ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

By Nagaraja

ಈಗಾಗಲೇ ಟೆಸ್ಟಿಂಗ್ ವೇಳೆ ಹಲವು ಬಾರಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆಗೊಂಡಿರುವ ಟೊಯೊಟಾ ಕರೊಲ್ಲಾ ನೂತನ ವರ್ಷನ್ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ. ಈ ವಿವರವನ್ನು ಕಂಪನಿ ಅಧಿಕಾರಿಗಳು ದೃಢೀಕರಿಸಿದ್ದಾರೆ.

ಅಂದ ಹಾಗೆ ನೂತನ ಟೊಯೊಟಾ ಕಾರು ಕೇವಲ ಶೋಗಷ್ಟೇ ಸೀಮಿತವಲ್ಲ. ಅಂದರೆ ವಾಹನ ಪ್ರದರ್ಶನ ಮೇಳದ ಬೆನ್ನಲ್ಲೇ 2014 ಕರೊಲ್ಲಾ ಅಧಿಕೃತ ಲಾಂಚ್ ಕೂಡಾ ನಡೆಯಲಿದೆ. ಈ ನಡುವೆ ನೂತನ ಟೊಯೊಟಾ ಕಾರು ಹಲವು ಕಾರಣಗಳಿಗಾಗಿ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇನು ಅಂತೀರಾ? ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

ನೂತನ ಟೊಯೊಟಾ ಕರೊಲ್ಲಾ ಸ್ಟೈಲಿಷ್ ಹೆಡ್‌ಲ್ಯಾಂಪ್ ಹೆಚ್ಚು ಅಂದತೆಗೆ ಕಾರಣವಾಗಲಿದೆ. ವಿಶ್ಲೇಷಕರ ಪ್ರಕಾರ ಸಮಕಾಲೀನ ಕಾರುಗಳಲ್ಲಿ ಕಂಡುಬಂದಿರುವುದಕ್ಕಿಂತಲೂ ಹೆಚ್ಚು ಆಕರ್ಷಕವಾದ ಹೆಡ್‌ಲ್ಯಾಂಪ್‌ಗಳನ್ನು ಪಡೆದಿದೆ

ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

ಅಲ್ಲದೆ 2014 ಟೊಯೊಟಾ ಕರೊಲ್ಲಾ ಕಾರು ನೂತನ 17 ಇಂಚು ಅಲಾಯ್ ವೀಲ್ ಪಡೆದುಕೊಳ್ಳಲಿದ್ದು, ಟ್ವಿನ್ ಸ್ಪೋಕ್ ವಿನ್ಯಾಸ ಹೊಂದಿರಲಿದೆ. ಈ ನಡುವೆ ಭಾರತೀಯ ವರ್ಷನ್ 15 ಇಂಚುಗಳ ಅಲಾಯ್ ವೀಲ್‌ಗೆ ಕುಂಠಿತವಾಗುವ ಸಾಧ್ಯತೆಯು ಇದೆ.

ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

ಒಟ್ಟಿನಲ್ಲಿ ಈ ಹಿಂದಿನೆಲ್ಲ ಆವೃತ್ತಿಗಳನ್ನು 2014 ಕರೊಲ್ಲಾ ಮೀರಿಸಲಿದೆಯೆಂಬ ಅಭಿಪ್ರಾಯ ಕೇಳಿಬರುತ್ತಿದೆ.

ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

ಅಂದ ಹಾಗೆ 11ನೇ ತಲೆಮಾರಿನ ಕರೊಲ್ಲಾ ಅಮೆರಿಕಾ ಹಾಗೂ ಯುರೋಪ್‌ಗಳೆಂಬ ಎರಡು ವರ್ಷನ್‌ಗಳಲ್ಲಿ ಅನಾವರಣಗೊಂಡಿತ್ತು. ಈ ಪೈಕಿ ಭಾರತೀಯರು ಯುರೋಪ್ ವರ್ಷನ್ ಪಡೆಯಲಿದ್ದಾರೆ.

ಎಲ್ಲವೂ ಹೊಸತು - 2014 ಟೊಯೊಟಾ ಕರೊಲ್ಲಾ

ಭಾರತೀಯ ವರ್ಷನ್ ಕರೊಲ್ಲಾವು 1.4 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 88.4 ಪಿಎಸ್ ಪವರ್ (205 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 1.8 ಲೀಟರ್ ವಿವಿಟಿ-ಐ ಪೆಟ್ರೋಲ್ ಎಂಜಿನ್ (140 ಪಿಎಸ್, 173 ಎನ್‌ಎಂ ಟಾರ್ಕ್) ಹೊಂದಿರಲಿದೆ.

Most Read Articles

Kannada
English summary
According to the reports, the Japanese carmaker Toyota will showcase the 2014 Corolla sedan at 2014 Auto Expo in Noida next February. This will only be an initial unveiling as the Bidadi plant will only start the production of the 2014 Toyota Corolla quite some time later.
Story first published: Friday, November 15, 2013, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X