2014 ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ 10 ಕಾರುಗಳು

By Nagaraja

ದೀಪಾವಳಿ ಹಬ್ಬದ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿರುವಂತೆಯೇ ಭಾರತೀಯ ಕಾರು ಮಾರುಕಟ್ಟೆ ನಿಧಾನವಾಗಿ ಚೇತರಿಗೆ ಕಾಣಲು ಆರಂಭಿಸಿದೆ. ಆದರೆ ಎಂದಿನಂತೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಅಧಿಪತ್ಯ ಮುಂದುವರಿಸಿದೆ.

ಇಂದಿನ ಈ ಲೇಖನದಲ್ಲಿ 2014 ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ಕೊಡಲಿದ್ದೇವೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ.

10. ಹ್ಯುಂಡೈ ಐ20 ಎಲೈಟ್

10. ಹ್ಯುಂಡೈ ಐ20 ಎಲೈಟ್

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹ್ಯುಂಡೈನ ಐ20 ಎಲೈಟ್ ಆವೃತ್ತಿಯು ಅಗ್ರ ಹತ್ತರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ.

ಒಟ್ಟು ಮಾರಾಟ: 6,627

9. ಮಾರುತಿ ಸುಜುಕಿ ಸೆಲೆರಿಯೊ

9. ಮಾರುತಿ ಸುಜುಕಿ ಸೆಲೆರಿಯೊ

ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ತಂತ್ರಗಾರಿಕೆ ಹೊಂದಿರುವ ಮಾರುತಿ ಸುಜುಕಿ ಸೆಲೆರಿಯೊ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸಲು ಕಾರಣವಾಗಿದೆ. ಇದು ಸ್ವಯಂಚಾಲಿತ ಕಾರುಗಳ ಬೆಳವಣಿಗೆಗೆ ಉತ್ತಮ ಉದಾಹರಣೆಯಾಗಿದೆ.

ಒಟ್ಟು ಮಾರಾಟ: 6,656

8. ಹ್ಯುಂಡೈ ಗ್ರಾಂಡ್ ಐ10

8. ಹ್ಯುಂಡೈ ಗ್ರಾಂಡ್ ಐ10

ಕಳೆದೊಂದು ವರ್ಷದಲ್ಲಿ ಗಮನಾರ್ಹ ಮಾರಾಟ ಸಾಧಿಸಿರುವ ಹ್ಯುಂಡೈ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರು ಟಾಪ್ 10ರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

ಒಟ್ಟು ಮಾರಾಟ: 6,677

7. ಹ್ಯುಂಡೈ ಇಯಾನ್

7. ಹ್ಯುಂಡೈ ಇಯಾನ್

ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ತನ್ನ ಜನಪ್ರಿಯ ಆವೃತ್ತಿಯಾದ ಇಯಾನ್ ಮಾದರಿಯನ್ನು ಹೆಚ್ಚು ನೆಚ್ಚಿಕೊಂಡಿತ್ತು.

ಒಟ್ಟು ಮಾರಾಟ: 6,757

6. ಮಹೀಂದ್ರ ಬೊಲೆರೊ

6. ಮಹೀಂದ್ರ ಬೊಲೆರೊ

ಮಲ್ಟಿ ಪರ್ಪಸ್ ವೆಹಿಕಲ್ ವಿಭಾಗದಲ್ಲಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಮಹೀಂದ್ರ ಬೊಲೆರೊ, 2014 ಆಗಸ್ಟ್ ಮಾರಾಟದಲ್ಲಿ ಸ್ಥಿರ ಮಾರಾಟ ಕಾಯ್ದುಕೊಂಡಿದೆ.

ಒಟ್ಟು ಮಾರಾಟ: 6,826

5. ಹೋಂಡಾ ಅಮೇ

5. ಹೋಂಡಾ ಅಮೇ

ಹಾಗಿದ್ದರೂ ಹೋಂಡಾ ಪಾಲಿಗೆ ಅತಿ ಹೆಚ್ಚು ಯಶಸ್ಸು ತಂದುಕೊಡುವಲ್ಲಿ ಅಮೇಜ್‌ಗೆ ಸಾಧ್ಯವಾಗಿದೆ.

ಒಟ್ಟು ಮಾರಾಟ: 9,198

4. ಮಾರುತಿ ವ್ಯಾಗನಾರ್

4. ಮಾರುತಿ ವ್ಯಾಗನಾರ್

ಮಾರುತಿಯ ಮಗದೊಂದು ಜನಪ್ರಿಯ ಮಾದರಿಯಾಗಿರುವ ವ್ಯಾಗನಾರ್ ಟಾಪ್ ಐದರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಒಟ್ಟು ಮಾರಾಟ: 13,133

3. ಮಾರುತಿ ಸ್ವಿಫ್ಟ್

3. ಮಾರುತಿ ಸ್ವಿಫ್ಟ್

ದೇಶದ ಅತ್ಯಂತ ಯಶಸ್ವಿ ಬಿ ಸೆಗ್ಮೆಂಟ್ ಕಾರಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದೆ.

ಒಟ್ಟು ಮಾರಾಟ: 17,716

 2. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

2. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್‌ಸೆಂಟ್ ಸವಾಲನ್ನು ಸ್ಪಷ್ಟವಾಗಿ ಎದುರಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಸಾಧಿಸಿದೆ.

ಒಟ್ಟು ಮಾರಾಟ: 19,129

1. ಮಾರುತಿ ಸುಜುಕಿ ಆಲ್ಟೊ

1. ಮಾರುತಿ ಸುಜುಕಿ ಆಲ್ಟೊ

ದೇಶದಲ್ಲಿ ಅತಿ ಹೆಚ್ಚು ಜನಮನ್ನಣೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಆಲ್ಟೊ 800 ಮತ್ತು ಕೆ10 ಆವೃತ್ತಿಗಳು ಆಗಸ್ಟ್ ತಿಂಗಳಲ್ಲೂ ತನ್ನ ಒಟವನ್ನು ಮುಂದುವರಿಸಿದೆ.

ಒಟ್ಟು ಮಾರಾಟ: 21,533

2014 ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಅಗ್ರ 10 ಕಾರುಗಳು

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ

Most Read Articles

Kannada
English summary
Maruti Suzuki's small car Alto reclaimed the passenger car sales crown for August 2014.
Story first published: Wednesday, September 10, 2014, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X