ಪಂಚರ್ ಕಾರಿನ ಚಕ್ರ ಬದಲಾಯಿಸಲು 10 ಸುಲಭ ವಿಧಾನಗಳು

By Nagaraja

ಎಲ್ಲ ಕಾರ್ಯಗಳಿಗೂ ಅದರದ್ದೇ ಆದ ಕ್ರಮಗಳಿರುತ್ತದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಿದ್ದಲ್ಲಿ ಮಾತ್ರ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ನೀವು ಮಿತ್ರರ ಜೊತೆಗೂಡಿ ಅಥವಾ ಫ್ಯಾಮಿಲಿ ಜೊತೆ ಒಂದು ದೂರ ಪ್ರಯಾಣವೊಂದನ್ನು ಹಮ್ಮಿಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ದಾರಿ ಮಧ್ಯೆ ನಿಮ್ಮ ಕಾರಿನ ಟೈರ್ ಪಂಚರ್ ಆದ್ದಲ್ಲಿ ಏನು ಮಾಡುವೀರಾ?

ಇವನ್ನೂ ಓದಿ: ಕಾರಿನ ಜಾಕ್ ಬಳಕೆ ಮಾಡುವ ವಿಧಾನ ಹೇಗೆ?

ನಿಮ್ಮ ಮೋಜು-ಮಸ್ತಿ ಎಲ್ಲವೂ ಅರ್ಧದಲ್ಲೇ ಮೊಟಕುಗೊಳ್ಳುತ್ತದೆಯೆಂಬ ಆತಂಕ ಕಾಡಬಹುದು ಅಲ್ಲವೇ? ನಿಮ್ಮ ಮಕ್ಕಳ ಮುಖದಲ್ಲೂ ನಿರಾಸೆಯನ್ನು ಸ್ಪಷ್ಟವಾಗಿ ಮನಗಾಣಬಹುದು. ಇನ್ನು ಅಕ್ಕ ಪಕ್ಕದಲ್ಲಿ ಮೆಕ್ಯಾನಿಕ್ ಸಹಾಯ ಪಡೆಯುವುದು ದೂರದ ಮಾತು. ಹಾಗಿರುವಾಗ ನೀವು ಕೇವಲ 10 ನಿಮಿಷಗಳನ್ನು ವ್ಯಯ ಮಾಡಲು ತಯಾರಾದ್ದಲ್ಲಿ ನಾವಿಲ್ಲಿ 10 ಸುಲಭ ಟಿಪ್ಸ್‌ಗಳ ಮೂಲಕ ಪಂಚರ್ ಟೈರ್ ಅಥವಾ ಫ್ಲ್ಯಾಟ್ ಟೈರ್ ಅನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಹೇಳಿಕೊಡಲಿದ್ದೇವೆ. ಇದು ನಿಮ್ಮ ಪಯಣವನ್ನು ಮುಂದುವರಿಸಲು ಸಹಕಾರಿಯಾಗಲಿದೆ.

ಪಂಚರ್ ಕಾರಿನ ಚಕ್ರ ಬದಲಾಯಿಸಲು 10 ಸುಲಭ ವಿಧಾನಗಳು

ಹೌದು ಕಾರು ಟೈರ್ ಪಂಚರ್ ಸಮಸ್ಯೆಯನ್ನು ಪ್ರತಿಯೊಬ್ಬ ಚಾಲಕನೂ ಒಂದಲ್ಲ ಒಂದು ದಿನ ಎದುರಿಸಿಯೇ ಎದುರಿಸುತ್ತಾನೆ. ಈ ಸಂದರ್ಭದಲ್ಲಿ ಗಾಡಿ ನಿಮ್ಮ ನಿಯಂತ್ರಣಕ್ಕೆ ಸಿಗದೇ ಎತ್ತೆತ್ತಲೋ ಚಲಿಸಿ ಅಪಘಾತವಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ.

