ಅಂತರ್ಜಾಲದಲ್ಲಿ ಹಳೆಯ ಕಾರು ಮಾರಾಟಕ್ಕೆ 11 ಸರಳ ಸೂತ್ರಗಳು

By Nagaraja

ಹಿಂದೆಲ್ಲ ಹಳೆಯ ಕಾರುಗಳ ಮಾರಾಟ ಮಾಡುವುದೆಂದರೆ ತಲೆನೋವಿನ ವಿಚಾರ. ಹಳೆಯ ಶೋ ರೂಂಗಳ ಬಳಿ ಅಥವಾ ತಯಾರಕರ ಅಧಿಕೃತ ವಿತರಕ ಜಾಲಕ್ಕೆ ತೆರಳಿ ಹಳೆಯ ಕಾರುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ ಕಾರಿಗೆ ತಕ್ಕ ಮೌಲ್ಯ ಸಿಗುವುದಿಲ್ಲ.

ಹಾಗಿರುವಾಗ ನಿಮ್ಮ ಕಾರನ್ನು ಮಾರಾಟ ಮಾಡಲು ಅತ್ಯುತ್ತಮ ವೇದಿಕೆಯನ್ನು 'ಆನ್ ಲೈನ್' ಒದಗಿಸುತ್ತಿದೆ. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಾದಂತೆ ಇಂಟರ್ ನೆಟ್ ಬಳಕೆಯು ಜಾಸ್ತಿಯಾಗಿದ್ದು, ನಿಮ್ಮ ಹಳೆಯ ಕಾರಿಗೆ ಅತ್ಯುತ್ತಮ ವ್ಯವಹಾರವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಇದರಂತೆ ಹಳೆಯ ಕಾರುಗಳನ್ನು ಮಾರಾಟ ಮಾಡಲು 11 ಸರಳ ತಂತ್ರಗಳನ್ನು ನಾವಿಲ್ಲಿ ನಿಮ್ಮ ಜೊತೆಗೆ ಹಂಚಿಕೊಳ್ಳಲಿದ್ದೇವೆ.

01. ಕಾರ್ ವಾಶ್

01. ಕಾರ್ ವಾಶ್

ಮೊದಲಿಗೆ ನೀವು ಮಾಡಬೇಕಾಗಿರುವುದು ಕಾರನ್ನು ಶುಚಿಯಾಗಿಡಬೇಕು. ಇದಕ್ಕಾಗಿ ಸರ್ವಿಸ್ ಸ್ಟೇಷನ್ ತೆರಳಿ 300ರಿಂದ 400 ರುಪಾಯಿಗಳನ್ನು ಖರ್ಚು ಮಾಡಿ ಕಾರಿನ ಹೊರಮೈ ಹಾಗೂ ಒಳಮೈಯನ್ನು ಚೆನ್ನಾಗಿ ತೊಳೆಯಬೇಕು. ಮೊದಲೇ ಹಳೆಯ ಕಾರುಗಳನ್ನು ಮಾರಾಟಕ್ಕೆ ಸಜ್ಜಾಗಿದ್ದೇವೆ. ಹಾಗಿರುವಾಗ ಇವೆಲ್ಲ ಅನಾವಶ್ಯಕ ಖರ್ಚು ಬೇಕೇ? ಅಂತ ನೀವು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಹೀಗೆ ಮಾಡುವುದರಿಂದ ಮಾರಾಟದ ವೇಳೆ ನಿಮ್ಮ ಕಾರಿನ ಮೌಲ್ಯ ಹೆಚ್ಚಲಿದೆ ಎಂಬುದನ್ನು ಮರೆಯದಿರಿ. ಇನ್ನು ವೀಲ್ ಅಲೈನ್ ಮೆಂಟ್ (ಚಕ್ರ ಜೋಡಣೆ) ಮಾಡಲು ಮರೆಯದಿರಿ. ಇದು ಅತ್ಯುತ್ತಮ ಹ್ಯಾಂಡ್ಲಿಂಗ್ ಗೆ ಸಹಕಾರಿಯಾಗಲಿದೆ.

