ಬಾಳ ಸಂಗಾತಿಯಂತೆ ಸದಾ ನಿಮ್ಮೊಂದಿಗೆ 'ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ'

By Nagaraja

ದಿನವಿಡೀ ನೀವು ಎಲ್ಲೆಲ್ಲಿ ಸುತ್ತಾಡುವೀರಾ? ಏನು ಮಾಡುವೀರಾ? ಎಂಬುದನ್ನು ನಿಮ್ಮ ಬಾಳ ಸಂಗಾತಿ ನಿಖರವಾಗಿ ಅರಿಯಬಲ್ಲಳು. ನಾವಿಂದು ಹೇಳಲಿಚ್ಛಿಸಲಿರುವ ಡಿವೈಸ್ ಸಹ ಕಾರಿನಲ್ಲಿ ನಿಮ್ಮ ಬಾಳ ಸಂಗಾತಿಯ ರೂಪದಲ್ಲಿ ಕೆಲಸ ಮಾಡುತ್ತದೆ.

ಅದುವೇ 'ಜಿಪಿಎಸ್ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ'. ಆಧುನಿಕ ಕಾಲದಲ್ಲಿ ಕಾರಿನಲ್ಲಿ ಜಿಪಿಎಸ್ ಘಟಕದ ಬಳಕೆ ಅತಿ ಪ್ರಾಮುಖ್ಯವೆನಿಸಿದೆ. ನಿಮಗೆ ದಾರಿ ಗೊತ್ತಿರದ ರಸ್ತೆ ಮಾರ್ಗದಲ್ಲಿ ಪಯಣಿಸುವಾಗ ಇಂತಹದೊಂದು ಸೇವೆ ನಿಮ್ಮ ನೆರವಿಗೆ ಬರುತ್ತದೆ. ಇನ್ನು ಹೊಸ ಹೊಸ ರಸ್ತೆಯನ್ನು ಹುಡುಕಿಕೊಂಡು ಸಾಗುವವರಿಗಂತೂ ನೆಚ್ಚಿನ ಡಿವೈಸ್ ಆಗಿದೆ.

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ

ಹಾಗೆ ಹೇಳಬೇಕಾದರೆ ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಇನ್ನು ಅಭಿವೃದ್ಧಿ ಹಂತದಲ್ಲಿದೆ. ಎಂಟ್ರಿ ಲೆವೆಲ್ ಕಾರಿನಲ್ಲಂತೂ ಇದರ ಅಭಾವ ಎದ್ದು ಕಾಣಿಸುತ್ತಿದ್ದು, ಮೇಲ್ದರ್ಜೆಯ ಕಾರಿನಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಕಂಡುಬರುತ್ತಿದೆ.

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಎಂದರೇನು?

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಎಂದರೇನು?

ಮೊಬೈಲ್‌ನಲ್ಲಿ ಜಿಪಿಎಸ್ ಬಳಕೆ ಮಾಡುವವರಿಗೆ ಇದರ ಅರ್ಥವನ್ನು ಸುಲಭವಾಗಿ ಅರಿಯಬಲ್ಲರು. ಕಾರಿನಲ್ಲೂ ಇದಕ್ಕೆ ಸಮಾನವಾದ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ. ಸ್ಯಾಟಲೈಟ್ ನೇವಿಗೇಷನ್ ವಿಶೇಷವಾಗಿಯೂ ಕಾರಿನಲ್ಲಿ ಬಳಕೆ ಮಾಡಲು ತಯಾರಿಸಲಾಗಿದೆ. ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಂ (Global Navigation Satellite System) ಎಂಬುದು ಜಾಗತಿಕ ಸ್ಥಾನ ನಿರ್ಣಯ ಹಾಗೂ ದಿಕ್ಸೂಚಿ ವ್ಯವಸ್ಥೆಯಾಗಿದೆ. ಕೃತಕ ಉಪಗ್ರಹಗಳು ಬಿತ್ತರಿಸುವ ಮಾಹಿತಿಯನ್ನು ಉಪಯೋಗಿಸಿಕೊಂಡು ಅವುಗಳನ್ನು ಆಲಿಸುವ ರಿಸೀವರ್‌ಗಳು ತಮ್ಮ ಸ್ಥಾನ, ವೇಗ, ಹಾಗೂ ತಾನು ಚಲಿಸುತ್ತಿರುವ ದಿಕ್ಕನ್ನು ನಿರ್ಣಯಿಸುತ್ತದೆ.

 ಭಾರತ ಎಲ್ಲಿದೆ?

