ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

By Nagaraja

ಸಾಕಪ್ಪಾ ಸಾಕು, 'ಕೂಲ್' ನಗರಿ ಎನಿಸಿಕೊಂಡಿದ್ದ ಬೆಂಗಳೂರಿನಲ್ಲೂ ಇದೀಗ ಸುಡು ಬಿಸಿಲು ಕಾಡುತ್ತಿದೆ. ಜಾಗತಿಕ ತಾಪಮಾನ ಪ್ರಭಾವದಿಂದಾಗಿ ಉದ್ಯಾನ ನಗರಿಯಲ್ಲೂ ಬಿಸಿಲು ನೆತ್ತಿಗೇರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಿರುತ್ತದೆ. ಹಾಗಿರುವಾಗ ಕಾರಿನ ವಿಷಯ ಇನ್ನೆಲ್ಲಿ ಬಂತು ನೋಡಿ?

ಅಷ್ಟಕ್ಕೂ ಬೇಸಿಗೆ ಕಾಲದಲ್ಲಿ ಕಾರು ಕೇರ್ ಮಾಡಬೇಕಾಗಿರುವುದು ತುಂಬಾ ಮುಖ್ಯವಾಗಿದೆ. ಇದರಂತೆ ಕಾರನ್ನು ಹೇಗೆ ತೊಳೆಯಬೇಕು ಎಂಬುದಕ್ಕೆ ಡ್ರೈವ್ ಸ್ಪಾರ್ಕ್ ಅತ್ಯಮೂಲ್ಯ ಟಿಪ್ಸ್ ನಿಮ್ಮ ಮುಂದಿಡುತ್ತಿದೆ. ಈ ಮೂಲಕ ನಿಮ್ಮ ಕಾರನ್ನು ಸದಾ ಹೊಸದಾಗಿರಿಸಿಕೊಳ್ಳಬಹುದು.