02. ಫೋಟೊ ಶೂಟ್

02. ಫೋಟೊ ಶೂಟ್

ಕಾರನ್ನು ಚೆನ್ನಾಗಿ ತೊಳೆದ ಬಳಿಕ ಶುಭ್ರ ವಾತಾವರಣದ ಬಳಿ ತೆರಳಿ ಕಾರನ್ನು ಪಾರ್ಕ್ ಮಾಡಿರಿ. ತದಾ ಬಳಿಕ ಅತ್ಯುತ್ತಮ ಕ್ಯಾಮೆರಾದಿಂದ ಕಾರಿನ ವಿವಿಧ ಭಂಗಿಗಳ ಛಾಯಾಚಿತ್ರವನ್ನು ತೆಗೆಯಿರಿ. ಇದರಲ್ಲಿ ಅತ್ಯುತ್ತಮವಾಗಿರುವುದನ್ನು ಆಯ್ಕೆ ಮಾಡಿಟ್ಟುಕೊಳ್ಳಿ.

03. ನಿಖರ ಮಾಹಿತಿ ಕೊಡಿ

03. ನಿಖರ ಮಾಹಿತಿ ಕೊಡಿ

ಇನ್ನು ಅಂತರ್ಜಾಲದಲ್ಲಿ ನಿಮ್ಮ ಹಳೆಯ ಕಾರನ್ನು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ಜಾಹೀರಾತು ಪೋಸ್ಟ್ ಮಾಡುವಾಗ ಆದಷ್ಟು ನಿಖರ ಮಾಹಿತಿಯನ್ನು ಕೊಡಿರಿ. ಅದೇ ಹೊತ್ತಿಗೆ ಮಾಹಿತಿಯು ಚೊಕ್ಕದಾಗಿ ಓದುಗರನ್ನು ಆಕರ್ಷಿಸುವಂತಿರಲಿ.

04. ಬೆಲೆ ನಿಗದಿಪಡಿಸುವುದು ಹೇಗೆ?

04. ಬೆಲೆ ನಿಗದಿಪಡಿಸುವುದು ಹೇಗೆ?

ಈಗ ನಾವು ಹಳೆಯ ಕಾರು ಮಾರಾಟ ಅತಿ ಪ್ರಾಮುಖ್ಯ ಘಟಕವನ್ನು ಬಂದು ತಲುಪಿದ್ದೇವೆ. ಅಷ್ಟಕ್ಕೂ ನಿಮ್ಮ ಹಳೆಯ ಕಾರಿಗೆ ಅತ್ಯುತ್ತಮ ಬೆಲೆ ನಿಗದಿಪಡಿಸುವುದು ಹೇಗೆ? ಇದಕ್ಕೊಂದು ಉಪಾಯವಿದೆ. ಮೊದಲು ಹಳೆಯ ಕಾರು ಶೋ ರೂಂ ಅಥವಾ ಶೋ ರೂಂ ಎಕ್ಸ್ ಚೇಂಜ್ ಬಳಿ ತೆರಳಿ ದರ ನಿಗದಿಪಡಿಸುವುದಾಗಿದೆ. ಇದರಿಂದ ನಿಮಗೆ ಒಂದು ಅಂದಾಜು ಲೆಕ್ಕ ಸಿಗಲಿದೆ. ಇದಕ್ಕಾಗಿ ನಿಮ್ಮ ನಿಷ್ಠಾವಂತರಾಗಿರುವ ಮೆಕ್ಯಾ ನಿಕ್ ಅಥವಾ ಕಾರು ಪರಿಣಿತರ ಸಹಾಯವನ್ನು ಪಡೆಯಬಹುದಾಗಿದೆ.