ಭಾರತ ಎಲ್ಲಿದೆ?

ತನ್ನದೇ ಆದ ಸ್ವತಂತ್ರ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಂ ಹೊಂದುವ ಕನಸನ್ನು ಹೊತ್ತುಕೊಂಡಿರುವ ಭಾರತ ದೇಶವು ಇತ್ತೀಚೆಗಷ್ಟೇ ಅಮೆರಿಕ ಹಾಗೂ ಜಪಾನ್‌ಗೆ ಸಮಾನವಾದ ರೀತಿಯಲ್ಲಿ ಸ್ವಯಾಧಿಕಾರದ ನಾಲ್ಕನೇ ಪ್ರಾದೇಶಿಕ ಉಪಗ್ರಹವಾದ ಇಂಡಿಯನ್ ರಿಜೀನಲ್ ನೇವಿಗೇಷನ್ ಸ್ಟಾಟಲೈಟ್ ಸಿಸ್ಟಂ (ಐಆರ್‌ಎನ್‌ಎಸ್‌ಎಸ್) ಅನ್ನು ಭಾರತದ ಅ೦ತರಿಕ್ಷ ಸ೦ಶೋಧನಾ ಸ೦ಸ್ಥೆ (ಇಸ್ರೋ) ಆಕಾಶಕ್ಕೆ ಉಡಾಯಿಸಿದೆ. ಒಟ್ಟು ಏಳು ಇಂತಹ ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆ ಹೊಂದಿರುವ ದೇಶವು ನಾಗರಿಕ ಜೊತೆಗೆ ಮಿಲಿಟರಿ ಅಗತ್ಯಗಳಿಗಾಗಿ ಬಳಕೆ ಮಾಡಲಾಗುವುದು.

1. ನಿರ್ದಿಷ್ಟ ಸ್ಥಳಕ್ಕಿರುವ ದೂರ

1. ನಿರ್ದಿಷ್ಟ ಸ್ಥಳಕ್ಕಿರುವ ದೂರ

ಸ್ಯಾಟಲೈಟ್ ನೇವಿಗೇಷನ್ ವ್ಯವಸ್ಥೆಯ ಮೂಲಭೂತ ಸೇವೆಗಳಲ್ಲಿ ಈಗಿರುವ ಸ್ಥಳದಿಂದ ಇನ್ನೊಂದು ನಿರ್ದಿಷ್ಟ ಪ್ರದೇಶಕ್ಕಿರುವ ದೂರದ ಸಮಗ್ರ ವಿವರಣೆಯನ್ನು ಇದು ನೀಡುತ್ತದೆ.

2. ರಸ್ತೆ ವಿಳಾಸ ನೋಟ

2. ರಸ್ತೆ ವಿಳಾಸ ನೋಟ

ಇನ್ನು ಸ್ವಲ್ಪ ಆಳವಾಗಿ ಮಾಹಿತಿ ನೀಡಬಲ್ಲ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ, ರಸ್ತೆ ವಿಳಾಸ ನೋಟಕ್ಕೆ (Street address look-up)ಸಂಬಂಧಿಸಿದಂತೆ ನಿಖರ ಮಾಹಿತಿಯನ್ನು ನೀಡುತ್ತದೆ. ಇದಕ್ಕಾಗಿ ನೀವು ಸರಿಯಾದ ಡಾಟಾ ಎಂಟ್ರಿ ಮಾಡಬೇಕಾಗುತ್ತದೆ.

3. ರಿಯಲ್ ಟೈಮ್ ಟ್ರಾಫಿಕ್ ಮಾಹಿತಿ

3. ರಿಯಲ್ ಟೈಮ್ ಟ್ರಾಫಿಕ್ ಮಾಹಿತಿ

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಮುಖಾಂತರ ರಿಯಲ್ ಟೈಮ್ ಸಂಚಾರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಪಯಣದ ವೇಳೆ ಅತಿ ಹೆಚ್ಚು ವಾಹನ ದಟ್ಟಣೆಯ ಪ್ರದೇಶವನ್ನು ನೀವು ತಪ್ಪಿಸಬಹುದಾಗಿದೆ.

4. ಪರ್ಯಾಯ ಮಾರ್ಗ

4. ಪರ್ಯಾಯ ಮಾರ್ಗ

ಅತಿಯಾದ ವಾಹನ ದಟ್ಟಣೆಯ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಸೇವೆಯನ್ನು ಬಳಕೆ ಮಾಡುವ ಮೂಲಕ ನಿಮ್ಮ ಅಮೂಲ್ಯವಾದ ಸಮಯವನ್ನು ಉಳಿಸಬಹುದಾಗಿದೆ. ಇಕ್ಕಟ್ಟಾದ ಮಾರ್ಗ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲೂ ನಿಮಗಿದು ನೆರವಾಗಲಿದೆ.

