ರಸ್ತೆ ಗುರುತುಗಳು ಏನನ್ನು ಸೂಚಿಸುತ್ತದೆ ಗೊತ್ತೇನು?

By Nagaraja

ಸುರಕ್ಷತಾ ದೃಷ್ಟಿಕೋನದಲ್ಲಿ ರಸ್ತೆಗಳಲ್ಲಿ ಹಲವು ವಿಧದ ಬಣ್ಣಗಳೊಂದಿಗೆ ಗುರುತುಗಳನ್ನು ಹಚ್ಚಲಾಗಿರುತ್ತದೆ. ಇವುಗಳನ್ನು ವಾಹನ ಸವಾರರು ತಪ್ಪದೇ ಪಾಲಿಸಬೇಕಾಗುತ್ತದೆ. ಈ ಮೂಲಕ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ.

ನಮ್ಮ ದೈನಂದಿನ ಸವಾರಿಯ ವೇಳೆಯಲ್ಲಿ ರಸ್ತೆಯನ್ನು ವಿಭಜಿಸುವ ಬಿಳಿ ರೇಖೆಗಳು ಅಥವಾ ಹಳದಿ ರೇಖೆಗಳನ್ನು ನೋಡಿರಬಹುದು. ಅಷ್ಟಕ್ಕೂ ರಸ್ತೆಗಳಲ್ಲಿರುವ ಇಂತಹ ಗುರುತು ರೇಖೆಗಳು ಏನನ್ನು ಸೂಚಿಸುತ್ತದೆ ಗೊತ್ತೇನು ? ಈ ಸಂಬಂಧ ವಿಸೃತ ಮಾಹಿತಿಯನ್ನು ಇಲ್ಲಿ ಕಲೆ ಹಾಕಲಾಗಿದೆ.

ಒಡೆದು ಹೋದ ಶ್ವೇತ ವರ್ಣದ ರೇಖೆ

ಒಡೆದು ಹೋದ ಶ್ವೇತ ವರ್ಣದ ರೇಖೆ

ರಸ್ತೆಯ ಎರಡು ಭಾಗಗಳಿಂದ ಬರುವ ವಾಹನಗಳ ಸುಗಮ ಸಂಚಾರಕ್ಕಾಗಿ ಒಡೆದು ಹೋದ ಶ್ವೇತ ವರ್ಣದ ರೇಖೆಯನ್ನು ಮಧ್ಯ ಭಾಗದಲ್ಲಿ ರಸ್ತೆ ಛೇದಕವಾಗಿ ನೀಡಲಾಗಿದೆ. ಹಾಗಿದ್ದರೂ ಅಗಲ ಕಿರಿದಾದ ರಸ್ತೆಗಳಲ್ಲಿ ಇಂತಹ ವಿಭಜಕಗಳು ಕಾಣಸಿಗಬೇಕೆಂದಿಲ್ಲ.

ನಡು ರಸ್ತೆಯಲ್ಲಿ ಒಂದು ಅಥವಾ ಎರಡು ಬಿಳಿ/ಹಳದಿ ರೇಖೆಗಳು

ನಡು ರಸ್ತೆಯಲ್ಲಿ ಒಂದು ಅಥವಾ ಎರಡು ಬಿಳಿ/ಹಳದಿ ರೇಖೆಗಳು

ಎಲ್ಲ ವಾಹನಗಳು ರಸ್ತೆಯ ಎಡಭಾಗದಲ್ಲಿ ಸಂಚರಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ. ಅಲ್ಲದೆ ಓವರ್ ಟೇಕಿಂಗ್ ಇಲ್ಲಿ ನಿಷೇಧವಾಗಿದೆ. ತುರ್ತು ವಾಹನಗಳು ಮಾತ್ರ ಓವರ್ ಟೇಕಿಂಗ್ ಮಾಡಬಹುದಾಗಿದೆ.

ರಸ್ತೆ ಬದಿಯಲ್ಲಿ ಶ್ವೇತ ವರ್ಣದ ರೇಖೆ

ರಸ್ತೆ ಬದಿಯಲ್ಲಿ ಶ್ವೇತ ವರ್ಣದ ರೇಖೆ

ರಸ್ತೆಯ ಕೊನೆಯನ್ನು ಇದು ಸೂಚಿಸುತ್ತದೆ. ಇದನ್ನು ದಾಟಿ ಎಡಭಾಗದಲ್ಲಿ ಸಂಚರಿಸುವುದು ಅವಘಡವನ್ನು ಆಹ್ವಾನಿಸಿದಂತಾಗುತ್ತದೆ. ಇದರಲ್ಲಿ ಪ್ರತಿಫಲಕಗಳನ್ನು ಬಳಸಲಾಗುತ್ತಿದ್ದು, ರಾತ್ರಿ ಸವಾರಿಯನ್ನು ಸುಲಭವಾಗಿಸುತ್ತದೆ.