ಅಂದ ಹಾಗೆ ಮೊದಲ ನೋಟಕ್ಕೆ ಕಾರು ವಾಶ್ ತುಂಬಾ ಸುಲಭವಲ್ಲವೇ ಇದಕ್ಕೆಲ್ಲ ಟಿಪ್ಸ್ ಯಾಕೆ ಬೇಕು ಎಂಬ ಗೊಂದಲ ನಿಮ್ಮಲ್ಲಿ ಕಾಡಬಹುದು. ಆದರೆ ಕೆಲವರಿಗಂತೂ ಕಾರು ವಾಶಿಂಗ್‌ಗಿಂತ ಕೆಟ್ಟದಾದ ಕೆಲಸ ಮತ್ತೊಂದಿಲ್ಲ. ಅಂತವರಿಗೆ ಕಾರು ವಾಶಿಂಗ್ ಹೇಗೆ ಎಂಜಾಯ್ ಮಾಡಬಹುದು ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಮೊದಲನೆಯದಾಗಿ ಕಾರು ವಾಶ್ ಮಾಡಲು ಸರಿಯಾದ ಜಾಗವನ್ನು ಆರಿಸಿಕೊಳ್ಳಬೇಕು. ಧೂಳು ಇತ್ಯಾದಿ ಹರಡಿಕೊಳ್ಳುವ ಪ್ರದೇಶದಿಂದ ದೂರವುಳಿದರೆ ಒಳಿತು. ಹಾಗೆಯೇ ನೀರು ಹರಿದು ಹೋಗಲು ಉತ್ತಮ ವ್ಯವಸ್ಥೆಯಿರಬೇಕು. ಇನ್ನು ಸ್ವಲ್ಪ ಬಿಸಿಲಿನ ಕಿರಣ ಬೀಳುವ ಜಾಗದಲ್ಲಿರಿಸಿದರೆ ಕಾರು ವಾಶ್ ಬಳಿಕ ಬೇಗನೇ ಒಣಗಲು ನೆರವಾಗಲಿದೆ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಕಾರು ತೊಳೆಯುವುದಕ್ಕಾಗಿ ಅಗತ್ಯವಿರುವಷ್ಟು ಮಾತ್ರ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ನೆನಪಿರಲಿ ನೀರು ಅಮೂಲ್ಯವಾಗಿದ್ದರಿಂದ ಪೋಳು ಆಗದಂತೆ ನೋಡಿಕೊಳ್ಳಬೇಕು. ಒಂದು ಬಾಲ್ದಿ, ಮಗ್, ಕಾರ್ ವಾಶಿಂಗ್ ಕೆಮಿಕಲ್, ಶೈನಿಂಗ್ ಕ್ರೀಮ್ ಹಾಗೂ ಎರಡು ಹತ್ತಿ ಬಟ್ಟೆಗಳನ್ನು ಇಟ್ಟುಕೊಳ್ಳಬೇಕು.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಮೊದಲನೆಯದಾಗಿ ಕಾರಿನಲ್ಲಿ ಅಂಟಿಕೊಂಡಿರುವ ಧೂಳು ಇತ್ಯಾದಿ ಕಣಗಳನ್ನು ಬಟ್ಟೆಯಿಂದ ಉಜ್ಜಿಕೊಳ್ಳಬೇಕು. ಈ ಸಂದರ್ಭದಲ್ಲಿ ಕಾರಿಗೆ ಗೀಚು ಬೀಳದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದಕ್ಕಾಗಿ ನಿಧಾನವಾಗಿ ಕ್ಲೀನಿಂಗ್ ಪ್ರಕ್ರಿಯೆಯತ್ತ ಮುಂದುವರಿಯಿರಿ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಕಾರನ್ನು ತೊಳೆಯುವುದಕ್ಕಾಗಿ ಲಿಕ್ವಿಡ್ ಸೋಪ್ ಬಳಸಿರಿ. ಇನ್ನು ಗೊತ್ತಿಲ್ಲದೆಯೂ ಡಿಟರ್ಜೆಂಟ್ ಪುಡಿ ಬಳಸಬೇಡಿರಿ. ಇದರಿಂದ ಕ್ರಮೇಣ ಕಾರಿನ ರಂಗು ಕಳೆದುಕೊಳ್ಳುವುದಲ್ಲದೆ ಮೆಟಲ್‌ಗೂ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಆ ಬಳಿಕ ಕಾರಿಗೆ ನೀರು ಸಿಂಪಡಿಸಿ ಲಿಕ್ವಿಡ್ ಸೋಪ್ ಲಗತ್ತಿಸಿ ಹತ್ತಿ ಬಟ್ಟೆಯಿಂದ ನಯವಾಗಿ ಉಜ್ಜಿರಿ. ಇದಕ್ಕಾಗಿ ಗುಟ್ಟಮಟ್ಟದ ಕಾಟನ್ ಬಟ್ಟೆಯನ್ನು ಉಪಯೋಗಿಸಲು ಮರೆಯಬೇಡಿರಿ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಇದಾದ ಬಳಿಕ ಕಾರಿನ ಮೇಲ್ಭಾಗಕ್ಕೆ ಮೊದಲು ನೀರು ಸಿಂಪಡಿಸಿರಿ. ಇದರಿಂದ ಕೆಳಗೆ ಅಂಟಿಕೊಂಡಿರುವ ಧೂಳಿನ ಕಣಗಳು ಬೇಗನೇ ನಿವಾರಿಸಲು ಸಾಧ್ಯವಾಗಲಿದೆ. ಇದರಿಂದ ಬಳಕೆ ಮಾಡುವ ನೀರಿನ ಪ್ರಮಾಣವನ್ನು ಸೇವ್ ಮಾಡಬಹುದು.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಕಾರಿನ ಮುಂಭಾಗದ ಮಿರರ್ ಹಾಗೂ ಬದಿಗಳಲ್ಲಿರುವ ವಿಂಡೋ ವಾಶ್ ಮಾಡುವಾಗ ತುಂಬಾನೇ ಎಚ್ಚರಿಕೆ ವಹಿಸಬೇಕು. ಬೊನೆಟ್ ಹಾಗೂ ಫ್ರಂಟ್ ಗ್ರಿಲ್‌ ಕ್ಲೀನ್ ಮಾಡುವಾಗ ಕೈಗಳಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಬೇಕು.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಇದಾದ ಬಳಿಕ ಕಾರಿನ ಹಿಂಭಾಗದಲ್ಲೂ ಇದೇ ರೀತಿ ವಾಶ್ ಮಾಡಿರಿ. ಬೂಟ್ ಹಾಗೂ ಸ್ಟೇಫನಿ ಟಯರ್‌ಗಳು ಇದ್ದಲ್ಲಿ ಅದರಲ್ಲಿ ಅಂಟಿಕೊಂಡಿರುವ ಧೂಳಿನ ಕಣವನ್ನು ನಿವಾರಿಸಿ...

