ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು

"ಮೊಬೈಲ್ ಫೋನಿನಿಂದ ಅಲಾರಂ ಕೇಳಿಸಿದ ತಕ್ಷಣ ನನಗೆ ಎಚ್ಚರವಾಯಿತು. ಅಂದು ಬೆಳ್ಳಗಿನ ಜಾವ 4 ಗಂಟೆ 45 ನಿಮಿಷ ಆಗಿತ್ತು. ಪ್ರತಿ ದಿನವೂ ಇದೇ ಸಮಯಕ್ಕೆ ನಮಾಜ್ ಮಾಡುತ್ತಿರುವೆ. ಈ ಸಂದರ್ಭದಲ್ಲಿ ಬಸ್ಸಿನ ಹಿಂದುಗಡೆಯೊಂದು ದೊಡ್ಡದಾದ ಸ್ಫೋಟದ ಧ್ವನಿ ಕೇಳಿಸಿತು. ನನಗೇನಾದರೂ ಅರಿಯುವ ಮೊದಲೇ ಬಸ್ಸಿನ ಹಿಂದುಗಡೆ ಬೆಂಕಿ ವ್ಯಾಪಿಸಿಯಾಗಿತ್ತು. ತುಂಬಾನೇ ಗಾಬರಿಗೊಂಡ ನಾನು ಹತ್ತಿರದ ಯಾತ್ರಿಕರನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದರೂ ಅವರೆಲ್ಲರೂ ನಿದ್ರೆಗೆ ಜಾರಿದ್ದರು. ನಾನಂತೂ ತರಾತುರಿಯಲ್ಲಿ ಬಸ್ಸಿನ ಗಾಜು ಒಡೆದು ಹೊರಗೆ ಹಾರಿಬಿಟ್ಟೆ"

ಹೌದು, ಇದ್ಯಾವುದೇ ಸಿನೆಮಾ ಸ್ಟೋರಿ ಅಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಖಾಸಗಿ ವೋಲ್ವೋ ಬಸ್ ದುರಂತದಿಂದ ವಿರೋಚಿತವಾಗಿ ಪಾರಾದ ಯಾತ್ರಿಕರೊಬ್ಬರ ಕಥೆ. ಈ ಅಪಘಾತದಲ್ಲಿ 45 ಮಂದಿ ಸಾವಿಗೀಡಾಗಿದ್ದರು.

ಹೈದರಾಬಾದ್‌ನ ಮೆಹಬೂಬ್ ನಗರದಲ್ಲಿ ನಡೆದ ಬಸ್ ದುರಂತದ ಕರಾಳ ಛಾಯೆ ಇನ್ನು ಮಾಸಿಲ್ಲ. ದೀಪಾವಳಿ ಹಬ್ಬ ಆಚರಣೆಗೆಂದು ತೆರಳಿದ ಆದೆಷ್ಟು ಮಂದಿಯ ಸಂಭ್ರಮ ಕೆಲವೇ ಕ್ಷಣಗಳಲ್ಲಿ ಸುಟ್ಟು ಕರಕಲಾಗಿತ್ತು. ಸದ್ಯ ಬಸ್ಸುಗಳಲ್ಲಿ ದೂರ ಪ್ರಯಾಣ ಮಾಡುವ ಪ್ರತಿಯೊಬ್ಬರಲ್ಲೂ ಆತಂಕ ಮನೆ ಮಾಡುವಂತಾಗಿದೆ. ಹವಾ ನಿಯಂತ್ರಿತ ವೋಲ್ವೋ ಬಸ್ಸುಗಳೇ ಇಂತಹ ಭಾರಿ ದುರಂತಕ್ಕೀಡಾಗಿರುವುದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಗಂಭೀರ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ದೂರ ಪ್ರಯಾಣದ ವೇಳೆ ಪ್ರಮುಖವಾಗಿಯೂ ವೋಲ್ವೋಗಳಂತಹ ಐಷಾರಾಮಿ ಬಸ್ಸುಗಳಲ್ಲಿ ತೆರಳುವಾಗ ಯಾವೆಲ್ಲ ಸುರಕ್ಷಾ ಮಾನದಂಡಗಳನ್ನು ಅನುಸರಿಸಬೇಕು ಎಂಬುದನ್ನು ವಿವರವಾಗಿ ಹೇಳಿಕೊಡಲಿದ್ದೇವೆ. ತಪ್ಪದೇ ಈ ಲೇಖನ ಓದಿ...

