ಗೇರ್ ಬದಲಾವಣೆಯ ಒಳಗುಟ್ಟು ಗೊತ್ತೇನು?

By Nagaraja

ಕಾರುಗಳಿಗೂ ಒಂದು ಭಾಷೆಯಿರುತ್ತದೆ. ನಾವು ಮಕ್ಕಳಿಗೆ ಪಾಠ ಹೇಳಿ ಕೊಡುವ ರೀತಿಯಲ್ಲಿ ಕಾರುಗಳಿಗೂ ನಿಧಾನವಾಗಿ ಪಠಿಸಿದರೆ ಅದು ಕೂಡಾ ನಮ್ಮನ್ನು ಸಲೀಸಾಗಿ ಅನುಸರಿಸಲಿದೆ. ಇದರ ಹೊರತಾಗಿ ಅವಸರದಲ್ಲಿ ಸುಮ್ ಸುಮ್ನೇ ದುಡುಕಿನಿಂದ ಗೇರ್ ಬದಲಾಯಣೆ ಪ್ರಕ್ರಿಯೆಗೆ ಮುಂದಾದರೆ ಇದರ ಭವಿಷ್ಯತ್ ಪರಿಣಾಮ ಕೂಡಾ ಎದುರಿಸಬೇಕಾಗುತ್ತದೆ.

ಕಾರಿನ ಮೈಲೇಜ್ ಹೆಚ್ಚಿಸಲು 15 ಟಿಪ್ಸ್

ಈ ಮೊದಲೇ ನಾವು ತಿಳಿಸಿರುವಂತೆಯೇ ಡ್ರೈವಿಂಗ್ ಎಂಬುದು ಒಂದು ಕಲೆಯಾಗಿದೆ. ಚಾಲನೆ ಕರಗತ ಮಾಡಿಕೊಂಡಿರುವ ಪ್ರತಿಯೊಬ್ಬರೂ ಇಂತಹ ಕೌಶಲ್ಯವನ್ನು ಯಥಾವತ್ತಾಗಿ ಅನುಸರಿಸಬೇಕು. ಈ ಲೇಖನದ ಮೂಲಕ ಮ್ಯಾನುವಲ್ ಗೇರ್ ಬಾಕ್ಸ್ ಯಾವಾಗ ಹಾಗೂ ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಹೇಳಿಕೊಡಲಿದ್ದೇವೆ. ಇದು ನಿಮ್ಮ ಚಾಲನಾ ಕೌಲಶ್ಯವನ್ನು ಹೆಚ್ಚಿಸಲು ನೆರವಾಗಲಿದೆಯೆಂಬ ನಂಬಿಕೆ ನಮ್ಮದ್ದು. ಇನ್ಯಾಕೆ ತಡ ನೇರವಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಗೇರ್ ಬದಲಾವಣೆ ಹೇಗೆ ಮತ್ತು ಯಾವಾಗ?

ಚಾಲನೆ ಆರಂಭಕ್ಕೂ ಮುನ್ನ ನೀವು ಹೋಗಿ ಸೇರಬೇಕಾದ ಸ್ಥಳದ ಬಗ್ಗೆ ಸ್ಪಷ್ಟ ಚಿತ್ರಣ ಹೊಂದಿರಬೇಕು. ಇದು ನಿಮ್ಮ ಗುರಿ ಮುಟ್ಟುವಲ್ಲಿ ಹಾಗೆಯೇ ಸುಲಭ ಚಾಲನೆಗೆ ನೆರವಾಗಲಿದೆ. ಈ ಎಲ್ಲ ಸರಳ ಉಪಾಯಗಳನ್ನು ಪಾಲಿಸಿದ್ದಲ್ಲಿ ನಿಮಗೆ ಆರಾಮದಾಯಕ ಪಯಣದ ಜತೆ ಗರಿಷ್ಠ ಇಂಧನ ಕ್ಷಮತೆಯು ಲಭಿಸಲಿದೆ.