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಕಾರಿನ ಕ್ಲೀನಿಂಗ್ ಪ್ರಕ್ರಿಯೆ ಆರಂಭಿಸುವಾಗ ಕಾರಿನ ವಿಂಡೋಗಳನ್ನು ಬಂದ್ ಮಾಡಿರಬೇಕು. ಹಾಗೆಯೇ ವಿಂಡೋಗಳಲ್ಲಿ ಅಂಟಿಕೊಂಡಿರುವ ಧೂಳುಗಳನ್ನು ನಿವಾರಿಸಲು ಪ್ರತ್ಯೇಕವಾಗಿ ಗಮನಿಸಿ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಇನ್ನು ಕಾರಿನ ಒಳಭಾಗದಲ್ಲಿ ಸ್ವಲ್ಪ ಒದ್ದೆಯಾದ ಹತ್ತಿ ಬಟ್ಟೆಯೊಂದಿಗೆ ನಯವಾಗಿ ಕ್ಲೀನ್ ಮಾಡಿರಿ. ಇಲ್ಲಿ ಹೆಚ್ಚು ನೀರಿನ ಬಳಕೆ ಬೇಡ. ಹಾಗೆಯೇ ಮ್ಯಾಟ್ ಇತ್ಯಾದಿ ವಸ್ತುಗಳಿದ್ದರೆ ಅದನ್ನು ಹೊರ ಹಾಕಿ ಸಂಪೂರ್ಣ ವಾಶ್ ಮಾಡತಕ್ಕದ್ದು.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಅಂತಿಮದಲ್ಲಿ ಕಾರಿನ ಟಯರ್‌ಗಳಿಗೆ ಮತ್ತೊಮ್ಮೆ ನೀರು ಹಾಕಿ ತೊಳೆಯಿರಿ. ಯಾಕೆಂದರೆ ಕಾರಿನ ವೀಲ್‌ಗಳಲ್ಲಿ ಹೆಚ್ಚು ಧೂಳಿನ ಕಣಗಳು ಅಂಟಿಕೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ.

ಬೇಸಿಗೆಯಲ್ಲಿ ಕಾರು ವಾಶಿಂಗ್: ನಮ್ಮ ಟಿಪ್ಸ್, ನಿಮ್ಮ ಕೇರ್!

ಕಾರು ವಾಶ್ ಬಳಿಕ ಒಣಗಿದ ಹತ್ತಿ ಬಟ್ಟೆಯಿಂದ ಕಾರನ್ನು ಉಜ್ಜಿರಿ. ಆ ಬಳಿಕ ಕನಿಷ್ಠ ಐದು ನಿಮಿಷಗಳ ವರೆಗೆ ಸೂರ್ಯ ಪ್ರಕಾಶದ ಮುಂದಿಡಿ. ಇನ್ನು ಅಗತ್ಯವಿದ್ದಲ್ಲಿ ಮಾರುಕಟ್ಟೆಯಲ್ಲಿ ಲಭಿಸುವ ಕಾರು ಶೈನಿಂಗ್ ಕ್ರೀಮ್ ಕೂಡಾ ಬಳಸಿಕೊಳ್ಳಬಹುದು. ಇದರಿಂದ ಕಾರಿಗೆ ಹೆಚ್ಚಿನ ಆಕರ್ಷಣೆ ಸಿಗಲಿದೆ. ಆದರೆ ಯಾವುದೇ ಕಾರಣಕ್ಕೂ ವಾಶ್ ಆದ ತಕ್ಷಣಕ್ಕೆ ಡ್ರೈವಿಂಗ್ ಮಾಡದಿರಿ. ಇದರಿಂದ ನಿಮ್ಮ ಸಂಪೂರ್ಣ ಪರಿಶ್ರಮ ಕ್ಷಣಮಾತ್ರಕ್ಕೆ ವ್ಯರ್ಥವಾಗುವ ಸಾಧ್ಯತೆಯಿದೆ.

Most Read Articles

Kannada
English summary
If you get bored to your dirty car and you want wash your car, there are actually some things that you need to know before you wash your car. Check out car washing tips by hot girls.
Story first published: Saturday, April 20, 2013, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X