ಎಲ್‌ಪಿಜಿ vs ಸಿಎನ್‌ಜಿ ಕಾರು: ಯಾವುದು ಬೆಸ್ಟ್?

ಮೈಲೇಜ್: ದೇಶದ ಹೆಚ್ಚಿನ ಕಾರು ಖರೀದಿದಾರರು ಕಾರಿನ ಮೈಲೇಜಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಎಲ್‌ಪಿಜಿ ಅಥವಾ ಸಿಎನ್‌ಜಿ ಕಾರುಗಳು ಶೇಕಡ 20ರಷ್ಟು ಹೆಚ್ಚು ಮೈಲೇಜ್ ನೀಡುತ್ತವೆ. ಜೊತೆಗೆ ಇವೆರಡೂ ಇಂಧನಗಳ ದರವೂ ಕಡಿಮೆ.

ದರ: ಪೆಟ್ರೋಲಿಗಿಂತ ಎಲ್‌ಪಿಜಿ ಅಥವಾ ಸಿಎನ್‌ಜಿ ಇಂಧನ ದರ ಕಡಿಮೆ ಇದೆ. ಇತ್ತೀಚೆಗೆ ಡೀಸೆಲ್ ದರ 5 ರು. ಹೆಚ್ಚಾಗಿದೆ. ಹೀಗಾಗಿ ಇವೆರಡೂ ಇಂಧನ ದರ ಡೀಸೆಲ್ ದರಕ್ಕಿಂತ ಕಡಿಮೆಯಿದೆ. ಎಲ್ ಪಿಜಿ ಮತ್ತು ಸಿಎನ್ ಜಿ ಇಂಧನಗಳ ದರದ ನಡುವೆಯೂ 3-5 ರು. ವ್ಯತ್ಯಾಸವಿದೆ. ಎಲ್ ಪಿಜಿಗೆ ಹೋಲಿಸಿದರೆ ಸಿಎನ್ ಜಿ ದರ ಕಡಿಮೆ.

ಪ್ರಾಕ್ಟಿಕಲಿಟಿ: ಹೆಚ್ಚಿನ ಕಾರು ಕಂಪನಿಗಳು ಈಗ ಡ್ಯೂಯಲ್ ಫ್ಯೂಯಲ್ ಟೆಕ್ನಾಲಜಿ ಪರಿಚಯಿಸಿವೆ. ಈಗ ಹೆಚ್ಚಿನ ಪಂಪುಗಳಲ್ಲಿ ಸಿಎನ್ ಜಿ ಮತ್ತು ಎಲ್ ಪಿಜಿ ಫಿಲ್ಲಿಂಗ್ ಸೌಲಭ್ಯವಿದೆ. ನಿಮ್ಮ ನಗರದಲ್ಲಿ ಈ ಎರಡು ಇಂಧನ ಫಿಲ್ಲಿಂಗ್ ಲಭ್ಯತೆ ನೋಡಿಕೊಂಡು ಖರೀದಿಸಬಹುದು.

ಸ್ಥಳಾವಕಾಶ: ಎಲ್ ಪಿಜಿ ಅಥವಾ ಸಿಎನ್ಜಿ ಕಿಟ್ ಹಾಕಿಸ್ಕೊಂಡ್ರೆ ನಿಮ್ಮ ಕಾರಿನ ಅಮೂಲ್ಯ ಲಗೇಜ್ ಸ್ಥಳಾವಕಾಶ ಕಡಿಮೆಯಾಗುತ್ತದೆ. ಸಿಎನ್ಜಿಗೆ ದೊಡ್ಡ ಟ್ಯಾಂಕ್ ಅಗತ್ಯವಿದೆ. ಇದು ಹೆಚ್ಚಿನ ಲಗೇಜ್ ಸ್ಥಳಾವಕಾಶ ಆವರಿಸಿಕೊಳ್ಳುತ್ತದೆ. ಆದ್ರೆ ಎಲ್ ಪಿಜಿಗೆ ಸಣ್ಣ ಸಿಲಿಂಡರ್ ಸಾಕು. ಎಲ್ ಪಿಜಿ ಸಿಲಿಂಡರಿನಿಂದಾಗಿ ಕಾರಿನ ಲಗೇಜ್ ಸ್ಥಳಾವಕಾಶ ಹೆಚ್ಚು ವ್ಯರ್ಥವಾಗುವುದಿಲ್ಲ.

ಡ್ರೈವಿಂಗ್ ಮತ್ತು ಹ್ಯಾಂಡ್ಲಿಂಗ್: ಕಾರಿನ ಹಿಂಭಾಗದಲ್ಲಿ ಗ್ಯಾಸ್ ಸಿಲಿಂಡರ್ ಇಡುವುದರಿಂದ ಕಾರಿನ ಸಸ್ಪೆನ್ಸನ್ ಮೇಲೆ ಕೊಂಚ ಪರಿಣಾಮ ಬೀರುತ್ತದೆ. ಇದು ಡ್ರೈವಿಂಗ್ ಮತ್ತು ಹ್ಯಾಂಡ್ಲಿಂಗ್ ನಲ್ಲಿ ಕೊಂಚ ಅನುಭವಕ್ಕೆ ಬರಬಹುದು. ಎಲ್ ಪಿಜಿಗಿಂತ ಸಿಎನ್ಜಿ ಹೆಚ್ಚು ಭಾರ. ಹಿಂಭಾಗದಲ್ಲಿ ಭಾರ ಹೆಚ್ಚಿದ್ದರೆ ಡ್ರೈವಿಂಗ್ ಕಾರ್ಯಕ್ಷಮತೆ ಕೊಂಚ ಕಡಿಮೆಯಾದೀತು.

ಉಪಸಂಹಾರ: ಇವೆರಡೂ ಇಂಧನಗಳು ಹಲವು ಅನುಕೂಲತೆಗಳನ್ನು ಹೊಂದಿವೆ. ಆದರೆ ಎಲ್ ಪಿಜಿಗೆ ಹೋಲಿಸಿದರೆ ಸಿಎನ್ಜಿ ಲಭ್ಯತೆ ಸಾಕಷ್ಟಿಲ್ಲ. ಇವೆರಡೂ ಇಂಧನಗಳು ಪೆಟ್ರೋಲಿಗಿಂತ ಅಗ್ಗ. ಕಾರ್ಯಕ್ಷಮತೆಯಲ್ಲಿ ಸಿಎನ್ಜಿಗಿಂತ ಎಲ್ ಪಿಜಿ ಮುಂದಿದೆ. ಆದರೆ ಸಿಎನ್ಜಿ ದರ ಎಲ್ ಪಿಜಿಗಿಂತ ಕಡಿಮೆ.

* ಸಿಎನ್ಜಿ: ಸಂಕುಚಿತ ನೈಸರ್ಗಿಕ ಅನಿಲ
* ಎಲ್ ಪಿಜಿ: ದ್ರವೀಕೃತ ಪೆಟ್ರೋಲಿಯಂ ಅನಿಲ

Most Read Articles

Kannada
English summary
LPG and CNG offer similar advantages. However, the availability of CNG is not as wide as LPG across the country. However, in cities where CNG is being sold it is more easily available than LPG. Both fuel offer a cheaper alternative to petrol. If performance is your priority, then you can choose LPG over CNG./ But CNG being a cheaper fuel among the two is ideal if you want to reduce costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X