ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳು

By Nagaraja

ದೇಶದ ಇಡೀ ವಾಹನ ಜಗತ್ತೇ ಈಗ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಕುರಿತಾಗಿ ಬಹಳ ಗಂಭೀರವಾಗಿ ಚರ್ಚೆ ನಡೆಸುತ್ತಿದೆ. ಎಎಂಟಿ ಅಂದರೆ ಏನು? ಸಾಮಾನ್ಯ ಮ್ಯಾನುವಲ್ ಗೇರ್ ಬಾಕ್ಸ್‌ಗಿಂತಲೂ ಇದು ಹೇಗೆ ಭಿನ್ನ? ಎಂಬಿತ್ಯಾದಿ ಪ್ರಶ್ನೆಗಳ ಕುರಿತಾಗಿ ವಾಹನ ಪ್ರಿಯರು ಆಳವಾಗಿ ತಿಳಿಯುವ ಕುತೂಹಲದಲ್ಲಿದ್ದಾರೆ.

ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು (ಎಸ್‌ಎಟಿ) ಸುಲಭವಾಗಿ ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎಂದು ಕರೆಯುತ್ತೇವೆ. ಭಾರತದಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಸೆಲೆರಿಯೊ ಮಾದರಿಯನ್ನು ಬಿಡುಗಡೆಗೊಳಿಸಿದ್ದ ದೇಶದ ನಂ.1 ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಎಬ್ಬಿಸಿತ್ತು. ಇದೀಗಷ್ಟೇ ಬಿಡುಗಡೆಯಾಗಿರುವ ಮುಂದಿನ ಪೀಳಿಗೆಯ ಆಲ್ಟೊ ಕೆ10 ಮಾದರಿಯಲ್ಲೂ ಇದೇ ತಂತ್ರಜ್ಞಾನವನ್ನು ಮಾರುತಿ ಆಳವಡಿಸಿರುವುದು ಗಮನಾರ್ಹವೆನಿಸಿದೆ.

ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳು

ಎಎಂಟಿ ಬಳಕೆಯ ವೇಳೆ ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ಇದರ ಪ್ರಮುಖ ಅಂಶವಾಗಿದೆ. ಇದೇ ಕಾರಣಕ್ಕಾಗಿ ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ. ಇದೀಗ ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳಿಗಾಗಿ ಮುಂದಿನ ಪುಟಗಳತ್ತ ಮುಂದುವರಿಯಿರಿ...

1. ಕ್ಲಚ್ ಇದೆ, ಕ್ಲಚ್ ಪೆಡಲ್ ಇಲ್ಲ

1. ಕ್ಲಚ್ ಇದೆ, ಕ್ಲಚ್ ಪೆಡಲ್ ಇಲ್ಲ

ನೀವು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌‍‌ನಲ್ಲಿ ಕ್ಲಚ್ ಇರಲ್ಲ ಅಂದುಕೊಂಡಿದ್ದರೆ ತಪ್ಪಾದಿತ್ತು. ನಿಸ್ಸಂಶವಾಗಿಯೂ ಇದರಲ್ಲಿ ಕ್ಲಚ್ ಇದ್ದು, ಕ್ಲಚ್ ಪೆಡಾಲ್ ಮಾತ್ರ ಕಂಡುಬರುವುದಿಲ್ಲ. ಇದು ನಿಮ್ಮ ಪಯಣವನ್ನು ಹೆಚ್ಚು ಆರಾದಾಯಕವಾಗಿಸಲಿದೆ.

2. ವೆಚ್ಚ ಕಡಿಮೆ

2. ವೆಚ್ಚ ಕಡಿಮೆ

ವರದಿಯೊಂದರ ಪ್ರಕಾರ 1986ರ ಫೆರಾರಿ ರೇಸ್ ಕಾರುಗಳಲ್ಲಿ ಇದೇ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಕಡಿಮೆ ವೆಚ್ಚ ತಗುಲುತ್ತಿದ್ದು, ಹೆಚ್ಚು ಅನುಕೂಲಕರವೆನಿಸಿದೆ.

3. ಎಎಂಟಿ ಕಿಟ್

3. ಎಎಂಟಿ ಕಿಟ್

ಮಗದೊಂದು ಪ್ರಮುಖ ವೈಶಿಷ್ಟ್ಯವೆಂದರೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೂ ಎಎಂಟಿ ಕಿಟ್ ಆಳವಡಿಸಬಹುದಾಗಿದೆ.

4. ಫಾಕ್ಟರಿ ಫಿಟ್ಟಿಂಗ್

4. ಫಾಕ್ಟರಿ ಫಿಟ್ಟಿಂಗ್

ಮೇಲೆ ತಿಳಿಸಲಾದ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಫಾಕ್ಟರಿಯಿಂದ ಮಾತ್ರ ಜೋಡಣೆ ಮಾಡಲು ಸಾಧ್ಯ.

5. ಎರಡು ಪ್ರಮುಖ ಘಟಕಗಳು

5. ಎರಡು ಪ್ರಮುಖ ಘಟಕಗಳು

ಎಎಂಟಿ ಎರಡು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ,

ಹೈಡ್ರಾಲಿಕ್ ಸಿಸ್ಟಂ ಮತ್ತು

ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್.

6. ಗೇರ್ ಬದಲಾವಣೆ

6. ಗೇರ್ ಬದಲಾವಣೆ

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

7. ಹೆಚ್ಚು ಅನುಕೂಲಕರ

7. ಹೆಚ್ಚು ಅನುಕೂಲಕರ

ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

8. ಮ್ಯಾಗ್ನೆಟ್ಟಿ ಮರೆಲ್ಲಿ

8. ಮ್ಯಾಗ್ನೆಟ್ಟಿ ಮರೆಲ್ಲಿ

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ. ಸಂಸ್ಥೆಯ ಪ್ರಕಾರ 2020ರ ವೇಳೆಯಾಗುವಾಗ ದೇಶದ 20ರಷ್ಟು ಪ್ರಯಾಣಿಕ ವಾಹನಗಳು ಎಎಂಟಿ ಮಾದರಿಗಳನ್ನು ಒಳಗೊಂಡಿರಲಿದೆ.

9. ಇಂಧನ ದಕ್ಷತೆ

9. ಇಂಧನ ದಕ್ಷತೆ

ಎಎಂಟಿ ವರ್ಷನ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಬಳಕೆಯಿಂದಾಗಿ ಶೇಕಡಾ 10ರಷ್ಟು ಇಂಧನ ಕ್ಷಮತೆ ಕಡಿಮೆಯಾಗುತ್ತದೆ.

10. ಬೆಲೆ ವ್ಯತ್ಯಾಸ

10. ಬೆಲೆ ವ್ಯತ್ಯಾಸ

ಎಎಂಟಿ ವರ್ಷನ್ ಸಾಮಾನ್ಯ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ 40ರಿಂದ 50 ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ.

Most Read Articles

Kannada
English summary
AMT (Automated Manual Transmission) is became talk of the town in Indian automobile industry. As the name suggests, it is a mechanism that automates manual transmission. Here are some important things you should know about AMT. Take a look
Story first published: Monday, November 10, 2014, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X