ವಾಹನ ಚಾಲನೆ ವೇಳೆ ಅಪ್ಪಿತಪ್ಪಿಯೂ ಈ ತಪ್ಪಗಳನ್ನು ಮಾಡಲೇಬೇಡಿ..!!

Written By:

ಕೆಲವು ಬಾರಿ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ದೊಡ್ಡ ಪ್ರಮಾದಕ್ಕೆ ಕಾರಣವಾಗುತ್ತೆ. ಹೀಗಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಅಗಬಹುದಾದ ದೊಡ್ಡ ಅನಾಹುತವನ್ನು ತಡೆಯಬಹುದು.

01. ಒತ್ತಡದಲ್ಲಿ ವಾಹನ ಚಾಲನೆ ಬೇಡ

ನೀವು ಒತ್ತಡದಲ್ಲಿರುವ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ. ಇಂತಹ ಸಮಯದಲ್ಲಿ ವಾಹನ ಚಾಲನೆ ಮತ್ತೊಂದು ಅನಾಹುತಕ್ಕೆ ಕಾರಣವಾಗಬಹುದು.

02. ಎಂಜಿನ್ ಪರೀಕ್ಷಿಸಿ ಮಾಡಿ

ವಾಹನ ಚಾಲನೆ ಮುನ್ನ ನಿಮ್ಮ ವಾಹನದ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸಿಕೊಳ್ಳಿ. ಇಲ್ಲವಾದಲ್ಲಿ ಬೇರೊಂದು ವಾಹನದಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು.

03. ಚಾಲನೆ ಮೇಲೆ ಹಿಡಿತವಿರಲಿ

ವಾಹನ ಚಾಲನೆ ವೇಳೆ ನಿಮ್ಮ ಗಮನ ಸಂಪೂರ್ಣವಾಗಿ ರಸ್ತೆ ಮೇಲೆಯೇ ಇರಲಿ. ಯಾಕೇಂದ್ರೆ ಕೆಲವು ಬಾರಿ ನಿಮ್ಮ ವಾಹನಕ್ಕೆ ಯಾರಾದರೂ ಅಡ್ಡಬಂದರು ವಾಹನದ ಮೇಲೆ ನಿಯಂತ್ರ ಸಾಧಿಸಬಹುದು.

04. ಹಿನ್ನೋಟದ ಕನ್ನಡಿ ನೋಡಿ

ವಾಹನ ಚಲಿಸುವಾಗ ನೀವು ಸದಾ ರಿರ್ ಮಿರರ್(ಹಿನ್ನೋಟದ ಕನ್ನಡಿ)ಯನ್ನು ನೋಡುತ್ತಲೇ ಇರಿ. ಇದರಿಂದ ನಿಮ್ಮ ಹಿಂದೆ ಯಾವ ವಾಹನ ಬರುತ್ತಿದೆ ಎಂಬುವುದು ಅರಿತು ವಾಹನ ಮುನ್ನಡೆಸಬಹುದು.

05. ಮೊಬೈಲ್ ಬಳಕೆ ಬೇಡ

ಯಾವುದೇ ಕಾರಣಕ್ಕೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಬೇಡಿ. ಒಂದು ವೇಳೆ ಅಗತ್ಯವಿದ್ದರೆ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿ ಮೊಬೈಲ್ ಬಳಕೆ ಮಾಡುವುದು ಸುರಕ್ಷಾ ದೃಷ್ಠಿಯಿಂದ ಒಳ್ಳೆಯದು.

06. ಕುಡಿದು ಚಾಲನೆ ಬೇಡ

ನೀವು ಈ ತಪ್ಪನ್ನು ಎಂದಿಗೂ ಮಾಡಲೇಬೇಡಿ. ಇದರಿಂದ ನೀವು ಅಷ್ಟೇ ಅಲ್ಲ ಬೇರೆಯವರು ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆ ಇರುತ್ತದೆ.

07. ಚಾಲನೆಯಲ್ಲಿ ಸ್ಪರ್ಧೆ ಬೇಡ

ಬೇರೆಯವರನ್ನು ಮೆಚ್ಚಿಸಲು ನೀವು ಯಾವುದೇ ಕಾರಣಕ್ಕೂ ಚಾಲನೆಯಲ್ಲಿ ಸ್ಪರ್ಧೆಗಿಳಿಯಬೇಡಿ. ಈ ವೇಳೆ ಅನಾಹುತಗಳೇ ಹೆಚ್ಚು.

