ಕಾರಿನ ಘಟಕಗಳಿಗೂ ಕಾಲಮಿತಿ ಇರುತ್ತೇ ಗೊತ್ತಾ?

By Nagaraja

ತಮ್ಮ ಕನಸಿನ ಕಾರನ್ನು ತಮ್ಮದಾಗಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹಾಗಂತ ನೀವು ಕಾರೊಂದನ್ನು ಖರೀದಿಸಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಯಾಕೆಂದರೆ ಕಾರಿನಲ್ಲಿ ಅಡಕವಾಗಿರುವ ಬಿಡಿಭಾಗಗಳಿಗೂ ಒಂದು ಕಾಲಮಿತಿ ಅವಧಿ ನಿಗದಿಯಾಗಿರುತ್ತದೆ. ಇದನ್ನು ಕೂಲಂಕುಷವಾಗಿ ಪರಿಶೋಧಿಸಿ ಸೂಕ್ತ ಸಮಯಕ್ಕೆ ಬದಲಾವಣೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿರುತ್ತದೆ.

ಸೇಫ್ ಡ್ರೈವಿಂಗ್‌ಗೆ ಟಾಪ್ 10 ಟಿಪ್ಸ್

ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು, ಕಾರು ಪ್ರೇಮಿಗಳಿಗಾಗಿ ವಿಶೇಷ ಲೇಖನವೊಂದನ್ನು ಸಿದ್ಧಪಡಿಸಿದೆ. ಇದು ಕಾರಿನಲ್ಲಿರುವ ಯಾವೆಲ್ಲ ಘಟಕಗಳು ಕಾಲಮಿತಿ ಅವಧಿ ಹೊಂದಿರುತ್ತದೆ ಎಂಬದರ ಬಗ್ಗೆ ಸ್ಪಷ್ಟ ಅರಿವನ್ನು ನಿಮ್ಮಲ್ಲಿ ಮೂಡಿಸಲಿದೆ. ಲೇಖನ ತಪ್ಪದೇ ಓದಿರಿ...

ಕಾರಿನ ಘಟಕಗಳಿಗೂ ಕಾಲಮಿತಿ ಇರುತ್ತೇ ಗೊತ್ತಾ?

ಬಹುತೇಕ ಖರೀದಿಗಾರರು ಹೊಸತೊಂದು ಕಾರು ಖರೀದಿಸಿದ ಬಳಿಕ ತಮ್ಮ ಕೆಲಸ ಮುಗಿಯಿತು ಎಂದು ಅಂದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಕಾರುಗಳ ಬಿಡಿಭಾಗಗಳು ಹೊಂದಿರುವ ವಾಯಿದೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಿಮ್ಮ ಕಾರಿನ ಪ್ರಮುಖ ಘಟಕಗಳು ಕೆಲಸ ಮಾಡದಿರಲು ಕಾರಣವಾಗಬಹುದು ಎಂಬುದನ್ನು ಎಚ್ಚರ ವಹಿಸಿರಿ. ಹಾಗೆಯೇ ನಿಗದಿತ ಅವಧಿಯಲ್ಲಿ ಕಾರನ್ನು ಸರ್ವೀಸ್ ಮಾಡಲು ಮರೆಯದಿರಿ.

1. ಚಕ್ರಗಳು

1. ಚಕ್ರಗಳು

ಚಕ್ರಗಳಿಗೂ ಕಾಲಮಿತಿ ಅವಧಿಯಿರುತ್ತದೆ. ಸಾಮಾನ್ಯವಾಗಿ ಆರು ವರ್ಷಕ್ಕೊಮ್ಮೆಯಾದರೂ ಚಕ್ರಗಳನ್ನು ಬದಲಾಯಿಸುತ್ತಿರಬೇಕು. ಅಲ್ಲದೆ ಟೈರ್‌ಗಳ ಥ್ರೆಡ್ (ತುಳಿ) ಕನಿಷ್ಠ 3 ಎಂಎಂ ಆಳವನ್ನಾದರೂ ಹೊಂದಿರಬೇಕು ಎಂಬುದನ್ನು ಖಾತ್ರಿಪಡಿಸಬೇಕಾಗುತ್ತದೆ. ಇದರಲ್ಲಿರುವ ಡಾಟ್ (Department Of Trasportation) ನಂಬರ್‌ನ ಕಡೆಯ ನಾಲ್ಕು ಅಂಕಿಗಳು 'ನಿರ್ಮಾಣ ವಾರ' ಹಾಗೂ 'ನಿರ್ಮಾಣ ವರ್ಷ'ವನ್ನು ಸೂಚಿಸುತ್ತದೆ. ಉದಾಹರಣೆಗೆ ಡಾಟ್ ನಂಬರ್ 3909 ಆಗಿದ್ದಲ್ಲಿ 2009ನೇ ಸಾಲಿನ 39ನೇ ವಾರದಲ್ಲಿ ತಯಾರಿಯಾಗಿರುವ ಚಕ್ರ ಎಂಬರ್ಥವಾಗಿದೆ.