01. ಗಾಡಿ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿ

01. ಗಾಡಿ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಿ

ಕಾರು ಪಂಚರ್ ಆದಾಗ ಗಾಡಿ ಸೈಡ್‌ಗೆ ಎಳೆಯ ತೊಡಗುತ್ತದೆ. ಹಾಗಾಗಿ ಟೈರ್ ಪಂಚರ್ ಆಗಿರುವ ವಿಚಾರ ಮನಗಂಡ ತಕ್ಷಣ ವೇಗವನ್ನು ತಗ್ಗಿಸಿ ಬಹಳ ಎಚ್ಚರಿಕೆಯಿಂದ ರಸ್ತೆ ಬದಿಗೆ ತಂದು ನಿಲ್ಲಿಸಿರಿ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸಮತಟ್ಟಾದ ರಸ್ತೆ ಬದಿಯಲ್ಲಿ ನಿಲ್ಲಿಸಲು ಆದ್ಯತೆ ಕೊಡಿ. ಇಲ್ಲದಿದ್ದಲ್ಲಿ ಇಳಿಜಾರಿನಲ್ಲಿ ಗಾಡಿ ಸ್ಕಿಡ್ ಆಗುವ ಸಾಧ್ಯತೆಯಿದೆ. ಅಲ್ಲದೆ ಟೈರ್ ಬದಲಾಯಿಸುವಾಗ ಜಾರಿ ಹೋಗುವ ಭೀತಿಯೂ ಇರುತ್ತದೆ. ಇನ್ನು ಎಂಜಿನ್ ಆಫ್ ಮಾಡಿ ಎಮರ್ಜೆನ್ಸಿ ಅಥವಾ ಪಾರ್ಕಿಂಗ್ ಲೈಟ್ ಆನ್ ಮಾಡಲು ಮರೆಯದಿರಿ. ಇದು ಅಕ್ಕ ಪಕ್ಕದಲ್ಲಿ ಚಲಿಸುವ ವಾಹನಗಳಿಗೆ ಸ್ವಲ್ಪ ದೂರದಿಂದಲೇ ನಿಮ್ಮ ಕಾರಿಗೆ ಏನೋ ಸಮಸ್ಯೆ ತಟ್ಟಿದೆ ಎಂಬುದನ್ನು ಮನಗಾಣಲು ಸಹಕಾರಿಯಾಗುತ್ತದೆ.

02. ಹ್ಯಾಂಡ್ ಬ್ರೇಕ್ ಹಾಕಿ

02. ಹ್ಯಾಂಡ್ ಬ್ರೇಕ್ ಹಾಕಿ

ಎರಡನೇಯದಾಗಿ ಗಮನಿಸಬೇಕಾದ ವಿಷಯ ಏನೆಂದರೆ ಫಸ್ಟ್ ಗೇರ್‌ನಲ್ಲೇ ಗಾಡಿ ಎಂಜಿನ್ ಆಫ್ ಮಾಡಿ ಹ್ಯಾಂಡ್ ಬ್ರೇಕ್ ಹಾಕಲು ಮರೆಯಬಾರದು.

03. ಬೇಕಾಗುವ ಉಪಕರಣಗಳು

03. ಬೇಕಾಗುವ ಉಪಕರಣಗಳು

ಯಾವತ್ತೂ ನಿಮ್ಮ ಪಯಣಕ್ಕೂ ಮುನ್ನವೇ ಕಾರಿನ ಢಿಕ್ಕಿಯಲ್ಲಿ ಸ್ಪೇರ್ ವೀಲ್, ಕಾರು ಜಾಕ್, ವೀಲ್ ಸ್ಪಾನರ್ ಹಾಗೂ ಜಾಕ್ ಹ್ಯಾಂಡಲ್ ಮುಂತಾದ ಉಪಕರಣಗಳನ್ನು ಇಟ್ಟುಕೊಳ್ಳಲು ಮರೆಯದಿರಿ. ಇದು ಕಾರು ಪಂಚರ್ ಆದ ಸಂದರ್ಭದಲ್ಲಿ ಟೈರ್ ಬದಲಾಯಿಸಲು ಸಹಕಾರಿಯಾಗಲಿದೆ. ಇನ್ನು ಚಿತ್ರದಲ್ಲಿ ತೋರಿಸಿರುವಂತೆಯೇ ಮೂರು ಮೀಟರ್ ದೂರದಲ್ಲಿ ತ್ರಿಕೋಣಕಾರದಲ್ಲಿರುವ ಕಾರು ಎಮರ್ಜನ್ಸಿ ಬ್ರೇಕ್ ಡೌನ್ ಲಗತ್ತಿಸಿದ್ದಲ್ಲಿ ನಿಮ್ಮ ಕೆಲಸ ಇನ್ನಷ್ಟು ಸುಲಭವಾಗಲಿದೆ. ಇಲ್ಲದಿದ್ದಲ್ಲಿ ರಸ್ತೆ ಬದಿಯಲ್ಲಿರುವ ಕಲ್ಲನ್ನು ಇಡಿರಿ. ಇದು ಇತರ ವಾಹನ ಸವಾರರನ್ನು ಎಚ್ಚರಿಸಲಿದೆ.