45 ಜನ ಬಲಿಯಾದದ್ದು ಜವರಾಯನಿಗೋ ಇಲ್ಲ ಸಾರಿಗೆ ಇಲಾಖೆಗೋ?

ಬಸ್ಸಿನಲ್ಲಿ ಪಯಣಿಸುವಾಗ ಅನುಸರಿಬೇಕಾದ ಸುರಕ್ಷಾ ಕ್ರಮಗಳು

ಹೆಚ್ಚು ಸುರಕ್ಷಿತ ಪ್ರಯಾಣ ಎಂಬ ಕಾರಣದಿಂದಲೇ ಬೆಲೆ ಸ್ವಲ್ಪ ದುಬಾರಿಯಾದರೂ ಆರಾಮದಾಯಕ ಪ್ರಯಾಣ ನೀಡಬಲ್ಲ ವೋಲ್ವೋ ಬಸ್ಸುಗಳನ್ನು ಜನರು ಆರಿಸುತ್ತಾರೆ. ಆದರೆ ಇಂತಹ ವೋಲ್ವೋ ಬಸ್ಸುಗಳೇ ಈ ರೀತಿ ಸ್ಫೋಟಿಸಿದ್ದಲ್ಲಿ ಏನು ಗತಿ?

ಸೀಟು ಬೆಲ್ಟ್

ಸೀಟು ಬೆಲ್ಟ್

ಸೀಟು ಬೆಲ್ಟ್ ಕಾರಿನಲ್ಲಿ ಮಾತ್ರ ಧರಿಸಿದರೆ ಅಂದುಕೊಂಡಿದ್ದಲ್ಲಿ ನಿಮ್ಮ ಊಹೆ ತಪ್ಪಾದಿತ್ತು. ಯಾಕೆಂದರೆ ವೋಲ್ವೋಗಳಂತಹ ದುಬಾರಿ ಬಸ್ಸುಗಳಲ್ಲಿ ಸೀಟ್ ಬೆಲ್ಟ್ ಸೌಲಭ್ಯವಿರುತ್ತದೆ. ಆದರೆ ನಮ್ಮ ದೇಶದಲ್ಲಿ ಸೀಟು ಬೆಲ್ಟ್‌ಗಳ ಕೊರತೆ ಕಾಡುತ್ತಿದೆ.

ಅಪಾಯಕಾರಿ ವಸ್ತುಗಳ ಸಾಗಣೆ ಬೇಡ

ಅಪಾಯಕಾರಿ ವಸ್ತುಗಳ ಸಾಗಣೆ ಬೇಡ

ಯಾವುದೇ ಕಾರಣಕ್ಕೂ ಯಾತ್ರೆಯ ವೇಳೆ ಗ್ಯಾಸ್ ಸಿಲಿಂಡರ್, ಸ್ಟೋವ್, ಸಿಡಿಮದ್ದು, ಬೆಂಕಿ ಪೊಟ್ಟಣ, ಲೈಟರ್‌ಗಳಂತಹ ಸ್ಪೋಟಕ ಸಾಧನಗಳನ್ನು ಕೊಂಡೊಯ್ಯಬಾರದು. ಈ ಬಗ್ಗೆ ನಿರ್ವಾಹಕರು ಸಹ ಕಟ್ಟುನಿಟ್ಟಿನ ತಪಾಸಣೆ ನಡೆಸುವುದು ಅನಿವಾರ್ಯ.

ಲಗ್ಗೇಜ್ ಸ್ಪೇಸ್

ಲಗ್ಗೇಜ್ ಸ್ಪೇಸ್

ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ಅಡ್ಡಾದಿಡ್ಡಿಯಾಗಿ ನಿಮ್ಮ ಲಗ್ಗೇಜ್‌ಗಳನ್ನು ಇಡಬೇಡಿ. ಅಂದರೆ ಲಗ್ಗೇಜ್ ಜಾಗದಲ್ಲಿ ಮಾತ್ರ ಇದಕ್ಕೆ ಅನುವು ಮಾಡಿಕೊಡಲಾಗುತ್ತದೆ.