2. ಕ್ಯಾಬಿನ್ ಏರ್ ಫಿಲ್ಟರ್

2. ಕ್ಯಾಬಿನ್ ಏರ್ ಫಿಲ್ಟರ್

ಕ್ಯಾಬಿನ್ ಏರ್ ಫಿಲ್ಟರ್ ಜೀವಾವಧಿಯು ಈ ನಿರ್ದಿಷ್ಟ ಕಾರು ಸಂಚರಿಸುವ ಪ್ರದೇಶದ ಗಾಳಿಯನ್ನು ಅವಲಂಬಿಸಿರುತ್ತದೆ. ಹಾಗಿದ್ದರೂ ಸಾಮಾನ್ಯವಾಗಿ 25,000 ಕೀ.ಮೀ.ಗಳಿಂದ 30,000 ಕೀ.ಮೀ. ಸಂಚರಿಸಿದ ಕಾರುಗಳಲ್ಲಿ ಇದನ್ನು ಬದಲಾಯಿಸಬೇಕಾಗಿದೆ. ಇದನ್ನು ಹೇಗೆ ಅರಿಯಬಹುದು? ಕಾರು ಕ್ಯಾಬಿನ್‌ನಲ್ಲಿ ಗಾಳಿಯ ಹರಿವು ಕಡಿಮೆಯಿದ್ದಲ್ಲಿ ಅಥವಾ ಹೆಚ್ಚು ಶಬ್ದ ಕಂಡುಬಂದ್ದಲ್ಲಿ ಖಂಡಿತ ಏರ್ ಫಿಲ್ಟರ್ ಬದಲಾಯಿಸತಕ್ಕದ್ದು.

3. ಎಂಜಿನ್ ಒಯಿಲ್

3. ಎಂಜಿನ್ ಒಯಿಲ್

ಸಾಮಾನ್ಯವಾಗಿ ಪ್ರತಿ 12ರಿಂದ 18 ತಿಂಗಳಲ್ಲಿ ಅಥವಾ 10,000 ಕೀ.ಮೀ.ಗಳಲ್ಲಿ ಎಂಜಿನ್ ಒಯಿಲ್ ಬದಲಾಯಿಸಬೇಕಾಗುತ್ತದೆ. ಹಳೆಯ ಎಂಜಿನ್ ಒಯಿಲ್ ಬಳಕೆ ಮಾಡಿದ್ದಲ್ಲಿ ಲ್ಯೂಬ್ರಿಕಂಟ್ (ಚಾಲನೆಯನ್ನು ಸುಲಭಗೊಳಿಸುವ ಎಣ್ಣೆ) ವ್ಯಾಲೂ ಕಡಿಮೆಯಾಗಲಿದ್ದು, ಎಂಜಿನ್‌ಗೆ ಮಾರಕವಾಗಲಿದೆ.

4. ಏರ್ ಫಿಲ್ಟರ್

4. ಏರ್ ಫಿಲ್ಟರ್

ಸಾಮಾನ್ಯವಾಗಿ ಹೇಳುವುದಾದರೆ ಒಂದು ವರ್ಷದ ಬಳಿಕ ಅಥವಾ ಪ್ರತಿ 20,000 ಕೀ.ಮೀ. ಸಂಚರಿಸಿದ ಬಳಿಕ ಏರ್ ಫಿಲ್ಟರ್ ಬದಲಾಯಿಸಬೇಕು. ಇದರಲ್ಲಿ ಕಾಲಮಿತಿ ಅವಧಿ ನಮೂದಿಸಲಾಗಿದ್ದು, ಇಲ್ಲದಿದ್ದಲ್ಲಿ ವಿತರಕರನ್ನು ಅಥವಾ ತಯಾರಕರನ್ನು ಸಂಪರ್ಕಿಸದರೆ ಸೂಕ್ತ ಮಾಹಿತಿ ದೊರಕಲಿದೆ.