5. ಧ್ವನಿ ಮಾರ್ಗದರ್ಶನ ದಿಕ್ಸೂಚಿ

5. ಧ್ವನಿ ಮಾರ್ಗದರ್ಶನ ದಿಕ್ಸೂಚಿ

ಬಹುತೇಕ ಎಲ್ಲ ಆಧುನಿಕ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಧ್ವನಿ ಮಾರ್ಗದರ್ಶನ ದಿಕ್ಸೂಚಿಯನ್ನು ಹೊಂದಿರುತ್ತದೆ. ಇದು ನಿಮ್ಮ ಚಾಲನೆಯನ್ನು ಮತ್ತಷ್ಟು ಸುಲಭವಾಗಿಸುತ್ತಿದ್ದು, ಪದೇ ಪದೇ ಪರದೆಯನ್ನು ನೋಡಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಿದೆ. ಇದರಿಂದಾಗಿ ನಿಮ್ಮ ಚಾಲನೆಯ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಬಹುದಾಗಿದೆ.

6. ನಿಮ್ಮ ಆಸಕ್ತಿಯ ಅಂಶಗಳು

6. ನಿಮ್ಮ ಆಸಕ್ತಿಯ ಅಂಶಗಳು

ಅದೇ ರೀತಿ ನಿಮ್ಮ ಆಸಕ್ತಿಯ ಅಂಶಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಒದಗಿಸುತ್ತದೆ. ಉದಾಹರಣೆಗೆ ಹತ್ತಿರದಲ್ಲಿರುವ ಎಟಿಎಂ, ಆಸ್ಪತ್ರೆ, ರೆಸ್ಟೋರೆಂಟ್, ಶಾಪಿಂಗ್ ಮಾಲ್ ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಿದೆ.

7. ಆಗಮನ ಅಂದಾಜು ಸಮಯ

7. ಆಗಮನ ಅಂದಾಜು ಸಮಯ

ಒಂದು ಪ್ರದೇಶಕ್ಕೆ ಪಯಣಿಸುವ ವೇಳೆ ಆ ನಿರ್ದಿಷ್ಟ ಸ್ಥಳಕ್ಕೆ ತಲುಪುವ ಅಂದಾಜು ಸಯಮವನ್ನು ಸ್ಯಾಟಲೈಟ್ ನೇವಿಗೇಷನ್ ಮೂಲಕ ತಿಳಿಯಬಹುದಾಗಿದೆ.

8 ಆಕ್ಷಾಂಶ/ರೇಖಾಂಶ

8 ಆಕ್ಷಾಂಶ/ರೇಖಾಂಶ

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂಗಳು ಭೂಮಿಯ ಆಕ್ಷಾಂಶ ಮತ್ತು ರೇಖಾಂಶಗಳನ್ನು ನಿಖರವಾಗಿ ಗುರುತಿಸುತ್ತದೆ. ಈ ಮೂಲಕ ಭೌಗೋಳಿಕ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ರವಾನಿಸುತ್ತದೆ.

9. ನಿಖರ ವಾಹನ ವೇಗ

9. ನಿಖರ ವಾಹನ ವೇಗ

ಕೆಲವೊಂದು ಬಾರಿ ಕಾರಿನಲ್ಲಿರುವ ಸ್ಪೀಡೋಮೀಟರ್‌ಗಿಂತಲೂ ನಿಖರವಾಗಿ ಸ್ಯಾಟಲೈಟ್ ನೇವಿಗೇಷನ್ ವ್ಯವಸ್ಥೆಯು ವಾಹನ ವೇಗವನ್ನು ಸೂಚಿಸಬಲ್ಲದು.

10. ವೇಗ ಮಿತಿ

10. ವೇಗ ಮಿತಿ

ಹಾಗೊಂದು ವೇಳೆ ನಿರ್ದಿಷ್ಟ ರಸ್ತೆಯಲ್ಲಿ ನಿಗದಿಪಡಿಸಿರುವ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀವು ವಾಹನ ಚಲಾಯಿಸಲು ಯತ್ನಿಸಿದರೆ ಈ ಸೇವೆಯು ನಿಮ್ಮನ್ನು ಎಚ್ಚರಿಸಲಿದೆ. ಇದು ವಿದೇಶಗಳಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತಿದೆ.