ವೇಗವರ್ಧನೆಗೆ ಲೋವರ್ ಗೇರ್; ವೇಗ, ಇಂಧನ ದಕ್ಷತೆಗೆ ಹೈಯರ್ ಗೇರ್

ವೇಗವರ್ಧನೆಗೆ ಲೋವರ್ ಗೇರ್; ವೇಗ, ಇಂಧನ ದಕ್ಷತೆಗೆ ಹೈಯರ್ ಗೇರ್

ಸಾಮಾನ್ಯವಾಗಿ ಕಾರುಗಳಲ್ಲಿ ಫಸ್ಟ್, ಸೆಕೆಂಡ್ ಹಾಗೂ ಥರ್ಡ್‌ಗಳೆಂಬ ಕಡಿಮೆ ಗೇರ್ ನಿಷ್ಫತ್ತಿಗಳನ್ನು ನಿಂತ ಕಾರುಗಳನ್ನು ಮುಂದಕ್ಕೆ ಚಲಿಸಲು ಹಾಗೆಯೇ ವೇಗವರ್ಧನೆಗಾಗಿ ಬಳಕೆ ಮಾಡಲಾಗುತ್ತದೆ. ಅದೇ ಹೊತ್ತಿಗೆ ನಾಲ್ಕನೇ ಹಾಗೂ ಐದನೇ ಗೇರ್‌ಗಳು ಗರಿಷ್ಠ ವೇಗದಲ್ಲಿ ಚಲಿಸಲು ನೆರವಾಗುತ್ತದೆ. ಹಾಗಾಗಿ ಚತುರತೆಯಿಂದ ಗೇರ್‌ಗಳನ್ನು ಬಳಕೆ ಮಾಡಿದ್ದಲ್ಲಿ ಇಂಧನ ಉಳಿತಾಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಆದಷ್ಟು ಬೇಗ ಗೇರ್‌ಗಳನ್ನು ಅಪ್‌ಶಿಫ್ಟ್ (ಹೆಚ್ಚಿಸು) ಮಾಡುವುದರಿಂದ ಇಂಧನ ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡಬಹುದು.

ಮೊದಲು ಗೇರ್ ಬಗ್ಗೆ ತಿಳಿದುಕೊಳ್ಳಿರಿ

ಮೊದಲು ಗೇರ್ ಬಗ್ಗೆ ತಿಳಿದುಕೊಳ್ಳಿರಿ

ಫಸ್ಟ್: ಪ್ರಮುಖವಾಗಿಯೂ ನಿಂತಿರುವ ಕಾರನ್ನು ಮುಂದಕ್ಕೆ ಚಲಿಸಲು, ವೇಗ ಕಡಿತಗೊಳಿಸಲು ಹಾಗೂ ನಿಧಾನವಾದ ಟ್ರಾಫಿಕ್ ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ.

ಸೆಕೆಂಡ್: ಇನ್ನು ಹೆಚ್ಚಿನ ಇಂಧನ ಕ್ಷಮತೆಗಾಗಿ, ಸಾಮಾನ್ಯಗಿಂತ ಸ್ವಲ್ಪ ವೇಗವಾದ ಟ್ರಾಫಿಕ್‌ ಪ್ರದೇಶಗಳಲ್ಲಿ ಹಾಗೂ ಕಡಿದಾದ ಎಡ ಹಾಗೂ ಬಲ ತಿರುವುಗಳಲ್ಲಿ ಇದರ ಪ್ರಯೋಜನ ಪಡೆಯಬಹುದಾಗಿದೆ.

ಥರ್ಡ್: ಟ್ರಾಫಿಕ್ ಸಮಸ್ಯೆ ಎದುರಾಗದಿದ್ದಲ್ಲಿ ಓವರ್‌ಟೇಕಿಂಗ್ ವೇಳೆ ಹಾಗೆಯೇ ಗಂಟೆಗೆ 30-35 ಕೀ.ಮೀ. ವೇಗತೆಯಲ್ಲಿ ಇದರ ಬಳಕೆ ಪರಿಪೂರ್ಣವೆನಿಸುತ್ತದೆ.