5. ಬ್ರೇಕ್ ಒಯಿಲ್

5. ಬ್ರೇಕ್ ಒಯಿಲ್

ಕಾರಿನ ಸುರಕ್ಷತೆಯಲ್ಲಿ ಬ್ರೇಕ್‌ ಪಾತ್ರ ಬಲು ದೊಡ್ಡದು. ಇದೇ ಕಾರಣಕ್ಕಾಗಿ ಪ್ರತಿ 10,000 ಕೀ.ಮೀ.ಗಳಿಗೊಮ್ಮೆಯಾದರೂ ಬ್ರೇಕಿಂಗ್ ಸಿಸ್ಟಂ ಪರಿಶೀಲಿಸಿ ನಿರ್ವಹಣೆ ಮಾಡಬೇಕಾಗಿರುವುದು ಅತಿ ಅಗತ್ಯ. ಪ್ರತಿ ಮೂರು ವರ್ಷಕೊಮ್ಮೆ ಬ್ರೇಕ್ ಓಯಿಲ್ ಬದಲಾಯಿಸಬೇಕು. ಹಾಗೊಂದು ವೇಳೆ ಬ್ರೇಕ್ ಒಯಿಲ್ ಕಂಟೈನರ್ ಕಪ್ಪು ವರ್ಣ ಹಾಗೂ ದಪ್ಪವಾಗಿದ್ದಲ್ಲಿ ತಕ್ಷಣವೇ ಬದಲಾಯಿಸಬೇಕು.

6. ಎಸಿ

6. ಎಸಿ

ನಿಗದಿತ ಅಂತರಾಳದಲ್ಲಿ ಅಂದರೆ ವರ್ಷಕ್ಕೊಂದು ಬಾರಿಯಾದರೂ ಎಸಿ ಪರಿಶೋಧಿಸಬೇಕು. ಈ ಮೂಲಕ ಹವಾ ನಿಯಂತ್ರಿತ ಘಟಕದ ಬಾಳ್ವಿಕೆಯನ್ನು ಕಾಯ್ದುಕೊಳ್ಳಬಹುದಾಗಿದೆ.

7. ಟೈಮಿಂಗ್ ಬೆಲ್ಟ್

7. ಟೈಮಿಂಗ್ ಬೆಲ್ಟ್

ಟೈಮಿಂಗ್ ಬೆಲ್ಟ್ ಕಾಲಮಿತಿ ಅವಧಿಯು ತಯಾರಕರಿಂದ ತಯಾರಕರಿಗೆ ವಿಭಿನ್ನವಾಗಿರುತ್ತದೆ. ಆದರೆ ಪ್ರತಿ 60,000ದಿಂದ 80000 ಕೀ.ಮೀ. ಅವಧಿಯಲ್ಲಿ ಬದಲಾಯಿಸಬೇಕು. ಸಾಮಾನ್ಯವಾಗಿ ಇದು ಕಾರು ಮ್ಯಾನುವಲ್‌ನಲ್ಲಿ ಉಲ್ಲೇಖಿಸಲಾಗಿರುತ್ತದೆ. ಇಲ್ಲದಿದ್ದಲ್ಲಿ ತಯಾರಕರನ್ನು ಸಮೀಪಿಸಬೇಕಾಗುತ್ತದೆ. ಕೆಟ್ಟು ಹೋದ ಟೈಮಿಂಗ್ ಬೆಲ್ಟ್ ಬಳಕೆಯಿಂದ ವಾಲ್ವೆ ಹಾಗೂ ಪಿಸ್ತಾನ್‌ಗೆ ಪೆಟ್ಟಾಗುವ ಸಾಧ್ಯತೆಯಿದ್ದು, ದುರಸ್ತಿಗಾಗಿ ಹೆಚ್ಚು ವೆಚ್ಚ ತಗುಲಲಿದೆ.

