ಬೈಕ್ ಅಪಘಾತಕ್ಕಿರುವ 10 ಅತಿ ಸಾಮಾನ್ಯ ಕಾರಣಗಳು!

By Nagaraja

ತಪ್ಪು ಮಾಡುವುದು ಮಾನವ ಸಹಜ ಗುಣ. ಎಲ್ಲಿ ವಾಹನಗಳಿದೆಯೋ ಅಲ್ಲಿ ಅಪಘಾತ ಘಟಿಸುವುದು ಸಾಮಾನ್ಯ ಸಂಗತಿ. ಹಾಗಿದ್ದರೆ ಇಂತಹ ಅಪಘಾತ ಪ್ರಸಂಗಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ?

ಇದು ಖಂಡಿತವಾಗಿಯೂ ಚರ್ಚೆಯ ವಿಷಯ. ನಮ್ಮ ದೈನಂದಿನ ಜೀವನದ ಸವಾರಿಯಲ್ಲಿ ಸಮಯ ಪ್ರಜ್ಞೆ ಮೆರೆದರೆ ಸಾಧ್ಯವಾದಷ್ಟು ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಬಹಳ ಏಕಾಗ್ರತೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ಹಾಗಿದ್ದರೆ ಮಾನವ ಎಡವಟ್ಟಿನಿಂದ ಪದೇ ಪದೇ ಆಗುವ ಬೈಕ್ ಅಪಘಾತಕ್ಕಿರುವ 10 ಸಾಮಾನ್ಯ ಕಾರಣಗಳು ಯಾವುವು? ಮುಂದಕ್ಕೆ ಓದಿರಿ...

10. 'ಯು' ತಿರುವು

10. 'ಯು' ತಿರುವು

ನಗರ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ಎಲ್ಲಿ ಯು ತಿರುವು ನಿಷೇಧಿಸಲಾಗಿದೆಯೇ ಅಂತಹ ಪ್ರದೇಶಗಳಲ್ಲಿ ಅರಿತೋ ಅರಿಯದೆಯೋ ಬೈಕ್ ಸವಾರರು ಯು ಟರ್ನ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪರಿಣಾಮ ತಾವೇ ಅಪಘಾತವನ್ನು ಕೈ ಬೀಸಿ ಕರೆಯುತ್ತಾರೆ. ಇದರಿಂದ ಇತರ ವಾಹನಗಳಿಗೂ ತೊಂದರೆ ಎದುರಾಗುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ಸಂಚಾರ ಚಿಹ್ನೆಗಳನ್ನು ಅಚ್ಚುಕಟ್ಟಾಗಿ ಪಾಲಿಸಲು ಮರೆಯದಿರಿ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಟ್ರಾಫಿಕ್ ನಿಯಮಗಳನ್ನು ವಾಹನ ಸುಗಮ ಸಂಚಾರಕ್ಕಾಗಿ ತಾನೇ ಮಾಡಿರೋದು?

09. ಮೊಬೈಲ್ ಸಂಭಾಷಣೆ

09. ಮೊಬೈಲ್ ಸಂಭಾಷಣೆ

ಇನ್ನು ಕೆಲವು ಅತಿ ಬುದ್ಧಿವಂತ ಚಾಲಕರು ಒಂದು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಮಾತನಾಡುತ್ತಾ ಮಗದೊಂದು ಕೈಯಲ್ಲಿ ಹ್ಯಾಂಡಲ್ ಹಿಡಿದುಕೊಂಡು ಹಾಯಾಗಿ ಸಾಗುತ್ತಾರೆ. ಎಚ್ಚರ! ನಿಮ್ಮನ್ನು ನೀವೇ ಪರಿಣತ ಚಾಲಕರು ಎಂದು ಅಂದುಕೊಂಡಿದ್ದರೆ ಎಲ್ಲ ದಿನವೂ ರಸ್ತೆ ಪರಿಸ್ಥಿತಿ ಸಮಾನವಾಗಿರುವುದಿಲ್ಲ ಎಂಬುದನ್ನು ಮರೆಯಬೇಡಿ! ಇದು ಚಾಲನೆ ವೇಳೆ ಕಿವಿಗೆ ಹೆಡ್ ಫೋನ್ ಇಟ್ಟುಕೊಂಡು ಹಾಡು ಕೇಳುವ ಸವಾರರಿಗೂ ಅನ್ವಯವಾಗುತ್ತದೆ.

08. ಪರಿಸ್ಥಿತಿ ನಿರ್ಣಯಿಸಲು ವಿಫಲ

08. ಪರಿಸ್ಥಿತಿ ನಿರ್ಣಯಿಸಲು ವಿಫಲ

ಕೆಲವೊಮ್ಮೆ ಏನಾಗುತ್ತದೆಯೆಂದರೆ ತಿರುವು ಮುಂತಾದ ಪ್ರದೇಶವನ್ನು ತಲುಪಿದಾಗ ವಾಹನ ಸವಾರರು ಪರಿಸ್ಥಿತಿಯನ್ನು ನಿರ್ಣಯಿಸಲು ವಿಫಲವಾಗುತ್ತಾರೆ. ಉದಾಹರಣೆಗೆ ಕಡಿದಾದ ತಿರುವುಗಳಲ್ಲಿ ವೇಗವಾಗಿ ಚಲಿಸುವ ಬೈಕ್ ಸವಾರರು ಬೈಕ್ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅಷ್ಟಾಗುವಾಗ ಕಾಲ ಮಿಂಚಿ ಹೋಗಿರುತ್ತದೆ.