08. ಓವರ್ ಟೆಕ್ ಬೇಡ

ವಾಹನ ಚಾಲನೆ ವೇಳೆ ಹಲವಾರು ವಾಹನಗಳು ನಿಮ್ಮನ್ನು ಹಿಂಬಾಲಿಸಿ ಬರುವುದು ಕಾಮನ್. ಆಗ ಯಾವುದೇ ಕಾರಣಕ್ಕೂ ನೀವು ಅವರನ್ನು ಹಿಂಬಾಲಿಸಿಬೇಡಿ.

09. ಸಿಂಗಲ್ ಹ್ಯಾಂಡ್ ಡ್ರೈವ್ ತಪ್ಪು

ಸಿಂಗಲ್ ಹ್ಯಾಂಡ್ ಡ್ರೈವ್ ಕೆಲವು ಬಾರಿ ಅನಾಹುತಕ್ಕೆ ಕಾರಣವಾಗುತ್ತವೆ. ಹೀಗಾಗಿ ಎರಡು ಕೈಗಳಿಂದಲೂ ವಾಹನ ಚಾಲನೆ ಮಾಡಿ.

10. ಫಾಸ್ಟ್ ಲೈನ್‌ಗಳ ಬಗ್ಗೆ ತಿಳಿದಿರಲಿ

ನೀವು ಹೆದ್ದಾರಿಗಳಲ್ಲಿ ಚಾಲನೆ ಮಾಡುವ ಸಂದರ್ಭದಲ್ಲಿ ಪ್ರತಿ ವಾಹನಗಳು ಸಾಮಾನ್ಯವಾಗಿ ಫಾಸ್ಟ್ ಲೈನ್‌ನಲ್ಲಿ ನುಗ್ಗಲು ಯತ್ನಿಸುತ್ತವೆ. ನೀವು ಯಾವುದೇ ಕಾರಣಕ್ಕೂ ಆ ತಪ್ಪು ಮಾಡಬೇಡಿ.

11. ವೇಗ ನಿಯಂತ್ರಣದಲ್ಲಿರಲಿ

ರಸ್ತೆ ಪಕ್ಕಕ್ಕೆ ಹಾಕಲಾಗಿರುವ ವೇಗ ನಿಯಂತ್ರಣ ಫಲಕಗಳ ಬಗ್ಗೆ ಎಚ್ಚರವಿರಲಿ. ಒಂದು ವೇಳೆ ಅಂತಹ ವಲಯದಲ್ಲಿ ವೇಗದ ಪ್ರಯಾಣ ಅಪಘಾತಗಳಿಗೆ ಕಾರಣವಾಗಬಹುದು.

12. ರಾತ್ರಿ ಅವಧಿಯ ಚಾಲನೆ ಕಡಿಮೆ ಮಾಡಿ

ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ ವೇಳೆಯ ವಾಹನ ಚಾಲನೆಯನ್ನು ಕಡಿಮೆ ಮಾಡಿ. ಇದರಿಂದ ಅಪಘಾತಗಳನ್ನು ತಗ್ಗಿಸಬಹುದಾಗಿದೆ.

13. ರಸ್ತೆ ತಿರುವುಗಳ ಬಗ್ಗೆ ಎಚ್ಚರ

ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ತಿರುವುಗಳು ಹೆಚ್ಚು. ಇಂತಹ ವೇಳೆ ಸೂಚನಾ ಫಲಕಗಳನ್ನು ಗಮನಿಸುತ್ತಾ ಪ್ರಯಾಣ ಮಾಡಿ.

14. ಹವಾಮಾನ ಪರಿಸ್ಥಿತಿ ಅರಿತುಕೊಳ್ಳಿ

ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ವಾಹನ ಚಾಲನೆ ಬೇಡವೇ ಬೇಡ. ಇಂತಹ ಸಂದರ್ಭದಲ್ಲಿ ನಿಮ್ಮ ವಾಹನ ಕೆಟ್ಟು ನಿಂತಲ್ಲಿ ರೀಪೇರಿಗಾಗಿ ಪರದಾಡುವ ಪರಿಸ್ಥಿತಿ ಬರಬಹುದು.

