ಉಫ್..! ಸುಡುವ ಬೇಸಗೆ, ಕಾಡುವ ಚಿಂತೆ; ಕಾರಿನ ಚಿಕಿತ್ಸೆ ಹೇಗೆ?

By Nagaraja

ಉಫ್...ಎಂತಾ ಸೆಕೆ ಮಾರಾಯ್ರೆ? ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ಭಾರತದಂತಹ ಉಷ್ಣವಲಯವನ್ನು ವಿಪರೀತವಾಗಿ ತಟ್ಟಿದೆ. ನಮ್ಮ ನಿಮ್ಮಂತಹ ಮನುಷ್ಯರ ಪಾಡು ಹೀಗಿರುವಾಗ ವಾಹನ ವಿಷಯ ಹೇಳಬೇಕೇ?

Also Read: ದಿ ಗ್ರೇಟ್ ಹಿಮಾಲಯನ್ ರೈಡ್; 21 ಅಮೂಲ್ಯ ಟಿಪ್ಸ್

ಆಗಲೇ ನೂರಾರು ತಲೆಬಿಸಿಯಿಂದ ಬೆಂದು ಹೋಗಿರುವ ನಾವುಗಳಿಗೆ ಕಾರಿನ ಪ್ರಾಂಬ್ಲಂ ಬೇರೆ ಕಾಡುತ್ತದೆ. ಹಾಗಾಗಿ ಸೂಕ್ತ ಸಮಯಕ್ಕೆ ಕಾರಿನ ಆರೈಕೆ ಕೈಗೊಂಡಲ್ಲಿ ಯಾವುದೇ ತೊಂದರೆ ಎದುರಾಗದು. ಈ ನಿಟ್ಟಿನಲ್ಲಿ ಡ್ರೈವ್ ಸ್ಪಾರ್ಕ್ ಎಕ್ಸ್ ಕ್ಲೂಸಿವ್ ಲೇಖನವನ್ನು ಓದುಗರ ಮುಂದಿಡುತ್ತಿದ್ದೇವೆ.

01. ಬಣ್ಣ

01. ಬಣ್ಣ

ಬಿಸಿಲಿನಲ್ಲಿ ಕಾರಿನ ಮಣ್ಣಗಳು ಹೊಳಪಿನಿಂದ ಗೋಚರಿಸಿದರೂ ನೇರವಾಗಿ ಬೀರುವ ಶಾಖ ಕಿರಣಗಳಿಂದಾಗಿ ನಿಧಾನವಾಗಿ ಮಂಕಾಗಲಿದೆ. ಬಿಸಿಲಿನ ತಾಪದಡಿಯಲ್ಲಿರಿಸಿದ ಕಾರಿನ ಬಣ್ಣವು ಬೇಗನೇ ಕಳೆದುಕೊಳ್ಳಲಿದೆ. ಹಾಗಾಗಿ ಸಾಧ್ಯವಾದಷ್ಟು ಮರದ ನೆರಳಿನಲ್ಲಿ ವಾಹನ ನಿಲುಗಡೆ ಮಾಡಲು ಪ್ರಯತ್ನಿಸಿ. ಎಚ್ಚರ: ಕ್ಷಯ ಬಂದ ಮರದ ರೆಂಬೆಗಳ ಕೆಳಗಡೆ ವಾಹನ ಪಾರ್ಕಿಂಗ್ ಮಾಡದಿರಿ.