 ಮಕ್ಕಳ ಬಗ್ಗೆ ಖಾಲಜಿಯಿರಲಿ

ಮಕ್ಕಳ ಬಗ್ಗೆ ಖಾಲಜಿಯಿರಲಿ

ಮಕ್ಕಳ ಮೇಲೆ ಹೆತ್ತವರು ವಿಶೇಷ ಖಾಲಜಿ ವಹಿಸುವುದು ಅಗತ್ಯ. ಹಾಗೆಯೇ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳನ್ನು ಬೇಗನೇ ಬಸ್ಸಿನಿಂದ ಕೆಳಗಿಳಿಸುವ ಪ್ರಯತ್ನ ಮಾಡಬೇಕು.

ನಿಂತುಕೊಂಡು ಪಯಣ ಬೇಡ

ನಿಂತುಕೊಂಡು ಪಯಣ ಬೇಡ

ಸಾಮಾನ್ಯವಾಗಿ ದೂರ ಪ್ರಯಾಣದ ಬಸ್ಸುಗಳಲ್ಲಿ ಸೀಟುಗಳನ್ನು ಮುಗಂಡವಾಗಿ ಬುಕ್ಕಿಂಗ್ ಮಾಡಲಾಗಿರುತ್ತದೆ. ಕೆಲವೊಂದು ಬಾರಿ ನಿರ್ವಾಹಕರು ದುಡ್ಡಿನ ಆಸೆಗಾಗಿ ಹೆಚ್ಚು ಪ್ರಯಾಣಿಕರೊಂದಿಗೆ ಸಂಚರಿಸುವ ಸಾಧ್ಯತೆಯಿದೆ.

ತುರ್ತು ನಿರ್ಗಮನ

ತುರ್ತು ನಿರ್ಗಮನ

ಇಂತಹ ಬಸ್ಸುಗಳಲ್ಲಿ ಒಟ್ಟು ಮೂರು ತುರ್ತು ಬಾಗಿಲುಗಳಿರುತ್ತವೆ. ಒಂದು ಬಸ್ಸಿನ ಮಧ್ಯಭಾಗದಲ್ಲಿ, ಇನ್ನೊಂದು ಹಿಂಭಾಗದಲ್ಲಿ ಹಾಗೂ ಮೂರನೇಯದು ಮೇಲ್ಭಾಗದಲ್ಲಿ ಇರುತ್ತದೆ. ಈ ವಿಚಾರವನ್ನು ಸದಾ ನೆನಪಿನಲ್ಲಿಟ್ಟರೆ ಅಪತ್ಕಾಲ ಪರಿಸ್ಥಿತಿಯಲ್ಲಿ ಗಲಿಬಿಲಿಗೊಳ್ಳುವ ಪರಿಸ್ಥಿತಿಯನ್ನು ತಡೆಯಬಹುದು.

ಎಮರ್ಜನ್ಸಿ ಎಕ್ಸಿಟ್

ಎಮರ್ಜನ್ಸಿ ಎಕ್ಸಿಟ್

ಚಿತ್ರದಲ್ಲಿರುವುದು ಬಸ್ಸಿನ ಮೇಲ್ಛಾವಣಿಯಲ್ಲಿರುವ ತುರ್ತು ನಿರ್ಗಮನ ಬಾಗಿಲು ಆಗಿದೆ. ಪಯಣಕ್ಕೂ ಮೊದಲು ಈ ಬಗ್ಗೆ ಸ್ಪಷ್ಟ ಅರಿವಿರುವುದು ಉತ್ತಮ.

ಅಗ್ನಿಶಾಮಕ-ಯಂತ್ರ

ಅಗ್ನಿಶಾಮಕ-ಯಂತ್ರ

ಇಂತಹ ಬಸ್ಸುಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ಆರಿಸಲು ಅಗ್ನಿಶಾಮಕ-ಯಂತ್ರಗಳು ಲಭ್ಯವಿರುತ್ತದೆ. ಇದನ್ನು ಬಳಕೆ ಮಾಡುವ ವಿಧಾನದ ಬಗ್ಗೆಯೂ ಮಾಹಿತಿ ಪಡೆಯುವುದು ಅನಿವಾರ್ಯ.

