ಬೆಂಗಳೂರಿನಲ್ಲಿ ಟಾಟಾ ಜೆಸ್ಟ್ ಲಾಂಚ್; ನಿರೀಕ್ಷೆ ಏನು?

By Nagaraja

ಇತ್ತೀಚೆಗಷ್ಟೇ ದೇಶೀಯ ಮಾರುಕಟ್ಟೆ ಪ್ರವೇಶಿಸಿದ್ದ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಸ್ಥಳೀಯ ಲಾಂಚ್ ಭಾಗವಾಗಿ ಬೆಂಗಳೂರು ಮಾರುಕಟ್ಟೆಯನ್ನು ಮಂಗಳವಾರ (2014 ಆಗಸ್ಟ್ 19) ಪ್ರವೇಶಿಸಿದೆ. ಹೊಸತಾದ ಟಾಟಾ ಮೋಟಾರ್ಸ್ ಜೆಸ್ಟ್ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್‌ಸೆಂಟ್ ಮತ್ತು ಮಾರುತಿ ಸ್ವಿಫ್ಟ್ ಡಿಜೈರ್ ಮಾದರಿಗಳಿಗೆ ನೇರ ಪ್ರತಿಸ್ಪರ್ಧಿಯೆನಿಸಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆಗೆ ಕಾರಣವಾಗಿರುವ ಜೆಸ್ಟ್ ಕಾರಿನಲ್ಲಿ ಹೊಸ ವಿನ್ಯಾಸ ತತ್ವಶಾಸ್ತ್ರವನ್ನು ಅನುಸರಿಸಲಾಗಿದೆ. ಇದು ಟಾಟಾದ ಹೊಸತಾದ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಇವೆಲ್ಲದರ ಜೊತೆಗೆ 29 ಸೆಗ್ಮೆಂಟ್ ಲೀಡಿಂಗ್ ವೈಶಿಷ್ಟ್ಯಗಳು ಇದರಲ್ಲಿರಲಿದೆ. ಅಂದ ಹಾಗೆ ಟಾಟಾ ಜೆಸ್ಟ್ ಬೆಂಗಳೂರು ಬೆಲೆ ಹಾಗೂ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಮೆಲುಕು ಹಾಕಲು ಚಿತ್ರ ಸಂಪುಟದತ್ತ ಮುಂದುವರಿಯಿರಿ...

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ ರೆವೊಟ್ರಾನ್ 1.2ಟಿ (ಲಕ್ಷ ರು.ಗಳಲ್ಲಿ)

ಎಕ್ಸ್‌ಇ (ಬೇಸ್): 4.68

ಎಕ್ಸ್‌ಎಂ (ಮಿಡ್): 5.31

ಎಕ್ಸ್‌ಎಂಎಸ್ (ಮಿಡ್ ಸೇಫ್ಟಿ): 5.49

ಎಕ್ಸ್‌ಟಿ (ಟಾಪ್): 6.06

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡೀಸೆಲ್ ಕ್ವಾಡ್ರಾಜೆಟ್ 1.3 ಲೀಟರ್ (ಲಕ್ಷ ರು.ಗಳಲ್ಲಿ)

ಎಕ್ಸ್‌ಇ (ಬೇಸ್): 5.73

ಎಕ್ಸ್‌ಎಂ (ಮಿಡ್): 6.37

ಎಕ್ಸ್‌ಎಂಎಸ್ (ಮಿಡ್ ಸೇಫ್ಟಿ): 6.55

ಎಕ್ಸ್‌ಎಂಎ (ಎಫ್ ಟ್ರಾನಿಕ್): 7.10

ಎಕ್ಸ್‌ಟಿ (ಟಾಪ್): 7.10

ಡಿಸೈನ್ ನೆಕ್ಸ್ಟ್

ಡಿಸೈನ್ ನೆಕ್ಸ್ಟ್

ಟಾಟಾ ಸಿಗ್ನೇಚರ್ ಗ್ರಿಲ್, ಯೂನಿಕ್ ಹ್ಯೂಮನಿಟಿ ಲೈನ್,

ಆಕರ್ಷಕ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಲೈಟ್ ಗೈಡ್ ರಿಂಗ್

ಸಿಗ್ನೇಚರ್ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್,

ಪ್ರೀಮಿಯಂ ಪದರಿನೊಂದಿಗೆ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ (ಜಾವ ಬ್ಲ್ಯಾಕ್, ಲಟ್ಟೆ)

ಡ್ರೈವ್ ನೆಕ್ಸ್ಟ್

ಡ್ರೈವ್ ನೆಕ್ಸ್ಟ್

ರೆವೊಟ್ರಾನ್ 1.2ಟಿ, ಎಂಪಿಎಫ್‌ಐ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ - 90 ಪಿಎಸ್ ಪವರ್, 140 ಎನ್‍‌ಎಂ ಟಾರ್ಕ್,

ಮಲ್ಟಿ ಡ್ರೈವ್ ಮೋಡ್,

ಎಫ್ ಟ್ರಾನಿಕ್ - ಆಟೋಮೇಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಡೀಸೆಲ್),