05. ಬೆಲೆ ನಿಗದಿಪಡಿಸಿ

05. ಬೆಲೆ ನಿಗದಿಪಡಿಸಿ

ಕಾರಿಗೆ ಬೆಲೆ ನಿಗದಿಪಡಿಸಿದ ಬಳಿಕ ಆನ್ ಲೈನ್ ಮಾರಾಟದ ವೇಳೆ 5ರಿಂದ 10 ಸಾವಿರ ರು.ಗಳಷ್ಟು ಹೆಚ್ಚಿನ ಬೆಲೆಯನ್ನು ನಮೂದಿಸಿ. ಉದಾಹರಣೆಗೆ ನಿಮ್ಮ ಹಳೆಯ ಕಾರಿಗೆ 2.5 ಲಕ್ಷ ರು.ಗಳ ಮೌಲ್ಯವಿದ್ದರೆ 2.6 ಲಕ್ಷ ಬೆಲೆ ನಿಗಪಡಿಸಿ. ಯಾಕೆಂದರೆ ಕಾರು ಖರೀದಿಗೆ ಬರುವ ಗ್ರಾಹಕರು ಅಥವಾ ಮಧ್ಯವರ್ತಿಗಳು ಚೌಕಾಶಿ ಮಾಡುವ ಮೂಲಕ ಬೆಲೆ ಕಡಿತಕ್ಕೆ ಮುಂದಾಗಲಿದ್ದಾರೆ. ಈ ವೇಳೆ ನಿಮ್ಮ ಕಾರಿನ ನೈಜ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

06. ಮೊಬೈಲ್ ಫೋನ್ ಸಂಭಾಷಣೆ

06. ಮೊಬೈಲ್ ಫೋನ್ ಸಂಭಾಷಣೆ

ಅಂತರ್ಜಾಲದಲ್ಲಿ ನೀವು ಜಾಹೀರಾತು ಪೋಸ್ಟ್ ಮಾಡಿದ ತಕ್ಷಣ ನಿಮಗೆ ಫೋನ್ ಕಾಲ್ ಗಳ ಸುರಿಮಳೆಯಾಗಲಿದೆ. ಕೆಲವು ಬಾರಿ ಇದು ಕಿರಿಕಿರಿಯನ್ನುಂಟು ಮಾಡುವುದಾದರೂ ಸಂಯಮ ಪಾಲನೆಯಿಂದ ವರ್ತಿಸಬೇಕಾಗುತ್ತದೆ. ಹಾಗೆಯೇ ಜಾಸ್ತಿ ಬೆಲೆ ಕಟ್ಟುವ ಗ್ರಾಹಕರ ವಿವರಗಳನ್ನು ಒಂದು ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕಾಗುತ್ತದೆ. ಇದು ಮುಂದಿನ ವ್ಯವಹಾರಕ್ಕೆ ನಿಮಗೆ ನೆರವಾಗಲಿದೆ.

07. ತರಾತುರಿ ಬೇಡ

07. ತರಾತುರಿ ಬೇಡ

ಕಾರು ಮಾರಾಟದ ಸಂದರ್ಭದಲ್ಲಿ ತರಾತುರಿ ಮಾಡುವುದು ಬೇಡ. ಅಲ್ಲದೆ ಜಾಸ್ತಿ ಬೆಲೆ ಕಟ್ಟಿದವರಿಗೆ ನಾಳೆಯೇ ಕಾರು ಮಾರಾಟ ಮಾಡ್ತೀನಿ ಅಂಥ ಮಾತು ಕೊಡುವುದು ಬೇಡ. ಇಲ್ಲಿ ನಿಮ್ಮ ಬುದ್ಧಿಶಕ್ತಿಗೆ ಸ್ವಲ್ಪ ಕೆಲಸ ಕೊಡುವುದರಿಂದ ನಿಮ್ಮ ಕಾರಿಗೆ ಅತ್ಯುತ್ತಮ ಮೌಲ್ಯ ದೊರಕಲಿದೆ.

08. ವ್ಯವಹಾರ ಹೇಗೆ?

08. ವ್ಯವಹಾರ ಹೇಗೆ?

ಜಾಸ್ತಿ ಬೆಲೆ ಕಟ್ಟಿದವರಲ್ಲಿ ಕಾರನ್ನು ನೇರವಾಗಿ ನೋಡಿ, ಪರಿಶೀಲಿಸಲು ಹೇಳಿ. ಈ ವೇಳೆ 'ಕಾರು ಹಾಗೆ ಇದೆ, ಹೀಗೆ ಇದೆ' ಎಂದೆಲ್ಲ ಜಾಸ್ತಿ ಬಿಲ್ಡಪ್ ಕೊಡುವ ಅಗತ್ಯವಿಲ್ಲ. ಕಾರಿಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳನ್ನು ನಿಮ್ಮ ಬಳಿಯಿಟ್ಟುಕೊಳ್ಳಿ.