ಫೋರ್ತ್: ಮಗದೊಮ್ಮೆ ವೇಗವಾದ ಚಲನೆಯ ಟ್ರಾಫಿಕ್‌ಗಳಲ್ಲಿ ನಾಲ್ಕನೇ ಹೆಚ್ಚಿನ ಇಂಧನ ಕ್ಷಮತೆ ನೀಡುತ್ತದೆ. ಗಂಟೆಗೆ 40-50 ಕೀ.ಮೀ. ವೇಗದಲ್ಲಿ ಇದರ ಬಳಕೆ ಅತ್ಯುತ್ತಮ.

ಫಿಫ್ತ್: ತೆರೆದಿರುವ ರಸ್ತೆ ಅಥವಾ ವಿಶಾಲವಾದ ಹೈವೇ ರಸ್ತೆಯಲ್ಲಿ ಬಳಕೆ ಮಾಡುವುದರಿಂದ ಇನ್ನು ಹೆಚ್ಚಿನ ಇಂಧನ ದಕ್ಷತೆ ಸಿಗಲಿದೆ. ಗಂಟೆಗೆ 65 ಕೀ.ಮೀ. ವೇಗದಲ್ಲಿ ಇದರ ಬಳಕೆ ಸರಿಹೊಂದಲಿದೆ.

ಗೇರ್ ಬದಲಾವಣೆ ಹೇಗೆ?

ಗೇರ್ ಬದಲಾವಣೆ ಹೇಗೆ?

ತಿರುವು, ಏರುವಿಕೆ ಅಥವಾ ಇಳಿಜಾರು ಸಮೀಪಿಸಿದ ಬಳಕೆ ಗೇರ್ ಬದಲಾವಣೆ ಮಾಡುವುದು ತಪ್ಪಾದ ಪ್ರಕ್ರಿಯೆ. ಹಾಗಾಗಿ ತಿರುವು, ಏರುವಿಕೆ ಅಥವಾ ಇಳಿಜಾರು ಆಗಮನಕ್ಕೂ ಸ್ವಲ್ಪ ಮುನ್ನವೇ ಗೇರ್ ಡೌನ್‌ಶಿಫ್ಟ್ (ಕಡಿಮೆ) ಮಾಡತಕ್ಕದ್ದು. ಹೀಗೆ ಮಾಡುವದರಿಂದ ಚಲಿಸುವ ಚಕ್ರಗಳಿಗೆ ಹೆಚ್ಚು ಟಾರ್ಕ್ ವಿತರಣೆಯಾಗಲಿದ್ದು, ವಾಹನಗಳಿಗೆ ಹೆಚ್ಚು ನಿಯಂತ್ರಣ ಪ್ರದಾನ ಮಾಡಲಿದೆ. ಇದು ತಿರುವಿನ ಬಳಿಕ ವೇಗವರ್ಧಿಸುವ ಸಾಮರ್ಥ್ಯವನ್ನು ಸಹ ಹೆಚ್ಚಿಸಲಿದೆ.

ಸರಾಗವಾಗಿ ಗೇರ್ ಬದಲಾಯಿಸಿ

ಇಲ್ಲಿ ಕೊಟ್ಟಿರುವ ವೀಡಿಯೋದಂತೆ ನಯವಾಗಿ ಗೇರ್ ಬದಲಾಯಿಸುವ ಕೌಶಲ್ಯವನ್ನು ರೂಢಿಸಿಕೊಳ್ಳಿರಿ. ಇದು ಹೆಚ್ಚು ಇಂಧನ ಕ್ಷಮತೆ ನೀಡುವುದರಲ್ಲಿ ಹಾಗೆಯೇ ನಿಮ್ಮ ವಾಹನಗಳ ದೀರ್ಘ ಬಾಳ್ವಿಕೆಯಲ್ಲಿ ದೊಡ್ಡ ಪಾತ್ರ ವಹಿಸಲಿದೆ. ಒರಟಾಗಿ ಗೇರ್ ಬದಲಾಯಿಸುವುದರಿಂತ ದೀರ್ಘಾವಧಿಯಲ್ಲಿ ನಿಮ್ಮ ಕಾರಿನ ಗೇರ್ ಬಾಕ್ಸ್‌ಗೆ ಪೆಟ್ಟಾಗುವ ಸಂಭವವಿದೆ.