ಎಚ್ಚರ: ತಿರುವಿನಲ್ಲಿ ಪಂಚರ್ ರಿಪೇರಿ ಕೆಲಸ ಬೇಡ.

04. ವೀಲ್ ನಟ್ ಸಡಿಲಗೊಳಿಸಿ

04. ವೀಲ್ ನಟ್ ಸಡಿಲಗೊಳಿಸಿ

ಇನ್ನು ನಿಧಾನವಾಗಿ ವೀಲ್ ನಟ್ ಅನ್ನು ಆ್ಯಂಟಿ ಕ್ಲಾಕ್ ವೈಸ್ ಆಗಿ ಸಡಿಲಗೊಳಿಸಿ. ಇದಕ್ಕೂ ಮೊದಲು ನಿಮ್ಮ ರಂಗು ರಂಗಿನ ಬಟ್ಟೆಗಳಲ್ಲಿ ಕೊಳಕು ಆಗದಿರಲು ಚಾಲಕ ಬದಿಯ ಕ್ಯಾಬಿನ್‌ನಲ್ಲಿರುವ ಫ್ಲೋರ್ ಮ್ಯಾಟ್‌ನ ಸಹಾಯ ಪಡೆದುಕೊಳ್ಳಬಹುದು.

ಎಚ್ಚರ: ಟೈರ್ ಈಗಲೂ ನೆಲದ ಮೇಲಿದ್ದು, ಹಾಗಾಗಿ ವೀಲ್ ನಟ್ ಒಂದು ಅಥವಾ ಎರಡು ಟರ್ನ್ ಮಾತ್ರ ಸಡಿಲಗೊಳಿಸಿದರೆ ಸಾಕು.

05. ಜಾಕ್‌ ಬಳಕೆ

05. ಜಾಕ್‌ ಬಳಕೆ

ಈಗ ನಾವು ಮಹತ್ವದ ಹಂತವನ್ನು ತಲುಪಿದ್ದು, ಕಾರು ಜಾಕ್‌ನ ಸರಿಯಾದ ಬಳಕೆ ಅತ್ಯಗತ್ಯ. ಇದಕ್ಕಾಗಿ ಮ್ಯಾನುವಲ್ ಪುಸ್ತಕದ ನೆರವನ್ನು ಪಡೆದುಕೊಳ್ಳಬಹುದು. ಏಕೆಂದರೆ ವಾಹನ ತಯಾರಿಕ ಸಂಸ್ಥೆಗಳಿಗೆ ಅನುಸಾರವಾಗಿ ಒಂದೊಂದು ಮಾದರಿಗೆ ಪ್ರತ್ಯೇಕ ಪ್ರತ್ಯೇಕ ಲಿಫ್ಟ್ ಪಾಯಿಂಟ್‌ಗಳಿರುತ್ತದೆ. ಜಾಕ್‌ನಲ್ಲೂ ಹಲವು ವಿಧಗಳಿದ್ದು, ಅವುಗಳನ್ನು ಉಪಯೋಗಿಸುವ ವಿಧಾನಗಳೂ ವಿಭಿನ್ನವಾಗಿರುತ್ತದೆ. ಇವುಗಳನ್ನು ಕಾರು ಗೈಡ್ ಪುಸಕ್ತದಲ್ಲಿ ಉಲ್ಲೇಖಿಸಲಾಗಿರುತ್ತದೆ. ಇಲ್ಲಿ ಫೋರ್ಡ್ ಫಿಗೊ ಕಾರಿನಲ್ಲಿ ನೀಡಿರುವ ಜಾಕ್ ಪಾಯಿಂಟ್ ಅನ್ನು ಕೊಡಲಾಗಿದೆ.

 06. ಕಾರು ಮೇಲಕ್ಕೆತ್ತಿರಿ

06. ಕಾರು ಮೇಲಕ್ಕೆತ್ತಿರಿ

ಸರಿಯಾದ ಜಾಗದಲ್ಲಿ ಜಾಕ್ ಆಳವಡಿಸಿದ ಬಳಿಕ ಕಾರನ್ನು ನಿಧಾನವಾಗಿ ಮೇಲಕ್ಕೆತ್ತಿರಿ. ಇಲ್ಲಿ ಜಾಕ್ ತಪ್ಪು ಜಾಗದಲ್ಲಿ ಕುಳಿತುಕೊಳ್ಳದಂತೆಯೂ ಹಾಗೂ ಸುರಕ್ಷಿತವಾಗಿ ಮೇಲಕ್ಕೆತ್ತಲಾಗುತ್ತಿದೆ ಎಂಬುದನ್ನು ನೋಡಿಕೊಳ್ಳತಕ್ಕುದ್ದು. ಹಾಗೆಯೇ ಪಂಚರ್ ಆದ ಚಕ್ರ ಹಾಗೂ ನೆಲದ ನಡುವಣ ಕನಿಷ್ಠ ಎರಡು ಇಂಚುಗಳ ಅಂತರ ಇರಬೇಕಾಗುತ್ತದೆ. ಇದು ಸ್ಪೇರ್ ವೀಲ್ ಸುಲಭವಾಗಿ ಜೋಡಿಸಲು ನೆರವಾಗಲಿದೆ.

