ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

By Nagaraja

ನೀವು ಯಾವತ್ತಾದರೂ ಚಾರಣಕ್ಕೆ ತೆರಳಿದ್ದೀರಾ? ಇದು ಸಾಹಸ-ಸಾವುಗಳ ನಡುವಣವೊಂದು ಕಠಿಣ ಅಭ್ಯಾಸ. ಇದರಲ್ಲಿ ಬೆಡ್ಡ ಗುಡ್ಡ ಹತ್ತುವುದು, ನದಿಪಾತ್ರಗಳಲ್ಲಿ ನಡೆದಾಡುವುದು. ರಾತ್ರಿ ವೇಳೆಯಲ್ಲಿ ಕಾಡುಗಳಲ್ಲಿ ಸಂಚರಿಸುವುದು ಮುಂತಾದವುಗಳು ಒಳಗೊಂಡಿರುತ್ತದೆ. ಅಷ್ಟಕ್ಕೂ ಕೊಟ್ಟಿಗೆ ಹಾರ ಹಾಗೂ ಉಜಿರೆಯ ಕಾಡುಮೇಡಿನ ದುರ್ಗಮ ದಾರಿಯಲ್ಲಿ ಸಾಗಿದರೆ 'ಕರ್ನಾಟಕದ ಅತ್ಯಂತ ದುರ್ಗಮ ಘಾಟ್' ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಚಾರ್ಮಾಡಿ ಘಾಟ್ ಸಿಗುತ್ತದೆ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಇಲ್ಲಿನ ಬಹುತೇಕ ರಸ್ತೆಗಳು ತೀರಾ ಕಿರಿದಾಗಿವೆ. ಎಲ್ಲೆ ತಲೆ ಎತ್ತಿದರೂ ಭಾರಿ ಬೆಟ್ಟಗಳ ಸಮೂಹ, ಪ್ರಪಾತ, ಬದಿಯಲ್ಲಿ ದಟ್ಟವಾದ ಅಡವಿ, ಕಡಿದಾದ ತಿರುವುಗಳು, ಮಂಜಿನ ಮುಸುಕು, ಚಳಿಗಾಲದಲ್ಲಂತೂ ರಾತ್ರಿ, ಹಗಲೋ ಎಂದು ಕಂಡುಹಿಡಿಯಲಾರದಷ್ಟು ದಟ್ಟವಾದ ಮಂಜು ಆವರಿಸುತ್ತದೆ. ಇನ್ನು ವಾಹನ ಸಂಚಾರಿಗಳಿಗಂತೂ ದೊಡ್ಡ ಸವಾಲನ್ನೇ ಒಡ್ಡುತ್ತವೆ.

ಚಕ್ರಗಳಿಗೆ ಸಂಬಂಧಿಸಿದ 10 ಕಟ್ಟುಕತೆ ಹಾಗೂ ಸತ್ಯ!

ಇಂತಹ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ಸರ್ವೇಸಾಮಾನ್ಯ. ಈ ಎಲ್ಲ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ಘಾಟಿ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳೇನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ನಮ್ಮ ಇಂದಿನ ಲೇಖನದಲ್ಲಿ ವಿಸೃತವಾದ ಮಾಹಿತಿ ನೀಡುವ ಪ್ರಯತ್ನ ಮಾಡಲಿದ್ದೇವೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಸಾಮಾನ್ಯ ರಸ್ತೆಗಳಿಗೆ ಹೋಲಿಸಿದಾಗ ಕಡಿದಾದ ತಿರುವು ಪಡೆದುಕೊಂಡಿರುವ ಘಾಟ್ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ಮುಂದಿನ ಸ್ಲೈಡರ್ ಮುಂಖಾಂತರ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಿರಿ...

