ಹೆಲ್ಮೆಟ್ ಆಯ್ಕೆ ಕಷ್ಟವೇ? ಬನ್ನಿ ನಮ್ಮ ಸಲಹೆ ಪಡೆಯಿರಿ

By Nagaraja

ಇಂದೊಂದು ಜೋಕ್ - ಭಾರತದಲ್ಲಿ ದ್ವಿಚಕ್ರ ವಾಹನ ಸವಾರರು ಹಲ್ಮೆಟ್ ಯಾತಕ್ಕಾಗಿ ಧರಿಸುತ್ತಾರೆ ಗೊತ್ತಿದೆಯೇ? ಭದ್ರತೆಗಾಗಿ ಅಲ್ಲ; ಬದಲಾಗಿ ಟ್ರಾಫಿಕ್ ಪೊಲೀಸ್ ಕೈಯಿಂದ 100 ರು.ಗಳ ದಂಡದಿಂದ ಪಾರಾಗಲು! ಎಷ್ಟೊಂದು ವಿಚಿತ್ರ ನೋಡಿ, ಸಾರಿಗೆ ಇಲಾಖೆ ಹಾಗೂ ಸರಕಾರ ಹೆಲ್ಮೆಟ್ ಬಳಕೆ ಬಗ್ಗೆ ಸದಾ ಜಾಗರೂಕತೆ ಮೂಡಿಸಿದರೂ ದ್ವಿಚಕ್ರ ಸವಾರರು ಮಾತ್ರ ಕ್ಯಾರೇ ಅನ್ನುವುದಿಲ್ಲ. ನೀವೊಮ್ಮೆ ಯೋಚಿಸಿ ನೋಡಿ ನಿಮ್ಮ ಜೀವ ಹೋದರೆ ಅಥವಾ ತಲೆಗೆ ಪೆಟ್ಟು ಮಾಡಿಕೊಂಡು ಹಾಸಿಗೆ ಹಿಡಿದ್ದಲ್ಲಿ ಯಾರಿಗೆ ತಾನೇ ನಷ್ಟ?

ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ..!

ನಿಮಗೆ ತಿಳಿದಿರುವಂತೆಯೇ ದೇಶದಲ್ಲಿ ಹೆಲ್ಮೆಟ್ ಬಳಕೆ ಕಡ್ಡಾಯ. ಅಷ್ಟಕ್ಕೂ ಹೆಸರಿಗೆ ಮಾತ್ರ ಹೆಲ್ಮೆಟ್ ಧರಿಸಿದರೆ ಸಾಲದು. ಅದರ ಸರಿಯಾದ ರೀತಿಯಲ್ಲಿನ ಬಳಕೆ ಸಹ ಅಷ್ಟೇ ಮುಖ್ಯ. ಈ ಮೂಲಕ ಅಚಾನಕ್ ಆಗುವ ಅಪಘಾತದಿಂದ ಪಾರಾಗಬಹುದಾಗಿದೆ. ಇಂದಿನ ಈ ಲೇಖನದಲ್ಲಿ ಸರಿಯಾದ ರೀತಿಯ ಹೆಲ್ಮೆಟ್ ಬಳಕೆಯ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ಹೆಣ್ಮಕ್ಕಳಿಗೆ ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ!

ಅಧ್ಯಯನ ವರದಿಯೊಂದರ ಪ್ರಕಾರ ಅಸುರಕ್ಷಿತ ರೀತಿಯಲ್ಲಿನ ಹೆಲ್ಮೆಟ್ ಬಳಕೆಯಿಂದಾಗಿ ಹೆಚ್ಚಿನ ಅಪಘಾತಗಳಲ್ಲಿ ಸವಾರರಿಗೆ ಪೆಟ್ಟಾಗುತ್ತದೆ. ಅಪಘಾತದ ವೇಳೆ ಹೆಲ್ಮೆಟ್ ತಲೆಯಿಂದ ಬೇರ್ಪಡುವುದು ಇದಕ್ಕಿರುವ ಪ್ರಮುಖ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಪಾನ್‌ಗಳಂತಹ ರಾಷ್ಟ್ರಗಳಲ್ಲಿ ಸರಿಯಾದ ಶಿಕ್ಷಣ ನೀಡಲಾಗುತ್ತಿದ್ದರೂ ಭಾರತದಲ್ಲಿ ಇಂತಹ ವ್ಯವಸ್ಥೆಯ ಕೊರತೆ ಕಾಡುತ್ತಿದೆ. ಹಾಗಾಗಿ ಹೆಲ್ಮೆಟ್ ಸುರಕ್ಷಿತವಾಗಿ ಧರಿಸಿಕೊಂಡಿದ್ದೀರಾ ಎಂಬುದನ್ನು ಪಯಣಕ್ಕೂ ಮೊದಲು ಖಚಿತಪಡಿಸಿಕೊಳ್ಳುವುದು ಮುಖ್ಯ.

