ಮುಂಬರುವ ಟಾಟಾ ಕಾರುಗಳು

By Nagaraja

ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮೂಲಕ ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಂಡಿದ್ದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಈಗ ಮಗದೊಂದು ಆಕರ್ಷಕ ಜೆಸ್ಟ್ ಹ್ಯಾಚ್‌ಬ್ಯಾಕ್ ಕಾರು ಮುಖಾಂತರ ತನ್ನ ಸಾನಿಧ್ಯವನ್ನು ಇನ್ನಷ್ಟು ಗಟ್ಟಿ ಮಾಡುವ ಇರಾದೆಯಲ್ಲಿದೆ.

ದೇಶದ ವಾಹನ ಪ್ರಿಯರಿಗೆ ಸ್ವದೇಶಿ ನಿರ್ಮಿತ ಟಾಟಾ ಕಾರುಗಳ ಮೇಲೆ ಸ್ವಲ್ಪ ಅಭಿಮಾನ ಜಾಸ್ತಿಯೇ ಇದೆ. ಇದನ್ನು ಉಳಿಸಿಕೊಳ್ಳುವುದು ಸಂಸ್ಥೆಯ ಧರ್ಮವಾಗಿದೆ. ಈಗ ಭವಿಷ್ಯದಲ್ಲಿ ಟಾಟಾದಿಂದ ಬಿಡುಗಡೆಯಾಗಲಿರುವ ಕಾರುಗಳ ಬಗ್ಗೆ ವಿವರಣೆ ಕೊಡಲಿದ್ದೇವೆ.

1. ಟಾಟಾ ಸಫಾರಿ ಸ್ಟ್ರೋಮ್ ಫೇಸ್‌ಲಿಫ್ಟ್

1. ಟಾಟಾ ಸಫಾರಿ ಸ್ಟ್ರೋಮ್ ಫೇಸ್‌ಲಿಫ್ಟ್

ದೈತ್ಯಾಕಾರವನ್ನು ಪಡೆದಿರುವ ಹೊರತಾಗಿಯೂ ಟಾಟಾ ಸಫಾರಿ ಸ್ಟ್ರೋಮ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಇದನ್ನು ಸ್ಪಷ್ಟವಾಗಿ ಮನಗಂಡಿರುವ ಸಂಸ್ಥೆಯು ಲ್ಯಾಂಡ್ ರೋವರ್ ವಿನ್ಯಾಸದಿಂದ ಸ್ಪೂರ್ತಿ ಪಡೆದ ಈ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಹೊರಟಿದೆ. ಹೆಡ್‌ಲೈಟ್ ಸೇರಿದಂತೆ ಕಾರಿನ ಹೊರಮೈಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಹಾಗೆಯೇ ಮೂರನೇ ಸಾಲಿನಲ್ಲಿ ಫ್ರಂಟ್ ಫೇಸಿಂಗ್ ಸಿಟ್ಟಿಂಗ್ ವ್ಯವಸ್ಥೆ ಕಂಡುಬರಲಿದೆ. ಇನ್ನು ಈ ಬಾರಿ ಸಂಸ್ಥೆಯು ಹೆಚ್ಚು ಶಕ್ತಿಶಾಲಿ 2.2 ಲೀಟರ್ ವ್ಯಾರಿಕೋರ್ ಟರ್ಬೊ ಡೀಸೆಲ್ ಎಂಜಿನ್ ಪರಿಚಿಯಿಸುವ ಇರಾದೆಯನ್ನು ಹೊಂದಿದ್ದು, ಇದು 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

2. ಟಾಟಾ ಕೈಟ್

2. ಟಾಟಾ ಕೈಟ್

ಮಗದೊಂದು ಸಣ್ಣ ಕಾರಿನ ಅಭಿವೃದ್ಧಿಯಲ್ಲಿ ತೊಡಗಿರುವ ಟಾಟಾ ಇದನ್ನು ಕೈಟ್ ಎಂದು ಹೆಸರಿಸಿಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಪರಿಗಣಿಸಿರುವ ಸಂಸ್ಥೆಯು ಕೈಟ್ ಕೋಡ್ ಹೆಸರಿನಲ್ಲಿ ನೂತನ ಮಾದರಿ ಅಭಿವೃದ್ಧಿಪಡಿಸುತ್ತಿದ್ದು, ಇದು ನ್ಯಾನೋ ಹಾಗೂ ಬೋಲ್ಟ್ ನಡುವೆ ಕಾಣಿಸಿಕೊಳ್ಳಲಿದೆ. ಇದರಲ್ಲಿ 800ಸಿಸಿ ಪೆಟ್ರೋಲ್ ಹಾಗೂ 1.02 ಲೀಟರ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇನ್ನು ಎಎಂಟಿ ಆಯ್ಕೆಯಲ್ಲೂ ಬಂದರೂ ಅಚ್ಚರಿಪಡಬೇಕಾಗಿಲ್ಲ.

