2014 ದೆಹಲಿ ಆಟೋ ಎಕ್ಸ್‌ಪೋ ನಿರ್ಣಾಯಕ ಏಕೆ?

By Nagaraja

ಪ್ರಿಯ ಓದುಗರೇ, ನೀವೇನಾದರೂ ಹೊಸ ವರ್ಷಕ್ಕೆ ನೂತನ ಕಾರು ಖರೀದಿ ಮಾಡುವ ಯೋಚನೆಯಲ್ಲದ್ದೀರಾ? ಸ್ವಲ್ಪ ತಡೆಯಿರಿ, ಇದಕ್ಕೂ ಮುನ್ನ ನಮ್ಮ ಈ ಲೇಖನವನ್ನು ಗಮನವಿಟ್ಟು ಓದಲು ಮರೆಯದಿರಿ...

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಎಲ್ಲ ಅರ್ಥದಲ್ಲೂ ನೂತನ ಕಾರು ಖರೀದಿ ಗ್ರಾಹಕರಿಗೆ ಈ ಲೇಖನ ನಿರ್ಣಾಯಕವೆನಿಸಲಿದೆ. ಯಾಕೆಂದರೆ ಇಲ್ಲಿ ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಎಲ್ಲ ಪ್ರಮುಖ ಕಾರುಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನ ಮಾಡಲಾಗಿದೆ.

ಪ್ರಮುಖ ಉಲ್ಲೇಖಿಸಬೇಕಾದ ಅಂಶವೆಂದರೆ ಈ ಎಲ್ಲ ಮಾದರಿಗಳು ಸದ್ಯದಲ್ಲೇ ದೇಶದ ರಸ್ತೆಯನ್ನು ಪ್ರವೇಶಿಸಲಿದೆ. ಅಂದರೆ ನೂತನ ಕಾರು ತಗೊಳ್ಳುವವರು ಇನ್ನು ಒಂದೆರಡು ತಿಂಗಳು ಕಾದು ಕುಳಿತಲ್ಲಿ ಹೊಚ್ಚ ಹೊಸ ಮಾದರಿಯನ್ನು ನಿಮ್ಮ ಮನೆಗೆ ಸಾಗಿಸಬಹುದಾಗಿದೆ. ಹಾಗಿದ್ದರೆ 2014 ಫೆಬ್ರವರಿಯಲ್ಲಿ ನಡೆಯಲಿರುವ ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ಕಾರುಗಳು ಯಾವುವು? ವಿಸೃತ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

 ಶೀಘ್ರದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿರುವ ಕಾರುಗಳು

20ಕ್ಕಿಂತಲೂ ಹೆಚ್ಚು ನೂತನ ಕಾರುಗಳು ಹಾಗೂ 12ರಷ್ಟು ಫೇಸ್‌‍ಲಿಫ್ಟ್ ಮಾದರಿಗಳು ದೇಶದ ರಸ್ತೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ. ಇದರಲ್ಲಿ ಹೋಂಡಾ ಸಿಟಿ, ಜಾಝ್, ಮಾರುತಿ ಎಸ್ಟಾರ್, ಎಸ್‌ಎಕ್ಸ್‌4 ಕ್ರಾಸೋವರ್, ದಟ್ಸನ್ ಗೊ, ಗೊ ಪ್ಲಸ್, ಹ್ಯುಂಡೈ ಐ10 ಸೆಡಾನ್‌ ಸೇರಿದಂತೆ ಹಲವಾರು ಕಾರುಗಳು ಸೇರಿವೆ.

