ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಹನ ಚಾಲನೆ ಹೇಗೆ ?

By Nagaraja

ಇತ್ತೀಚೆಗಷ್ಟೇ ಸುರಿದ ಭಾರಿ ಮಳೆಗೆ ಬೆಂಗಳೂರಿನ ನಗರದ ರಸ್ತೆಗಳು ಬಹುತೇಕ ಮುಳುಗಿ ಹೋಗಿತ್ತು. ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ಅತ್ತ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ದೇಶದ್ಯಾಂತ ಮುಂಗಾರು ಮಳೆಗೆ ಪ್ರವಾಹದ ಸ್ಥಿತಿಯುಂಟಾಗಿತ್ತು.

ಸಹಜವಾಗಿಯೇ ಮಳೆಯ ವೇಳೆಯಲ್ಲಿ ವಾಹನ ಚಾಲನೆ ಮಾಡುವುದು ದುಸ್ತರ. ಹಾಗಿರುವಾಗ ರಸ್ತೆಗಳಲ್ಲಿ ನೀರು ಕಟ್ಟಿ ನಿಂತರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಪ್ರಸ್ತುತ ಲೇಖನದಲ್ಲಿ ಪ್ರವಾಹದ ವೇಳೆಯಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳು ಹಾಗೂ ಸಲಹೆಗಳ ಬಗ್ಗೆ ನಾವಿಲ್ಲಿ ವಿವರಗಳನ್ನು ಕೊಡಲಿದ್ದೇವೆ.

ಸಂಚಾರ ಬೇಡ

ಸಂಚಾರ ಬೇಡ

ರಸ್ತೆಗಳಲ್ಲಿ ನೀರು ತಂಗಿರುವುದರಿಂದ ರಸ್ತೆಯ ಆಳವನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾವು ನೀಡುವ ಮೊದಲನೇ ಸಲಹೆಯೆಂದರೆ ಪ್ರವಾಹದ ವೇಳೆಯಲ್ಲಿ ಸಾಧ್ಯವಾದಷ್ಟು ವಾಹನ ಸಂಚಾರವನ್ನು ತಪ್ಪಿಸಿರಿ.

ಎಂಜಿನ್ ಗೆ ತಾಪತ್ರೆ

ಎಂಜಿನ್ ಗೆ ತಾಪತ್ರೆ

ನೀರು ಕಟ್ಟಿ ನಿಂತಿರುವ ಪ್ರಮಾಣವು ಅರ್ಧ ಅಡಿಗಿಂತಲೂ ಕೆಳಗಡೆಯಿದ್ದಲ್ಲಿ ಮಾತ್ರ ವಾಹನ ಚಾಲನೆ ಮಾಡುವ ಪ್ರಯತ್ನಕ್ಕೆ ಮುಂದಾಗಬಹುದು. ಇಲ್ಲವಾದ್ದಲ್ಲಿ ಕಾರಿನ ಎಂಜಿನ್ ಹಾಗೂ ಎಕ್ಸಾಸ್ಟ್ ಕೊಳವೆಗೂ ನೀರು ಪ್ರವೇಶಿಸುವ ಭೀತಿಯಿರುತ್ತದೆ.

ಕಾರು ಆಫ್ ಮಾಡಿಡಿ

ಕಾರು ಆಫ್ ಮಾಡಿಡಿ

ಹಾಗೊಂದು ವೇಳೆ ಕಾರಿನ ಎಂಜಿನ್ ಗೆ ನೀರು ಪ್ರವೇಶಿಸಿದೆ ಎಂಬ ಬಗ್ಗೆ ಆತಂಕ ಮೂಡಿದ್ದಲ್ಲಿ ತಕ್ಷಣ ಮಾಡಬೇಕಾದ ಕೆಲಸ ಕಾರನ್ನು ಆಫ್ ಮಾಡಿಡಿ. ಇದು ಹೆಚ್ಚುವರಿ ಹಾನಿಯನ್ನು ತಪ್ಪಿಸಲಿದೆ.

ಆಳವನ್ನು ಅರಿಯುವುದು ಹೇಗೆ?

ಆಳವನ್ನು ಅರಿಯುವುದು ಹೇಗೆ?

ಇಲ್ಲಿ ಭಯ, ಆತಂಕಕ್ಕಿಂತಲೂ ಮಿಗಿಲಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಪ್ರವಾಹ ಪೀಡಿತ ರಸ್ತೆಗಳಲ್ಲಿ ಆಳವನ್ನು ಅರಿಯಲು ನಿಮ್ಮ ಮುಂದೆ ಸಂಚರಿಸುವ ವಾಹನಗಳು ಅಥವಾ ಪಾದಚಾರಿಗಳನ್ನ ಸೂಕ್ಷ್ಮವಾಗಿ ಗಮನಿಸಿರಿ. ಇದರಿಂದ ರಸ್ತೆಯಲ್ಲಿರುವ ಸಣ್ಣ, ಪುಟ್ಟ ಗುಂಡಿಗಳಿಗೂ ಬೀಳದಂತೆ ತಡೆಯಬಹುದಾಗಿದೆ.

ಪರಿಸ್ಥಿತಿ ಕೈ ಮೀರಿದರೆ...

ಪರಿಸ್ಥಿತಿ ಕೈ ಮೀರಿದರೆ...