8. ಚೈಲ್ಡ್ ಸೀಟ್

8. ಚೈಲ್ಡ್ ಸೀಟ್

ನೆನಪಿರಲಿ. ಮಕ್ಕಳ ಆಸನವನ್ನು ಶಾಶ್ವತ ಬಳಕೆಗಾಗಿ ರಚಿಸಲಾಗುತ್ತಿಲ್ಲ. ವರ್ಷಗಳ ಬಳಕೆಯಿಂದಾಗಿ ಮಕ್ಕಳ ಸೀಟು ಬೆಲ್ಟ್‌ಗಳು ಸಹಜವಾಗಿಯೇಸಡಿಲಗೊಳ್ಳುತ್ತದೆ. ಅಲ್ಲದೆ ಆರು ವರ್ಷಗಳಲ್ಲಿ ವಾಯಿದೆ ಕೊನೆಗೊಳ್ಳಲಿದೆ.

9. ಏರ್ ಬ್ಯಾಗ್

9. ಏರ್ ಬ್ಯಾಗ್

ಏರ್ ಬ್ಯಾಗ್ ಹಾಗೂ ಸೀಟು ಬೆಲ್ಟ್‌ಗಳನ್ನು ಪ್ರತಿ 10ರಿಂದ 15 ವರ್ಷಗಳಿಗೊಮ್ಮೆ ಬದಲಾಯಿಸಲು ಸೂಚಿಸಲಾಗುತ್ತದೆ. ಹಾಗಿದ್ದರೂ ಸೀಟು ಬೆಲ್ಟ್ ಬಿರುಕು ಬಿಟ್ಟಿದ್ದಲ್ಲಿ ತಕ್ಷಣವೇ ಬದಲಾಯಿಸುವುದು ಉತ್ತಮ.

10. ಆಗ್ನಿ ಶಾಮಕ ಯಂತ್ರ

10. ಆಗ್ನಿ ಶಾಮಕ ಯಂತ್ರ

ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಆಗ್ನಿ ಶಾಮಕ ಯಂತ್ರವನ್ನು ಬದಲಾಯಿಸಬೇಕು. ಕಾಲಮಿತಿ ಅವಧಿ ಮೀರಿದ ಆಗ್ನಿ ಶಾಮಕ ಯಂತ್ರವು ತನ್ನ ಪರಿಣಾಮವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

11. ಪಂಕ್ಚರ್ ಮುದ್ರಕ

11. ಪಂಕ್ಚರ್ ಮುದ್ರಕ

ಪಂಕ್ಚರ್ ಮುದ್ರಕದ ಸಾಮಾನ್ಯು ಬಾಳ್ವಿಕೆ ಅವಧಿ ಮೂರರಿಂದ ಎಂಟು ವರ್ಷಗಳಾಗಿರುತ್ತದೆ. ಹಾಗೊಂದು ವೇಳೆ ಬಾಟಲಿ ಮುಚ್ಚಳ ತೆರೆದ್ದಲ್ಲಿ ಬೇಗನೇ ಕೆಟ್ಟುಹೋಗುವ ಸಾಧ್ಯತೆಯಿದೆ.

12. ಪ್ರಥಮ ಚಿಕಿತ್ಸಾ ಪೆಟ್ಟಿಗೆ

12. ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಈಗಿನ ದಿನಗಳಲ್ಲಿ ಬಹುತೇಕ ಎಲ್ಲ ಕಾರುಗಳು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಹೊಂದಿರುತ್ತದೆ. ಇದರಲ್ಲಿ ಮುಲಾಮುಗಳು ಇರುವುದರಿಂದ ಕಾಲಮಿತಿ ಅವಧಿಯನ್ನು ಸರಿಯಾಗಿ ಪರಿಶೋಧಿಸತಕ್ಕದ್ದು. ಅಲ್ಲದೆ ಸಮಯಕ್ಕೆ ಸರಿಯಾಗಿ ಮದ್ದುಗಳನ್ನು ಬದಲಾಯಿಸಬೇಕಾಗುತ್ತದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
Most of us do not have the habit of checking the date of manufacture or expiry date of what we buy. Believe it or not! expiry date is also applicable to a few car parts. Like most manufactured items, a few car parts can be used only for a certain period after which they might not function properly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X