ದಟ್ಸನ್ ಗೊ

ದಟ್ಸನ್ ಗೊ

ನಿಸ್ಸಾನ್ ಮೋಟಾರ್ ಕಂಪನಿ ತಲಹದಿಯಲ್ಲಿ ಪ್ರತಿಷ್ಠಿತ ದಟ್ಸನ್ ಕಾರು ಬ್ರಾಂಡ್ ಭಾರತಕ್ಕೆ ಭರ್ಜರಿ ರಿ ಎಂಟ್ರಿ ಕೊಟ್ಟಿದೆ. ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ಗೆ ಕಾಲಿಟ್ಟಿರುವ ದಟ್ಸನ್ 4 ಲಕ್ಷ ರು.ಗಳ ಅಸುಪಾಸಿನಲ್ಲಿ ತನ್ನ ನೂತನ ಕಾರನ್ನು ಪರಿಚಯಿಸುತ್ತಿದ್ದು, ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲಾಂಚ್ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಕಿಕ್ಕಿಸಿರಿ..

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ಇಂಡೋನೇಷ್ಯಾದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿರುವ 'ಗೊ ಪ್ಲಸ್' ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಭಾರತದಲ್ಲೂ ಮುಂದಿನ ವರ್ಷ ಭರ್ಜರಿ ಪ್ರದರ್ಶನ ಕಾಣಲಿದೆ.

2014 ಫಿಯೆಟ್ ಲಿನಿಯಾ

2014 ಫಿಯೆಟ್ ಲಿನಿಯಾ

ಮುಂದಿನ ವರ್ಷದ ದೆಹಲಿ ಆಟೋ ಎಕ್ಸ್‌ಪೋ ಇಟಲಿ ಮೂಲದ ಪುರಾತನ ಕಾರು ಕಂಪನಿಗಳಲ್ಲಿ ಒಂದಾದ ಫಿಯೆಟ್ ಪಾಲಿಗೆ ನಿರ್ಣಾಯಕೆನಿಸಲಿದೆ. ಯಾಕೆಂದರೆ ಇದೇ ಆಟೋ ಎಕ್ಸ್‌ಪೋದಲ್ಲಿ ಫಿಯೆಟ್ ಬಹುನಿರೀಕ್ಷಿತ 2014 ಲಿನಿಯಾ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಳ್ಳಲಿದೆ

ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್, ಸೆಡಾನ್

ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್, ಸೆಡಾನ್

ಇದರ ಬೆನ್ನಲ್ಲೇ ಇನ್ನೊಂದು ಸಿಹಿ ಸುದ್ದಿ ವಾಹನ ಪ್ರೇಮಿಗಳನ್ನು ಹರಸಿಕೊಂಡು ಬಂದಿದ್ದು, ಎಲ್ಲ ಹೊಸತನದಿಂದ ಕೂಡಿದ 2015 ಫೋರ್ಡ್ ಫಿಗೊ ಹ್ಯಾಚ್‌ಬ್ಯಾಕ್ ಸೇರಿದಂತೆ ಸೆಡಾನ್ ಕಾರೊಂದು ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿದೆ.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ಸದ್ಯ ಭಾರತೀಯ ಗ್ರಾಹಕರು ಅತೀವ ಕುತೂಹಲದಿಂದ ಎದುರು ನೋಡುತ್ತಿರುವ ವಾಹನವೆಂದರೆ ಅದುವೇ ಹೋಂಡಾದಿಂದ ಆಗಮನವಾಗಲಿರುವ ನೂತನ ಮಲ್ಟಿ ಪರ್ಪಸ್ ವೆಹಿಕಲ್.ಪ್ರಮುಖವಾಗಿಯೂ ಸೆಗ್ಮೆಂಟ್ ತಲಹದಿಯಲ್ಲಿ ಮಾರುತಿ ಎರ್ಟಿಗಾ ಹಾಗೂ ಟೊಯೊಟಾ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿರುವ ಈ ನೂತನ ಎಂಪಿವಿ, ಮುಂದಿನ ವರ್ಷ ಅನಾವರಣಗೊಳ್ಳಲಿದೆ.