ಸಂದರ್ಭಕ್ಕೆ ತಕ್ಕಂತೆ ಆಗಾಗ್ಗೆ ಹ್ಯಾಂಡ್‌ಬ್ರೇಕ್ ಬಳಕೆ

ಸಂದರ್ಭಕ್ಕೆ ತಕ್ಕಂತೆ ಆಗಾಗ್ಗೆ ಹ್ಯಾಂಡ್‌ಬ್ರೇಕ್ ಬಳಕೆ

ಇದು ತುಂಬಾನೇ ಸರಳ ಹಾಗೂ ಮೂಲಭೂತ ವಿಚಾರ ಎಂದು ಅನಿಸಿದರೂ ಎತ್ತರದ ಘಾಟಿ ಪ್ರದೇಶದಲ್ಲಿ ಇದರ ಬಳಕೆ ತುಂಬಾನೇ ಮಹತ್ವ ಗಿಟ್ಟಿಸಿಕೊಂಡಿರುತ್ತದೆ. ಅನನುಭವಿ ಚಾಲಕರಿಗಂತೂ ಎತ್ತರದ ಪ್ರದೇಶದಲ್ಲಿ ಚಲಿಸುವಾಗ ಕ್ಲಚ್ ಹಾಗೂ ವೇಗತೆಯನ್ನು ನಿಭಾಯಿಸುವುದು ತುಂಬಾನೇ ಕಷ್ಟವೆನಿಸುತ್ತದೆ. ಹಾಗಾಗಿ ಸಂದರ್ಭಕ್ಕೆ ತಕ್ಕಂತೆ ಹ್ಯಾಂಡ್‌ಬ್ರೇಕ್ ಬಳಕೆ ಮಾಡಿರಿ.

 ಸಮರ್ಪಕ ಹಾಗೂ ಸರಿಯಾದ ಗೇರ್ ಬಳಕೆ

ಸಮರ್ಪಕ ಹಾಗೂ ಸರಿಯಾದ ಗೇರ್ ಬಳಕೆ

ಘಾಟಿ ಪ್ರದೇಶದಲ್ಲಿ ಸಾಮಾನ್ಯಗಿಂತ ಹೆಚ್ಚಿನ ಗೇರ್ ಬಳಕೆಯತ್ತ ಗಮನ ವಹಿಸಬೇಕು. ಉದಾಹರಣೆಗೆ ಇಳಿಜಾರು ಪ್ರದೇಶದಲ್ಲಿ ಸಂಚರಿಸುವಾಗ ನಿಮ್ಮ ಕಾರು ಅಥವಾ ಬೈಕ್‌ನ್ನು ಮೂರನೇ ಗೇರ್‌ನಲ್ಲಿರಿಸಲು ಪ್ರಯತ್ನಿಸಿ. ಇದು ಗಾಡಿಗೆ ಹೆಚ್ಚು ಟಾರ್ಕ್ ಪ್ರದಾನ ಮಾಡಲಿದ್ದು, ಬ್ರೇಕ್ ಅದುಮುವ ಶ್ರಮವನ್ನು ಕಡಿಮೆ ಮಾಡಲಿದೆ. ಯಾವುದೇ ಕಾರಣಕ್ಕೂ ನ್ಯೂಟ್ರಲ್ ಮೋಡ್‌ನಲ್ಲಿರಿಸದಿರಿ. ಇದು ಬ್ರೇಕ್ ಫೇಲ್‌ಗೆ ಅವಕಾಶ ಕೊಟ್ಟಂತೆ. ಇಲ್ಲಿ ಇಂಧನ ಸೇವ್ ಮಾಡುವ ಬಗ್ಗೆ ಚಿಂತಿಸುವ ಬದಲು ಸುರಕ್ಷತೆಗೆ ಮೊದಲ ಆದ್ಯತೆ ಕೊಡಿರಿ.