11. ತ್ರಿಡಿ ರೋಡ್ ಮ್ಯಾಪಿಂಗ್

11. ತ್ರಿಡಿ ರೋಡ್ ಮ್ಯಾಪಿಂಗ್

ಆಧುನಿಕ ತಂತ್ರಜ್ಞಾನ ಅಭಿವೃದ್ಧಿಯಾದತೆ ಸ್ಯಾಟಲೈಟ್ ನೇವಿಗೇಷನ್ ಸೇವೆಯಲ್ಲೂ ಸುಧಾರಣೆ ಕಂಡುಬಂದಿದೆ. ಇದರ ಫಲಶ್ರುತಿಯಂತೆ ನಿಖರ ಗೋಚರತೆಯ ತ್ರಿಡಿ ರೋಡ್ ಮ್ಯಾಪಿಂಗ್ ಸೇವೆ ಲಭ್ಯವಾಗಿದೆ.

12. ಸಮುದ್ರ ಮಟ್ಟದ ಎತ್ತರ

12. ಸಮುದ್ರ ಮಟ್ಟದ ಎತ್ತರ

ನೀವು ಸಮುದ್ರ ಮಟ್ಟಕ್ಕಿಂತ ಎಷ್ಟು ಎತ್ತರದಲ್ಲಿ ಸಂಚರಿಸುತ್ತಿದ್ದೀರಿ ಎಂಬುದರ ಬಗ್ಗೆಯೂ ಸ್ಯಾಟಲೈಟ್ ನೇವಿಗೇಷನ್ ವ್ಯವಸ್ಥೆಯು ಸ್ಪಷ್ಟ ಮಾಹಿತಿ ಒದಗಿಸಲಿದೆ. ಇದು ನಿಜಕ್ಕೂ ಶ್ಲಾಘನೀಯ.

 13. ಅಪ್ ಡೇಟ್ ಮ್ಯಾಪ್

13. ಅಪ್ ಡೇಟ್ ಮ್ಯಾಪ್

ಇನ್ನು ಬಹುತೇಕ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂಗಳು ಸಮಯಕ್ಕೆ ಸರಿಯಾಗಿ ಅಪ್ ಡೇಟ್ ಮ್ಯಾಪ್ ವ್ಯವಸ್ಥೆಯನ್ನು ಒದಗಿಸುತ್ತದ್ದು, ಹೊಸ ಹೊಸ ವೈಶಿಷ್ಟ್ಯಗಳನ್ನು ಆಳವಡಿಸುವ ಮೂಲಕ ಹೆಚ್ಚು ಗ್ರಾಹಕ ಸ್ನೇಹಿ ಎನಿಸಿಕೊಳ್ಳುತ್ತಿದೆ.

1. ಮನಸ್ಸಿಗೆ ನೆಮ್ಮದಿ - ಚಾಲನೆ ಸುಲಭ

1. ಮನಸ್ಸಿಗೆ ನೆಮ್ಮದಿ - ಚಾಲನೆ ಸುಲಭ

ಸುಲಭ ಹಾಗೂ ಸರಳ ಚಾಲನೆಯನ್ನು ಇಷ್ಟಪಡುವವರು ಖಂಡಿತವಾಗಿಯೂ ತಮ್ಮ ಕಾರಿನಲ್ಲಿ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಇಟ್ಟಕೊಳ್ಳಲು ಬಯಸುತ್ತಾರೆ. ಹಾಗೆಯೇ ಈಗ ಹೊಸ ಹೊಸ ಪ್ರದೇಶಗಳ ಪ್ರಯಾಣ ಹೆಚ್ಚು ಸುಲಭವಾಗಿದೆ.

2. ಇಂಟರ್ ನೆಟ್ ಅಗತ್ಯವಿರುವುದಿಲ್ಲ

2. ಇಂಟರ್ ನೆಟ್ ಅಗತ್ಯವಿರುವುದಿಲ್ಲ

ಗೂಗಲ್ ಮ್ಯಾಪ್ ಗೆ ಹೋಲಿಸಿದರೆ ಕಾರಿನಲ್ಲಿರುವ ಸ್ಯಾಟಲೈಟ್ ನೇವಿಗೇಷನ್ ವ್ಯವಸ್ಥೆಗೆ ಇಂಟರ್ ನೆಟ್ ಸೇವೆಯ ಅಗತ್ಯವಿರುವುದಿಲ್ಲ. ಇದು ಗ್ರಾಹಕರಿಗೆ ಅತಿ ದೊಡ್ಡ ಧನಾತ್ಮಕ ಅಂಶವಾಗಿ ಪರಿಣಮಿಸಿದೆ.

