ಕಾರಿಗೆ ರಾತ್ರಿ ಮೊಟ್ಟೆ ಎಸೆದರೆ ಏನು ಮಾಡಬೇಕು?

ಕೆಲವರಿಗೆ ರಾತ್ರಿ ವೇಳೆಯಲ್ಲಿ ಕಾರು ಚಲಾಯಿಸುವುದೆಂದರೆ ತುಂಬಾನೇ ಇಷ್ಟ. ಹಾಗೊಂದು ವೇಳೆ ನಿಮ್ಮಲ್ಲು ನೈಟ್ ರೈಡಿಂಗ್ ಹವ್ಯಾಸವಿದ್ದಲ್ಲಿ ಅದನ್ನು ತಕ್ಷಣ ಬಿಡುಬಿಟ್ಟುವುದು ತುಂಬಾನೇ ಒಳಿತು. ಸುರಕ್ಷಾ ದೃಷ್ಟಿಕೋನದಲ್ಲೂ ರಾತ್ರಿ ಸಮಯದಲ್ಲಿ ಡ್ರೈವಿಂಗ್ ಉತ್ತಮವಲ್ಲ.

ಇಂದಿನ ಈ ಲೇಖನದಲ್ಲಿ ಮತ್ತೊಂದು ಆಸಕ್ತಿದಾಯಕ ವಿಚಾರವನ್ನು ಹೇಳಲಿದ್ದೇವೆ. ಇದು ಕಾರು ಹಾಗೂ ಮೊಟ್ಟೆಗೆ ಸಂಬಂಧಪಟ್ಟ ಕಥೆ. ಕಾರು ಹಾಗೂ ಮೊಟ್ಟೆಗೆ ಏನು ಸಂಬಂಧವೆಂಬ ಕುತೂಹಲ ನಿಮ್ಮಲ್ಲೂ ಮನೆಮಾಡಿರಬಹುದು. ಇಲ್ಲಿದೇ ನೋಡಿ ರೋಚಕ ಸ್ಟೋರಿ.

ರಾತ್ರಿ ಸಮಯದಲ್ಲಿ ಕಾರನ್ನೊಡಿಸುತ್ತಿರುವಾಗ ಕಾರಿನ ಮುಂಭಾಗಕ್ಕೆ ಆಕಸ್ಮಾತ್ ಮೊಟ್ಟೆ ಅಭಿಷೇಕವಾದ್ದಲ್ಲಿ ಯಾವುದೇ ಕಾರಣಕ್ಕೂ ಗಾಡಿ ನಿಲ್ಲುಸುವ ಗೋಜಿಗೆ ಹೋಗದಿರಿ. ಅದಕ್ಕೂ ಮುಖ್ಯವಾಗಿ ಕಾರಿನ ವೈಪರ್ ಆನ್ ಮಾಡುವ ಪ್ರಯತ್ನಕ್ಕೆ ಮುಂದಾಗದಿರಿ. ಯಾಕೆ ಅಂತೀರಾ? ಫೋಟೋ ಫೀಚರ್‌ನಲ್ಲಿದೆ ವಿಶ್ಲೇಷಣೆ.

ವೈಪರ್ ಆನ್ ಮಾಡದಿರಿ

ವೈಪರ್ ಆನ್ ಮಾಡದಿರಿ

ಮೇಲೆ ತಿಳಿಸಿದಂತೆ ರಾತ್ರಿ ಪ್ರಯಾಣ ಮಾಡುತ್ತಿರುವಾಗ ಆಕಾಸ್ಮತ್ ಮೊಟ್ಟೆಗಳ ದಾಳಿ ನಡೆದರೆ ವೈಪರ್ ಆನ್ ಮಾಡದಿರಿ. ನೀರು ಚಿಮುಕಿಸಿ ಅದನ್ನು ತೊಳೆಯುವ ಪ್ರಯತ್ನಕ್ಕೆ ಮುಂದಾಗದಿರಿ. ಈ ರೀತಿ ಮಾಡುವುದರಿಂದ ದರೋಡೆಕೋರರ ಉದ್ದೇಶ ಸುಲಭವಾಗಿ ಈಡೇರಲಿದೆ.

