ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

By Nagaraja

ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಯಾಂಗ್ಯೊಂಗ್ ಮೋಟಾರು ಸಂಸ್ಥೆಯು 85ನೇ ಆವೃತ್ತಿಯ 2015 ಜಿನೆವಾ ಮೋಟಾರು ಶೋದಲ್ಲಿ ನೂತನ ಟಿವೊಲಿ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಮುಖ್ಯಾಂಶಗಳು

  • ಬಿ ಸೆಗ್ಮೆಂಟ್ ಎಸ್‌ಯುವಿ,
  • ಜಾಗತಿಕ ಬಿಡುಗಡೆ.
  • ಹೆಚ್ಚು ಸ್ಥಳಾವಕಾಶ,
  • ಡೈನಾಮಿಕ್ ಅರ್ಬನ್ ಶೈಲಿ,
  • ಗರಿಷ್ಠ ಸುರಕ್ಷತೆ, ಏಳು ಏರ್ ಬ್ಯಾಗ್,
  • 1.6 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಯುರೋ 6 ಎಂಜಿನ್,
  • 2 ವೀಲ್ ಮತ್ತು 4 ವೀಲ್ ಡ್ರೈವ್

'ಟಿವೊಲಿ ಜೊತೆ ಹೊಸ ಆರಂಭ' ಎಂಬ ಘೋಷವಾಕ್ಯದೊಂದಿಗೆ ಸ್ಯಾಂಗ್ಯೊಂಗ್ ನೂತನ ಮಾದರಿಯನ್ನು ಪ್ರದರ್ಶಿಸಿದೆ. ಇಲ್ಲಿ ಗ್ರಾಹಕರಿಗೆ ವಿವಿಧ ಎಂಜಿನ್ ಹಾಗೂ ಬಣ್ಣಗಳ ಆಯ್ಕೆಗಳು ಲಭ್ಯವಾಗಲಿದೆ. 'ಇದು ಕೇವಲ ಒಂದು ಕಾರಲ್ಲ. ಇದು ಜಗತ್ತಿನಲ್ಲಿ ಸ್ಯಾಂಗ್ಯೊಂಗ್‌ನ ಹೊಸ ಆರಂಭವಾಗಿದೆ". ಏಕೆಂದರೆ 2010ರ ಕೊರಂನ್ಡೊ ಬಳಿಕ ಸ್ಯಾಂಗ್ಯೊಂಗ್‌ನಿಂದ ಬರುತ್ತಿರುವ ಮೊದಲ ಕಾರು ಇದಾಗಿದೆ.

ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

ನಿಮ್ಮ ಮಾಹಿತಿಗಾಗಿ 2011ರಲ್ಲಿ ಸ್ಯಾಂಗ್ಯೊಂಗ್ ಶೇರುಗಳನ್ನು ಮಹೀಂದ್ರ ಆಂಡ್ ಮಹೀದ್ರ ಸಂಸ್ಥೆಯು ವಶಪಡಿಸಿಕೊಂಡಿತ್ತು. ಈಗ 42 ಮಾಸಗಳ ಸುದೀರ್ಘ ಅಧ್ಯಯನದ ಬಳಿಕ ಬ್ರಾಂಡ್ ನ್ಯೂ ಮಾದರಿಯನ್ನು ತಯಾರಿಸಿದೆ. ಅಲ್ಲದೆ ವಿನ್ಯಾಸ, ಸುರಕ್ಷತೆ, ವಿಶ್ವಾಸಾರ್ಹತೆ, ಒಳಮೈ ಜಾಗ ಹಾಗೂ ನೈಜತೆಯ ವಿಚಾರದಲ್ಲಿ ಸಂಸ್ಥೆಯು ಯಾವುದೇ ರಾಜಿಗೂ ತಯಾರಾಗಿಲ್ಲ.

ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

ಈ ಕಾರು ಇಟಲಿಯ ರೋಮ್ ಸಮೀಪದ ಪಟ್ಟಣವೊಂದರ ಹೆಸರನ್ನು ಇಡಲಾಗಿದೆ. ಪ್ರಸ್ತುತ ನಗರವು ತನ್ನ ಸಾಂಸ್ಕೃತಿಕ ಪರಂಪರೆ,ಸೌಂದರ್ಯ ಹಾಗೂ ಶೈಲಿಯಾಗಿ ಖ್ಯಾತಿ ಪಡೆದುಕೊಂಡಿದೆ. ಇದರಿಂದಲೇ ಸ್ಪೂರ್ತಿ ಪಡೆದು ಸ್ಯಾಂಗ್ಯೊಂಗ್ ಟಿವೊಲಿ ಶೈಲಿ ಹಾಗೂ ನಿರ್ವಹಣೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

ಎಲ್ಲ ಹೊಸ ಫ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಸ್ಯಾಂಗ್ಯೊಂಗ್ ಟಿವೊಲಿ ಕಾಂಪಾಕ್ಟ್ ಎಸ್‌‍ಯುವಿ, ಹೆಚ್ಚು ಪರಿಸರ ಸ್ನೇಹಿ ಕೂಡಾ ಎನಿಸಿಕೊಳ್ಳಲಿದ್ದು ಗರಿಷ್ಠ ಇಂಧನ ಕ್ಷಮತೆಯನ್ನು ಹೊಂದಿರಲಿದೆ.

ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

ಟು ವೀಲ್ ಜೊತೆಗೆ ಫೋರ್ ವೀಲ್ ಚಾಲನಾ ವಿಧಯನ್ನು ಹೊಂದಿರುವ ಸ್ಯಾಂಗ್ಯೊಂಗ್ ಟಿವೊಲಿ 1.6 ಲೀಟರ್ ಇ-ಎಕ್ಸ್‌ಡಿಐ160 ಡೀಸೆಲ್ ಹಾಗೂ ಇ-ಎಕ್ಸ್‌ಜಿಐ160 ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯಲಿದೆ.

ಸುರಕ್ಷತೆ

ಸುರಕ್ಷತೆ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಏಳು ಏರ್ ಬ್ಯಾಗ್ (ಮುಂಭಾಗದ ಪ್ರಯಾಣಿಕ, ಬದಿ, ಕರ್ಟೈನ್ ಏರ್ ಬ್ಯಾಗ್ ಮತ್ತು ಚಾಲಕ ಮೊಣಕಾಲು ಏರ್ ಬ್ಯಾಗ್), ಬಹು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಆಕ್ಟಿವ್ ರೋಲೋವರ್ ಪ್ರೊಟೆಕ್ಷನ್, ಬ್ರೇಕ್ ಆಸಿಸ್ಟ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್, ಎಮರ್ಜನ್ಸಿ ಸ್ಟಾಪ್ ಸಿಗ್ನಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಹಾಗೂ ಎಲ್ಲ ಐದು ಸೀಟು ಬೆಲ್ಟ್‌ಗಳಲ್ಲಿ ವಾರ್ನಿಂಗ್ ರಿಮೈಂಡರ್ ಕೂಡಾ ಇರಲಿದೆ.

ಸ್ಯಾಂಗ್ಯೊಂಗ್ ಹೊಸ ಆರಂಭ; ಜಿನೆವಾಗೆ ಬಂತು ಟಿವೊಲಿ ಎಸ್‌ಯುವಿ

ದಕ್ಷಿಣ ಕೊರಿಯಾದಲ್ಲಿ ಈಗಾಗಲೇ 7,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಸ್ಯಾಂಗ್ಯೊಂಗ್ ಟಿವೊಲಿ, ಜಿನೆವಾ ಪ್ರದರ್ಶನದ ಮುಖಾಂತರ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.

Most Read Articles

Kannada
English summary
South-Korean automobile manufacturer has launched its compact SUV the Tivoli in its home market, at the beginning of 2015. Ssangyong had confirmed this model will be offered in several international markets. Now they have unveiled their Tivoli at 2015 Geneva Motor Show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X