ಫಸ್ಟ್ ಏಡ್ ಬಾಕ್ಸ್

ಫಸ್ಟ್ ಏಡ್ ಬಾಕ್ಸ್

ಇನ್ನು ಬಸ್ಸಿನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇದೆಯೇ ಎಂಬುದನ್ನು ಖಾತ್ರಿಪಡಿಸಿ. ಇಲ್ಲದಿದ್ದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತನ್ನಿ.

ಸುತ್ತಿಗೆ

ಸುತ್ತಿಗೆ

ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಹೊಂದಿರುವ ಕೆಲವು ಬಸ್ಸುಗಳಲ್ಲಿ ತುರ್ತು ನಿರ್ಗಮನ ಕಟಕಿಯ ಮೇಲ್ಗಡೆಯಾಗಿ ಸುತ್ತಿಗೆಯೊಂದು ಆಳವಡಿಸಲಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಗಾಜನ್ನು ಒಡೆದು ಹೊರ ಸಾಗಲು ಇದರ ನೆರವು ಪಡೆಯಬಹುದಾಗಿದೆ.

ಸಂದೇಶ ರವಾನಿಸಿ

ಸಂದೇಶ ರವಾನಿಸಿ

ಪಯಣದ ಸಂದರ್ಭದಲ್ಲಿ ನಿಮ್ಮ ಕುಟುಂಬ ಅಥವಾ ಆಪ್ತ ಸ್ನೇಹಿತ ವರ್ಗದವರಿಗೆ ಯಾತ್ರೆಯ ಕುರಿತು ಮಾಹಿತಿ ನೀಡುತ್ತಿರಿ. ಅಂದರೆ ಪಯಣದ ಆರಂಭದಲ್ಲಿ ಹಾಗೆಯೇ ಸಾಧ್ಯವಾದ್ದಲ್ಲಿ ನಿರಂತರ ಅಂತರಾಳದಲ್ಲಿ ಸಂದೇಶ ಮುಟ್ಟಿಸುತ್ತಿರಿ. ಇಂದೊಂದು ಮುಂಜಾಗ್ರತಾ ಕ್ರಮವಾಗಿರಲಿದೆ.

ಅಪರಿಮಿತ ವೇಗವನ್ನು ತಡೆಯಿರಿ

ಅಪರಿಮಿತ ವೇಗವನ್ನು ತಡೆಯಿರಿ

ಹಾಗೊಂದು ವೇಳೆ ಬಸ್ ಚಾಲಕ ಮಿತಿ ಮೀರಿದ ವೇಗದಲ್ಲಿ ಅಥವಾ ಅಡ್ಡಾದಿಡ್ಡಿಯಾಗಿ ಬಸ್ಸು ಚಲಾಯಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದ್ದಲ್ಲಿ ಯಾವುದೇ ಮುಲಾಜಿಲ್ಲದೆ ತಕ್ಷಣ ಈ ಬಗ್ಗೆ ತಗಾದೆಯೆತ್ತಿ. ಹಾಗೊಂದು ವೇಳೆ ಚಾಲಕ ನಿಮ್ಮ ಮಾತನ್ನು ಆಲಿಸಿದಿದ್ದಲ್ಲಿ ಸಂಬಂಧಪಟ್ಟವರಲ್ಲಿ ದೂರು ದಾಖಲಿಸಿ. ಅದೇ ರೀತಿ ಚಾಲಕ ಸರಿಯಾಗಿ ಬಸ್ ಓಡಿಸುತ್ತಿದ್ದಲ್ಲಿ ಅವರ ಏಕಾಗ್ರತೆಗೆ ಭಂಗವನ್ನುಂಟು ಮಾಡದಿರಿ.

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ


Most Read Articles

Kannada
English summary
Safety Tips To Follow During Travel By Volvo amp Luxury Buses The recent horrific accident involving a Volvo bus which resulted in the death of several passengers has brought to light safety concerns during travel by luxury buses such as Volvos. High end luxury buses such as those by Volvo and Mercedes-Benz have several safety features, of which passengers are unaware. Here are important safety tips every bus traveller should know and follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X