 07. ವೀಲ್ ನಟ್, ಚಕ್ರಗಳನ್ನು ಹೊರತೆಗೆಯಿರಿ

07. ವೀಲ್ ನಟ್, ಚಕ್ರಗಳನ್ನು ಹೊರತೆಗೆಯಿರಿ

ಈಗ ವೀಲ್ ನಟ್ ಬಿಚ್ಚಿದ ಬಳಿಕ ನಿಧಾನವಾಗಿ ಚಕ್ರವನ್ನು ಹೊರ ತೆಗಿಯಿರಿ. ಬಹುತೇಕ ಸಂದರ್ಭಗಳಲ್ಲಿ ತರಾತುರಿಯಿಂದಾಗಿ ವೀಲ್ ನಟ್ ಮಿಸ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಒಂದು ಪ್ಲಾಸ್ಟಿಕ್ ಕವರ್‌ನೊಳಗೆ ಅಥವಾ ಈ ಮೊದಲೇ ತಿಳಿಸಿದ ಫ್ಲೂರ್ ಮ್ಯಾಟ್‌ನಲ್ಲಿಟ್ಟರೆ ಉತ್ತಮ.

 08. ಸ್ಪೇರ್ ವೀಲ್ ಜೋಡಿಸಿ

08. ಸ್ಪೇರ್ ವೀಲ್ ಜೋಡಿಸಿ

ಫ್ಲ್ಯಾಟ್ ಅಥವಾ ಪಂಚರ್ ಚಕ್ರಗಳನ್ನು ಹೊರತೆಗಿದ ಬಳಿಕ ಸ್ಪೇರ್ ವೀಲ್ ಅನ್ನು ವೀಲ್ ಹಬ್‌ಗೆ ಸರಿಯಾಗಿ ಫಿಕ್ಸ್ ಮಾಡಿದ ಬಳಿಕ ವೀಲ್ ನಟ್‌ಗಳನ್ನು ಕೈಯಿಂದಲೇ ಕ್ಲಾಕ್ ವೈಸ್ ಡೈರಕ್ಷನ್‌ನಲ್ಲಿ ತಿರುಗಿಸಿ.

ವಿ.ಸೂ: ಇಲ್ಲಿ ಯಾವುದೇ ಕಾರಣಕ್ಕೂ ವೀಲ್ ನಟ್‌ಗಳನ್ನು ಬಿಗಿಯಾಗಿ ತಿರುಗಿಸದಿರಿ. ಏಕೆಂದರೆ ಹೆಚ್ಚು ಬಲ ಪ್ರಯೋಗ ಮಾಡುವುದರಿಂದ ಜಾಕ್ ಮೇಲೆ ನಿಂತಿರುವ ಕಾರು ಜಾರಿ ಹೋಗುವ ಭೀತಿಯಿದ್ದು, ಗಾಡಿ ಬಲವಾಗಿ ನೆಲಕ್ಕಪ್ಪಳಿಸುವ ಸಾಧ್ಯತೆಯಿರುತ್ತದೆ.

09. ಜಾಕ್ ಹೊರತೆಗಿಯಿರಿ

09. ಜಾಕ್ ಹೊರತೆಗಿಯಿರಿ

ಇದಾದ ಬಳಿಕ ನಿಧಾನವಾಗಿ ಜಾಕ್ ಹೊರತೆಗಿಯಿರಿ. ಇದಕ್ಕೂ ಮೊದಲು ಕಾರಿನ ಚಕ್ರ ನೆಲಕ್ಕೆ ತಾಗಿರುವುದನ್ನು ಖಾತ್ರಿಪಡಿಸಲು ಮರೆಯದಿರಿ. ತದಾ ಬಳಿಕ ವೀಲ್ ನಟ್‌ಗಳನ್ನು ಬಿಗಿಯಾಗಿ ತಿರುಗಿಸಿ ಹಬ್ ಕ್ಯಾಪ್ ಫಿಟ್ ಮಾಡಿರಿ.

