ಮಳೆಗಾಲದಲ್ಲಿ ಡ್ರೈವಿಂಗ್ ಸಹವಾಸ ಬೇಡ ಅಂತೀರಾ? ಇಲ್ಲಿದೆ ಕೆಲವು ಸೂತ್ರಗಳು

By Nagaraja

ಮಳೆಗಾಲ ಬಂತೆಂದರೆ ಮನೆಯಿಂದ ಹೊರಗೆ ಹೆಜ್ಜೆಯಿಡುವುದು ಏನೋ ಬೇಸರ. ಎಲ್ಲೋ ಗಾಳಿ, ಮಳೆಗೆ ಸಿಲುಕುವ ಭಯ. ಇನ್ನು ಡ್ರೈವಿಂಗ್ ಸಹವಾಸವಂತೂ ಸಾಕಪ್ಪ ಸಾಕು ಎಂಬಂತಾಗಿದೆ.

Also Read : ಮಳೆಗಾಲದಲ್ಲಿ ಘಾಟಿ ರಸ್ತೆ ಸಂಚಾರಕ್ಕೆ ಅಮೂಲ್ಯ ಟಿಪ್ಸ್

ಆದರೆ ಕೆಲವು ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಚಾಲನೆ ವೇಳೆ ಎದುರಾಗಬಹುದಾದ ಸಂಭವನೀಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

01. ಮುಂಗಾರು ಮಳೆಗಿಂತ ಮೊದಲು ಚೆಕಪ್

01. ಮುಂಗಾರು ಮಳೆಗಿಂತ ಮೊದಲು ಚೆಕಪ್

ನಿಮ್ಮ ಕಾರಿನ ಕಂಡೀಷನ್ ಮೇಲೆ ಸ್ವಲ್ಪ ನಿಗಾವಹಿಸಿ. ಕಾರು ಎಂಜಿನ್, ಚಕ್ರ, ಬ್ರೇಕ್, ವೈಪರ್, ಹೆಡ್ ಲೈಟ್, ಇತ್ಯಾದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದೇ ಎಂಬುದನ್ನು ಪರಿಶೀಲಿಸಿರಿ.

02. ಬ್ರೇಕ್ ಒತ್ತಿದಾಗ ಜಾಗ್ರತೆ

02. ಬ್ರೇಕ್ ಒತ್ತಿದಾಗ ಜಾಗ್ರತೆ

ಮಳೆಗಾಲದಲ್ಲಿ ಬ್ರೇಕ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಳೆಯ ಕಾರುಗಳಲ್ಲಿ ಇಂತಹ ತೊಂದರೆ ಜಾಸ್ತಿಯಾಗಿ ಕಾಡಬಹುದು. ಹಾಗೆ ಒಂದೇ ಸಮನೆ ಬ್ರೇಕ್ ಹಾಕುವ ಸಾಹಸಕ್ಕೆ ಹೋಗಬೇಡಿ. ಇದರ ಬದಲು ಬಿಟ್ಟು ಬಿಟ್ಟು ಬ್ರೇಕ್ ಅದುಮಿದರೆ ಉತ್ತಮ. ಸಾಧ್ಯವಾದಷ್ಟು ಎಕ್ಸಿಲೇಟರ್ ಹಾಗೂ ಗೇರ್ ಮೂಲಕವೇ ಕಾರಿನ ನಿಯಂತ್ರಣವನ್ನು ಪ್ರಯತ್ನಿಸಿ.

03. ನಿಧಾನವೇ ಪ್ರಧಾನ

03. ನಿಧಾನವೇ ಪ್ರಧಾನ

ಅವಸರವೇ ಅಪಘಾತಕ್ಕೆ ಕಾರಣ. ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಗೋಚರತೆಯ ಅಭಾವ ಕಾಡುತ್ತದೆ. ಹಾಗಾಗಿ ಜಾಸ್ತಿ ಕತ್ತಲು ಆವರಿಸಿದ್ದಲ್ಲಿ ಹಗಲು ಸಮಯದಲ್ಲೂ ಹೆಡ್ ಲೈಟ್ ಆನ್ ಮಾಡಿರಿ.

04. ಟೈರ್ ಥ್ರೆಡ್ ಪರಿಶೀಲನೆ

04. ಟೈರ್ ಥ್ರೆಡ್ ಪರಿಶೀಲನೆ

ಮಳೆಗಾಲದಲ್ಲಿ ಗುಣಮಟ್ಟದ ಚಕ್ರಗಳ ಬಳಕೆ ಅತಿ ಅಗತ್ಯ. ಸವೆದ ಟಯರ್ ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ.

05. ವೈಪರ್

05. ವೈಪರ್

ವೈಪರ್ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿರಿ. ಯಾಕೆಂದರೆ ಮಳೆಗಾಲದಲ್ಲಿ ವೈಪರ್ ಹೆಚ್ಚು ಉಪಯೋಗಕ್ಕೆ ಬರುತ್ತದೆ.

