ಹ್ಯಾಚ್‌ಬ್ಯಾಕ್ vs ಸೆಡಾನ್; ಯಾವ ಕಾರು ಬೆಸ್ಟ್?

By Nagaraja

ಪ್ರತಿಯೊಬ್ಬ ಕಾರು ಖರೀದಿ ಗ್ರಾಹಕರಲ್ಲೂ ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಸೆಗ್ಮೆಂಟ್‌ಗಳ ನಡುವೆ ಯಾವುದು ಅತ್ಯುತ್ತಮ ಕಾರು? ಎಂಬ ಗೊಂದಲವುಂಟಾಗುವುದು ಸಹಜ. ಈ ಬಗ್ಗೆ ಓದುಗರ ಕಳಕಳಿಯನ್ನು ಅರಿತಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ಈ ವಿಶೇಷ ಲೇಖನವನ್ನು ಸಿದ್ಧಪಡಿಸುತ್ತಿದೆ.

ಹ್ಯಾಚ್‌ಬ್ಯಾಕ್ vs ಸೆಡಾನ್...
ಹ್ಯಾಚ್‌ಬ್ಯಾಕ್ ಹಾಗೂ ಸೆಡಾನ್ ಕಾರುಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು, ದರದಿಂದ ಹಿಡಿದು ವಿನ್ಯಾಸದ ವರೆಗೆ ಹಲವಾರು ವಿಭಿನ್ನತೆಯನ್ನು ಪಡೆದುಕೊಂಡಿದೆ. ಸಹಜವಾಗಿಯೇ ಯಾವುದು ಅತ್ಯುತ್ತಮ ಕಾರು ಎಂದು ಆರಿಸುವುದು ಅಷ್ಟು ಸುಲಭದ ವಿಚಾರವಲ್ಲ. ಹಾಗಿದ್ದರೂ ಕಾರಿನ ನಿರ್ವಹಣೆ, ಹ್ಯಾಂಡ್ಲಿಂಗ್, ಲಗ್ಷುರಿ, ಆಕ್ಸೆಸರಿ, ದರ ಹಾಗೂ ಮೈಲೇಜ್ ಆಧಾರದಲ್ಲಿ ಇದನ್ನು ಬೇರ‍್ಪಡಿಸಬಹುದಾಗಿದೆ.

ಕೆಳಗಡೆ ಕೊಡಲಾಗಿರುವ ಸ್ಲೈಡರ್‌ನಲ್ಲಿ ಮೊದಲು ಹ್ಯಾಚ್‌ಬ್ಯಾಕ್ ಕಾರುಗಳ ಪ್ರಯೋಜನ ಹಾಗೂ ಅನನುಕೂಲತೆಯನ್ನು ವಿವರಿಸಲಾಗಿದೆ. ತದಾ ಬಳಿಕ ಸೆಡಾನ್ ಕಾರುಗಳ ಅನುಕೂಲ ಹಾಗೂ ಹಿನ್ನಡೆಯನ್ನು ಉಲ್ಲೇಖಿಸಲಾಗಿದೆ. ಅಂತಿಮವಾಗಿ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಯಾವ ಕಾರು ಉತ್ತಮ ಎಂಬುದಕ್ಕೆ ಡ್ರೈವ್ ಸ್ಪಾರ್ಕ್ ಅಂತಿಮ ತೀರ್ಪನ್ನು ಪ್ರಕಟಿಸಿದೆ.

ಸಾಮಾನ್ಯವಾಗಿ ಹ್ಯಾಚ್‌ಬ್ಯಾಕ್ ಕಾರುಗಳು ಬೂಟ್ ಸ್ಪೇಸ್ ಪ್ರದೇಶ ಒದಗಿಸುವುದಕ್ಕಾಗಿ ಮೇಲ್ಮುಖವಾಗಿ ತಿರುಗಿಸುವ ಒಂದು ಹಿಂಭಾಗದ ಬಾಗಿಲನ್ನು ಹೊಂದಿರುವ ದೇಹವನ್ನು ಹೊಂದಿರುತ್ತದೆ. ಅದೇ ಹೊತ್ತಿಗೆ ಸೆಡಾನ್ ಕಾರುಗಳಲ್ಲಿ ಎ, ಬಿ ಮತ್ತು ಸಿಗಳೆಂಬ ಮೂರು ವಿಭಾಗಗಳಿದ್ದು, ಇದು ಎಂಜಿನ್, ಪ್ರಯಾಣಿಕ ಹಾಗೂ ಸರಕು ಪ್ರತ್ಯೇಕ ಬಾಕ್ಸ್ ಸಂರಚನೆಯನ್ನು ಪಡೆದುಕೊಂಡಿದೆ.

ಸಿಟಿ ರೈಡಿಂಗ್ ಬೆಸ್ಟ್

ಸಿಟಿ ರೈಡಿಂಗ್ ಬೆಸ್ಟ್

ಸಹಜವಾಗಿಯೇ ಸಣ್ಣ ಆಕಾರವನ್ನು ಹೊಂದಿರುವುದರಿಂದ ಹ್ಯಾಚ್ ಬ್ಯಾಕ್ ಕಾರುಗಳು ನಗರ ಪ್ರದೇಶದ ಚಾಲನೆಗೆ ಹೆಚ್ಚು ಸೂಕ್ತವೆನಿಸುತ್ತದೆ. ಹಾಗೆಯೇ ವಾಹನ ದಟ್ಟಣೆಯಲ್ಲಿ ಡ್ರೈವಿಂಗ್ ಸುಲಭವೆನಿಸಲಿದೆ. ವಿಶೇಷವಾಗಿಯೂ ಸಣ್ಣ ಪ್ರದೇಶಗಳಲ್ಲೂ ಪಾರ್ಕಿಂಗ್ ಸುಲಭವಾಗಲಿದೆ.

ದರ ಕಡಿಮೆ

ದರ ಕಡಿಮೆ

ನೀವು ಬಜೆಟ್ ಕಾರು (ಕಡಿಮೆ ದರ) ಆಯ್ಕೆ ಮಾಡಲು ಬಯಸುವುದಾದರೆ ನಿಮಗೆ ಹ್ಯಾಚ್‌ಬ್ಯಾಕ್ ಕಾರುಗಳು ಹೆಚ್ಚು ಸೂಕ್ತವೆನಿಸುವುದು. ಯಾಕೆಂದರೆ ಹ್ಯಾಚ್‌ಬ್ಯಾಕ್ ಕಾರುಗಳು 2 ಲಕ್ಷ ರು.ಗಳ (ಆನ್ ರೋಡ್ ದರ) ಅಸುಪಾಸಿನಲ್ಲಿ ನಿಮಗೆ ದೊರಕಲಿದೆ. ಈ ಪಟ್ಟಿಯು ಅಗ್ಗದ ನ್ಯಾನೋದಿಂದ ಆರಂಭವಾಗಿ ಜನಪ್ರಿಯ ಸ್ವಿಫ್ಟ್, ಹ್ಯುಂಡೈ ಐ20, ಹ್ಯುಂಡೈ ಐ10, ಮಾರುತಿ ವ್ಯಾಗನಾರ್, ಫೋರ್ಡ್ ಫಿಗೊ ಹೀಗೆ ಮುಂದುವರಿಯುತ್ತದೆ. ಮತ್ತೊಂದೆಡೆ ಸೆಡಾನ್ ಕಾರು ಖರೀದಿ ಮಾಡಬೇಕೆಂದರೆ ಕನಿಷ್ಠ 7 ಲಕ್ಷ ರು.ಗಳ ಅವಶ್ಯಕತೆಯಿದೆ.

ನಿರ್ವಹಣೆ ವೆಚ್ಚ ಕಡಿಮೆ

ನಿರ್ವಹಣೆ ವೆಚ್ಚ ಕಡಿಮೆ

ಹ್ಯಾಚ್‌ಬ್ಯಾಕ್ ಕಾರುಗಳ ಇನ್ನೊಂದು ಪ್ರಮುಖ ಫೀಚರ್ ಏನೆಂದರೆ ಸೆಡಾನ್ ಕಾರುಗಳಿಗೆ ಹೋಲಿಸಿದಾಗ ನಿರ್ವಹಣಾ ವೆಚ್ಚ ತುಂಬಾನೇ ಕಡಿಮೆಯಾಗಿರುತ್ತದೆ. ಸಹಜವಾಗಿಯೇ ದರ ಅಧಿಕವಾಗಿದ್ದರಿಂದ ಸೆಡಾನ್ ಕಾರುಗಳ ನಿರ್ವಹಣಾ ವೆಚ್ಚ ಜಾಸ್ತಿಯಾಗಿರುತ್ತದೆ.