09. ಹಿನ್ನೆಲೆ

09. ಹಿನ್ನೆಲೆ

ಈ ಸಂದರ್ಭದಲ್ಲಿ ನಿಮ್ಮನ್ನ ಭೇಟಿಯಾಗುವ ಗ್ರಾಹಕರ ಸಂಭಾಷಣೆಯಿಂದಲೇ ಆತನ ಹಿನ್ನೆಲೆಯನ್ನು ಗ್ರಹಿಸುವ ಪ್ರಯತ್ನ ಮಾಡಬಹುದು. ಇಲ್ಲಿ ಓರ್ವ ಪೊಲೀಸ್ ಅಧಿಕಾರಿಯ ಸೂಕ್ಷ್ಮ ದೃಷ್ಟಿಯಿಂದ ನೀವು ಕೆಲಸ ಮಾಡಬೇಕಾಗುತ್ತದೆ. ಯಾಕೆಂದರೆ ಕಾರು ಖರೀದಿ ಮಾಡಿದ ಬಳಿಕ ಯಾವುದೋ ದುರದ್ದೇಶಕ್ಕಾಗಿ ನಿಮ್ಮ ಕಾರನ್ನು ಉಪಯೋಗಿಸುವ ಭೀತಿಯಿರುತ್ತದೆ.

10. ಡೀಲ್ ಮುಗಿಸಿ - ದಾಖಲಾತಿ ಹಸ್ತಾಂತರ

10. ಡೀಲ್ ಮುಗಿಸಿ - ದಾಖಲಾತಿ ಹಸ್ತಾಂತರ

ಈ ಎಲ್ಲದರ ಬಗ್ಗೆ ಖಚಿತತೆ ಬಂದ ಬಳಿಕವಷ್ಟೇ ವ್ಯವಹಾರ ಮುಗಿಸಲು ಮುಂದಾಗಿರಿ. ಹಳೆಯ ಕಾರು ಮಾರಾಟದ ವೇಳೆ ನಿಮ್ಮ ಆಪ್ತ ಸ್ನೇಹಿತರ ಸಹಾಯವನ್ನು ಪಡೆದುಕೊಂಡರೆ ಒಳಿತು. ಈ ವೇಳೆ ಫಾರ್ಮ್ 30, ಫಾರ್ಮ್ 31 ನಿಗದಿತ ಜಾಗದಲ್ಲಿ ಸಹಿ ಮಾಡಲು ಮರೆಯದಿರಿ. ತದಾ ಬಳಿಕ ದಾಖಲಾತಿಗಳನ್ನು ಹಸ್ತಾಂತರಿಸಿರಿ.

11. ರಾತ್ರಿ ಸಮಯದಲ್ಲಿ ವ್ಯವಹಾರ ಬೇಡ

11. ರಾತ್ರಿ ಸಮಯದಲ್ಲಿ ವ್ಯವಹಾರ ಬೇಡ

ಯಾವುದೇ ಕಾರಣಕ್ಕೂ ರಾತ್ರಿ ಸಮಯದಲ್ಲಿ ವ್ಯವಹಾರ ಮಾಡದಿರುವುದು ಒಳಿತು. ಯಾಕೆಂದರೆ ಮೋಸ ಹೋಗುವ ಸಾಧ್ಯತೆ ಜಾಸ್ತಿಯಾಗಿದ್ದು, ದುಡ್ಡು ಹಸ್ತಾಂತರದ ವೇಳೆ ನಕಲಿ ನೋಟುಗಳನ್ನು ನೀಡುವ ಸಾಧ್ಯತೆಯಿದೆ.

Most Read Articles

Kannada
English summary
My Used Cars Is Worth So Much? I Can't Believe This...
Story first published: Wednesday, March 25, 2015, 15:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X