3. ಕೈಗೆಟುಕುವ ದರ

3. ಕೈಗೆಟುಕುವ ದರ

ಆಧುನಿಕ ತಂತ್ರಜ್ಞಾನದ ನಿರಂತರ ಬೆಳವಣಿಗೆಯೊಂದಿಗೆ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂಗಳು ಕೈಗೆಟುಕುವ ದರಗಳಲ್ಲಿ ಗ್ರಾಹಕರ ಕೈ ಸೇರುತ್ತಿದೆ. ಸ್ಯಾಟಲೈಟ್ ನೇವಿಗೇಷನ್ ಲಭ್ಯತೆಯು ಹೆಚ್ಚಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

4. ಬಳಕೆ ಸುಲಭ

4. ಬಳಕೆ ಸುಲಭ

ಗ್ರಾಹಕ ಸ್ನೇಹಿ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಬಳಕೆ ಸುಲಭವಾಗಿದೆ. ಇದಕ್ಕಾಗಿ ನೀವು ವಿಶೇಷ ಪರಿಣತಿ ಪಡೆಯುವ ಅಗತ್ಯವಿರುವುದಿಲ್ಲ.

5. ಬಹು ಕ್ರಿಯಾತ್ಮಕತೆಗಳ ಏಕೀಕರಣ

5. ಬಹು ಕ್ರಿಯಾತ್ಮಕತೆಗಳ ಏಕೀಕರಣ

ಆಧುನಿಕ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂಗಳು ಉಪಗ್ರಹ ಸಂಚಾರ ನಿರ್ದೇಶನ ಮಾತ್ರ ನೀಡುತ್ತಿದೆ ಅಂದರೆ ತಪ್ಪಾದಿತು. ಏಕೆಂದರೆ ಈಗಿನ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂನಲ್ಲಿ ಮೀಡಿಯಾ ಪ್ಲೇಯರ್, ಚಿತ್ರ ವೀಕ್ಷಣೆ, ರಿವರ್ಸ್ ಕ್ಯಾಮೆರಾ ಇತ್ಯಾದಿ ಇತ್ಯಾದಿ ಅನೇಕ ಬಹು ಕ್ರಿಯಾತ್ಮಕತೆಗಳ ಸೇವೆಗಳನ್ನು ಹೊಂದಿರುತ್ತದೆ.

ನಿಮ್ಮ ಕಾರಲ್ಲಿ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಲಗತ್ತಿಸುವುದು ಹೇಗೆ?

ಹಾಗೊಂದು ವೇಳೆ ನಿಮ್ಮ ಕಾರಿನಲ್ಲೂ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಲಗತ್ತಿಸುವುದು ಹೇಗೆ? ಇದಕ್ಕಾಗಿ ಈ ಸೂತ್ರ ವಾಕ್ಯಗಳನ್ನು ಹಿಂಬಾಲಿಸಿರಿ.

1. ಪೋರ್ಟಬಲ್ ಡಿವೈಸ್: ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯುವಂತಹ ಈ ಪೋರ್ಟಬಲ್ ಜಿಪಿಎಸ್ ವ್ಯವಸ್ಥೆಯನ್ನು ಕಾರಿನ ವಿಂಡ್ ಸ್ಕ್ರೀನ್ ಅಥವಾ ಡ್ಯಾಶ್ ಬೋರ್ಡ್‌ನಲ್ಲಿ ಲಗತ್ತಿಸಲಾಗುತ್ತದೆ.

2. ಇನ್ ಬಿಲ್ಟ್: ಕೆಲವು ವಾಹನ ತಯಾರಿಕ ಸಂಸ್ಥೆಗಳು ಕಾರಲ್ಲಿ ಕಾರ್ಖಾನೆಯಿಂದಲೇ ನೇರವಾಗಿ ಇನ್ ಬಿಲ್ಟ್ ಜಿಪಿಎಸ್ ಸೇವೆಯನ್ನು ಒದಗಿಸುತ್ತದೆ.