06. ಹೆಡ್ ಲೈಟ್

06. ಹೆಡ್ ಲೈಟ್

ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ ಇರುವುದರಿಂದ ಸಮರ್ಪಕ ಬೆಳಕಿನ ಅವಶ್ಯಕತೆ ಅತಿ ಹೆಚ್ಚಿದೆ. ಅಲ್ಲದೆ ಇಂಡಿಕೇಟರ್, ಫಾಗ್ ಲ್ಯಾಂಪ್, ಬ್ರೇಕ್ ಲೈಟ್ ಗಳು ಸರಿಯಾಗಿದೇ ಎಂಬುದನ್ನು ಪರಿಶೀಲಿಸಿರಿ.

07. ಕೆಸರು ರಸ್ತೆ

07. ಕೆಸರು ರಸ್ತೆ

ಜಲಾವೃತ ಹಾಗೂ ಕೆಸರು ರಸ್ತೆಗಳನ್ನು ಸಾಧ್ಯವಾದಷ್ಟು ತಪ್ಪಿಸಿರಿ. ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಪರಿಚಯವಿಲ್ಲದ ರಸ್ತೆಗಳಲ್ಲಿ ನಿಮ್ಮ ಪಯಣ ಅಪಾಯಕಾರಿಯೆನಿಸುವ ಆತಂಕವಿದೆ.

08. ಅಂತರ ಕಾಪಾಡಿ

08. ಅಂತರ ಕಾಪಾಡಿ

ವಾಹನಗಳ ನಡುವೆ ನಿರ್ದಿಷ್ಟ ಅಂತರ ಕಾಪಾಡುವ ಮೂಲಕ ಸಂಭವನೀಯ ಅಪಾಯಗಳನ್ನು ತಪ್ಪಿಸಬಹುದಾಗಿದೆ.

09. ಮೊಬೈಲ್ ಬಳಕೆ ಬೇಡ

09. ಮೊಬೈಲ್ ಬಳಕೆ ಬೇಡ

ನಿಮ್ಮ ಏಕಾಗ್ರತೆಗೆ ಭಂಗವನ್ನುಂಟು ಮಾಡಬಹುದಾದ ಮೊಬೈಲ್ ಫೋನ್ ಸಂಭಾಷನೆ, ಮೇಸೆಜ್ ಮುಂತಾದವುಗಳ ಬಳಕೆ ಬೇಡ.

10. ರಾತ್ರಿ ಪಯಣ ತಪ್ಪಿಸಿ

10. ರಾತ್ರಿ ಪಯಣ ತಪ್ಪಿಸಿ

ಸಾಧ್ಯವಾದ್ದಲ್ಲಿ ಮಳೆಗಾಲದಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ತಪ್ಪಿಸಿಕೊಳ್ಳುವುದು ಒಳಿತು.

11. ಓವರ್ ಟೇಕಿಂಗ್ ಬೇಡ

11. ಓವರ್ ಟೇಕಿಂಗ್ ಬೇಡ

ಸಡನ್ ಓವರ್ ಟೇಕಿಂಗ್ ನಿಂದಾಗಿ ನಿಮ್ಮ ಜೊತೆಗೆ ಮುಂಭಾಗದಿಂದ ಬರುವ ವಾಹನಗಳಿಗೂ ಸಮಸ್ಯೆ ಸೃಷ್ಟಿಯಾಗಲಿದೆ.

12. ಲೇನ್ ಪಾಲಿಸಿ

12. ಲೇನ್ ಪಾಲಿಸಿ

ಮಲೆನಾಡಿನ ರಸ್ತೆ ಬದಿಗಳಲ್ಲಿ ಮಳೆ ನೀರಿನಿಂದ ಒದ್ದೆಯಾದ ಮಣ್ಣು ಜರಿಯುವ ಸಾಧ್ಯತೆಯಿದ್ದು, ಹಾಗಾಗಿ ಲೇನ್ ತಪ್ಪದೇ ರಸ್ತೆ ಮಧ್ಯದಲೇ ವಾಹನ ಸಂಚಾರ ಮಾಡಿ.

13. ಪಾದಚಾರಿಗಳಿಗೆ ನೀರಿನ ಅಭಿಷೇಕ ಬೇಡ

13. ಪಾದಚಾರಿಗಳಿಗೆ ನೀರಿನ ಅಭಿಷೇಕ ಬೇಡ

ನೀವು ಕಾರಿನಲ್ಲಿ ಸಂಚರಿಸುತ್ತಿರಬಹುದು. ನಿಮಗಿದರ ಬಗ್ಗೆ ಅರಿವಿಲ್ಲದಿರಬಹುದು. ಆದರೆ ದಯವಿಟ್ಟು ಪಾದಚಾರಿಗಳ ಮೇಲೆ ನೀರಿನ ಅಭಿಷೇಕ ಬೇಡ.

ಮತ್ತಷ್ಟು

ದೈನಿಂದ ಬೈಕ್ ಸವಾರರಿಗೆ 5 ಸೂತ್ರ ವಾಕ್ಯಗಳು

ಕಾರಿನ ಎಬಿಸಿಡಿ ಗೊತ್ತೇನು ?

Most Read Articles

Kannada
English summary
Monsoon Driving Tips - Take Pain To Remain Safe In The Rain
Story first published: Wednesday, July 22, 2015, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X