ಕಡಿದಾದ ತಿರುವಿನಲ್ಲಿ ನಿಯಮಿತವಾಗಿ ಗೇರ್ ಕಡಿಮೆ ಮಾಡಿ

ಕಡಿದಾದ ತಿರುವಿನಲ್ಲಿ ನಿಯಮಿತವಾಗಿ ಗೇರ್ ಕಡಿಮೆ ಮಾಡಿ

ಇನ್ನು ಕಡಿದಾದ ತಿರುವುಗಳಲ್ಲಿ ಕನಿಷ್ಠ ಪಕ್ಷ ಮೂರನೇ ಗೇರ್‌ಗೆ ಶಿಫ್ಟ್ ಮಾಡಲು (ಸಣ್ಣ ಪೆಟ್ರೋಲ್ ಎಂಜಿನ್‌ ಕಾರುಗಳಲ್ಲಿ ಎರಡು) ಗಮನ ಹರಿಸಬೇಕು. ಈ ಪ್ರಕ್ರಿಯೆಯನ್ನು ತಿರುವುಗಳಲ್ಲಿ ನಿಯಮಿತವಾಗಿ ಅನುಸರಿಬೇಕು. ಈಗಾಗಲೇ ನಿಮ್ಮ ಗಮನಕ್ಕೆ ಬಂದಿರುವಂತೆಯೇ ತಿರುವುಗಳಲ್ಲಿ ಲೇನ್ ತಪ್ಪುವ ಕಾರುಗಳು ರಸ್ತೆಯ ಇನ್ನೊಂದು ಕಡೆಯತ್ತ ವಾಲುತ್ತದೆ. ಇದು ಯಾಕೆಂದರೆ ಚಾಲಕರು ಗೇರ್ ಕಡಿಮೆ ಮಾಡುವುದನ್ನು ಕಡೆಗಣಿಸುವುದರಿಂದ ಟಾರ್ಕ್‌ನ ಅಭಾವದಿಂದಾಗಿ ಸರಿಯಾದ ಲೇನ್ ಕಾಪಾಡುವಲ್ಲಿ ವಿಫಲವಾಗುತ್ತಾರೆ.

ಓವರ್‌ಟೇಕಿಂಗ್ ವೇಳೆ ತಾಳ್ಮೆಯಿಂದಿರಿ

ಓವರ್‌ಟೇಕಿಂಗ್ ವೇಳೆ ತಾಳ್ಮೆಯಿಂದಿರಿ

ಘಾಟಿ ಪ್ರದೇಶಗಳಲ್ಲಿ ಓವರ್‌ಟೇಕಿಂಗ್ ಗೋಜಿಗೆ ಹೋಗದಿರುವುದೇ ಒಳಿತು. ಯಾಕೆಂದರೆ ಇಲ್ಲಿ ಕಡಿದಾದ ತಿರುವು ಹೊಂದಿರುವುದಷ್ಟೇ ಅಲ್ಲದೆ ರಸ್ತೆ ವಿಸ್ತಾರ ಅತಿ ಕಡಿಮೆಯಾಗಿರುತ್ತದೆ. ಅಷ್ಟೇ ಯಾಕೆ ತಿರುವುನಿಂದಾಗಿ ಮುಂಭಾಗದಲ್ಲಿ ಬರುವ ವಾಹನಗಳು ಗೋಚರಿಸುವುದಿಲ್ಲ. ಹಾಗಾಗಿ ಸಮತಲ ಪ್ರದೇಶದಲ್ಲಿ ಸ್ಪಷ್ಟ ಗೋಚರತೆ ಲಭ್ಯವಾದ್ದಲ್ಲಿ ಮಾತ್ರ ಸುರಕ್ಷಿತ ಓವರ್‌ಟೇಕ್‌ಗೆ ಪ್ರಯತ್ನಿಸಿ. ಹಾಗೆಯೇ ಹಾರ್ನ್ ಹೊಡೆಯಲು ಮರೆಯದಿರಿ. ಎಚ್ಚರ: ತಿರುವುಗಳಲ್ಲಂತೂ ಓವರ್‌ಟೇಕ್ ಬೇಡವೇ ಬೇಡ.

