10 ಲಕ್ಷ ಅಸುಪಾಸಿನಲ್ಲಿ ಲಭ್ಯವಾಗುವ ಟಾಪ್ 5 ಎಂಪಿವಿ

By Nagaraja

ಕಳೆದೆರಡು ದಶಕಗಳಿಗೆ ಹೋಲಿಸಿದಾಗ ದೇಶದ ವಾಹನ ಮಾರುಕಟ್ಟೆ ಮನೋಭಾವ ನಿಧಾನವಾಗಿ ಬದಲಾಗುತ್ತಿದೆ. ಹಿಂದೆಲ್ಲ ಗ್ರಾಹಕರು ಎಂಟ್ರಿ ಲೆವೆಲ್ ಬಜೆಟ್ ಕಾರುಗಳಿಗೆ ಆದ್ಯತೆ ಕೊಡುತ್ತಿದ್ದರೆ, ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಮಾಲಿಕರು ಇನ್ನು ಹೆಚ್ಚು ಸೌಲಭ್ಯಗಳಿರುವ ವಾಹನಗಳತ್ತ ವಾಲುತ್ತಿದ್ದಾರೆ.

ಇವನ್ನೂ ಓದಿ: ದೇಶದ ಟಾಪ್ 5 ಬಜೆಟ್ ಕಾರುಗಳು

ಸಾಮಾನ್ಯವಾಗಿ ಮಲ್ಟಿ ಪರ್ಪಸ್ ಅಥವಾ ಬಹು ಬಳಕೆಯ ವಾಹನಗಳನ್ನು (ಎಂಪಿವಿ) ಫ್ಯಾಮಿಲಿ ಅಗತ್ಯಗಳಿಗಾಗಿ ಬಳಕೆ ಮಾಡಲಾಗುತ್ತಿದೆ. ಐದು ಅಥವಾ ಏಳು ಸೀಟಿನ ಇಂತಹ ಕಾರುಗಳು ಕುಟುಂಬದ ಜೊತೆಗೂಡಿ ಒಂದು ಸುಂದರ ಪ್ರವಾಸದ ಬೇಡಿಕೆಗಳನ್ನು ಈಡೇರಿಸುವುದಲ್ಲದೆ ಸಣ್ಣ ಪುಟ್ಟ ವಾಣಿಜ್ಯ ಅಗತ್ಯಗಳಿಗೂ ನೆರವಾಗುತ್ತದೆ. ಅಂದ ಹಾಗೆ ಸರಿ ಸುಮಾರು 10 ಲಕ್ಷ ರು.ಗಳ ಅಸುಪಾಸಿನಲ್ಲಿ ದೇಶದಲ್ಲಿ ಲಭ್ಯವಿರುವ ಅಗ್ರ ಐದು ಎಂಪಿವಿ ಕಾರುಗಳು ಯಾವುವು ? ಮಾಹಿತಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

 10 ಲಕ್ಷ ಅಸುಪಾಸಿನಲ್ಲಿ ಲಭ್ಯವಾಗುವ ಟಾಪ್ 5 ಎಂಪಿವಿ

ವಾಹನ ಮಾಲಿಕರೀಗ ಕಾರಿನ ಬೆಲೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ತಮಗೆ ಬೇಕಾಗಿರುವ ಎಲ್ಲ ಸೌಲಭ್ಯಗಳು ಅಂತಹ ನಿರ್ದಿಷ್ಟ ಕಾರಿನಲ್ಲಿವೆ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹಾಗಿದ್ದರೆ ಬನ್ನಿ ಮುಂದಿನ ಒಂದೊಂದೇ ಸ್ಲೈಡ್ ಮುಖಾಂತರ 10 ಲಕ್ಷ ಬಜೆಟ್‌ ಅಸುಪಾಸಿನಲ್ಲಿ ಲಭ್ಯವಾಗುವ ದೇಶದ ಟಾಪ್ 5 ಎಂಪಿವಿ ಕಾರುಗಳ ಬಗ್ಗೆ ಮಾಹಿತ ಕಲೆ ಹಾಕೋಣವೇ...

