ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

By Nagaraja

ಇದೀಗ ಎಲ್ಲವೂ ಟಾಟಾ ಸುದ್ದಿನೇ; ಒಂದೆಡೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ತನ್ನ ಅತಿ ನೂತನ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರಿನ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದರೆ ಇನ್ನೊಂದೆಡೆ ವಾಹನ ಪ್ರಿಯರಿಗಾಗಿ ಈ ಬಹುನಿರೀಕ್ಷಿತ ಕಾರಿನ ಅತ್ಯಾಕರ್ಷಕ ರಿಂಗ್‌ಟೋನ್ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದೆ.

ಹೊಸ ಆರಿಯಾ ಲಾಂಚ್; ನಿಮ್ಮ ನಿರೀಕ್ಷೆ ಮುಟ್ಟಿತೇ?

ಈ ಮೂಲಕ ಕಾರು ಪ್ರೇಮಿಗಳ ಗಮನ ಸೆಳೆಯಲು ಟಾಟಾ ವಿನೂತನ ನೀತಿ ಅನುಸರಿಸಿದೆ. ನಿಕಟ ಭವಿಷ್ಯದಲ್ಲೇ ಟಾಟಾ ಜೆಸ್ಟ್ ಬಿಡುಗಡೆಗೊಳ್ಳಲಿರುವಂತೆಯೇ ಬೆಂಗಳೂರಿನಲ್ಲಿ ಪರೀಕ್ಷಾರ್ಥ ಚಾಲನೆ ವೇಳೆ ಸೆರೆ ಸಿಕ್ಕಿವೆ. ವರದಿಗಳ ಪ್ರಕಾರ ಕಾರು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ್ದು, ಸಂಪೂರ್ಣವಾಗಿ ಮರೆಮಾಚಲಾಗಿತ್ತು ಎಂಬುದು ತಿಳಿದು ಬಂದಿದೆ.

ಅಪಘಾತ ಪರೀಕ್ಷೆಯಲ್ಲಿ ನ್ಯಾನೋ ಸಾಧನೆ 'ಸೊನ್ನೆ'

ಟಾಟಾ ಜೆಸ್ಟ್, ಬೋಲ್ಟ್ ರಿಂಗ್‌ಟೋನ್‌ ಡೌನ್‌ಲೋಡ್ ಮಾಡುವುದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಎಕ್ಸ್‌ಕ್ಲೂಸಿವ್ ಚಿತ್ರ: ಟಾಟಾ ಜೆಸ್ಟ್ ಬೆಂಗಳೂರಿನಲ್ಲಿ ಪರೀಕ್ಷೆ

ಎಕ್ಸ್‌ಕ್ಲೂಸಿವ್ ಚಿತ್ರ: ಟಾಟಾ ಜೆಸ್ಟ್ ಬೆಂಗಳೂರಿನಲ್ಲಿ ಪರೀಕ್ಷೆ

ಕೇವಲ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಮಾತ್ರವಲ್ಲ. ಇದೇ ಸಂದರ್ಭದಲ್ಲಿ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡುವ ಮಹತ್ತರ ಯೋಜನೆಯನ್ನು ಟಾಟಾ ಹೊಂದಿದೆ.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಅಂದರೆ ಹಬ್ಬದ ಆವೃತ್ತಿ ವೇಳೆ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಮಾರುಕಟ್ಟೆ ಪ್ರವೇಶಿಸಲಿದೆ. ಇವೆರಡನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗುವುದೇ ಎಂಬುದು ತಿಳಿದು ಬಂದಿಲ್ಲ.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ಈ ಹಿಂದೆ 2014 ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಭರ್ಜರಿ ಪ್ರದರ್ಶನ ಕಂಡಿದ್ದವು.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ದೇಶದ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಟಾಟಾದ ಹೊಸ ಆವೃತ್ತಿಗಳು ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ಇದುವರೆಗೆ ಟಾಟಾ ಕಾರುಗಳ ಗುಣಮಟ್ಟತೆ ಬಗ್ಗೆ ಆರೋಪಗಳೆದಿದ್ದವು. ಇವೆಲ್ಲವನ್ನೂ ಟಾಟಾ ಜೆಸ್ಟ್ ಹಾಗೂ ಬೋಲ್ಟ್ ಮೂಲಕ ಸರಿದೂಗಿಸುವ ಇರಾದೆಯನ್ನು ಕಂಪನಿ ಹೊಂದಿದೆ.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ನೂತನ ಜೆಸ್ಟ್ 1.2 ಲೀಟರ್ ಟರ್ಬೊಚಾರ್ಜ್ಡ್ ರೆವೋಟ್ರಾನ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು 85 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರ 1.3 ಲೀಟರ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್ 90 ಹಾರ್ಸ್ ಪವರ್ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಟಾಟಾ ಜೆಸ್ಟ್ ಬೆಂಗ್ಳೂರಲ್ಲಿ ಟೆಸ್ಟಿಂಗ್; ರಿಂಗ್‌ಟೋನ್ ಡೌನ್‌ಲೋಡ್ ಮಾಡಿ

ದೇಶದ ಮಾರುಕಟ್ಟೆಗೆ ಹೊಸತೆನಿಸಿರುವ ಕ್ರೂಸ್, ಇಕೊ, ಸ್ಪೋರ್ಟ್ಸ್ ಹಾಗೂ ಟಾಪ್ ಎಂಡ್ ವೆರಿಯಂಟ್‌ ಡ್ರೈವಿಂಗ್ ಮೋಡ್‌ಗಳಲ್ಲಿ ಜೆಸ್ಟ್ ಎಂಟ್ರಿ ಕೊಡಲಾಗಿದೆ. ಹಾಗೆಯೇ ಡೀಸೆಲ್ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆವೃತ್ತಿಯನ್ನು ಎದುರು ನೋಡಲಾಗುತ್ತಿದೆ.

ಟಾಟಾ ಜೆಸ್ಟ್ ರಿಂಗ್‌ಟೋನ್ ಡೌನ್‌ಲೋಡ್ ಮಾಡಿರಿ

ಟಾಟಾ ಜೆಸ್ಟ್ ರಿಂಗ್‌ಟೋನ್ ಡೌನ್‌ಲೋಡ್ ಮಾಡಿರಿ

http://tatamotorszest.com/download-gallery.php

ಟಾಟಾ ಬೋಲ್ಟ್ ರಿಂಗ್‌ಟೋನ್ ಡೌನ್‌ಲೋಡ್ ಮಾಡಿರಿ

ಟಾಟಾ ಬೋಲ್ಟ್ ರಿಂಗ್‌ಟೋನ್ ಡೌನ್‌ಲೋಡ್ ಮಾಡಿರಿ

http://tatamotorsbolt.com/download-gallery.php

Most Read Articles

Kannada
English summary
We spotted the upcoming Tata Zest compact sedan in test camouflage in Bangalore. A rare occurrence, considering the car is already close to being launched.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X