ತಿರುವುಗಳಲ್ಲಿ ಹಾರ್ನ್ ಬಳಕೆ

ತಿರುವುಗಳಲ್ಲಿ ಹಾರ್ನ್ ಬಳಕೆ

ಇನ್ನೊಂದು ಮುಖ್ಯ ವಿಚಾರವೆಂದರೆ ತಿರುವುಗಳಲ್ಲಿ ಹಾರ್ನ್ ಬಳಕೆ ಅತಿ ಅಗತ್ಯ. ರಾತ್ರಿ ವೇಳೆಯ ಹಾಗೆ ಹಗಲು ಹೊತ್ತಿನಲ್ಲಿ ಹೆಡ್‌ಲೈಟ್ ಬಳಕೆ ಇಲ್ಲದಿದ್ದುದರಿಂದ ಹಾರ್ನ್ ಬಳಕೆ ಅತಿ ಮಹತ್ವಪೂರ್ಣವೆನಿಸುತ್ತದೆ. ಈ ಮೂಲಕ ಮುಂಭಾಗದಿಂದ ಬರುವ ವಾಹನಗಳು ನಿಮ್ಮನ್ನು ಗುರುತಿಸಿಕೊಳ್ಳುತ್ತದೆ. ಅದೇ ಹೊತ್ತಿಗೆ ಎದುರಿನಿಂದ ಬರುವ ವಾಹನಗಳಿಗೂ ತಮ್ಮ ಸಾನಿಧ್ಯ ವ್ಯಕ್ತಪಡಿಸಲು (ಹಾರ್ನ್ ಬಳಕೆ ಮಾಡಲು) ಅವಕಾಶ ಕೊಡಿ. ಹಾಗೊಂದು ವೇಳೆ ಮೊದಲು ಮುಂಭಾಗದಿಂದ ಹಾರ್ನ್ ಕೇಳಿಸಿದ್ದಲ್ಲಿ ನೀವೂ ಹಾರ್ನ್ ಮಾಡುವ ಮೂಲಕ ಗಾಡಿ ನಿಧಾನವಾಗಿ ಮುಂದಕ್ಕೆ ಚಲಿಸಿ...

ಹತ್ತುವಿಕೆ ಸಂಚಾರದಲ್ಲಿ ದಾರಿ ಬಿಟ್ಟುಕೊಡಿ

ಹತ್ತುವಿಕೆ ಸಂಚಾರದಲ್ಲಿ ದಾರಿ ಬಿಟ್ಟುಕೊಡಿ

ಇದನ್ನು ಘಾಟಿ ಸಂಚಾರದ ಸುವರ್ಣ ನಿಯಮವೆಂದೇ ವ್ಯಾಖ್ಯಾನಿಸಬಹುದಾಗಿದೆ. ಯಾಕೆಂದರೆ ತಪ್ಪಲಿನ ಪ್ರದೇಶದಿಂದ ಕೆಳಕ್ಕೆ ಬರುವ ವಾಹನಗಳಿಗೆ ಗಾಡಿ ನಿಧಾನ ಅಥವಾ ನಿಲ್ಲಿಸಲು ಹೆಚ್ಚು ಪ್ರಯತ್ನ ಬೇಕಾಗುತ್ತದೆ. ಹಾಗಾಗಿ ಕೆಳಗಿನಿಂದ ಮೇಲಕ್ಕೆ ಚಲಿಸುವ ವಾಹನಗಳು ಬದಿಯಲ್ಲಿ ನಿಲ್ಲಿಸುವ ಮೂಲಕ ದಾರಿ ಕೊಟ್ಟುವುದು ತುಂಬಾನೇ ಒಳಿತು.

ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿ

ಸುರಕ್ಷಿತ ಪ್ರದೇಶದಲ್ಲಿ ವಾಹನ ನಿಲ್ಲಿಸಿ

ಹಾಗೊಂದು ವೇಳೆ ಘಾಟಿ ಪಯಣದ ವೇಳೆ ವಿರಾಮದ ಅಗತ್ಯವಿದ್ದಲ್ಲಿ ಸುರಕ್ಷಿತ ಪ್ರದೇಶದಲ್ಲಿ ಮಾತ್ರ ವಾಹನ ನಿಲ್ಲಿಸಲು ಗಮನಹರಿಸಿ. ಇಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಗೋಚರವಾಗುವಂತಹ ಪ್ರದೇಶದಲ್ಲಿ ನಿಲ್ಲಿಸಬೇಕು. ಯಾವತ್ತೂ ತಿರುವುಗಳಲ್ಲಿ ಅಥವಾ ತಿರುವುಗಳ ಸಮೀಪದಲ್ಲಿ ಗಾಡಿ ನಿಲ್ಲಿಸದಿರಿ. ಇದು ಅಪಘಾತವನ್ನು ಸ್ವಯಂ ಆಹ್ವಾನಿಸಿದಂತೆ.