02. ಒಳಮೈ, ಹೋದಿಕೆ

02. ಒಳಮೈ, ಹೋದಿಕೆ

ಸರಕಾರದ ನಿಯಮದಂತೆ ಕಾರಿನ ವಿಂಡ್ ಶಿಲ್ಡ್ ಗೆ ಕಪ್ಪು ಪಟ್ಟಿ ಧರಿಸುವುದು ನಿಷೇಧಿಸಲ್ಪಟ್ಟಿರುವುದರಿಂದ ಬಿಸಿಲಿನ ತಾಪವು ನೆರವಾಗಿ ಕಾರಿನೊಳಗೂ ಬಡಿಯಲಿದೆ. ಇದು ಕೂಡಾ ಕಾರಿನ ಒಳಭಾಗವು ಮಂಕಾಗುವಂತೆ ಮಾಡಲಿದೆ. ವಿಶೇಷವಾಗಿಯೂ ಲೆಥರ್ ಸೀಟು ಅಥವಾ ಕಪ್ಪು ವರ್ಣದ ಸೀಟು ಹೋದಿಕೆಗಳ ಮೇಲೆ ಪರಿಣಾಮ ಬೀರಲಿದೆ. ಹಾಗೊಂದು ವೇಳೆ ನೀವು ಬಿಸಿಲಿನಡಿಯಲ್ಲಿ ಕಾರು ನಿಲುಗಡೆಗೊಳಿಸಿದ್ದಲ್ಲಿ ಸೀಟುಗಳಿಗೂ ಬಿಸಿ ತಟ್ಟಿರುವುದರಿಂದ ತಕ್ಷಣ ಕಾರಿನೊಳಗೆ ಪ್ರವೇಶಿಸಿ ಕುಳಿತುಕೊಳ್ಳದಿರಿ. ಮೊದಲು ಕಾರಿನ ಬಾಗಿಲುಗಳನ್ನು ಹೊರಕ್ಕೆ ಸೆಳೆದು ತಂಪಾದ ಗಾಳಿ ಒಳ ಪ್ರವೇಶಿಸುವಂತೆ ಅನುವು ಮಾಡಿಕೊಡಿ.

03. ವಿಂಡ್ ಶಿಲ್ಡ್

03. ವಿಂಡ್ ಶಿಲ್ಡ್

ಸೂರ್ಯನ ಶಾಖಾ ಶಕ್ತಿಯನ್ನು ಎಂದಿಗೂ ಪರೀಕ್ಷಿಸುವ ಗೋಜಿಗೆ ಹೋಗದಿರಿ. ಅದೆಷ್ಟು ಪ್ರಭಾವಶಾಲಿ ಅಂದರೆ ನಿಮ್ಮ ಕಾರಿನ ವಿಂಡ್ ಶಿಲ್ಡ್ ಒಡೆಯುವಷ್ಟು ಶಕ್ತವಾಗಿದೆ. ನಿಮಗೆ ಕಾರನ್ನು ಪಾರ್ಕ್ ಮಾಡಲು ನೆರಳೇ ಇಲ್ಲ ಅಂದ ಮೇಲೆ ಕಾರಗೆ ಕವರ್ ಧರಿಸಲು ಮರೆಯದಿರಿ. ಏಕೆಂದರೆ ಮಾರುಕಟ್ಟೆಯಲ್ಲಿ ವಿಂಡ್ ಶಿಲ್ಡ್ ಹೆಚ್ಚು ದುಬಾರಿಯಾಗಿದ್ದು, ಲಭ್ಯತೆ ಹಾಗೂ ಫಿಟ್ಟಿಂಗ್ ಸಮಸ್ಯೆ ಎದುರಾಗಲಿದೆ.

04. ಚಕ್ರಗಳು

04. ಚಕ್ರಗಳು

ಮಳೆಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆ ಕಾಲದಲ್ಲೂ ನಿಮ್ಮ ವಾಹನದ ಚಕ್ರಗಳು ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿರಿ. ಚಕ್ರಗಳು ಸವೆದು ಹೋಗಿದೆಯೇ, ನಿಖರವಾಗಿ ಜೋಡಿಸಲ್ಪಟ್ಟಿದೆಯೇ ಹಾಗೂ ಚಕ್ರದೊತ್ತಡ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಬಿಸಿಯಾದ ಡಾಮರು ರಸ್ತೆಯ ಮೇಲೆ ಚಕ್ರಗಳು ಉರುಳುವದರಿಂದ ಪಂಚರ್ ಆಗುವ ಭೀತಿಯೂ ಕಾಡುತ್ತದೆ.

05. ಕೂಲಂಟ್

05. ಕೂಲಂಟ್

ಆಯಾ ತಯಾರಕರು ಶಿಫಾರಸು ಮಾಡಿದ ಪ್ರಮಾಣದಷ್ಟು ಕೂಲಂಟ್ ನಿಮ್ಮ ಕಾರಿನಲ್ಲಿದೆ ಎಂಬುದನ್ನು ಖಾತ್ರಿಪಡಿಸಿ. ಯಾಕೆಂದರೆ ಇದು ಓವರ್ ಹೀಟಿಂಗ್ ತಡೆಯುತ್ತದೆ. ಇದಕ್ಕಾಗಿ ನಿಮ್ಮ ಕಾರನೊಮ್ಮೆ ಅಧಿಕೃತ ಸರ್ವಿಸ್ ಸೆಂಟರ್ ಗೆ ಕರೆದೊಯ್ಯಲು ಮರೆಯದಿರಿ. ರೇಡಿಯೇಟರ್ ಸಹ ಪರಿಶೀಲನೆಗೊಳಪಡಿಸಿ ಅಗತ್ಯ ಬಂದ್ದಲ್ಲಿ ಶುಚಿಯಾಗಿಡಿ. ಇವೆರಡು ಸಮಪರ್ಕವಾಗಿಲ್ಲವಾದ್ದಲ್ಲಿ ದೀರ್ಘಾವಧಿಯಲ್ಲಿ ಕಾರು ಎಂಜಿನ್‌ಗೆ ಕೇಡು ಬರುವ ಸಂಭವವಿದೆ.