3. ಆಫ್ಟರ್ ಮಾರ್ಕೆಟ್: ವಾಹನ ಮಾರುಕಟ್ಟೆಯಲ್ಲಿ ಆಫ್ಟರ್ ಮಾರ್ಕೆಟ್ ಜಿಪಿಎಸ್ ಸೇವೆಯು ಸಾಮಾನ್ಯವಾಗಿಬಿಟ್ಟಿದೆ. ಇದು ಅಗ್ಗದ ದರಗಳಲ್ಲಿ ಗ್ರಾಹಕರನ್ನು ತಲುಪುಲಿದ್ದು, ಇದನ್ನು ಲಗತ್ತಿಸುವುದಕ್ಕಾಗಿ ಕಾರಿನ ಒಳಮೈಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳ ಬೇಕಾಗಿಲ್ಲ.

ದೇಶದಲ್ಲಿ ಲಭ್ಯವಿರುವ ಜನಪ್ರಿಯ ಸ್ಯಾಟಲೈಟ್ ನೇವಿಗೇಷನ್ ಬ್ರಾಂಡ್‌ಗಳು ಯಾವುವು? ಬೆಲೆ ಎಷ್ಟು?

ದೇಶದಲ್ಲಿ ಲಭ್ಯವಿರುವ ಜನಪ್ರಿಯ ಸ್ಯಾಟಲೈಟ್ ನೇವಿಗೇಷನ್ ಬ್ರಾಂಡ್‌ಗಳು ಯಾವುವು? ಬೆಲೆ ಎಷ್ಟು?

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಒದಗಿಸುವುದರಲ್ಲಿ ಮ್ಯಾಪ್ ಮೈ ಇಂಡಿಯಾ (MapmyIndia) ಮುಂಚೂಣಿಯಲ್ಲಿದ್ದು, ಪ್ರಸ್ತುತ 6,990 ರು.ಗಳಿಂದ 16,000 ರು.ಗಳ ವರೆಗಿನ ಬೆಲೆಗಳಲ್ಲಿ ಒಂಬತ್ತು ವಿಭಿನ್ನ ಡಿವೈಸ್‌ಗಳನ್ನು ಒದಗಿಸುತ್ತಿದೆ. ಮಗದೊಂದು ಹೆಸರಾಂತ ಬ್ರಾಂಡ್ ಆಗಿರುವ ಟೊಮ್ ಟೊಮ್ (TomTom) ವಯ ಹಾಗೂ ಸ್ಮಾರ್ಟ್ ಸಿರೀಸ್‌ಗಳನ್ನು ಸರಿ ಸುಮಾರು 9,500 ರು.ಗಳಿಗೆ ಸ್ಯಾಟಲೈಟ್ ನೇವಿಗೇಷನ್ ಸೌಲಭ್ಯ ಒದಗಿಸುತ್ತಿದೆ. ಹಾಗೆಯೇ ಪ್ರಖ್ಯಾತ ಸ್ಯಾಟಲೈಟ್ ನೇವಿಗೇಷನ್ ಬ್ರಾಂಡ್ ಆಗಿರುವ ಗಾರ್ಮಿನ್ ಪ್ರಾರಂಭಿಕ ಬೆಲೆ 8,000 ರು.ಗಳಿಷ್ಟಿದೆ.

ಕೊನೆಯ ಮಾತು

ಕೊನೆಯ ಮಾತು

ಆಧುನಿಕ ಜಗತ್ತಿನಲ್ಲಿ ಜಿಪಿಎಸ್ ಸ್ಯಾಟಲೈಟ್ ನೇವಿಗೇಷನ್ ತಂತ್ರಜ್ಞಾನವು ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಉಪಗ್ರಹಗಳಿಂದ ನೇರ ಮಾಹಿತಿ ರವಾನಿಸುತ್ತಿರುವ ಇಂತಹ ಸೇವೆಗಳು ಪ್ರಯಾಣಿಕರ ಚಾಲನೆಯನ್ನು ಇನ್ನಷ್ಟು ಸುಲಭವಾಗಿಸುತ್ತದೆ. ಒಟ್ಟಿನಲ್ಲಿ ಕಾರಿಗೆ ಸಂಬಂಧಪಟ್ಟಂತೆ ಸ್ಯಾಟಲೈಟ್ ನೇವಿಗೇಷನ್ ವ್ಯವಸ್ಥೆಯು ಬಾಳ ಸಂಗಾತಿಯಂತೆ ಅವಿಭಾಜ್ಯ ಅಂಗವಾಗಿಬಿಟ್ಟಿದೆ.

Most Read Articles

Kannada
English summary
So let's take a closer look at satellite navigation systems, including how they work, their key features, what advantages they offer for road users in the country, and more.
Story first published: Monday, March 16, 2015, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X