ಎಂಜಿನ್ ಶಬ್ದ ಆಲಿಸಿ

ಎಂಜಿನ್ ಶಬ್ದ ಆಲಿಸಿ

'ನನ್ನ ನಿನ್ನ ಅನುಬಂಧ' ಎಂಬಂತೆ ಎಂಜಿನ್ ಜತೆ ಸದಾ ಒಡನಾಟವಿರಬೇಕು. ಅದರಲ್ಲಿ ಉಂಟಾಗುವ ಬದಲಾವಣೆಗಳನ್ನು ಪ್ರತಿ ಕ್ಷಣ ಆಲಿಸುತ್ತಿರಬೇಕು. ಇದು ಕಷ್ಟವೆಂದಾದರೆ ಟ್ಯಾಕೋಮೀಟರ್‌ನಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ಇದು ರೆಡ್ ಲೈನ್‌ಗಿಂತಲೂ ಕಳಗಡೆ ಆಗಮಿಸದಂತೆ ನೋಡಿಕೊಳ್ಳಿರಿ. ಇದರಿಂದ ಎಂಜಿನ್ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವಿದೆ. ಹಾಗೊಂದು ವೇಳೆ ನಿಮ್ಮ ಕಾರಿನಲ್ಲಿ ಟ್ಯಾಕೋ ಮೀಟರ್ ಇಲ್ಲದಿದ್ದಲ್ಲಿ ಎಂಜಿನ್ ಶಬ್ದವನ್ನು ಸೂಕ್ಷ್ಮವಾಗಿ ಆಲಿಸಿ. ಅನುಭವಸ್ಥ ಚಾಲಕರು ಎಂಜಿನ್ ಶಬ್ದದಿಂದಲೇ ಕಾರಿನ ಚಲನವಲನಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ವೇಗವರ್ಧಿಸುವಾಗ ಎಂಜಿನ್‌ನಲ್ಲಿ ಒರಾಟಾದ ಶಬ್ದವುಂಟಾದ್ದಲ್ಲಿ ನಿಮ್ಮ ಪ್ರಯತ್ನ ಅದಕ್ಕೆ ಇಷ್ಟವಾಗಿಲ್ಲ ಎಂದು ಅರಿತುಕೊಳ್ಳಬೇಕು. ಹಾಗೆಯೇ ಎಂಜಿನ್ ನಿಧಾನವಾಗಿ ವೈಬ್ರೇಟ್ ಆಗಿ ಶೇಕ್ ಆಗುತ್ತಿದ್ದಲ್ಲಿ ಗೇರ್ ಬಳಕೆ ಹೆಚ್ಚಾಗಿದೆ ಎಂಬುದನ್ನು ಅರಿತುಕೊಂಡು ತಕ್ಷಣ ಗೇರ್‌ಶಿಫ್ಟ್ ಕಡಿಮೆ ಮಾಡಲು ಪ್ರಯತ್ನಿಸಿ.

ಗೇರ್ ಬದಲಾವಣೆ ಹೇಗೆ ಮತ್ತು ಯಾವಾಗ?

ನಮ್ಮ ಈ ಸಲಹೆಗಳು ನಿಮಗೆ ಇಷ್ಟವಾದ್ದಲ್ಲಿ ನಿಮ್ಮ ಪ್ರತಿಕ್ರಿಯೆ ನೀಡಲು ಮರೆಯದಿರಿ. ಯಾವತ್ತೂ ಸುರಕ್ಷಿತ ಚಾಲನೆಗೆ ಒತ್ತು ನೀಡಿರಿ. ಹ್ಯಾಪಿ ಗೇರ್ ಶಿಫ್ಟಿಂಗ್!

Most Read Articles

Kannada
English summary
This article will focus on the right methods of changing gears in a manual transmission car, so you can improve your driving style.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X