ಹಾಗೊಂದು ವೇಳೆ ನೀರಿನ ಪ್ರಮಾಣವು ಚಕ್ರದ ಮಟ್ಟಕ್ಕಿಂತಲೂ ಹೆಚ್ಚಾಗಿದ್ದಲ್ಲಿ ಅಂತಹ ರಸ್ತೆಗಳಲ್ಲಿ ಮುಂದಕ್ಕೆ ಚಲಿಸುವ ಪ್ರಯತ್ನಕ್ಕೆ ಹೋಗದಿರಿ. ಪರಿಸ್ಥಿತಿ ಕೈ ಮೀರುವುದಕ್ಕಿಂತಲೂ ಮುನ್ನ ಕಾರನ್ನು ರಿವರ್ಸ್ ತೆಗೆದು ಪರ್ಯಾಯ ಮಾರ್ಗ ಹಿಡಿಯಲು ಪ್ರಯತ್ನಿಸಿ.

ಫಸ್ಟ್ ಗೇರ್ ಮುಖ್ಯ

ಫಸ್ಟ್ ಗೇರ್ ಮುಖ್ಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚಲಿಸುವಾಗ ಯಾವತ್ತೂ ಫಸ್ಟ್ ಗೇರ್ ನಲ್ಲೇ ಪ್ರಯಾಣಿಸಿ. ಇದು ವಾಹನದ ಸ್ಥಿರತೆ ಕಾಪಾಡುವುದರೊಂದಿಗೆ ನಿಧಾನವಾಗಿ ಮುಂದಕ್ಕೆ ಚಲಿಸಲು ನೆರವಾಗಲಿದೆ.

ಸ್ಪೀಡಿಂಗ್ ಬೇಡ

ಸ್ಪೀಡಿಂಗ್ ಬೇಡ

ಫಸ್ಟ್ ಗೇರ್ ನಲ್ಲಿ ಚಲಿಸುವುದರ ಮೂಲಕ ಸ್ಪೀಡಿಂಗ್ ಅಪಾಯವನ್ನು ತಪ್ಪಿಸಬಹುದಾಗಿದೆ. ವೇಗವಾಗಿ ಚಲಿಸಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಗಾಬರಿಗೊಳಗಾಗದಿರಿ

ಗಾಬರಿಗೊಳಗಾಗದಿರಿ

ಈ ಮೊದಲು ತಿಳಿಸಿರುವಂತೆಯೇ ಪ್ರವಾಹಕ್ಕೆ ಸಿಕ್ಕಿ ಹಾಕಿಕೊಂಡ್ಡಲ್ಲಿ ಗಾಬರಿಗೊಳಗಾಗದಿರಿ. ಬದಲಾಗಿ ಧೈರ್ಯ ಮಾಡಿಕೊಂಡು ಸಮಯ ಚಿತ್ತದಿಂದ ಎದುರಾಗಿರುವ ಅಪಾಯದಿಂದ ಪಾರಾಗಲು ಪ್ರಯತ್ನಿಸಿ.

ಹೈಡ್ರೋಸ್ಟಾಟಿಕ್ ಲಾಕ್

ಹೈಡ್ರೋಸ್ಟಾಟಿಕ್ ಲಾಕ್

ತಜ್ಞರ ಪ್ರಕಾರ ಕಾರು ಸಡನ್ ಹಾಗಿ ನೀರಲ್ಲಿ ಆಫ್ ಆದ್ದಲ್ಲಿ (ನೀರಿನ ಮಟ್ಟ ಜಾಸ್ತಿಯಿದ್ದಲ್ಲಿ) ಕಾರು ಸ್ಟ್ಯಾರ್ಟ್ ಮಾಡುವ ಪ್ರಯತ್ನಕ್ಕೆ ಹೋಗಬಾರದು. ಇದರಿಂದ ಹೈಡ್ರೋಸ್ಟಾಟಿಕ್ ಲಾಕ್ ತೊಂದರೆ ಎದುರಾಗುವ ಭೀತಿಯಿದೆ. ಇದರಿಂದ ರಿಪೇರಿ ಕೆಲಸಕ್ಕಾಗಿ ದುಂದು ವೆಚ್ಚವಾಗಲಿದೆ. ಇದರ ಬದಲು ಕಾರಿನಿಂದ ಹೊರಗಿಳಿದು ತಳ್ಳುವ ಪ್ರಯತ್ನಕ್ಕೆ ಮುಂದಾಗಬಹುದು.

ರಾತ್ರಿ ವೇಳೆಯ ಪ್ರಯಾಣ ಬೇಡ

ರಾತ್ರಿ ವೇಳೆಯ ಪ್ರಯಾಣ ಬೇಡ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ಚಾಲನೆ ಇನ್ನಷ್ಟು ಕಠಿಣವಾಗಲಿದೆ. ಹಾಗಾಗಿ ರಾತ್ರಿ ವೇಳೆಯ ಪ್ರಯಾಣವನ್ನು ತಪ್ಪಿಸಿರಿ.

ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸಿ

ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸಿ

ಇವೆಲ್ಲದಕ್ಕೂ ಮುಖ್ಯವಾಗಿ ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸುವುದು ಹೆಚ್ಚು ಸೇಫ್ ಎನಿಸಿಕೊಳ್ಳಲಿದೆ. ಇದು ಬದಿಯಲ್ಲಿರುವ ಹೊಂಡ ಗುಂಡಿಗಳ್ನು ತಪ್ಪಿಸಲು ಸಹಕಾರಿಯಾಗಲಿದೆ.

ಚೆಕಪ್, ಸ್ನಾನ

ಚೆಕಪ್, ಸ್ನಾನ

ಅಂತಿಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡಿದ್ದಲ್ಲಿ ತದಾ ಬಳಿಕ ಕಾರನ್ನೊಮ್ಮೆ ಚೆಕಪ್ ಮಾಡಿಸಿಕೊಳ್ಳಲು ಮರೆಯದಿರಿ.

Most Read Articles

Kannada
English summary
How to drive through flooded areas
Story first published: Friday, August 12, 2016, 13:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X