 ಹೋಂಡಾ ವೆಜೆಲ್

ಹೋಂಡಾ ವೆಜೆಲ್

ಕಳೆದೊಂದು ವರ್ಷದಲ್ಲಿ ದೇಶದ ಕಾರು ಮಾರುಕಟ್ಟೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಈ ಅವಧಿಯಲ್ಲಿ ಹೊಸದಾಗಿ ಆರಂಭಗೊಂಡಿರುವ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ಗೆ ವಿಪರೀತ ಬೇಡಿಕೆ ಕಂಡುಬಂದಿದೆ. ಈ ಪಟ್ಟಿಯಲ್ಲಿ ಪ್ರಮುಖವಾಗಿ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್ ಹಾಗೂ ನಿಸ್ಸಾನ್ ಟೆರನೊ ಕಾರುಗಳು ಕಾಣಿಸಿಕೊಂಡಿದ್ದವು. ಇದಕ್ಕೊಂದು ಸೇರ್ಪಡೆಯಂಬಂತೆ ಹೋಂಡಾದಿಂದ ನೂತನ ವೆಜೆಲ್ ಅರ್ಬನ್ ಕಾರು ಭಾರತದತ್ತ ಮುಖ ಮಾಡಿದೆ.

ಹ್ಯುಂಡೈ ಕಾರುಗಳು

ಹ್ಯುಂಡೈ ಕಾರುಗಳು

ಹೆಕ್ಸಾ ಸ್ಪೇಸ್ ಫಾರ್ಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಲಿರುವ ಹ್ಯುಂಡೈ ಕಾಂಪಾಕ್ಟ್ ಎಸ್‌ಯುವಿ 2014ರಲ್ಲಿ ಅನಾವರಣಗೊಳ್ಳಲಿದೆ. ಇದು ಪ್ರಮುಖವಾಗಿಯೂ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದೆ. ಇದರ ಜತೆಗೆ ಸೆಡಾನ್ ಕಾರು ಸಹ ಅನಾವರಣಗೊಳ್ಳಲಿದೆ. ಮುಂಬರುವ ಹ್ಯುಂಡೈ ಕಾರುಗಳು

ಜೀಪ್ ಕೆರೊಕೆ, ವ್ಯಾಂಗ್ಲರ್

ಜೀಪ್ ಕೆರೊಕೆ, ವ್ಯಾಂಗ್ಲರ್

ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲಿ ಜೀಪ್ ಕೆರೂಕೆ ಹಾಗೂ ವ್ಯಾಂಗ್ಲರ್ ನೂತನ ಕಾರುಗಳು ಭಾರತ ಮಾರುಕಟ್ಟೆಯನ್ನು ಪ್ರವೇಶ ಪಡೆಯಲಿದೆ.

ಮಾರುತಿ ಎ ಸ್ಟಾರ್

ಮಾರುತಿ ಎ ಸ್ಟಾರ್

ವೈಎಲ್7 ಎಂದು ಕೋಡ್ ಪಡೆದುಕೊಂಡಿರುವ ನೂತನ ಎ ಸ್ಟಾರ್ ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಕಾರು ಮುಂಬರುವ ವರ್ಷಾರಂಭದಲ್ಲಿ ಲಾಂಚ್ ಆಗಲಿದೆ.

ಮಾರುತಿ ಎಸ್‌ಎಕ್ಸ್4

ಮಾರುತಿ ಎಸ್‌ಎಕ್ಸ್4

ಅದೇ ರೀತಿ ವೈಎಲ್1 ಎಂಬ ಕೋಡ್ ಪಡೆದುಕೊಂಡಿರುವ ಮಾರುತಿ ಎಸ್‌ಎಕ್ಸ್4 ಮಿಡ್ ಸೈಜ್ ಸೆಡಾನ್ ಕಾರು ಸಹ ಇದೇ ಸಂದರ್ಭದಲ್ಲಿ ಪ್ರದರ್ಶನ ಕಾಣಲಿದೆ.