3. ಟಾಟಾ ಕಾಂಪಾಕ್ಟ್ ಎಸ್‌ಯುವಿ

3. ಟಾಟಾ ಕಾಂಪಾಕ್ಟ್ ಎಸ್‌ಯುವಿ

2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಯಾವಾಗ ನೆಕ್ಸಾನ್ ಮಾದರಿ ಅನಾವರಣಗೊಂಡಿತೇ ತದಾ ಬಳಿಕ ಟಾಟಾ ಕಾಂಪಾಕ್ಟ್ ಎಸ್‌ಯುವಿ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ. ನೆಕ್ಸಾನ್ ಒಂದು ಕಾಂಪಾಕ್ಟ್ ಎಸ್‌ಯುವಿ ಆಗಿದ್ದು, ನಮಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದರ ನಿರ್ಮಾಣ ಸಿದ್ಧ ಮಾದರಿಯು 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿದೆ. ಹಾಗೊಂದು ಇದು ಬಿಡುಗಡೆಯಾದ್ದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗೆ ನಿಕಟ ಪೈಪೋಟಿ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

4. ಟಾಟಾ ಪೆಲಿಕನ್

4. ಟಾಟಾ ಪೆಲಿಕನ್

ನ್ಯಾನೋದ ಅದೇ ತಳಹದಿಯಲ್ಲಿ ದೊಡ್ಡ ಹ್ಯಾಚ್‌ಬ್ಯಾಕ್ ನಿರ್ಮಾಣ ಮಾಡುವುದು ಟಾಟಾ ಗುರಿಯಾಗಿದೆ. ಇದು ಗುಜರಾತ್‌ನ ಸನಂದ್ ಘಟಕದಿಂದಲೇ ನಿರ್ಮಾಣವಾಗಲಿದ್ದು, ಈಗಾಗಲೇ 'ಪೆಲಿಕನ್' (Pelican)ಎಂಬ ಕೋಡ್ ಪಡೆದುಕೊಂಡಿದೆ. ನ್ಯಾನೋ ಅಪ್‌ಗ್ರೇಡ್ ವರ್ಷನ್ ಆಗಿರುವ ಇದು 'ಎಕ್ಸ್302' ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಿದ್ಧಗೊಳ್ಳಲಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಂದರೆ ಒಂದು ಲೀಟರ್ ಪೆಟ್ರೋಲ್ ಜೊತೆಗೆ ಅತಿ ಚಿಕ್ಕ 800 ಸಿಸಿ ಡೀಸೆಲ್ ಎಂಜಿನ್ ಇದರಲ್ಲಿರಲಿದೆ.

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ಟಾಟಾದ ಹೊರಿಝೋನೆಕ್ಸ್ಟ್‌ ಸಿದ್ಧಾಂತದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಕಾರು ಜೆಸ್ಟ್ ಆಗಿದ್ದು, ಜನವರಿ 22ರಂದು (ಇಂದು) ಬಿಡುಗಡೆಯಾಗುತ್ತಿದೆ. ಇದು ಟಾಟಾ ಮೇಲಿನ ಟ್ಯಾಕ್ಸಿ ಕಪ್ಪುಪಟ್ಟಿಯನ್ನು ಸಂಪೂರ್ಣವಾಗಿ ತೊಳೆದು ಹಾಕುವ ನಿರೀಕ್ಷೆಯಲ್ಲಿದೆ. ಇದರಲ್ಲಿ 1.2 ಲೀಟರ್ ರೆವೂಟ್ರಾನ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಎಂಜಿನ್ ಹೆಚ್ಚು ಪ್ರಭಾವಿ ಎನಿಸಿಕೊಂಡಿದ್ದು, ಎಎಂಟಿ ಜೊತೆಗೆ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರಲಿದೆ.

Most Read Articles

Kannada
English summary
Tata Motors Upcoming Cars in India
Story first published: Thursday, January 22, 2015, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X