ಸ್ವಿಫ್ಟ್‌ ಪ್ರೇರಣೆ; ಇದುವೇ ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

By Nagaraja

ಈಗಷ್ಟೇ ಸುಜುಕಿ ಮಿನಿ ಎಸ್‌ಯುವಿ ಬಗ್ಗೆ ಐಎಂ-4 ಬಗ್ಗೆ ಮಾಹಿತಿ ಕೊಟ್ಟಿರುತ್ತೇವೆ. 2015 ಜಿನೆವಾ ಮೋಟಾರು ಶೋದಲ್ಲಿ ಜಪಾನ್ ಮೂಲದ ಸುಜುಕಿ ಮಗದೊಂದು ಆಕರ್ಷಕ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಸಹ ಪರಿಚಯಿಸಿದೆ. ಅದುವೇ ಐಕೆ-2.

ವರದಿಗಳ ಪ್ರಕಾರ ಸ್ವಿಜರ್ಲೆಂಡ್‌ನ ಜಿನೆವಾದಲ್ಲಿ ಅನಾವರಣಗೊಂಡಿರುವ ನೂತನ ಸುಜುಕಿ ಐಕೆ-2 ಮಾದರಿಯು 2016ರ ವೇಳೆಗೆ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ. ವಿಶೇಷವೆಂದರೆ ಈ ಬಹುನಿರೀಕ್ಷಿತ ಮಾದರಿಯು ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಸುಜುಕಿಯ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನಿಂದ ಪ್ರೇರಣೆ ಪಡೆದುಕೊಂಡು ಹೊಸತಾದ ಐಕೆ-2 ಕಾನ್ಸೆಪ್ಟ್ ರಚಿಸಲಾಗಿದೆ. ಹಾಗೆಯೇ ಇದು ಸ್ವಿಫ್ಟ್‌ಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

'ಲಿಕ್ವಿಡ್ ಫ್ಲೊ' ಎಂಬ ವಿನ್ಯಾಸ ತಂತ್ರಗಾರಿಕೆಯನ್ನು ಇದರಲ್ಲಿ ಅನುಸರಿಸಲಾಗಿದೆ. ಹಾಗೆಯೇ ಹೊಸತಾದ 1.0 ಲೀಟರ್ ಬೂಸ್ಟರ್‌ಜೆಟ್ ಡೈರಕ್ಟ್ ಇಂಜೆಕ್ಷನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರು 4023 ಎಂಎಂ ಉದ್ದ, 1920 ಎಂಎಂ ಅಗಲ ಮತ್ತು 1450 ಎಂಎಂ ಎತ್ತರವನ್ನು ಪಡದುಕೊಳ್ಳಲಿದೆ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ಪೂರ್ಣವಾಗಿಯೂ ಹೊಸ ತಳಹದಿಯಲ್ಲಿ ನಿರ್ಮಾಣವಾಗಲಿರುವ ಸುಜುಕಿ ಐಕೆ-2, ನೋಟ, ಉಪಯುಕ್ತತೆ, ಆರಾಮದಾಯಕ, ನಿರ್ವಹಣೆ ಹಾಗೂ ಇಂಧನ ಕ್ಷಮತೆಯಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ಸುಜುಕಿ ಐಕೆ-2 ಕಾಂಪಾಕ್ಟ್ ಹ್ಯಾಚ್‌ಬ್ಯಾಕ್

ದಿಟ್ಟವಾದ ನೋಟ, ಎಲ್‌ಇಡಿ ಹೆಡ್ ಲ್ಯಾಂಪ್, ವಿಶೇಷ ಮೈ ಬಣ್ಣ ಹಾಗೂ ಎಲ್ಲ ಹೊಸ ಎಂಜಿನ್‌ಗಳು ಇದರ ವಿಶೇಷತೆಯಾಗಿರಲಿದೆ.

Most Read Articles

Kannada
English summary
The gates of Geneva Motor Show will open to general public on 5th to 15th of March, 2015. Several manufacturers have teased us with their concept and future model images. Suzuki has revealed their compact hatchback concept at the grandest motor shows of them all.
Story first published: Wednesday, March 4, 2015, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X