ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

By Nagaraja

ಹಳೆಯ ಗಾಡಿಗಳಲ್ಲಿ ಸ್ಟಾರ್ಟಿಂಗ್ ಟ್ರಬಲ್ ಪದೇ ಪದೇ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇದರ ಹಿಂದಿರುವ ಕಾರಣಗಳು ಹಲವು. ವಾಹನ ದಟ್ಟಣೆಗಳಂತಹ ಪ್ರದೇಶದಲ್ಲಿ ಇಂತಹ ದುಸ್ಥಿತಿ ಎದುರಾದಾಗ ಹಿಂಬದಿಯ ಸವಾರರ ಬೈಗುಳ ಕೇಳದೇ ಬೇರೆ ದಾರಿಯೇ ಇರುವುದಿಲ್ಲ.

ಇವನ್ನೂ ಓದಿ: ಪಾರ್ಕಿಂಗ್ ಕೌಶಲ್ಯ ವೃದ್ಧಿಸಿಕೊಳ್ಳಿ

ನಿಮಗೆ ಫುಶ್ ಸ್ಟಾರ್ಟ್ ಅಥವಾ ಜರ್ಕ್ ಸ್ಟಾರ್ಟ್ ಎಂದರೆ ಏನೆಂಬುದು ಗೊತ್ತೇ? ಹಳೆಯ ವಾಹನ ಚಾಲಕರಿಗೆ ಈ ಬಗ್ಗೆ ಸ್ಪಷ್ಟ ಜ್ಞಾನವಿದ್ದರೂ ಹೊಸ ಚಾಲಕರು ಇಂತಹ ಪರಿಸ್ಥಿತಿಯಲ್ಲಿ ಎಡವುತ್ತಾರೆ. ಅಷ್ಟಕ್ಕೂ ಇಂತಹ ಪರಿಸ್ಥಿತಿ ಬಂದಾಗ ಏನು ಮಾಡಬೇಕು? ಯಾಕಾಗಿ ಹೀಗಾಗುತ್ತದೆ? ಈ ನಿಟ್ಟಿನಲ್ಲಿ ನಮ್ಮ ಸರಳ ಸಲಹೆಗಳು ನಿಮ್ಮ ನೆರವಿಗೆ ಬರಲಿದೆ.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಹಳೆಯ ಕಾರುಗಳಲ್ಲಿನ ಬ್ಯಾಟರಿ ಸಂಪೂರ್ಣ ವೀಕ್ ಆಗಿರುವುದು ಕಾರು ಸ್ಟಾರ್ಟ್ ಆಗದಿರಲು ಪ್ರಮುಖ ಕಾರಣವಾಗಿದೆ. ಹಾಗಾಗಿ ಕಾರನ್ನು ತಳ್ಳುವ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಕೆಲವು ಸರಳ ಸಲಹೆಗಳನ್ನು ನಾವು ಕೊಡಲಿದ್ದೇವೆ.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಮಗನ ಹುಟ್ಟುಹಬ್ಬ ಆಚರಣೆಗೆಂದು ಕಚೇರಿಯಿಂದ ಬೇಗನೇ ಮನೆಯತ್ತ ಮುಖ ಮಾಡಿದ ಅರುಣ್‌ ಇಗ್ನಿಷನ್‌ಗೆ ಎಷ್ಟೇ ಕೀ ಕೂಟ್ಟರೂ ಕಾರು ಸ್ಟಾರ್ಟ್ ಆಗುತ್ತಿರಲಿಲ್ಲ. ಇದರಿಂದ ತೀವ್ರ ಹತಾಶೆಗೊಂಡಿದ್ದರು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ತಕ್ಷಣ ತಮ್ಮ ಆಪ್ತ ಸ್ನೇಹಿತ ನವೀನ್‌ಗೆ ರಿಂಗಾಣಿಸಿದ ಅರುಣ್, ಈ ಹಿಂದೆ ಹಲವು ಬಾರಿ ಉಪಯುಕ್ತ ಸಲಹೆಗಳನ್ನು ನೀಡಿರುವುದನ್ನು ನೆನಪಿಸಿಕೊಂಡರು. ಸ್ನೇಹಿತನ ಕರೆ ಸ್ವೀಕರಿಸಿದ ನವೀನ್ ತಕ್ಷಣ ನೆರವಿಗೆ ಧಾವಿಸಿದ್ದರಲ್ಲದೆ ಅರುಣ್ ಅವರನ್ನು ಸಮಾಧಾನಪಡಿಸಿದರು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ನೇರವಾಗಿ ಕಾರಿನ ಮುಂಭಾಗಕ್ಕೆ ತೆರಳಿದ ನವೀನ್ ಬೊನೆಟ್ ಓಪನ್ ಮಾಡಿದ ಬ್ಯಾಟರಿಯಲ್ಲಿ ಏನದಾರೂ ತೊಂದರೆ ಇದೆಯೇ ಎಂಬುದನ್ನು ಪರಿಶೀಲಿಸಿದರು. ಸಾಮಾನ್ಯವಾಗಿ ಹಳೆಯ ಕಾರುಗಳಲ್ಲಿ ಬ್ಯಾಟರಿ ತಂತಿ ಲಗತ್ತಿಸುವ ಸ್ಥಳಗಳಲ್ಲಿ (ಪ್ಲಸ್, ಮೈನಸ್) ಕರಗುವುದರಿಂದ ವಿದ್ಯುತ್ ಪ್ರವಾಹ ನಿಂತು ಹೋಗುವ ಸಾಧ್ಯತೆಯಿರುತ್ತದೆ.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಬ್ಯಾಟರಿಯಲ್ಲಿ ಯಾವುದೇ ತೊಂದರೆ ಇಲ್ಲವೆಂಬುದನ್ನು ಮನಗಂಡ ನವೀನ್ ನೇರವಾಗಿ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಂಡು ಇಗ್ನಿಷನ್‌ಗೆ ಕೀ ಕೊಟ್ಟರು. ಇಂತಹ ಪರಿಸ್ಥಿತಿಯನ್ನು ಹಲವು ಬಾರಿ ನಿಭಾಯಿಸಿರುವ ನವೀನ್‌ಗೆ ಮೊದಲ ನೋಟದಲ್ಲೇ ಬ್ಯಾಟರಿ ವೀಕ್ ಆಗಿರುವುದು ತಿಳಿದು ಬಂದಿತ್ತು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಬಳಿಕ ಕಾರು ಆನ್ ಮಾಡಿದ ನವೀನ್ ನಿಧಾನವಾಗಿ ಹ್ಯಾಂಡ್ ಬ್ರೇಕ್ ಬಿಡುವಂತೆ ಅರುಣ್‌ಗೆ ಸಲಹೆ ಮಾಡಿದರು. ತೀವ್ರ ಹತಾಶರಾಗಿದ್ದ ಅರುಣ್ ತಮ್ಮ ಚಾಲನಾ ಸೀಟನ್ನು ನವೀನ್‌ಗೆ ಆಗಲೇ ಬಿಟ್ಟುಕೊಟ್ಟರು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಇಲ್ಲಿ ಕ್ಲಚ್ ಅನ್ನು ಒಮ್ಮಲೇ ಬಿಡಬೇಕಾದ ಅಗತ್ಯವನ್ನು ಅರುಣ್ ಅವರಿಗೆ ಮನವರಿಕೆ ಕೊಡಲಾಗಿತು. ಮುಂದೆ ಓದಿ...