ಡ್ರೈವಿಂಗ್ ಸುಲಭ

ಡ್ರೈವಿಂಗ್ ಸುಲಭ

ಹ್ಯಾಚ್‌ಬ್ಯಾಕ್ ಕಾರುಗಳನ್ನು ಸುಲಭವಾಗಿ ಪಾರ್ಕಿಂಗ್ ಮಾಡಬಹುದಾಗಿದೆ. ಹಾಗೆಯೇ ರಿವರ್ಸ್ ತೆಗೆದುಕೊಳ್ಳುವುದು ಸುಲಭವಾಗಿದೆ. ಕಡಿಮೆ ಪಾರ್ಕಿಂಗ್ ಪ್ರದೇಶದಲ್ಲೂ ಕಾರನ್ನು ಸುಲಭವಾಗಿ ಪಾರ್ಕಿಂಗ್ ಮಾಡಬಹುದಾಗಿದೆ.

ಲಗ್ಗೇಜ್ ಸ್ಪೇಸ್ ಕಡಿಮೆ

ಲಗ್ಗೇಜ್ ಸ್ಪೇಸ್ ಕಡಿಮೆ

ಬಜೆಟ್ ದೃಷ್ಟಿಕೋನದಲ್ಲಿ ದೇಶದ ಮಧ್ಯಮ ವರ್ಗದ ಜನರಿಗೆ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುತ್ತದೆ. ಆದರೆ ಲಗ್ಗೇಜ್ ಸ್ಪೇಸ್ (ಬೂಟ್) ಕಡಿಮೆಯಾಗಿರುವುದು ಹಿನ್ನಡೆಯಾಗಲಿದೆ.

ಸ್ಥಳಾವಕಾಶದ ಅಭಾವ

ಸ್ಥಳಾವಕಾಶದ ಅಭಾವ

ಹಾಗೆಯೇ ಹಿಂದುಗಡೆ ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸ್ಥಳಾವಕಾಶದ (ಲೆಗ್ ರೂಂ) ಅಭಾವ ಕಾಡಲಿದೆ. ಇದು ದಪ್ಪ ದೇಹವನ್ನು ಹೊಂದಿದ ಜನರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ.

ಮುಂಬರುವ ಸ್ಲೈಡರ್‌ಗಳಲ್ಲಿ ಸೆಡಾನ್ ಕಾರಿನ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಓದಿರಿ...

ವೀಲ್ ಬೇಸ್ ಜಾಸ್ತಿ

ವೀಲ್ ಬೇಸ್ ಜಾಸ್ತಿ

ಹ್ಯಾಚ್‌ಬ್ಯಾಕ್ ಕಾರಿಗೆ ಹೋಲಿಸಿದರೆ ಸೆಡಾನ್ ಕಾರಿನ ಚಾಸೀಸ್, ಪವರ್ ಔಟ್ ಫುಟ್ ಟಾರ್ಕ್ ಹಾಗೂ ವೀಲ್ ಬೇಸ್ (ಎರಡು ಚಕ್ರಗಳ ನಡುವಣ ಅಂತರ) ಜಾಸ್ತಿಯಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸ್ಥಳಾವಕಾಶ ದೊರಕುತ್ತದೆ.

ಹೆಚ್ಚಿನ ಬೂಟ್ ರೂಂ

ಹೆಚ್ಚಿನ ಬೂಟ್ ರೂಂ

ಸೆಡಾನ್ ಕಾರಿನ ಇನ್ನೊಂದು ಪ್ರಮುಖ ಅಂಶವೆಂದರೆ ಬೂಟ್ ರೂಂ (ಲಗ್ಗೇಜ್ ಸ್ಪೇಸ್) ಜಾಸ್ತಿಯಾಗಿರುತ್ತದೆ. ಇದರಿಂದ ಪ್ರವಾಸ ಮುಂತಾದ ದೂರ ಪ್ರಯಾಣದ ವೇಳೆಯಲ್ಲಿ ಹೆಚ್ಚು ಲಗ್ಗೇಜ್‌ಗಳನ್ನು ಹೊತ್ತೆಯ್ಯಬಹುದಾಗಿದೆ.