01. ಷೆವರ್ಲೆ ಎಂಜಾಯ್

01. ಷೆವರ್ಲೆ ಎಂಜಾಯ್

ಪ್ರಮುಖವಾಗಿಯೂ ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆಯ ಮಾರುತಿ ಸುಜುಕಿಯ ಜನಪ್ರಿಯ ಎರ್ಟಿಗಾ ಮಾದರಿಗೆ ಪ್ರತಿಸ್ಪರ್ಧಿಯಾಗಿ ಷೆವರ್ಲೆ ಎಂಜಾಯ್ ಕಣಕ್ಕಿಳಿದಿತ್ತು. ಇದರಲ್ಲಿ 1.3 ಲೀಟರ್ ಸ್ಟಾರ್ಟೆಕ್ (SMARTECH) ಟರ್ಬೊ ಚಾರ್ಜ್ಡ್ ಡಿಒಎಚ್‌ಸಿ ಡೀಸೆಲ್ ಎಂಜಿನ್ ಹಾಗೂ 1.4 ಲೀಟರ್ ಸ್ಟಾರ್ಟೆಕ್ (SMARTECH) ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ.

01. ಷೆವರ್ಲೆ ಎಂಜಾಯ್

01. ಷೆವರ್ಲೆ ಎಂಜಾಯ್

ಪ್ರಸ್ತುತ 12 ವೆರಿಯಂಟ್‌ಗಳಲ್ಲಿ ಲಭ್ಯವಿರುವ ಷೆವರ್ಲೆ ಎಂಜಾಯ್ ಪ್ರಾರಂಭಿಕ ಎಕ್ಸ್ ಶೋ ರೂಂ ಬೆಲೆ 5.85 ಲಕ್ಷ ರು.ಗಳಿಂದ ಟಾಪ್ ಎಂಡ್ ವೆರಿಯಂಟ್ 8.27 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಷೆವರ್ಲೆ ಎಂಜಾಯ್ ಹುಡುಕು

02. ಮಹೀಂದ್ರ ಕ್ಸೈಲೋ

02. ಮಹೀಂದ್ರ ಕ್ಸೈಲೋ

ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಜನಪ್ರಿಯ ಮಾದರಿಗಳಲ್ಲಿ ಕ್ಸೈಲೋ ಒಂದಾಗಿದೆ. ಈಗಾಗಲೇ ಆಟೋ ವಿಮರ್ಶಕರಿಂದ ಪರ ವಿರುದ್ಧ ಅಭಿಪ್ರಾಯಗಳನ್ನು ಗಿಟ್ಟಿಸಿಕೊಂಡಿರುವ ಮಹೀಂದ್ರ ಕ್ಸೈಲೋ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ.

ಎಂಜಿನ್: 2179 ಸಿಸಿ 4 ಸಿಲಿಂಡರ್ ಎಂಹಾಕ್, 120 ಬಿಎಚ್ಪಿ, 280 ಎನ್‌ಎಂ ಟಾರ್ಕ್, 5 ಸ್ಪೀಡ್ ಮ್ಯಾನುವಲ್

02. ಮಹೀಂದ್ರ ಕ್ಸೈಲೋ

02. ಮಹೀಂದ್ರ ಕ್ಸೈಲೋ

ಮಾರುಕಟ್ಟೆಯಲ್ಲಿ ಒಂಬತ್ತು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಮಹೀಂದ್ರ ಕ್ಸೈಲೋ ಪ್ರಾರಂಭಿಕ ಬೆಲೆ 7.69 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್‌ಗೆ 10 ಲಕ್ಷಗಳ ಬಜೆಟ್ ಮಿತಿ ದಾಟುತ್ತಿದ್ದು, 10.78 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತಿದೆ.

ಮಹೀಂದ್ರ ಕ್ಸೈಲೋ ಹುಡುಕು

03. ಮಾರುತಿ ಎರ್ಟಿಗಾ

03. ಮಾರುತಿ ಎರ್ಟಿಗಾ

ಇನ್ನು ಕಡಿಮೆ ಬೆಲೆ ಎಂಪಿವಿ ಕಾರುಗಳಲ್ಲಿ ಮಾರುತಿಯ ಎರ್ಟಿಗಾ ಒಂದು ಹೆಜ್ಜೆ ಮುಂದಿದೆ. ಇದು ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ವೆರಿಯಂಟ್‌ನಲ್ಲೂ ಲಭ್ಯವಿರುತ್ತದೆ.

