ಹಾರನ್ ಹರಟೆ: ಎನ್ನ ಕಿವುಡ ಮಾಡದಿರು ತಂದೆ!

ಒಮ್ಮೆ ಸಂಚಾರ ದಟ್ಟಣೆಯ ನಡುವೆ ಸಿಲುಕಿಕೊಂಡ ಕ್ಷಣವನ್ನೊಮ್ಮೆ ನೆನಪಿಸಿಕೊಳ್ಳಿ. ಕ್ರೀ.. ಕ್ರೀ.. ಪಾಂ ಪಾಂ, ಪೀ.. ಪೀ.. ವ್ರೋಂ ವ್ರೋಂ ಹಾರನುಗಳು ಕೇಳಿಬರುತ್ತವೆ. ಕೆಲವು ಹಾರನ್ ಗಳ ಸದ್ದುಗಳಂತೂ ಬೆಚ್ಚಿ ಬೀಳಿಸುವಂತಿವೆ.

ಅವುಗಳಲ್ಲಿ ಪವರ್ ಹಾರನ್ ಇದ್ದರಂತೂ ಮುಗೀತು. ಕಿವಿ ಮುಚ್ಚಿಕೊಳ್ಳಬೇಕಷ್ಟೇ! ಏರ್ ಹಾರನುಗಳು ತುಂಬಾ ಕೆಟ್ಟವು. ಅವುಗಳು ಉಂಟು ಮಾಡುವ ಶಬ್ದ ಮಾಲಿನ್ಯ ಭಯಾನಕವಾಗಿರುತ್ತವೆ.

ಬಹುಶಃ ಬೆಂಗಳೂರು ರಸ್ತೆಗಳಲ್ಲಿರುವಷ್ಟು ಹಾರನ್ ಹರಟೆ ಬೇರಾವ ರಸ್ತೆಗಳಲ್ಲೂ ಇರಲಿಕ್ಕಿಲ್ಲ. ಮುಂದಿನ ವಾಹನ ಜಾಮ್ ಆಗಿದೆ, ಅದಕ್ಕೆ ಮುಂದೆ ಹೋಗಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಸುಮ್ಮಗೆ ಹಾರನ್ ಬಟನ್ ಅದುಮುವರಿದ್ದಾರೆ.

ವಾಹನಗಳ ಹಿಂದೆ ಹಾರನ್ ಓಕೆ ಪ್ಲೀಸ್ ಎಂಬ ಸ್ಲೋಗನ್ ಇರುತ್ತದೆ. ಇಂತಹ ಸ್ಲೋಗನ್ ಹಾಕಬೇಕೆಂಬ ನಿಯಮವಿಲ್ಲ. ಕೆಲವು ಚಾಲಕರಿಗೆ ಹಾರನ್ ಎಂದರೆ ಆಟಿಕೆ. ಅದುಮುವುದು ಅವರ ಹವ್ಯಾಸದಂತೆ ಕಾಣುತ್ತದೆ

ಸಂಚಾರಿ ನಿಯಮಗಳ ಪ್ರಕಾರ ಸುರಕ್ಷತೆಯ ಅಗತ್ಯಕ್ಕೆ ತಕ್ಕಂತೆ ಹಾರನ್ ಬಳಸಬೇಕು. ಅನಗತ್ಯವಾಗಿ, ದೀರ್ಘಸಮಯದವರೆಗೆ ಹಾರನ್ ಹಾಕುತ್ತ ಇರಬಾರದು. ಸೈಲೆನ್ಸ್ ಝೋನ್ ಪ್ರದೇಶಗಳಲ್ಲಿ ಹಾರನ್ ಬಳಸಕೂಡದು.

ಅನಗತ್ಯ ಹಾರನ್ ಹಾಕುವ ಮೂಲಕ ಅಸಹನೆ ಪ್ರದರ್ಶಿಸುವ ಬದಲು ಸಹನೆಯನ್ನು ಕಾಪಾಡಿಕೊಂಡು ಎಚ್ಚರಿಕೆಯಿಂದ ಡ್ರೈವಿಂಗ್ ಮಾಡಿರಿ. ನೀವು ಉಂಟು ಮಾಡುವ ಶಬ್ದ ಮಾಲಿನ್ಯ ಎಷ್ಟೋ ಜನರನ್ನು ಕಿವುಡರನ್ನಾಗಿ ಮಾಡಬಹುದು. ಓದಿ: ಭಾರತೀಯರಿಗೆ ಮಾಮೂಲಿ ಹಾರನ್ ಸಾಕಾಗೊಲ್ಲ...

ಹಾರನ್ ಬಳಕೆ ಕಡಿಮೆ ಮಾಡಿ, ಕಿವಿಗಳನ್ನು ಉಳಿಸಿ!

Most Read Articles

Kannada
English summary
Hospital and School zone. Please do not horn. Sensible drivers dont use horn while driving in Bangalore-City limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X