ವಿ.ಸೂ: ಎಲ್ಲ ವೀಲ್ ನಟ್‌ಗಳು ಸರಿಯಾಗಿ ಲಾಕ್ ಆಗಿದೆ ಎಂಬುದನ್ನು ಖಚಿತಪಡಿಸಿ.

10. ಉಪಕರಣಗಳನ್ನು ಭದ್ರವಾಗಿಡಿ

10. ಉಪಕರಣಗಳನ್ನು ಭದ್ರವಾಗಿಡಿ

ಇದೀಗ ನಿಮ್ಮ ಮಿಷನ್ ಪೂರ್ಣಗೊಂಡಿದ್ದು, ಪಂಚರ್ ಆಗಿರುವ ಚಕ್ರ, ಜಾಕ್, ಜಾಕ್ ಸ್ಪಾನರ್ ಅನ್ನು ಜೋಪಾನವಾಗಿ ಢಿಕ್ಕಿಯಲ್ಲಿಟ್ಟುಕೊಳ್ಳಬಹುದು. ಈ ಮೊದಲು ತಿಳಿಸಿದ ತ್ರಿಕೋಣಕಾರದಲ್ಲಿರುವ ಕಾರು ಎಮರ್ಜನ್ಸಿ ಬ್ರೇಕ್ ಡೌನ್ ಸಹ ತೆರವುಗೊಳಿಸಲು ಮರೆಯದಿರಿ.

 ಏನೋ ಸಾಧಿಸಿದ ಖುಷಿ

ಏನೋ ಸಾಧಿಸಿದ ಖುಷಿ

ಈಗ ಖಂಡಿತವಾಗಿಯೂ ನಿಮ್ಮಲ್ಲೂ ಏನೋ ಸಾಧಿಸಿದ ಖುಷಿ ಉಂಟಾಗಲಿದೆ. ಅಲ್ಲದೆ ತಾನು ಓರ್ವ ಮೆಕ್ಯಾನಿಕ್ ಎಂದು ಗರ್ವದಿಂದ ಹೇಳಬಹುದಾಗಿದೆ. ಇಲ್ಲಿ ಕೈಯಲ್ಲಿ ಸ್ವಲ್ಪ ಕೊಳಕು ಆದರೂ ನಿಮ್ಮ ಅಮೂಲ್ಯ ಸಮಯದೊಂದಿಗೆ ಮೆಕ್ಯಾನಿಕ್‌ಗೆ ನೀಡಬೇಕಾದ ಹಣವನ್ನು ಉಳಿತಾಯ ಮಾಡಬಹುದಾಗಿದೆ. ಎಲ್ಲದಕ್ಕೂ ಮಿಗಿಲಾಗಿ ನಿಮ್ಮ ಕುಟುಂಬದ ಜೊತೆಗೆ ಪ್ರವಾಸದ ಸುಂದರ ನಿಮಿಷವನ್ನು ಸವಿಯಬಹುದಾಗಿದೆ.

ನಿಮ್ಮ ಗಮನಕ್ಕೆ

ನಿಮ್ಮ ಗಮನಕ್ಕೆ

ಆಫ್ಟರ್ ಮಾರುಕಟ್ಟೆಗೆ ತೆರಳಿ ನಿಮ್ಮ ಚಕ್ರಗಳನ್ನು ಬದಲಾಯಿಸಿದ್ದಲ್ಲಿ ಅದಕ್ಕೆ ಸರಿ ಹೊಂದುವ ವೀಲ್ ಸ್ಪಾನರ್‌ಗಳನ್ನು ಪಡೆಯಲು ಮರೆಯದಿರಿ. ಏಕೆಂದರೆ ಬಹುತೇಕ ಪ್ರಕರಣಗಳಲ್ಲಿ ವಾಹನ ಸಂಸ್ಥೆಗಳು ನೀಡುವ ಚಕ್ರಗಳ ಸ್ಪಾನರ್‌ಗಳು ನೀವು ಆಫ್ಟರ್ ಮಾರ್ಕೆಟ್‌ನಿಂದ ಪಡೆಯುವ ಚಕ್ರಗಳ ನಟ್‌ಗಳಿಗೆ ಸರಿ ಹೊಂದುವುದಿಲ್ಲ.

Most Read Articles

Kannada
English summary
In this article, we show you step-by-step how a punctured tyre can be changed, in just a matter of 10 minutes and how easy changing a tyre really is.
Story first published: Thursday, January 8, 2015, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X