ಪ್ರಾಣಪಾಯ ಕಡಿಮೆ

ಪ್ರಾಣಪಾಯ ಕಡಿಮೆ

ಇನ್ನು ಅಪಘಾತ ಸಂದರ್ಭದಲ್ಲಿ ಹಿಂದುಗಡೆಯಿಂದ ವಾಹನ ಢಿಕ್ಕಿ ಹೊಡೆದರೂ ಕಾರಿನೊಳಗಿರುವ ಪ್ರಯಾಣಿಕರಿಗೆ ಅಪಾಯದ ಸಾಧ್ಯತೆ ಕಡಿಮೆಯಾಗಿರುತ್ತದೆ. ಅದೇ ಹೊತ್ತಿಗೆ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಸೇಫ್ಟಿ ಆತಂತಕ್ಕೆ ಕಾರಣವಾಗಿದೆ.

ಉತ್ತಮ ಹ್ಯಾಂಡ್ಲಿಂಗ್

ಉತ್ತಮ ಹ್ಯಾಂಡ್ಲಿಂಗ್

ಹ್ಯಾಚ್‌ಬ್ಯಾಕ್ ಕಾರುಗಳಿಗೆ ಹೋಲಿಸಿದಾಗ ಹೆದ್ದಾರಿ ಮುಂತಾದ ರಸ್ತೆಗಳಲ್ಲಿ ವೇಗವಾಗಿ ಚಲಿಸುವಾಗ ಸೆಡಾನ್ ಕಾರಿನ ಹ್ಯಾಂಡ್ಲಿಂಗ್ ಅತ್ಯುತ್ತಮವಾಗಿರುತ್ತದೆ. ಇನ್ನೊಂದಡೆ ಸದ್ಯ ಮಾರುಕಟ್ಟೆಯಲ್ಲಿ ಐ10ಗಳಂತಹ ಹ್ಯಾಚ್‌ಬ್ಯಾಕ್ ಕಾರುಗಳು ಉತ್ತಮ ಹ್ಯಾಂಡ್ಲಿಂಗ್ ಹೊಂದಿದ್ದರೂ ಸೆಡಾನ್ ಕಾರುಗಳನ್ನು ಹೋಲಿಸಿದಾಗ ಅದು ಕಡಿಮೆಯಾಗಿರುತ್ತದೆ.

ಕ್ಯಾಬಿನ್ ನಾಯ್ಸ್ ಕಡಿಮೆ

ಕ್ಯಾಬಿನ್ ನಾಯ್ಸ್ ಕಡಿಮೆ

ಇನ್ನು ಸೌಂಡ್ ಪ್ರೂಫ್, ಇನ್ಸುಲೆಷನ್ ಮುಂತಾದ ಫೀಚರ್‌ಗಳಿಂದಾಗಿ ಸೆಡಾನ್ ಕಾರಿನೊಳಗೆ ಕ್ಯಾಬಿನ್ ನಾಯ್ಸ್ (ಶಬ್ದ) ಕಡಿಮೆಯಾಗಿರುತ್ತದೆ. ಇದರಿಂದಾಗಿ ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.

ಹೆಚ್ಚುವರಿ ಫೀಚರ್ಸ್

ಹೆಚ್ಚುವರಿ ಫೀಚರ್ಸ್

ಸೆಡಾನ್ ಕಾರುಗಳ ದರ ಹೆಚ್ಚಾಗಿರುವುದರಿಂದ ಹೆಚ್ಚಿನ ಆಕ್ಸೆಸರಿಗಳನ್ನು ನೋಡಬಹುದಾಗಿದೆ. ಹಾಗೆಯೇ ಮನರಂಜನೆ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ಆಳವಡಿಸಲಾಗುತ್ತದೆ.