15. ವಿರಾಮ ತೆಗೆದುಕೊಳ್ಳಿ

ಒಂದು ವೇಳೆ ದೂರದ ಪ್ರಯಾಣ ಅವಶ್ಯಕತೆ ಇದ್ದಲ್ಲಿ ಪ್ರತಿ 2 ಗಂಟೆಗೊಮ್ಮೆ ವಿರಾಮ ಪಡೆಯುವುದು ಅಗತ್ಯ. ಇದರಿಂದ ನಿಮ್ಮ ಪ್ರಯಾಣ ಸುಖಕರವಾಗಿರುತ್ತೆ ಜೊತೆಗೆ ಅಹಿತಕರ ಘಟನೆಗಳನ್ನು ತಗ್ಗಿಸಬಹುದಾಗಿದೆ.

ದೂರದ ಪ್ರಯಾಣಕ್ಕೂ ಮುನ್ನ ಇವುಗಳ ಬಗ್ಗೆ ತಿಳಿದುಕೊಳ್ಳಿ

16. ಪ್ರಯಾಣದ ಆರಂಭಕ್ಕೂ ಮುನ್ನ

ದೂರ ಪ್ರಯಾಣ ಆರಂಭಕ್ಕೂ ಮುನ್ನ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಡಿ. ಇನ್ನು ಮೊಬೈಲ್ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಲು ಮರೆಯದಿರಿ. ಡ್ರೈವಿಂಗ್ ಲೈಸನ್ಸ್ ನಿಂದ ಹಿಡಿದು ಕಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿ ಪ್ರತಿಗಳನ್ನು ಕೈಯಲ್ಲಿಟ್ಟುಕೊಳ್ಳಲು ಮರೆಯದಿರಿ.

17. ರಸ್ತೆ ಉಬ್ಬುಗಳು

ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ವೇಗವಾಗಿ ಚಲಿಸುವಾಗ ರಸ್ತೆ ಉಬ್ಬುಗಳು ಕಣ್ಣಿಗೆ ಕಾಣಸಿಗದು. ಇನ್ನು ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳ ಚಿಹ್ನೆಯೇ ಇರಲಾರದು. ಹಾಗಾಗಿ ಆಕಸ್ಮತ್ ಎದುರಾಗುವ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರದಿಂದಿರಬೇಕು.

18. ಪಂಚರ್ ಆದ್ದಲ್ಲಿ

ಕಾರು ಬ್ರೇಕ್ ಡೌನ್ ಅಥವಾ ಪಂಚರ್ ಆದ್ದಲ್ಲಿ ರಸ್ತೆಯಿಂದ ಬದಿಗೆ ಸರಿಸಿ ಪಾರ್ಕಿಂಗ್ ಮಾಡಿಟ್ಟುಕೊಂಡು ಹಜಾರ್ಡ್ ಲೈಟ್ ಉರಿಸಲು ಮರೆಯದಿರಿ. ಕೆಂಪು ಪ್ರತಿಫಲಕ ಸೂಚನಾ ಫಲಕಗಳು ಇಲ್ಲಿ ನೆರವಿಗೆ ಬರಲಿದೆ.

19. ಅಪಕ್ವ ಚಾಲನೆ

ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಅಪಕ್ವ ರೀತಿಯ ಚಾಲನೆಯಿಂದಲೇ ನಡೆಯುತ್ತಿರುತ್ತದೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಿಮ್ಮ ತಪ್ಪನ್ನು ಮೊದಲು ಸರಿಪಡಿಸಿಕೊಂಡು ಸುರಕ್ಷಿತ ಚಾಲನೆಗೆ ಆಸ್ಪದ ಕೊಡರಿ. 

ಈ ಮೇಲಿನ ಸಲಹೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಲ್ಲಿ ನೀವು ಅಷ್ಟೇ ಅಲ್ಲ ನಿಮ್ಮ ಪ್ರೀತಿ ಪಾತ್ರರಿಗೂ ಒಳ್ಳೆಯದು. ಅಷ್ಟೇ ಅಲ್ಲದೇ ಅಪಘಾತಗಳಲ್ಲಿ ಸಾವನ್ನಪ್ಪವರ ಸಂಖ್ಯೆಯನ್ನು ತಗ್ಗಿಸಬಹುದಾಗಿದೆ. ಹ್ಯಾಪಿ ಡ್ರೈವಿಂಗ್!

Click to compare, buy, and renew Car Insurance online

Buy InsuranceBuy Now

Story first published: Wednesday, May 10, 2017, 13:46 [IST]
English summary
Some of travel tip avoid to road accidents.
Please Wait while comments are loading...

Latest Photos