06. ಎಂಜಿನ್ ಆಯಿಲ್

06. ಎಂಜಿನ್ ಆಯಿಲ್

ಇಂಧನ ಬಳಿಕ ಕಾರಿಗೆ ಬೇಕಾಗಿರುವ ಅಗತ್ಯ ತೈಲ, ಎಂಜಿನ್ ಆಯಿಲ್ ಆಗಿರುತ್ತದೆ. ಸಮಯಕ್ಕೆ ತಕ್ಕಂತೆ ಕಾರು ಸರ್ವಿಸ್ ಮಾಡುವ ವೇಳೆ ಆಯಿಲ್ ಮಟ್ಟವನ್ನು ಪರಿಶೀಲಿಸಲು ಮರೆಯದಿರಿ. ಇದು ಎಂಜಿನ್ ನಯವಾಗಿ ಕೆಲಸ ಮಾಡಲು ಸಹಕರಿಸುತ್ತದೆ. ಇದರಿಂದ ಎಂಜಿನ್ ದೀರ್ಘ ಬಾಳ್ವಿಕೆ ಬರಲು ನೆರವಾಗುತ್ತದೆ.

 07. ಎಸಿ

07. ಎಸಿ

ಬೇಸಿಗೆ ಅಂದ ಮೇಲೆ ಎಸಿ ಇಲ್ಲದ ಕಾರಿನ ಬಗ್ಗೆ ಚಿಂತಿಸುವಾಗಿಲ್ಲ. ಅದೇ ರೀತಿ ಎಸಿ ಬಳಕೆ ಜಾಸ್ತಿಯಾಗಿರುವುದರಿಂದ ಬೇಸಿಗೆ ಆರಂಭಕ್ಕೂ ಮುನ್ನ ಚೆಕಪ್ ಮಾಡಲು ಮರೆಯದಿರಿ. ಎಸಿ ಆನ್ ಆಗಿಟ್ಟು ಕಾರು ಸ್ಟ್ಯಾರ್ಟ್ ಮಾಡಲು ಪ್ರಯತ್ನಿಸದಿರಿ. ಇದು ನಿಮ್ಮ ಕಾರು ಬ್ಯಾಟರಿ ಮೇಲೆ ಹೆಚ್ಚಿನ ಒತ್ತಡ ನೀಡಲಿದೆ. ಹಾಗೆಯೇ ವಿಂಡೋಗಳನ್ನು ಮೇಲಕ್ಕೆ ಸರಿಸಲು ಮರೆಯದಿರಿ.

08. ಬ್ಯಾಟರಿ

08. ಬ್ಯಾಟರಿ

ಬ್ಯಾಟರಿ ತಂತಿ ಲಗತ್ತಿಸುವ ಸ್ಥಳದಲ್ಲಿ ತುಕ್ಕು ಹಿಡಿಯದಂತೆ ನೋಡಿಕೊಳ್ಳುವುವು ಅವಶ್ಯಕ. ಬೇಸಿಗೆಯ ಬಹುಕೇತ ಸಮಯಗಳಲ್ಲಿ ಎಸಿ ಆನ್ ಆಗಿರುವುದರಿಂದ ಬ್ಯಾಟರಿ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಹಾಗಾಗಿ ಬ್ಯಾಟರಿ ಡ್ಯಾಮೇಜ್ ಬರುವ ಮೊದಲು ಮುಂಜಾಗ್ರತಾ ಕ್ರಮವಾಗಿ ಮೊದಲೇ ಪರಿಶೀಲಿಸುವುದು ಒಳಿತು.

ಇವನ್ನೂ ಓದಿ

ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು 10 ಕಾರು ಆಕ್ಸೆಸರಿಗಳು

Most Read Articles

Kannada
English summary
Summer Car Care: Maintenance Tips To Beat The Heat
Story first published: Wednesday, March 9, 2016, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X