಿರುವ ಈ ಎಸ್‌ಯುವಿ ಕಾರು, ಮಾರಾಟದಲ್ಲಿ ಮಹೀಂದ್ರ ಸ್ಕಾರ್ಪಿಯೊದಂತಹ ದೇಶದ ಅತ್ಯಂತ ಜನಪ್ರಿಯ ಕಾರನ್ನೇ ಹಿಂದಿಕ್ಕಿದೆ.

ಏಪ್ರಿಲ್ ತಿಂಗಳ ಅಂಕಿಅಂಶ ಇದಕ್ಕೆ ಪುಷ್ಠಿ ನೀಡುತ್ತಿದೆ. ಎಪ್ರಿಲ್ ತಿಂಗಳಲ್ಲಿ ಸ್ಕಾರ್ಪಿಯೊ 4,700 ಯುನಿಟ್‌ಗಳು ಮಾತ್ರ ಸೇಲ್ ಆಗಿದ್ದರೆ ರೆನೊ ಡಸ್ಟರ್ 6,300 ಯುನಿಟ್ ಮಾರಾಟ ಕಂಡುಕೊಳ್ಳುವ ಮೂಲಕ ದೇಶದ ಕ್ರೀಡಾ ಸೆಗ್ಮೆಂಟ್‌ ವಾಹನಕ್ಕೆ ಹೊಸ ಅಧಿಪತಿ ಎನಿಸಿಕೊಂಡಿದೆ.

ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

ರೆನೊ ನಿರೀಕ್ಷೆ ಮಾಡಿದಕ್ಕಿಂತಲೂ ವೇಗವಾಗಿ ಯಶಸ್ಸು ಡಸ್ಟರನ್ನು ಹರಸಿಕೊಂಡು ಬಂದಿದೆ. ಇದುವೇ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಎಂಬ ಪಟ್ಟ ನೀಡುವಲ್ಲಿ ಯಶಸ್ವಿಯಾಗಿದೆ.

ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

ಕಳೆದ ವರ್ಷ ಇದೇ ಸಂದರ್ಭಕ್ಕೆ ಹೋಲಿಸಿದಾಗ ರನೊ ಮಾರಾಟದಲ್ಲಿ 10 ಪಟ್ಟುಗಳಷ್ಟು ವರ್ಧನೆ ಕಂಡುಬಂದಿದೆ. ಇವೆಲ್ಲವೂ ಡಸ್ಟರ್‌ನಿಂದ ಮಾತ್ರ ಸಾಧ್ಯವಾಗಿದೆ.

ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

ಈ ನಡುವೆ ಕಳೆದೊಂದು ವರ್ಷದಲ್ಲಿ ಗ್ರಾಹಕರನ್ನು ಅತಿ ಹೆಚ್ಚು ಸಂತೃಪ್ತಿಗೊಳಿಸಿದ ಕಾರೆಂಬ ಹೆಗ್ಗಳಿಕೆಗೂ ಡಸ್ಟರ್ ಪಾತ್ರವಾಗಿದೆ. ಇದಕ್ಕಾಗಿ ಟಿಎನ್‌ಸಿ ವಾಯ್ಸ್ ಆಫ್ ಕಸ್ಟಮರ್ ಪ್ರಶಸ್ತಿಗೂ ಭಾಜನವಾಗಿದೆ.

ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

ಭಾರತದಲ್ಲಿ ಎಸ್‌ಯುವಿ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದೇ ಕಾರಣಕ್ಕಾಗಿ ಜಗತ್ತಿನ ಪ್ರಮುಖ ಕಂಪನಿಗಳು ಇತ್ತ ಗಮನ ಕೇಂದ್ರಿಕರಿಸಿದೆ. ಜಪಾನ್‌ನ ನಿಸ್ಸಾನ್ ಕೂಡಾ ಸದ್ಯದಲ್ಲೇ ಬಿಡುಗಡೆಗೊಳಿಸಲಿದೆ.

ಖರೀದಿದಾರರ ಪಾಲಿಗೆ 'ಹಾಟ್ ಕೇಕ್' ಆದ ರೆನೊ ಡಸ್ಟರ್

ಒಟ್ಟಿನಲ್ಲಿ ಡಸ್ಟರ್ ಜನಪ್ರಿಯತೆ ಪ್ರೇರಣೆಯಾಗಿ ಪಡೆದುಕೊಂಡಿರುವ ಇತರ ಕಾರು ಸಂಸ್ಥೆಗಳು ಸಹ ಸ್ಮರ್ಧಾತ್ಮಕ ಕಾರುಗಳನ್ನು ಲಾಂಚ್ ಮಾಡಲು ಯೋಜನೆ ರೂಪಿಸಿದೆ. ಇದು ಭಾರತೀಯ ಮಾರುಕಟ್ಟೆ ದೃಷ್ಟಿಕೋನದಿಂದ ಉತ್ತಮ ಬೆಳವಣಿಗೆಯಾಗಿದೆ.

Most Read Articles

Kannada
English summary
Launched against the arch rival Mahindra Scorpio, Renault Duster has outnumbered it be selling 6,300 units as against the 4,700 Scorpios being sold thereby topping the sales chart in the month of April.
Story first published: Monday, May 6, 2013, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X