ಡೀಸೆಲ್ - 1248 ಸಿಸಿ, 4 ಸಿಲಿಂಡರ್, ಡಿಡಿಐಎಸ್ ಡೀಸೆಲ್ ಎಂಜಿನ್, 89 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್, 5 ಸ್ಪೀಡ್ ಮ್ಯಾನುವಲ್

ಪೆಟ್ರೋಲ್ - 1373 ಸಿಸಿ, 4 ಸಿಲಿಂಡರ್, ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಜೊತೆ ವಿವಿಟಿ, 94 ಅಶ್ವಶಕ್ತಿ, 130 ಎನ್‌ಎಂ, 5 ಸ್ಪೀಡ್ ಮ್ಯಾನುವಲ್

03. ಮಾರುತಿ ಎರ್ಟಿಗಾ

03. ಮಾರುತಿ ಎರ್ಟಿಗಾ

ಇನ್ನು ಮೈಲೇಜ್, ನಿರ್ವಹಣೆ ಹಾಗೂ ಗುಣಮಟ್ಟತೆಯಲ್ಲಿ ಉತ್ತಮ ಮಾನದಂಡವನ್ನು ಕಾಪಾಡಿಕೊಂಡಿರುವ ಎರ್ಟಿಗಾ ಪ್ರಾರಂಭಿಕ ಬೆಲೆ 5.98 ಲಕ್ಷ ರು.ಗಳಿಂದ ಟಾಂಪ್ ಎಂಡ್ ಡೀಸೆಲ್ ವೆರಿಯಂಟ್ 8.77 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಮಾರುತಿ ಎರ್ಟಿಗಾ ಹುಡುಕು

04. ಹೋಂಡಾ ಮೊಬಿಲಿಯೊ

04. ಹೋಂಡಾ ಮೊಬಿಲಿಯೊ

ಕಳೆದ ಒಂದೆರಡು ವರ್ಷಗಳಲ್ಲಿ ಡೀಸೆಲ್ ಕಾರುಗಳ ಮೂಲಕ ಮಾರುಕಟ್ಟೆಯಲ್ಲಿ ಮೋಡಿ ಮಾಡಿರುವ ಜಪಾನ್‌ನ ಪ್ರಖ್ಯಾತ ವಾಹನ ಸಂಸ್ಥೆಯಾಗಿರವು ಹೋಂಡಾ, ಮೊಬಿಲಿಯೊದಲ್ಲೂ ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಿದೆ.

ಇದರ 1.5 ಲೀಟರ್‌ ಡಿಸೇಲ್‌ ಎಂಜಿನ್‌ 100 ಪಿಎಸ್‌ ಪವರ್‌( 200ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಡಿಸೇಲ್‌ ಎಂಜಿನ್‌ ಕಾರು ಪ್ರತಿ ಲೀಟರ್‌ಗೆ 24.2 ಕಿ.ಮೀ ಮೈಲೇಜ್‌ ನೀಡಲಿದೆ. ಅಂತೆಯೇ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ 119 ಪಿಎಸ್‌ ಪವರ್‌( 145 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಪೆಟ್ರೋಲ್‌ ಎಂಜಿನ್‌ ಕಾರು ಪ್ರತಿ ಲೀಟರ್‌ಗೆ 17.3 ಕಿ.ಮೀ ಮೈಲೇಜ್‌ ನೀಡಲಿದೆ. ಪೆಟ್ರೋಲ್‌, ಡಿಸೇಲ್‌ ಎಂಜಿನ್‌‌ ಕಾರುಗಳು 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

 04. ಹೋಂಡಾ ಮೊಬಿಲಿಯೊ

04. ಹೋಂಡಾ ಮೊಬಿಲಿಯೊ

ಒಟ್ಟು 10 ವೆರಿಯಂಟ್‌ಗಳಲ್ಲಿ ಲಭ್ಯವಿರುವ ಹೋಂಡಾ ಮೊಬಿಲಿಯೊ ಎಂಪಿವಿ ಬೇಸ್ ವೆರಿಯಂಟ್ ಬೆಲೆ 6.74 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 11.87 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ) ದುಬಾರಿಯೆನಿಸಿದೆ.

ಹೋಂಡಾ ಮೊಬಿಲಿಯೊ ಹುಡುಕು

05. ಟೊಯೊಟಾ ಇನ್ನೋವಾ

05. ಟೊಯೊಟಾ ಇನ್ನೋವಾ

ಇನ್ನೋವಾ ದೇಶದ ನಂ.1 ಮಲ್ಟಿ ಪರ್ಪಸ್ ವಾಹನ ಎಂಬುದರಲ್ಲಿ ಸಂಶಯವೇ ಇಲ್ಲ. ಇದರಿಂದಾಗಿಯೇ ಇನ್ನೋವಾ ಕೈಬಿಟ್ಟರೆ ಈ ಲೇಖನ ಪೂರ್ಣವಾಗಲ್ಲ. ಹಾಗೊಂದು ವೇಳೆ 10 ಲಕ್ಷಕ್ಕಿಂತಲೂ ಸ್ವಲ್ಪ ಹೆಚ್ಚು ದುಡ್ಡು ನೀವು ಪಾವತಿಸಲು ತಯಾರಾದ್ದಲ್ಲಿ ನಿಮ್ಮ ಮನೆಗೆ ಆಕರ್ಷಕ ಏಳು ಸೀಟುಗಳ ಇನ್ನೋವಾ ಎಂಪಿವಿ ಬಂದು ಸೇರಲಿದೆ.