ಹೀಗೂ ಉಂಟೆ; ಇದೇ ಹೆಲ್ಮೆಟ್ ವರ್ಣಮಯ ಲೋಕ

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಹೆಲ್ಮೆಟ್ ಆಯ್ಕೆ ಕಷ್ಟವೇ? ಬನ್ನಿ ನಮ್ಮ ಸಲಹೆ ಪಡೆಯಿರಿ

ಅಷ್ಟಕ್ಕೂ ಎಷ್ಟು ವಿಧದ ಹೆಲ್ಮೆಟ್‌ಗಳಿವೆ? ಯಾವ ಆಕಾರದ ಹೆಲ್ಮೆಟ್ ಅತ್ಯಂತ ಸುರಕ್ಷಿತ? ಎಂಬಿತ್ಯಾದಿ ಪ್ರಮುಖ ವಿಚಾರಗಳ ಬಗ್ಗೆ ಮುಂದಿನ ಒಂದೊಂದೇ ಸ್ಲೈಡರ್‌ನ ಮುಖಾಂತರ ಚರ್ಚಿಸೋಣವೇ...

ಹೆಲ್ಮೆಟ್ ಶೈಲಿ

ಹೆಲ್ಮೆಟ್ ಶೈಲಿ

ಹೆಲ್ಮೆಟ್ ಧರಿಸುವುದಕ್ಕಿಂತಲೂ ಮೊದಲು ಮಾರುಕಟ್ಟೆಯಲ್ಲಿ ಯಾವೆಲ್ಲ ಶೈಲಿಯ ಹೆಲ್ಮೆಟ್‌ಗಳು ದೊರಕುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಸಾಧಾರಣವಾಗಿ ಮೂರು ಶೈಲಿಯ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿವೆ. ಅವುಗಳೆಂದರೆ ಓಪನ್, ಫ್ಲಿಪ್ ಅಪ್ ಅಥವಾ ಮೊಡ್ಯುಲರ್ ಹಾಗೆಯೇ ಫುಲ್ ಫೇಸ್ ಹೆಲ್ಮೆಟ್.

1. ಓಪನ್ ಫೇಸ್ ಹೆಲ್ಮೆಟ್

1. ಓಪನ್ ಫೇಸ್ ಹೆಲ್ಮೆಟ್

ಇತರ ಹೆಲ್ಮೆಟ್‌ಗಳಿಗೆ ಹೋಲಿಸಿದಾಗ ಓಪನ್ ಫೇಸ್ ಹೆಲ್ಮೆಟ್‌ನ ಮುಖ್ಯ ಪ್ರಯೋಜನವೆಂದರೆ ಹೆಚ್ಚು ತಂಪಾಗಿರುತ್ತವೆ. ಹಾಗೆಯೇ ಹೆಚ್ಚು ಗೋಚರತೆ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ವೈಯಕ್ತಿಕವಾಗಿ ನಿಮಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ನೆಲಕ್ಕಪ್ಪಳಿಸುವ ಮುಖ ಎಷ್ಟೇ ಸ್ಲೈಲ್ ಆದರೇನು ಪ್ರಯೋಜನ?