ಮಾರುತಿ ಎಸ್‌ಎಕ್ಸ್4 ಹ್ಯಾಚ್‌ಬ್ಯಾಕ್

ಮಾರುತಿ ಎಸ್‌ಎಕ್ಸ್4 ಹ್ಯಾಚ್‌ಬ್ಯಾಕ್

ಅಷ್ಟೇ ಯಾಕೆ ವೈಎಡಿ ಎಂಬ ಕೋಡ್ ಪಡೆದುಕೊಂಡರಿವು ಮಾರುತಿ ಸುಜುಕಿ ಎಸ್‌ಕ್ಸ್4 ಹ್ಯಾಚ್‌ಬ್ಯಾಕ್ ಕಾರು ಸಹ ದೆಹಲಿ ಆಟೋ ಎಕ್ಸ್ ಶೋದಲ್ಲಿ ಅನಾವರಣಗೊಳ್ಳಲಿದೆ.

2014 ಹೋಂಡಾ ಸಿಟಿ

2014 ಹೋಂಡಾ ಸಿಟಿ

ಗ್ರಾಹಕರ ಬಹುಬೇಡಿಕೆಯ ಕಾರಾಗಿರುವ ಹೋಂಡಾ ಸಿಟಿ ಈಗಾಗಲೇ ಭರ್ಜರಿ ಅನಾವರಣ ಕಂಡಿದ್ದು, ಮುಂದಿನ ವರ್ಷಾರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೋಂಡಾ ಜಾಝ್

ಹೋಂಡಾ ಜಾಝ್

ವಾಹನ ಪ್ರಿಯರು ಕಾತರದಿಂದ ಕಾಯುತ್ತಿರುವ ಇನ್ನೊಂದು ಆಕರ್ಷಕ ಕಾರು ಹೋಂಡಾ ಜಾಝ್ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

2014 ಟೊಯೊಟಾ ಕರೊಲ್ಲಾ

2014 ಟೊಯೊಟಾ ಕರೊಲ್ಲಾ

ಈಗಾಗಲೇ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿರುವ 2014 ಟೊಯೊಟಾ ಕರೊಲ್ಲಾ ವರ್ಷಾರಂಭದಲ್ಲಿ ದೇಶದ ರಸ್ತೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ವಾಹನೋದ್ಯಮ ಮೂಲಗಳು ತಿಳಿಸಿವೆ.

ರೆನೊ ಹ್ಯಾಚ್‌ಬ್ಯಾಕ್

ರೆನೊ ಹ್ಯಾಚ್‌ಬ್ಯಾಕ್

ನಾಲ್ಕು ಲಕ್ಷ ರು.ಗಳ ಬಜೆಟ್‌ನೊಳಗೆ ನೂತನ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸುವ ಯೋಜನೆಯನ್ನು ರೆನೊ ಹೊಂದಿದೆ. ಹಾಗೆಯೇ ಲಾಡ್ಜಿ ಎಂಪಿವಿ ಕಾರು ಸಹ ಅನಾವರಣಗೊಳ್ಳಲಿದೆ.

ಸುಜುಕಿ ಕಾಂಪಾಕ್ಟ್ ಎಸ್‌ಯುವಿ

ಸುಜುಕಿ ಕಾಂಪಾಕ್ಟ್ ಎಸ್‌ಯುವಿ

65ನೇ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಭರ್ಜರಿ ಅನಾವರಣ ಕಂಡಿರುವ ಸುಜುಕಿ 'iV-4' ಕಾನ್ಸೆಪ್ಟ್ ಎಸ್‌ಯುವಿ ಭಾರತದತ್ತ ಹೆಜ್ಜೆಯನ್ನಿಟ್ಟಿದೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಇನ್ನು ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನಿಂದ ಫಾಲ್ಕನ್ 4 ಹಾಗೂ 5 ಎಂದು ಹೆಸರಿಸಿಕೊಂಡಿರುವ ನೂತನ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Around 20 new cars and about 12 facelifts are expected around the Auto Expo in February as carmakers look to whip up some excitement in the domestic market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X