ತುಂಡರಿಸಲ್ಪಟ್ಟ ಹಳದಿ ರೇಖೆ

ತುಂಡರಿಸಲ್ಪಟ್ಟ ಹಳದಿ ರೇಖೆ

ರಸ್ತೆ ಮಧ್ಯದಲ್ಲಿ ನೇರವಾಗಿ ಹಾದು ಹೋಗುವ ಹಳದಿ ರೇಖೆಯ ಬದಿಯಲ್ಲಿ ತುಂಡರಿಸಲ್ಪಟ್ಟ ಹಳದಿ ವರ್ಣದ ರೇಖೆಯು ವಿಶೇಷವಾದ ಸಂಚಾರ ಸೂಚನೆಯೊಂದನ್ನು ನೀಡುತ್ತದೆ. ಇಲ್ಲಿ ನೇರವಾಗಿ ಹಾದು ಹೋಗುವ ರೇಖೆಯಲ್ಲಿ ಮುನ್ಮುಖವಾಗಿ ಚಲಿಸುವ ವಾಹನಕ್ಕೆ ಓವರ್ ಟೇಕ್ ಮಾಡುವ ಅವಕಾಶವಿರುವುದಿಲ್ಲ. ಹಾಗೊಂದು ವೇಳೆ ತುಂಡರಿಲಸ್ಪಟ್ಟ ಹಳದಿ ರೇಖೆಯ ಬದಿಯಿಂದ ಮುಂದಕ್ಕೆ ಚಲಿಸುವುದಾದ್ದಲ್ಲಿ ಸುರಕ್ಷಿತವೆನಿಸಿದ್ದಲ್ಲಿ ಓವರ್ ಟೇಕ್ ಮಾಡಬಹುದಾಗಿದೆ.

ಝೀಬ್ರಾ ಕ್ರಾಸಿಂಗ್ ಮತ್ತು ನಿಲುಗಡೆ ಸೂಚನೆ

ಝೀಬ್ರಾ ಕ್ರಾಸಿಂಗ್ ಮತ್ತು ನಿಲುಗಡೆ ಸೂಚನೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ರಸ್ತೆ ಮಧ್ಯದಲ್ಲಿ ಕಪ್ಪು ಬಿಳುಪಿನಿಂದ ಕೂಡಿದ ಝೀಬ್ರಾ ಕ್ರಾಸಿಂಗ್ ರೇಖೆಯು ಪಾದಚಾರಿಗಳಿಗೆ ರಸ್ತೆ ದಾಟಲು ನೆರವಾಗುತ್ತದೆ. ವಾಹನಗಳು ಕಡ್ಡಾಯವಾಗಿ ಝೀಬ್ರಾ ಕ್ರಾಸಿಂಗ್ ಚಿಹ್ನೆಯ ಹಿಂದುಗಡೆಯೇ ವಾಹನಗಳನ್ನು ನಿಲುಗಡೆಗೊಳಿಸಬೇಕು.

ಲೇನ್ ಸೂಚಕ

ಲೇನ್ ಸೂಚಕ

ರಸ್ತೆಯಲ್ಲಿರುವ ಲೇನ್ ಸೂಚಕಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು. ಇಲ್ಲಿ ಮುಂದಕ್ಕೆ ಗುರುತಿರುವ ಬಾಣವು ನೇರವಾಗಿ ಮುಂದಕ್ಕೆ ಚಲಿಸಲು ಹಾಗೂ ಬಲಕ್ಕೆ ತಿರುಗಿದ ಬಾಣವು ಬಲಕ್ಕೆ ತಿರುಗುವ ವಾಹನಗಳಿಗೆ ಸೂಚನೆ ನೀಡುತ್ತದೆ. ಇದಕ್ಕನುಗುಣವಾಗಿ ವಾಹನಗಳು ಲೇನ್ ಗಳಲ್ಲಿ ತಪ್ಪದೇ ಚಲಿಸಬೇಕು.

ರಸ್ತೆ ಗುರುತುಗಳು ಏನನ್ನು ಸೂಚಿಸುತ್ತದೆ ಗೊತ್ತೇನು?

ಒಟ್ಟಿನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧ ಪ್ರಕಾರದ ರೇಖೆಗಳನ್ನು ಆಳವಡಿಸಲಾಗುತ್ತದೆ. ಇದನ್ನೆಲ್ಲ ಚಾಲಕ ಬಹಳ ಸಂಯಮದಿಂದ ಪಾಲಿಸಬೇಕು. ಹ್ಯಾಪಿ ಡ್ರೈವಿಂಗ್!

Most Read Articles

Kannada
English summary
Road Markings And What They Mean — Adhere For Safety
Story first published: Tuesday, August 23, 2016, 11:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X