2014ರಲ್ಲಿ ನ್ಯಾನೋ ಡೀಸೆಲ್‌ ಕಾರು ಎಂಟ್ರಿ

By Nagaraja

ಅಂತೂ ಇಂತೂ ಕೊನೆಗೆ ಮುಹೂರ್ತ ನಿಗದಿಯಾಗಿದ್ದು, ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮುಂದಿನ ವರ್ಷಾರಂಭದಲ್ಲಿ ದೇಶಕ್ಕೆ ನ್ಯಾನೋ ಡೀಸೆಲ್ ವರ್ಷನ್ ಪರಿಚಯಿಸಲಿದೆ.

2009ನೇ ಮೊದಲ ಬಾರಿಗೆ ಲಾಂಚ್ ಆಗಿದ್ದ ವಿಶ್ವದ ಅತಿ ಅಗ್ಗದ ನ್ಯಾನೋ ದೇಶದ ಕಾರು ಮಾರುಕಟ್ಟೆಯಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸುವಲ್ಲಿ ವಿಫಲವಾಗಿತ್ತು. ಇವೆಲ್ಲಕ್ಕೂ ಉತ್ತರವಾಗಿ ಟಾಟಾ ಮೋಟಾರ್ಸ್ ನ್ಯಾನೋ ಡೀಸೆಲ್ ವರ್ಷನ್ ಮುಖಾಂತರ ಕಳೆಗುಂದಿರುವ ಮಾರುಕಟ್ಟೆಗೆ ಉತ್ತೇಜನ ನೀಡುವ ಪ್ರಯತ್ನ ಮಾಡಲಿದೆ.

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಮಹಾನಿರ್ದೇಶಕ ಕಾರ್ಲ್ ಸ್ಲಿಮ್, ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದಲ್ಲಿ ಅಂದರೆ 2014 ಮಾರ್ಚ್ ವೇಳೆಯಾಗುವಾಗ ನ್ಯಾನೋ ಡೀಸೆಲ್ ಎಂಜಿನ್ ಬಿಡುಗಡೆ ಮಾಡುವ ಯೋಜನೆಯಿರುವುದಾಗಿ ಪ್ರಕಟಿಸಿದ್ದಾರೆ.

800ಸಿಸಿ

800ಸಿಸಿ

ನ್ಯಾನೋದಿಂದ ಆಗಮನವಾಗಲಿರುವ 800ಸಿಸಿ ಎಂಜಿನ್ ದೇಶದಲ್ಲಿ ಉತ್ಪಾದನೆಯಾಗಲಿರುವ ಅತಿ ಕಡಿಮೆ ಸಾಮರ್ಥ್ಯದ ಡೀಸೆಲ್ ಎಂಜಿನ್ ಆಗಿರಲಿದೆ. ಇದು 40 ಬಿಎಚ್‌ಪಿ (4,000 ಆರ್‌ಪಿಎಂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಮೈಲೇಜ್ ವಿಚಾರದಲ್ಲಿ ನೂತನ ನ್ಯಾನೋ ಯಾವುದೇ ರಾಜಿಗೂ ತಯಾರಿಲ್ಲ. ಅಲ್ಲದೆ ಪ್ರತಿ ಲೀಟರ್‌ಗೆ 35ರಿಂದ 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದಿದೆ.

ದರ ಮಾಹಿತಿ

ದರ ಮಾಹಿತಿ

ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಯಶಸ್ವಿಯಾದ್ದಲ್ಲಿ ನ್ಯಾನೋ ಡೀಸೆಲ್ ಕಾರು ಗ್ರಾಹಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಡಿಸೈನ್

ಡಿಸೈನ್

ಹಿಂದಿನ ಆವೃತ್ತಿಗೆ ಹೋಲಿಸಿದರೆ ನೂತನ ನ್ಯಾನೋ ಡೀಸೆಲ್ ಕಾರು ಮುಂದೆ ಹಾಗೂ ವಿಭಾಗದಲ್ಲಿ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಇದರ ಫ್ರಂಟ್ ಬಂಪರ್ ಡಿಸೈನ್ ಪ್ರಮುಖ ಆಕರ್ಷಣೆಯಾಗಿದೆ.

ನ್ಯಾನೋ ಸಿಎನ್‌ಜಿ

ನ್ಯಾನೋ ಸಿಎನ್‌ಜಿ

ಇತ್ತೀಚೆಗಷ್ಟೇ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್ಸ್' ಕಾರನ್ನು ಅನಾವರಣಗೊಳಿಸಿತ್ತು.

Most Read Articles

Kannada
English summary
Confirmation has arrived regarding the launch of the diesel engined Tata Nano. Speaking to Reuters, Karl Slym, Managing Director, Tata Motors, revealed the car was due for launch by the end of the financial year.
Story first published: Thursday, September 5, 2013, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X