ಇಪಿಎಎಸ್ (ePAS) - ಎಲೆಕ್ಟ್ರಾನಿಕ್ ಪವರ್, ಸ್ಟೀರಿಂಗ್ ಜೊತೆಗೆ 95% ಆಕ್ಟಿವ್ ರಿಟರ್ನ್ ಫಂಕ್ಷನ್,

ಡ್ಯುಯಲ್ ಪಾತ್ ಸ್ವತಂತ್ರ ಫ್ರಂಟ್ ಸಸ್ಪಷನ್,

ಮುಂದುವರಿದ 9ನೇ ತಲೆಮಾರಿನ ಎಬಿಎಸ್ ಮತ್ತು ಇಬಿಡಿ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್

ಕನೆಕ್ಟ್ ನೆಕ್ಸ್ಟ್

ಕನೆಕ್ಟ್ ನೆಕ್ಸ್ಟ್

ಹರ್ಮಾನ್‌ನ 5 ಇಂಚಿನ ಕನೆಕ್ಟ್ ನೆಕ್ಸ್ಟ್ ಟಚ್‌ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ,

ಮುಂದುವರಿದ ಧ್ವನಿ ಆಜ್ಞೆ ಗುರುತಿಸುವಿಕೆ,

ಎಸ್‌ಎಂಎಸ್ ಅಧಿಸೂಚನೆ ಮತ್ತು ಓದುವಿಕೆ,

ಟಚ್‌ಸ್ಕ್ರೀನ್‌ನಲ್ಲೇ ಸಂಪೂರ್ಣ ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ

ನಿರ್ವಹಣೆ

ನಿರ್ವಹಣೆ

ಟರ್ಬೊಚಾರ್ಜರ್‌ನಿಂದ ಉತ್ತೇಜನ ಪಡೆದುಕೊಂಡಿರುವ ರೆವೊಟ್ರಾನ್ 1.2 ಟಿ ಎಂಜಿನ್ 90 ಪಿಎಸ್ ಪವರ್ (140 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ ಗರಿಷ್ಠ 154 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಅದೇ ರೀತಿ 1.3 ಲೀಟರ್ ಡೀಸೆಲ್ ಕ್ವಾಡ್ರಾಜೆಟ್ ಎಂಜಿನ್ 90 ಪಿಎಸ್ ಪವರ್ (200 ಎನ್‌ಎಂ ಟಾರ್ಕ್) ಉತ್ಪಾದಿಸಲಿದ್ದು, ಗಂಟೆಗೆ ಗರಿಷ್ಠ 158 ಕೀ.ಮೀ. ವೇಗ ಪಡೆಯಲಿದೆ.

ಇಂಧನ ಕ್ಷಮತೆ

ಇಂಧನ ಕ್ಷಮತೆ

ನೈಜ ರಸ್ತೆ ಪರಿಸ್ಥಿತಿಯಲ್ಲೂ ಉತ್ತಮ ಮೈಲೇಜ್ ನೀಡಲಿರುವ ಟಾಟಾ ಜೆಸ್ಟ್, ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ರವೊಟ್ರಾನ್ 1.2 ಟಿ ಗಾಡಿ ಪ್ರತಿ ಲೀಟರ್‌ಗೆ 17.6 ಕೀ.ಮೀ. ಮೈಲೇಜ್ ನೀಡಲಿದೆ. ಅದೇ ಹೊತ್ತಿಗೆ ಡೀಸೆಲ್ ವೆರಿಯಂಟ್ ಪ್ರತಿ ಲೀಟರ್‌ಗೆ 23 ಕೀ.ಮೀ. ಮೈಲೇಜ್ ನೀಡಲಿದೆ

 ವೆರಿಯಂಟ್

ವೆರಿಯಂಟ್

ಪೆಟ್ರೋಲ್‌ನಲ್ಲಿ ನಾಲ್ಕು ಹಾಗೂ ಡೀಸೆಲ್‌ನಲ್ಲಿ ಐದು ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಪೆಟ್ರೋಲ್ - ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಎಂಎಸ್ ಮತ್ತು ಎಕ್ಸ್‌ಟಿ

ಡೀಸೆಲ್ - ಎಕ್ಸ್‌ಇ, ಎಕ್ಸ್‌ಎಂ, ಎಕ್ಸ್‌ಎಂಎಸ್, ಎಕ್ಸ್ಎಂಎ (ಆಟೋಮ್ಯಾಟಿಕ್) ಮತ್ತು ಎಕ್ಸ್‌ಟಿ.

Most Read Articles

Kannada
English summary
Tata Motors today announced the Bangalore launch of the Zest, the all new, sub-four metre compact sedan with a start price of Rs. 4.68 Lakhs, ex-showroom, Bangalore, for the petrol Revotron 1.2T model and Rs. 5.73 Lakhs, ex-showroom, Bangalore, as the start price for the diesel variant.
Story first published: Tuesday, August 19, 2014, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X