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಬಳಿಕ ಕಾರನ್ನು ಒಂದರಿಂದ ಎರಡನೇ ಗೇರ್‌ಗೆ ವರ್ಗಾಯಿಸುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಮೊದಲನೇ ಗೇರ್‌ನಲ್ಲಿ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಲ್ಲಿ ಹೆಚ್ಚೆಚ್ಚು ಜರ್ಕ್ ಬೀಳುವ ಸಾಧ್ಯತೆಯಿದೆ. ಇಲ್ಲಿ ಕಾರು ನಿಂತು ನಿಂತು ಸಾಗುವುದರಿಂದ ಕ್ಲಚ್ ಹಾಗೂ ಗೇರ್ ಬಾಕ್ಸ್ ಮೇಲಿನ ಒತ್ತಡವನ್ನು ತಪ್ಪಿಸಲು ಎರಡನೇ ಗೇರ್‌ಗೆ ವರ್ಗಾಯಿಸಬೇಕು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಇದೇ ವೇಳೆಯಲ್ಲಿ ಅರುಣ್ ಒಂದಿಬ್ಬರು ಪಾದಚಾರಿಗಳ ನೆರವನ್ನು ಯಾಚಿಸಿದರು. ಇವರನ್ನು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಲಾಯಿತು. ಅವರಲ್ಲಿ ಕಾರನ್ನು ತಳ್ಳುವಂತೆ ನವೀನ್ ಸೂಚನೆ ನೀಡಿದರು. ಒಗ್ಗಟ್ಟಿನ ಬಲ ಏನೆಂಬುದಕ್ಕೆ ಇಂದೊಂದು ಉತ್ತಮ ಉದಾಹರಣೆಯಾಗಿದ್ದು ಕಾರು ನಿಧಾನವಾಗಿ ಮುಂದಕ್ಕೆ ಚಲಿಸಲಾರಂಭಿಸಿತು.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ಒಂದು ಸಾರಿ ಕಾರು ಸ್ಟಾರ್ಟ್ ಆಗಿ ಅಗತ್ಯ ವೇಗ ಪಡೆದ ಬಳಿಕ ದೂಡುವ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಕ್ಲಚ್ ಬಿಡುವಾಗ (ಚಿತ್ರದಲ್ಲಿ ತೋರಿಸಿರುವಂತೆಯೇ) ಸಹಾಯಕ್ಕೆ ತೆರಳಿದವರು ಕಾರಿಗೆ ಮೇಲ್ಬಾಗಕ್ಕೆ ಢಿಕ್ಕಿಯಾಗಿ ಪೆಟ್ಟಾಗುವ ಸಾಧ್ಯತೆಯಿದೆ.

ಸ್ಟಾರ್ಟಿಂಗ್ ಟ್ರಬಲ್; ಗುಜರಿ ಗಾಡಿಯ ಗಮ್ಮತ್ತು

ತುಂಬಾ ಹಳೆಯ ಕಾರಾಗಿದ್ದರೆ ಒಂದೆರಡು ಬಾರಿ ಇದೇ ಪ್ರಕ್ರಿಯೆ ಮುಂದುವರಿಸಬೇಕಾದ ಅಗತ್ಯವಿರುತ್ತದೆ. ಇಲ್ಲಿ ತಕ್ಷಣ ಆಗಿ ಕ್ಲಚ್ ಬಿಡುವ ಮಹತ್ವವನ್ನು ಅರುಣ್ ಅವರಿಗೆ ನವೀನ್ ಹೇಳಿಕೊಡುತ್ತಾರೆ. ಇಲ್ಲದಿದ್ದಲ್ಲಿ ಎಂಜಿನ್ ಸ್ಟಾರ್ಟ್ ಆಗಲು ಸಾಧ್ಯವಿಲ್ಲ. ಅದೇ ರೀತಿ ಒಮ್ಮೆ ಸ್ಟಾರ್ಟ್ ಆದ್ದಲ್ಲಿ ನಿಮ್ಮ ಗುರಿ ಮುಟ್ಟುವ ತನಕ ಕಾರನ್ನು ಆಫ್ ಮಾಡದಿರಿ. ಕೊನೆಯದಾಗಿ ನವೀನ್ ಹಾಗೂ ಪಾದಚಾರಿಗಳಿಗೆ ಧನ್ಯವಾದ ಹೇಳಲು ಅರುಣ್ ಮರೆತಿರಲಿಲ್ಲ. ಅಲ್ಲದೆ ಮಗನ ಹುಟ್ಟುಹಬ್ಬ ಸಂಭ್ರಮಕ್ಕಾಗಿ ನೇರವಾಗಿ ಮನೆಯತ್ತ ಚಲಿಸಿದರು.

Most Read Articles

Kannada
Read in English: How To Push Start A Car
English summary
We've put together an easy-to-understand guide to push starting your car, so read on and be informed.
Story first published: Thursday, December 11, 2014, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X