2. ಪ್ಲಿಪ್ ಅಪ್ ಅಥವಾ ಮೊಡ್ಯುಲರ್ ಹೆಲ್ಮೆಟ್

2. ಪ್ಲಿಪ್ ಅಪ್ ಅಥವಾ ಮೊಡ್ಯುಲರ್ ಹೆಲ್ಮೆಟ್

ಫುಲ್ ಫೇಸ್ ಹೆಲ್ಮೆಟ್‌ಗಳಷ್ಟೇ ಸುರಕ್ಷತೆಯನ್ನು ನೀಡುವ ಪ್ಲಿಪ್ ಅಪ್ ಹೆಲ್ಮೆಟ್‌ಗಳು ಹೆಚ್ಚು ಜನಪ್ರಿಯವಾಗಿದೆ. ಇದರ ಮುಖ್ಯ ಪ್ರಯೋಜನವೆಂದರೆ ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇದರ ಮುಂಭಾಗವನ್ನು ಮೇಲಕ್ಕೆ ತಿರುವುದರಿಂದ ನಿಮಗೆ ತಂಪಾದ ಗಾಳಿ ಸವಿಯಬಹುದಾಗಿದೆ. ಆದರೆ ಇದರಿಂದ ದುಷ್ಪಪರಿಣಾವು ಇದೆ. ಕೆಲವೊಂದು ಅಪಘಾತ ಸಂದರ್ಭದಲ್ಲಿ ಇದೇ ಕಾರಣದಿಂದ ಪೆಟ್ಟಾಗುವ ಸಾಧ್ಯತೆಗಳಿವೆ.

3. ಫುಲ್ ಫೇಸ್ ಹೆಲ್ಮೆಟ್

3. ಫುಲ್ ಫೇಸ್ ಹೆಲ್ಮೆಟ್

ಇಷ್ಟೆಲ್ಲ ವಿಚಾರಗಳಿದ್ದರೂ ಸಂಪೂರ್ಣ ಮುಖ ಮರೆಮಾಚುವ ಹೆಲ್ಮೆಟ್‌ನಿಂದ ಮಾತ್ರ ನಿಮಗೆ ಗರಿಷ್ಠ ಸುರಕ್ಷತೆ ನೀಡಲು ಸಾಧ್ಯ. ಇತರ ಶೈಲಿಗಿಂತಲೂ ಫುಲ್ ಫೇಸ್ ಹೆಲ್ಮೆಟ್‌ಗಳಲ್ಲಿ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮ ತಲೆ ಹಾಗೂ ಕುತ್ತಿಗೆಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತದೆ. ಹಾಗೆಯೇ ಸವಾರಿಯ ವೇಳೆ ನಿಮ್ಮ ಮುಖದತ್ತ ಬೀಸಬಹುದಾದ ಧೂಳಿನ ಕಣ, ಸಣ್ಣ ಸಣ್ಣ ಕಲ್ಲು ಅಥವಾ ಕೀಟಗಳಿಂದ ರಕ್ಷಣೆ ಒದಗಿಸುತ್ತವೆ.

ಪೆಟ್ಟಾಗುವ ಸಾಧ್ಯತೆ

ಪೆಟ್ಟಾಗುವ ಸಾಧ್ಯತೆ

ಅಮೆರಿಕ ಸಂಶೋಧನೆ ಪ್ರಕಾರ, ಶೇಕಡಾ 60ರಷ್ಟು ಪ್ರಕರಣಗಳಲ್ಲಿ ಹೆಲ್ಮೆಟ್ ಮುಂಭಾಗದಲ್ಲಿ ಗಲ್ಲದ ಸುತ್ತಲೂ ಪೆಟ್ಟಾಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಇದರಿಂದಲೇ ಫುಲ್ ಫೇಸ್ ಹೆಲ್ಮೆಟ್‌ಗಳ ಮಹತ್ವವನ್ನು ಅರಿಯಬಹುದಾಗಿದೆ. ಈ ಸಂಶೋಧನಾ ವರದಿಯು ಭಾರತಕ್ಕೂ ಬಹುತೇಕ ಸಮಾನವಾಗಿದೆ ಎಂಬುದು ಅಷ್ಟೇ ಗಮನಾರ್ಹ ಸಂಗತಿ.