07. ಬಾಗುವಿಕೆ

07. ಬಾಗುವಿಕೆ

ಬೈಕ್ ಸವಾರರು ನಡೆಸುವ ಚಿಕ್ಕ ಚಿಕ್ಕ ಎಡವಟ್ಟುಗಳಿಗೆ ಇದು ಒಂದು ಕಾರಣವಾಗಿದೆ. ಬೈಕ್ ಗಳನ್ನು ಕಡಿದಾಗಿ ಬಾಗಿಸುವುದರಿಂದ ಚಕ್ರವು ರಸ್ತೆ ಜೊತೆಗಿನ ಸೆಳೆತವನ್ನು ಕಳೆದುಕೊಳ್ಳುವ ಭೀತಿಯಿದ್ದು, ಇದರಿಂದಾಗಿ ಅಪಘಾತ ಸಂಭವಿಸಲಿದೆ.

06. ಓವರ್ ಸ್ಪೀಡ್

06. ಓವರ್ ಸ್ಪೀಡ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬೆಲ್ಲು ಬ್ರೇಕ್ ಇಲ್ಲದೆ ಅನಿಯಮಿತ ವೇಗದಲ್ಲಿ ಚಲಿಸುವುದರಿಂದಲೂ ಅಪಘಾತ ಘಟಿಸಬಹುದು.

05. ಆಯಾಸ, ಮಾನಸಿಕ ಖಿನ್ನತೆ

05. ಆಯಾಸ, ಮಾನಸಿಕ ಖಿನ್ನತೆ

ಆಯಾಸ ಅಥವಾ ಮಾನಸಿಕ ಖಿನ್ನತೆಯಲ್ಲಿ ಸಾಧ್ಯವಾದಷ್ಟು ಬೈಕ್ ಸವಾರಿಯನ್ನು ತಪ್ಪಿಸಿದರೆ ಒಳಿತು. ಇದರಿಂದ ನಿಮ್ಮ ಏಕಾಗ್ರತೆಗೆ ಭಂಗವುಂಟಾಗಲಿದ್ದು, ಅಪಘಾತ ಪರಿಸ್ಥಿತಿ ಎದುರಾಗಲಿದೆ.

04. ಸ್ಟಂಟ್, ವೀಲಿಂಗ್ ಶೋ

04. ಸ್ಟಂಟ್, ವೀಲಿಂಗ್ ಶೋ

ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಅಥವಾ ವೀಲಿಂಗ್ ನಡೆಸುವ ಪೋಲಿ ಹುಡುಗರಿಂದಲೂ ಅಪಘಾತ ಘಟಿಸಲಿದೆ.

03. ಡ್ರಿಂಕ್ ಆ್ಯಂಡ್ ಡ್ರೈವ್

03. ಡ್ರಿಂಕ್ ಆ್ಯಂಡ್ ಡ್ರೈವ್

ಪಾನಮತ್ತರಾಗಿ ವಾಹನ ಚಲಾಯಿಸುವುದು ಅತಿ ಸಾಮಾನ್ಯ ಅಪಘಾತ ಕಾರಣಗಳಲ್ಲಿ ಒಂದಾಗಿದೆ. ಸಮಾಜದ ಒಂದು ವಿಭಾಗದ ಪ್ರಜ್ಞಾವಂತ ವರ್ಗವೇ ಇದನ್ನು ಮಾಡುತ್ತಿರುವುದು ಖೇದಕರ ಸಂಗತಿ.

02. ನಿರ್ವಹಣೆ ಕೊರತೆ

02. ನಿರ್ವಹಣೆ ಕೊರತೆ

ನಿಮ್ಮ ಗಾಡಿಯ ನಿರ್ವಹಣೆಯನ್ನು ಸರಿಯಾಗಿಟ್ಟುಕೊಳ್ಳುವುದು ನಿಮ್ಮ ಕರ್ತವ್ಯ. ಉದಾಹರಣೆಗೆ ಇಂಡಿಕೇಟರ್, ಲೈಟ್ಸ್, ಚಕ್ರ, ಹೆಡ್ ಲ್ಯಾಂಪ್, ಎಂಜಿನ್ ಆಯಿಲ್, ಗಾಳಿ ಒತ್ತಡ, ಕೂಲಂಡ್, ಬ್ರೇಕ್, ಹಾರ್ನ್ ಮುಂತಾದ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.

10. ಇತರೆ ಕಾರಣಗಳು

10. ಇತರೆ ಕಾರಣಗಳು

ಇತರೆ ಹಲವಾರು ಕಾರಣಗಳಿಂದಾಗಿ ಅಪಘಾತಗಳು ಸಂಭವಿಸಬಹುದು. ಮಣ್ಣಿನ ರಸ್ತೆ ಅಥವಾ ಮಳೆಯಿಂದಾಗಿ ಒದ್ದೆಯಾದ ರಸ್ತೆಗಳಲ್ಲಿ ವೇಗವಾಗಿ ಚಲಿಸುವುದರಿಂದಲೂ ಬೈಕ್ ಸ್ಕಿಡ್ ಆಗುವ ಸಂಭವ ಜಾಸ್ತಿಯಿರುತ್ತದೆ. ಈ ಎಲ್ಲ ಸಂದರ್ಭಗಳಲ್ಲೂ 'ನಿಧಾನವೇ ಪ್ರದಾನ' ಎಂಬ ವಾಕ್ಯವನ್ನು ನೆನಪಿನಲ್ಲಿಟ್ಟುಕೊಂಡರೆ ಒಳಿತು.

Most Read Articles

Kannada
English summary
Here are 10 very common reasons why Motorcycle accidents happen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X