2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

By Nagaraja

ಡಸ್ಟರ್ ಕ್ರೀಡಾ ಬಳಕೆಯ ವಾಹನ ಮೂಲಕ ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸಿರುವ ರೆನೊ, ಇದೀಗ ಡಸ್ಟರ್ ಹೊಸ ಮಾದರಿಯನ್ನು ಪರಿಚಯಿಸುವ ಯೋಜನೆಯಲ್ಲಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ನಿಮ್ಮ ಮಾಹಿತಿಗಾಗಿ, ಫ್ರಾನ್ಸ್‌ನ ವಾಹನ ತಯಾರಕ ಸಂಸ್ಥೆಯಾಗಿರುವ ರೆನೊ ಮೊದಲ ಬಾರಿಗೆ ನಾಲ್ಕು ವರ್ಷಗಳ ಹಿಂದೆ ಅಂದರೆ 2010ನೇ ಇಸವಿಯಲ್ಲಿ ಡಸ್ಟರ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಡಸ್ಟರ್ ದೇಶದ ಗ್ರಾಹಕರ ನೆಚ್ಚಿನ ಕಾರೆನಿಸಿಕೊಂಡಿತ್ತು.

2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

ಜಾಗತಿಕವಾಗಿ ದಶಲಕ್ಷದಷ್ಟು ಯುನಿಟ್ ಮಾರಾಟವಾಗಿರುವ ಡಸ್ಟರ್‌ಗೆ ಹೊಸ ನೋಟ ಕಲ್ಪಿಸಲು ಫ್ರಾನ್ಸ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಪ್ರಯತ್ನಿಸುತ್ತಿದೆ. ಅಂದರೆ ಎರಡನೇ ತಲೆಮಾರಿನ ಡಸ್ಟರ್ 2017ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

2017 ಡಸ್ಟರ್ ಸಂಪೂರ್ಣ ಆಧುನಿಕ ವಿಶಿಷ್ಟತೆಗಳನ್ನು ಪಡೆದುಕೊಳ್ಳಲಿದೆ. ಹಾಗಿದ್ದರೂ ವಿನ್ಯಾಸದ ವಿಚಾರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸುವಂತಿಲ್ಲ. ಇದು ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳಲಿದೆ.

2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

ಹೊಸ ಡಸ್ಟರ್‌ನಲ್ಲಿ ನೂತನ ಹೆಡ್‌ಲೈಟ್, ಹೊಸ ಗ್ರಿಲ್, ಹೊಸ ಫಾಗ್‌ಲ್ಯಾಂಪ್, ಸ್ಕಿಡ್ ಪ್ಲೇಟ್, ಅಲಾಯ್ ವೀಲ್ ಮತ್ತು ದೊಡ್ಡದಾದ ವೀಲ್ ಆರ್ಚ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಇನ್ನು ಹಿಂದುಗಡೆ ಟೈಲ್ ಲ್ಯಾಂಪ್, ಪರಿಷ್ಕೃತ ಬೂಟ್ ಡೋರ್ ಕೂಡಾ ಇರಲಿದೆ.

2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

2017 ಡಸ್ಟರ್ ಮಾದರಿಯು 1.5 ಲೀಟರ್ ಡೀಸೆಲ್ ಕೆ9ಕೆ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರ ಜೊತೆಗೆ 1.2 ಲೀಟರ್ ಟಿಸಿಇ ಎಂಜಿನ್ ಕೂಡಾ ಇರಲಿದೆ. ಇನ್ನುಳಿದಂತೆ ಎರಡನೇ ತಲೆಮಾರಿನ ಡಸ್ಟರ್ ಫೋರ್ (4x4) ವೀಲ್ ಡ್ರೈವ್‌ನಲ್ಲೂ ಆಗಮನವಾಗಲಿದೆ.

2ನೇ ತಲೆಮಾರಿನ ಡಸ್ಟರ್ 2017ರಲ್ಲಿ ಬಿಡುಗಡೆ

ಅಂತೆಯೇ ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಮುಂತಾದ ಭದ್ರತಾ ವೈಶಿಷ್ಟ್ಯಗಳಿಗೂ ಆದ್ಯತೆ ಕೊಡಲಾಗಿದೆ. ಅಂದ ಹಾಗೆ ಭಾರತಕ್ಕೆ ಮುಂಬರುವ ಹಬ್ಬದ ಆವೃತ್ತಿಯಲ್ಲೇ ಡಸ್ಟರ್ ಫೋರ್ ವೀಲ್ ಡ್ರೈವ್ ಪರಿಚಯವಾಗಲಿದೆ.

Most Read Articles

Kannada
English summary
Renault was among the sole manufacturer to venture in India with a compact SUV. The French manufacturer launched its Duster for India in 2010. Since then the compact SUV has been a hit with Indian customer.
Story first published: Thursday, June 26, 2014, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X