ಮೊಟ್ಟೆ ನೀರು ಮಿಶ್ರಣ?

ಮೊಟ್ಟೆ ನೀರು ಮಿಶ್ರಣ?

ಮೊಟ್ಟೆಯ ಲೋಳೆ, ಹಳದಿ ಹಾಗೂ ನೀರು ಮಿಶ್ರಣವಾಗಿ ಕಾರಿನ ವೈಂಡ್ ಸ್ಕ್ರೀನ್ ಶೇಕಡಾ 92.5 ಮುಸುಕಿದಂತಾಗುತ್ತದೆ. ಶುಭ್ರವಾಗಿದ್ದ ಕನ್ನಡಿ ಕೆಲವೇ ಕ್ಷಣಗಳಲ್ಲಿ ಬಿಳಿ ಪೇಂಟ್ ಬಳಿದಂತಾಗುತ್ತದೆ. ಮೊಟ್ಟೆ ನೀರಿನೊಂದಿಗೆ ಮಿಶ್ರಣವಾದರೆ ಶೇಕಡಾ 92.5ರಷ್ಟು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ.

ದರೋಡೆಕೋರರ ಉದ್ದೇಶ ಈಡೇರುವುದು

ದರೋಡೆಕೋರರ ಉದ್ದೇಶ ಈಡೇರುವುದು

ಈ ಸಂದರ್ಭದಲ್ಲಿ ಕಾರು ನಿಲ್ಲಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. ತಕ್ಷಣ ಕಾರ್ಯಪ್ರವೃತರಾಗುವ ಕಳ್ಳರು ನಿಮ್ಮನ್ನು ಸುತ್ತುವರಿದು ನಿಮ್ಮಲ್ಲಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚುವ ಸಾಧ್ಯತೆಯಿದೆ.

ಗ್ಯಾಂಗ್ ದರೋಡೆ

ಗ್ಯಾಂಗ್ ದರೋಡೆ

ಪ್ರಸ್ತುತ ಮೊಟ್ಟೆಯೆಸೆದು ದರೋಡೆ ಮಾಡುವ ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಗುಂಪು ಗುಂಪಾಗಿ ಆಗಮಿಸುವ ಕಳ್ಳರ ತಡ ಸುಲಭದಲ್ಲಿ ನಿಮ್ಮನ್ನು ಮೋಸ ಮಾಡಬಲ್ಲರು.

ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬೇಡಿ

ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬೇಡಿ

ಹಾಗಾಗಿ ಎಚ್ಚರ ವಹಿಸಿರಿ! ರಾತ್ರಿ ಪಯಣದ ವೇಳೆ ಆಕಸ್ಮಾತ್ ಮೊಟ್ಟೆ ಎಸೆತ ಉಂಟಾದ್ದಲ್ಲಿ ತಕ್ಷಣ ಕಾರು ನಿಲ್ಲಿಸದಿರಿ. ಹಾಗೆಯೇ ವೈಪರ್ ಆನ್ ಮಾಡುವ ಸಾಹಸಕ್ಕೆ ಮುಂದಾಗದಿರಿ. ಇಲ್ಲದಿದ್ದರೆ ಯೋಗರಾಜ್ ಭಟ್ಟರ ಹಾಡಿನಂತೆ "ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಬೇಡಿ" ಎಚ್ಚರವಿರಲಿ! ಹ್ಯಾಪಿ ಡ್ರೈವಿಂಗ್!

Most Read Articles

Kannada
English summary
IF YOU ARE DRIVING AT NIGHT AND EGGS ARE THROWN AT YOUR WINDSCREEN, DO NOT STOP TO CHECK THE CAR , DO NOT OPERATE THE WIPER AND DO NOT SPRAY ANY WATER, BECAUSE EGGS MIXED WITH WATER BECOME MILKY AND BLOCK YOUR VISION UP TO 92.5%, AND YOU ARE THEN FORCED TO STOP BESIDE THE ROAD AND BECOME A VICTIM OF THESE CRIMINALS. THIS IS A NEW TECHNIQUE USED BY GANGS, SO PLEASE INFORM YOUR FRIENDS AND RELATIVES.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X