ಫುಲ್ ಫೇಸ್ ಹೆಲ್ಮೆಟ್ ಅನಾನುಕೂಲತೆ

ಫುಲ್ ಫೇಸ್ ಹೆಲ್ಮೆಟ್ ಅನಾನುಕೂಲತೆ

ಅಂದ ಹಾಗೆ ಫುಲ್ ಫೇಸ್ ಹೆಲ್ಮೆಟ್‌ಗಳಿಂದ ಕೆಲವೊಂದು ಅನಾನುಕೂಲತೆಗಳು ಇರುತ್ತದೆ. ಬೇಸಿಗೆಯಲ್ಲಿ ಬಿಸಿಲು ನೆತ್ತಿಗೇರಿದಾಗ (ತಲೆಗೆ ಕರವಸ್ತ್ರ ಬಳಸಬಹುದು), ಅಥವಾ ಮಂಜು ಕವಿದ ಹಾಗೂ ಮಂಕಾದ ವಾತಾವರಣದಲ್ಲಿ ಗೋಚರತೆಯ ಸಮಸ್ಯೆ ಉಂಟಾಗಬಹುದು. ಆದರೆ ಗುಣಮಟ್ಟತೆಯ ಹೆಲ್ಮೆಟ್ ಧರಿಸುವುಕೆಯಿಂದ ಇವೆಲ್ಲವನ್ನು ನಿಭಾಯಿಸಬಹುದಾಗಿದೆ. ಹಾಗೆಯೇ ಖರೀದಿ ವೇಳೆ ಉತ್ತಮ ಗಾಳಿ ಸಂಚಾರವಿರುವ ಹೆಲ್ಮೆಟ್‌ ಖರೀದಿಗೆ ಆದ್ಯತೆ ಕೊಡಿ. ಅಲ್ಲದೆ ನಿಮ್ಮ ಮನೆಯಲ್ಲಿರುವ ಶ್ಯಾಂಪೂ ಅಥವಾ ಶೇವಿಂಗ್ ಫೋಂ ಹೆಲ್ಮೆಟ್ಟಿನ ಮುಂಭಾಗವನ್ನು ಶುಚಿಗೊಳಿಸಲು ಬಳಸಬಹುದಾಗಿದೆ.

ಅಂತಿಮ ಮಾತು

ಅಂತಿಮ ಮಾತು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಅತ್ಯಂತ ಹೆಚ್ಚು ಸುರಕ್ಷತಾ ಮಾನದಂಡಗಳನ್ನು ಹೊಂದಿರುವ ಹೆಲ್ಮೆಟ್‌ಗಳನ್ನು ಧರಿಸಬೇಕು. ಇಲ್ಲಿ ಫುಲ್ ಫೇಸ್ ಹೆಲ್ಮೆಟ್‌ಗಳಿಂದ ಮಾತ್ರ ಹೆಚ್ಚು ಭದ್ರತೆಯನ್ನು ನೀಡಲು ಸಾಧ್ಯ. ಹಾಗಾಗಿ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಹೆಲ್ಮೆಟ್‌ಗಳ ಖರೀದಿಗೆ ಮನ ಸೋಲುವ ಮೊದಲು ಫುಲ್ ಫೇಸ್ ಹೆಲ್ಮೆಟ್ ಬಳಕೆಯತ್ತ ಸ್ವಲ್ಪ ಎಚ್ಚರ ವಹಿಸಿದರೆ ಒಳ್ಳೆಯದು. ಹ್ಯಾಪಿ ಡ್ರೈವಿಂಗ್!

ಈ ವೀಡಿಯೋ ವೀಕ್ಷಿಸಿದ ಬಳಿಕವಾದರೂ ನಿಮಗೆ ಹೆಲ್ಮೆಟ್ ಬಳಕೆಯ ಮಹತ್ವದ ಬಗ್ಗೆ ವಿಚಾರ ಅರಿವಿಗೆ ಬರಬಹುದು

Most Read Articles

Kannada
English summary
Helmets today are mandatory in most states in the country and with good reason. Proper usage of a helmet can save your life in an unforeseeable incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X