ಪಾರ್ಕಿಂಗ್ ಪ್ರಾಬ್ಲಂ

ಪಾರ್ಕಿಂಗ್ ಪ್ರಾಬ್ಲಂ

ನಾವು ಮೊದಲೇ ತಿಳಿಸಿರುವಂತೆಯೇ ಮನೆ ಹಾಗೂ ಕಚೇರಿ ಮುಂತಾದ ದಿನದಿತ್ಯ ತೆರಳುವ ಪ್ರದೇಶಗಳಲ್ಲಿ ಎಷ್ಟು ಪಾರ್ಕಿಂಗ್ ಜಾಗವಿದೆ ಎಂಬುದನ್ನು ಮನಗಂಡು ಸೆಡಾನ್ ಕಾರನ್ನು ಖರೀದಿಸಬೇಕಾಗುತ್ತದೆ. ಯಾಕೆಂದರೆ ಸೆಡಾನ್ ಕಾರು ಪಾರ್ಕಿಂಗ್‌ಗೆ ಹೆಚ್ಚು ಸ್ಥಳಾವಕಾಶದ ಅಗತ್ಯವಿರುತ್ತದೆ. ಹಾಗೆಯೇ ನಗರ ಪ್ರದೇಶದ ವಾಹನ ದಟ್ಟಣೆಯಲ್ಲಿ ವಾಹನ ಚಾಲನೆ ಸ್ವಲ್ಪ ಕಿರಿಕಿರಿ ನೀಡುತ್ತದೆ.

ಸ್ವಲ್ಪ ದುಬಾರಿ

ಸ್ವಲ್ಪ ದುಬಾರಿ

ಹಾಗೆಯೇ ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಸೆಡಾನ್ ಕಾರುಗಳು ಸ್ವಲ್ಪ ದುಬಾರಿಯೆನಿಸಿದೆ. ಉದಾಹರಣೆಗೆ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರಿಗಿಂತಲೂ ಸರಿ ಸುಮಾರು 50,000 ರು.ಗಳಿಂದ ಹಿಡಿದು 1 ಲಕ್ಷ ರು.ಗಳಷ್ಟು ಹೆಚ್ಚುವರಿ ಪಾವತಿಸಿದರೆ ಮಾರುತಿ ಸ್ವಿಫ್ಟ್ ಡಿಜೈರ್ ಸೆಡಾನ್ ಕಾರು ಖರೀದಿ ಮಾಡಬಹುದಾಗಿದೆ.

ಡ್ರೈವ್ ಸ್ಪಾರ್ಕ್ ಅಂತಿಮ ತೀರ್ಪು

ಡ್ರೈವ್ ಸ್ಪಾರ್ಕ್ ಅಂತಿಮ ತೀರ್ಪು

ಒಟ್ಟಿನಲ್ಲಿ ಬಜೆಟ್, ಪಾರ್ಕಿಂಗ್ ಸಮಸ್ಯೆ ಇಲ್ಲದಿದ್ದರೆ ಉತ್ತಮ ಹ್ಯಾಂಡ್ಲಿಂಗ್ ಹಾಗೂ ಜಾಸ್ತಿ ಬೂಟ್ ಸ್ಪೇಸ್ ಹೊಂದಿರುವ ಕಾರನ್ನು ಹುಡುಕುತ್ತಿದ್ದರೆ ನೀವು ಸೆಡಾನ್ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದೇ ಹೊತ್ತಿಗೆ ನೀವು ಮೊದಲ ಕಾರು ಖರೀದಿ ಗ್ರಾಹಕರಿದ್ದರೆ ಹಾಗೆಯೇ ಉತ್ತಮ ಸಿಟಿ ರೈಡಿಂಗ್, ಹೆಚ್ಚು ಮೈಲೇಜ್ ಕಾರನ್ನು ಹುಡುಕುತ್ತಿದ್ದು ಕಡಿಮೆ ನಿರ್ವಹಣಾ ವೆಚ್ಚದ ಕಾರನ್ನು ಬಯಸುತ್ತಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

Most Read Articles

Kannada
English summary
Making a decision to buy a new car could never be more confusing. These days a range of hatchbacks and sedans are available at the same price point which can create a lot of confusion. Here are a few points to help you make that decision.
Story first published: Thursday, August 22, 2013, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X