ಟಾಟಾ 'ಅಲ್ಟಿಮೇಟ್ ಡಿಸೆಂಬರ್ ಆಫರ್' ಮಿಸ್ ಮಾಡದಿರಿ

By Nagaraja

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಈ ವರ್ಷಾಂತ್ಯದ ಸಂದರ್ಭದಲ್ಲಿ ಗ್ರಾಹರಿಗಾಗಿ ಅತಿ ವಿಶೇಷಯವಾದ 'ಅಲ್ಟಿಮೇಟ್ ಡಿಸೆಂಬರ್ ಆಫರ್' ಮುಂದಿರಿಸಿದೆ. ಸಾಮಾನ್ಯವಾಗಿ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ವರ್ಷಾಂತ್ಯದ ವೇಳೆ ಮಾರಾಟವು ಮಂದಗತಿಯಲ್ಲಿರುತ್ತದೆ. ಹೀಗಾಗಿ ಬಹುತೇಕ ಎಲ್ಲ ಕಾರು ಸಂಸ್ಥೆಗಳು ಆಫರುಗಳ ಸುರಿಮಳೆಯನ್ನು ಘೋಷಿಸುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಇದರಂತೆ ಟಾಟಾ ಮೋಟಾರ್ಸ್ ಸಹ ತನ್ನ ನೀತಿಯನ್ನು ಪ್ರಕಟಿಸಿದೆ. ಈ ಮೂಲಕ ಗ್ರಾಹಕರು ಕೇವಲ 20,000 ಡೌನ್ ಪೇಮೆಂಟ್ ಮಾಡಿ ನಿಮ್ಮ ನೆಚ್ಚಿನ ಟಾಟಾ ಕಾರು ತಮ್ಮದಾಗಿಸಿಕೊಳ್ಳಬಹುದಾಗಿದೆ. ಅಲ್ಲದೆ ಒಂದು ಲಕ್ಷ ರು.ಗಳ ವರೆಗೂ ನಗದು ಉಳಿತಾಯ ಮತ್ತು ರು. 40,000 ವರೆಗೂ ಎಕ್ಸೇಚೇಂಜ್ ಬೋನಸ್ ಸೌಲಭ್ಯ ಲಭ್ಯವಿರುತ್ತದೆ.

ನ್ಯಾನೋಗೆ ಕಳಂಕ ತಂದ 'ಅಗ್ಗದ ಕಾರು' ಪಟ್ಟ

ಟಾಟಾ ಮೋಟಾರ್ಸ್‌ ಈ ಅಲ್ಟಿಮೇಟ್ ಆಫರ್ ಡಿಸೆಂಬರ್ 1ರಿಂದಲೇ ಆರಂಭವಾಗಿದ್ದು 31ರ ವರೆಗೆ ಮುಂದುವರಿಯಲಿದೆ. ಅಷ್ಟಕ್ಕೂ ಯಾವೆಲ್ಲ ಕಾರುಗಳಿಗೆ ಎಷ್ಟೆಷ್ಟು ಆಫರ್ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಟಾಟಾ 'ಅಲ್ಟಿಮೇಟ್ ಡಿಸೆಂಬರ್ ಆಫರ್' ಮಿಸ್ ಮಾಡದಿರಿ

ಟಾಟಾದ ಜನಪ್ರಿಯ ಆವೃತ್ತಿಗಳಾದ ಇಂಡಿಕಾ, ಇಂಡಿಕಾ ವಿಸ್ಟಾ, ಇಂಡಿಗೊ, ಇಂಡಿಗೊ ಮಾಂಝಾ, ನ್ಯಾನೋ, ಸುಮೋ, ಸಫಾರಿ, ಸಫಾರಿ ಸ್ಟ್ರೋಮ್ ಮತ್ತು ಆರಿಯಾ ಆವೃತ್ತಿಗಳಿಗೆ ಆಫರ್ ಲಭ್ಯವಿರಲಿದೆ.

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್

ಟಾಟಾ ಸಫಾರಿ ಸ್ಟ್ರೋಮ್ ಖರೀದಿ ವೇಳೆ ಗ್ರಾಹಕರು ರು. 50,000 ವರೆಗೆ ಲಾಭ ಪಡೆಯಬಹುದಾಗಿದೆ.

ಟಾಟಾ ಇಂಡಿಗೊ ಇಸಿಎಸ್

ಟಾಟಾ ಇಂಡಿಗೊ ಇಸಿಎಸ್

ಹಾಗೆಯೇ ಟಾಟಾ ಇಂಡಿಗೊ ಇಸಿಎಸ್ ಖರೀದಿ ವೇಳೆ ರು. 35,000 ವರೆಗೂ ಆಫರ್ ಪಡೆಯಬಹುದಾಗಿದೆ.

ಟಾಟಾ ವಿಸ್ಟಾ

ಟಾಟಾ ವಿಸ್ಟಾ

ಇನ್ನು ಟಾಟಾ ವಿಸ್ಟಾ ಖರೀದಿಯಲ್ಲೂ ಬರೋಬ್ಬರಿ 60,000 ರು. ವರೆಗೆ ಲಾಭಾಂಶ ಪಡೆಯಬಹುದಾಗಿದೆ.

ಟಾಟಾ ನ್ಯಾನೋ

ಟಾಟಾ ನ್ಯಾನೋ

ವಿಶ್ವದ ಅತಿ ಅಗ್ಗದ ನ್ಯಾನೋ ಕಾರಿಗೂ ಟಾಟಾ ವಿಶೇಷ ಆಫರ್ ಮುಂದಿಡುತ್ತಿದ್ದು, ಒಂದು ವರೆ ಲಕ್ಷ ರು.ಗಳ ಈ ಕಾರಿನಲ್ಲಿ ರು. 40,000 ವರೆಗೂ ಉಳಿತಾಯ ಮಾಡಬಹುದಾಗಿದೆ.

ಟಾಟಾ ಸುಮೋ ಗೋಲ್ಡ್

ಟಾಟಾ ಸುಮೋ ಗೋಲ್ಡ್

ಹಾಗೆಯೇ ಟಾಟಾ ಸುಮೋ ಗೋಲ್ಡ್ ಖರೀದಿಯಲ್ಲಿ ರು. 40,000 ವರೆಗೆ ಲಾಭಾಂಶ ಪಡೆಯಬಹುದಾಗಿದೆ.

ಟಾಟಾ ಇಂಡಿಕಾ

ಟಾಟಾ ಇಂಡಿಕಾ

ಏತನ್ಮಧ್ಯೆ ಟಾಟಾ ಇಂಡಿಕಾ ಖರೀದಿಯಲ್ಲಿ ರು. 30,000 ವರೆಗೆ ಉಳಿತಾಯ ಪಡೆಯಬಹುದು.

ಟಾಟಾ ಮಾಂಝಾ

ಟಾಟಾ ಮಾಂಝಾ

ಕೊನೆಯದಾಗಿ ಟಾಟಾ ಮಾಂಝಾ ಆವೃತ್ತಿಗೂ ಅಲ್ಟಿಮೇಟ್ ಆಫರ್ ಸೌಲಭ್ಯವಿರಲಿದ್ದು, ರು. 1,15,000 ವರೆಗೆ ಉಳಿತಾಯ ಮಾಡಬಹುದು.

Most Read Articles

Kannada
English summary
Tata Motors Ultimate December Offer shall commence on 1st December 2013 and shall continue till 2359 hrs on 31st December, 2013.
Story first published: Monday, December 16, 2013, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X