05. ಟೊಯೊಟಾ ಇನ್ನೋವಾ

05. ಟೊಯೊಟಾ ಇನ್ನೋವಾ

ರಾಜಕಾರಣಿಗಳಿಂದ ಹಿಡಿದು ಶ್ರೀಮಂತರ ನೆಚ್ಚಿನ ಗಾಡಿಯಾಗಿರುವ ಇನ್ನೋವಾದಲ್ಲಿ 2494 ಸಿಸಿ 4 ಸಿಲಿಂಡರ್ ಇನ್ ಲೈನ್ 2ಕೆಡಿ-ಎಫ್‌ಟಿವಿ ಡೀಸೆಲ್ ಇಂಟರ್ ಕೂಲರ್ ಟರ್ಬೊಚಾರ್ಜರ್ ಎಂಜಿನ್ ಆಳವಡಿಸಲಾಗಿದ್ದು, 101 ಅಶ್ವಶಕ್ತಿ (200 ಎನ್‌‍ಎಂ) ಉತ್ಪಾದಿಸಲಿದೆ. ಹಾಗೆಯೇ ಭರ್ಜರಿ 22 ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.

ಅಂದ ಹಾಗೆ ಇನ್ನೋವಾ ಪ್ರಾರಂಭಿಕ ಎಕ್ಸ್ ಶೋ ರೂಂ ಬೆಲೆ 10.26 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್ 15.80 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇನ್ನೋವಾ ಹುಡುಕು

ನಿಸ್ಸಾನ್ ಇವಾಲಿಯಾ

ನಿಸ್ಸಾನ್ ಇವಾಲಿಯಾ

ಇನ್ನು ಮೇಲೆ ತಿಳಿಸಿದ ಎಂಪಿವಿ ಕಾರುಗಳ ಹೊರತಾಗಿ 9.13 ಲಕ್ಷ ರು.ಗಳ (ಎಕ್ಸ್ ಶೋ ರೂಂ) ಪ್ರಾರಂಭಿಕ ಬೆಲೆಯಲ್ಲಿ ನಿಸ್ಸಾನ್ ಇವಾಲಿಯಾ ಕೂಡಾ ಲಭ್ಯವಿರುತ್ತದೆ. ಒಟ್ಟು ಆರು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಇವಾಲಿಯಾ, 1461 ಸಿಸಿ 4 ಸಿಲಿಂಡರ್ ಇನ್‌ಲೈನ್ ಡೀಸೆಲ್ ಎಂಜಿನ್‌ನಿಂದ (85 ಬಿಎಚ್‌ಪಿ, 200 ಎನ್‌ಎಂ) ನಿಯಂತ್ರಿಸಲ್ಪಡುತ್ತದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ನಿಸ್ಸಾನ್ ಇವಾಲಿಯಾ ಹುಡುಕು

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

2015 ಜನವರಿ 15ರಂದು ಬಿಡುಗಡೆಯಾಗಲಿರುವ ದಟ್ಸನ್ ಗೊ ಪ್ಲಸ್, ಈ ವಿಭಾಗಕ್ಕೆ ಅಚ್ಚರಿಯ ಎಂಟ್ರಿ ಆಗಲಿದೆ. ನಾಲ್ಕು ಮೀಟರ್ ಪರಿಧಿಯೊಳಗೆ ಸಿದ್ಧಗೊಂಡಿರುವ ಈ ಏಳು ಸೀಟುಗಳ ಕಾಂಪಾಕ್ಟ್ ಎಂಪಿವಿ ಕಾರು ಬೆಲೆಯ ವಿಚಾರದಲ್ಲೂ ನಿಮ್ಮ ಅಚ್ಚರಿಗೆ ಕಾರಣವಾಗಲಿದೆ. ಇದಕ್ಕಾಗಿ ಎಲ್ಲರೂ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Most Read Articles

Kannada
English summary
Here are the Top 5 MPV cars in India around 10 lakh budget. Have a look. 
Story first published: Monday, January 12, 2015, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X