ರೇಸಿಂಗ್ ಬೇಡ

ರೇಸಿಂಗ್ ಬೇಡ

ನೆನಪಿಡಿ. ರೇಸ್ ಎಂಬುದು ರೇಸಿಂಗ್ ಟ್ರ್ಯಾಕ್‌ನಲ್ಲಿ ಮಾತ್ರ ನಡೆಯಬೇಕಾದ ಕ್ರೀಡೆ. ಇದು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಿಗೆ ಎಂಟ್ರಿ ಕೊಡಬಾರದು. ಅನೇಕ ಬಾರಿ ಚಾಲಕರು ಇಂತಹ ಸಾಮಾನ್ಯ ವಿಚಾರಗಳನ್ನು ಮರೆತು ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇಲ್ಲಿ ಇನ್ನಿತರ ವಾಹನಗಳಿಂದ ಪ್ರಚೋದನೆ ಒಳಗಾಗಬಾರದು. ಸದಾ ನಿಮ್ಮ ಲೇನ್ ಪಾಲಿಸಿ ಚಾಲನೆ ಮುಂದುವರಿಸಿ...

ಸುರಕ್ಷಿತ ಚಾಲನೆ

ಸುರಕ್ಷಿತ ಚಾಲನೆ

ನೀವು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ, ಕಣಿವೆ ಪ್ರದೇಶದಲ್ಲಿ ದಾಟಿದ ಬಳಿಕ ಬಳಿಕ ಟ್ರಕ್ ಹಾಗೂ ಬಸ್ಸುಗಳು ಹಾರ್ನ್ ಬಳಕೆ ಮಾಡುತ್ತವೆ. ಇದು ಯಾಕೆ ಗೊತ್ತಾ? ಇದು ಪರಸ್ಪರ ಓವರ್‌ಟೇಕ್ ಅಥವಾ ವಾಹನ ಮುಂದಕ್ಕೆ ಹೋಗಲು ಅನುವು ಮಾಡಿ ಕೊಟ್ಟಿರುವುದಕ್ಕೆ ಧನ್ಯವಾದ ಸೂಚಿಸುವ ರೀತಿಯಾಗಿದೆ. ಕಾರು ಚಾಲಕರು ಸಹ ಇದನ್ನು ಅನುಸರಿಸಬಹುದಾಗಿದೆ. ಓವರ್‌ಟೇಕ್ ಮಾಡಿದ ಬಳಿಕ ಬಸ್ ಹಾಗೂ ಟ್ರಕ್‌ಗಳು ಹಾರ್ನ್ ಬಳಕೆ ಮಾಡುವ ಮೂಲಕ ಒಬ್ಬರೊಬ್ಬರನ್ನು ಮೆಚ್ಚುಗೆ ವ್ಯಕ್ತಪಡಿಸುತ್ತವೆ. ಇದು ಪ್ರತಿಯೊಂದು ಬಾರಿ ಸಂತೋಷವನ್ನು ಪಸರಿಸುತ್ತದೆ.

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಮುಂದಕ್ಕೆ ನಿಮ್ಮ ವಾರಂತ್ಯದ ಅಥವಾ ಪ್ರವಾಸದಲ್ಲಿ ಈ ಎಲ್ಲ ವಿಚಾರಗಳನ್ನು ಮನಗಾನುವಿರಿ ಎಂಬ ನಂಬಿಕೆ ನಮ್ಮಲ್ಲಿದೆ. ಇದೀಗ ನಿಮ್ಮ ಘಾಟಿ ಸಂಚಾರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ಹಾಗೊಂದು ವೇಳೆ ಯಾವುದೇ ಅಂಶ ಉಲ್ಲೇಖಿಸುವಲ್ಲಿ ಬಿಟ್ಟು ಹೋಗಿದ್ದಲ್ಲಿ ನಿಮ್ಮ ಅಮೂಲ್ಯವಾದ ಸಲಹೆ ಓದುಗರ ನೆರವಿಗೆ ಖಂಡಿತ ಬರಲಿದೆ. ಅಂತಿಮವಾಗಿ ಘಾಟ್ ಪ್ರದೇಶದಲ್ಲಿ ನೀವು ಸುರಕ್ಷಿತವಾಗಿ ವಾಹನ ಚಾಲನೆ ಮಾಡಿದ್ದಲ್ಲಿ ನಮ್ಮ ಧ್ಯೇಯ ಈಡೇರಿದಂತೆ. ಹ್ಯಾಪಿ ರೈಡಿಂಗ್!

Most Read Articles

Kannada
English summary
Read further to learn more about ghat driving techniques.
Story first published: Thursday, April 24, 2014, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X