ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

By Nagaraja

ನಿಮ್ಮಲ್ಲಿ ಎಷ್ಟು ಮಂದಿ ಕಾರಿನ ಜಾಕಿ ಸರಿಯಾಗಿ ಬಳಕೆ ಮಾಡಲು ಗೊತ್ತು? ದೂರದ ಪ್ರದೇಶಗಳಿಗೆ ಪ್ರವಾಸ ತೆರಳುವ ಸಂದರ್ಭದಲ್ಲಿ ಕಾರು ಪಂಚರ್ ಆದ್ದಲ್ಲಿ ಏನು ಮಾಡುವೀರಾ? ಹತ್ತಿರ ಪ್ರದೇಶದಲ್ಲಿ ಗ್ಯಾರೇಜ್ ಅಂತು ಇರಲ್ಲ ಬಿಡಿ. ಇಂತಹ ಪರಿಸ್ಥಿತಿಯಲ್ಲಿ ನೀವೇ ಮೆಕ್ಯಾನಿಕ್ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ.

ನಿಮ್ಮ ಕಾರಿನಲ್ಲಿರಿಸಬೇಕಾದ ಪ್ರಮುಖ 20 ವಸ್ತುಗಳು

ಸಾಮಾನ್ಯವಾಗಿ ಪಂಚರ್ ಆದ ಚಕ್ರಗಳನ್ನು ಬದಲಾಯಿಸಲು ಜಾಕಿಗಳನ್ನು ಬಳಕೆ ಮಾಡಲಾಗುತ್ತದೆ. ಹೀಗೆ ಮಾಡುವಾಗ ಸರಿಯಾದ ಕ್ರಮ ಅನುಸರಿಸುವುದು ಅತಿ ಮುಖ್ಯ. ಇಲ್ಲದಿದ್ದಲ್ಲಿ ಅಪಾಯವನ್ನು ಆಹ್ವಾನಿಸಿದಂತೆ! ನಮ್ಮ ಸಮಾಜದಲ್ಲಿ ಬಹುತೇಕ ಕಾರು ಮಾಲಿಕರಿಗೆ ಕಾರಿನ ಜಾಕಿ ಬಳಕೆ ಮಾಡುವುದು ಹೇಗೆಂಬುದು ಗೊತ್ತಿಲ್ಲ. ಪ್ರಮುಖವಾಗಿ ಇದನ್ನು ಗಮನಿಸಿಕೊಂಡು ಏನೆಲ್ಲ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಕುರಿತು ವಿವರವಾದ ಲೇಖನವನ್ನು ಇಲ್ಲಿ ಕೊಟ್ಟಿರುದ್ದೇವೆ.

ಜಾಕಿ ಬಳಕೆಯ ವೇಳೆ ಗಮನಿಸಬೇಕಾದ ಅಂಶಗಳು:

ಜಾಕಿ ಬಳಕೆಯ ವೇಳೆ ಗಮನಿಸಬೇಕಾದ ಅಂಶಗಳು:

ಪ್ರಮುಖವಾಗಿಯೂ ಚಕ್ರಗಳನ್ನು ಬದಲಾಯಿಸುವುದಕ್ಕಾಗಿ ಕಾರು ಜಾಕಿಗಳನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಮೇಲೆತ್ತಿದ್ದಲ್ಲಿ ಸಾಕು. ಹಾಗೆಯೇ ತುಂಬಾ ಹೊತ್ತಿನ ವರೆಗೆ ಹಿಡಿದಿಟ್ಟುಕೊಳ್ಳಬಾರದು ಎಂಬುದನ್ನು ಎಚ್ಚರವಹಿಸಿ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಹಾಗೊಂದು ವೇಳೆ ಕಾರಿನ ಕೆಳಭಾಗ ಪರಿಶೋಧಿಸುವುದಿದ್ದಲ್ಲಿ ಜಾಕಿ ಸ್ಟಾಂಡ್‌ಗಳನ್ನು ಬಳಕೆ ಮಾಡಲು ಮರೆಯದಿರಿ. ಇಲ್ಲಿ ಯಾವುದೇ ಕಾರಣಕ್ಕೂ ಸಾಮಾನ್ಯ ಜಾಕಿಗಳನ್ನು ಬಳಸಬಾರದು. ಹಲವಾರು ಹಲವು ಪ್ರಕರಣಗಳಲ್ಲಿ ತಪ್ಪಾದ ವಿಧಾನಗಳಿದಂತೆ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಅಷ್ಟಕ್ಕೂ ನಿಮ್ಮ ಕಾರು ಪಂಚರ್ ಆಗಿದ್ದಲ್ಲಿ ಮೊದಲು ಮಾಡಬೇಕಾದ ಕಾರ್ಯ ಏನೆಂದರೆ ನಿಮ್ಮ ಕಾರು ಸಮತಲ ಪ್ರದೇಶದಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅಲ್ಲದೆ ಕಾರು ಮೊದಲ ಗೇರ್ (ಮ್ಯಾನುವಲ್ ಟ್ರಾನ್ಸ್‌ಮಿಷನ್) ಮೋಡ್‌ನಲ್ಲಿದೆ ಹಾಗೆಯೇ ಪಾರ್ಕಿಂಗ್ ಬ್ರೇಕ್ (ಹ್ಯಾಂಡ್ ಬ್ರೇಕ್) ಅದುಮಿರುವುದನ್ನು ಗಮನಿಸಿ. ಇವೆರಡು ಓಕೆ ಆದ್ದಲ್ಲಿ ನಿಮ್ಮ ಕಾರ್ಯ ಆರಂಭಿಸಬಹುದು.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಬೆಟ್ಟ, ಗುಡ್ಡಗಾಡು ಅಥವಾ ಏರಿಳಿತದ ಪ್ರದೇಶದಲ್ಲಿ ನಿಮ್ಮ ವಾಹನ ಪಂಚರ್ ಆಗಿದ್ದು, ಸಮತಲ ಪ್ರದೇಶ ಕಂಡುಹುಡುಕುವುದು ಕಷ್ಟವೆನಿಸಿದ್ದಲ್ಲಿ, ಕಾರಿನ ಚಕ್ರಗಳಿಗೆ ಇಟ್ಟಿಗೆ, ಕಲ್ಲು ಅಥವಾ ಮರದ ತಂಡುಗಳನ್ನಿಡಬೇಕು. ಇದು ಕಾರು ಜಾರುವುದನ್ನು ತಡೆಯಲಿದೆ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಬಿಡುವಿಲ್ಲದ ಹೆದ್ದಾರಿ ಪ್ರದೇಶಗಳಲ್ಲಿ ಜಾಕಿ ಬದಲಾಯಿಸುವ ಗೋಜಿಗೆ ಹೋಗದಿರಿ. ಯಾಕೆಂದರೆ ಅಮಿತ ವೇಗದಲ್ಲಿ ಸಂಚರಿಸುವ ಬೈಕ್, ಬಸ್ ಅಥವಾ ಟ್ರಕ್‌ಗಳ ಅಜಾಗರೂಕ ಸಂಚಾರದಿಂದ ನಿಮ್ಮ ಕಾರಿಗೆ ಢಿಕ್ಕಿಯಾಗುವ ಸಂಭವ ಎದುರಾಗಲೂ ಬಹುದು.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ

ಕಾರಿನ ಜಾಕಿ ಬಳಕೆ ಮಾಡುವ ವಿಧಾನ

ಕಾರಿನ ಸಬ್ ಫ್ರೇಮ್ ಅಡಿಯಲ್ಲಿ ಜಾಕಿ ಸರಿಯಾಗಿ ಲಗತ್ತಿಸಿರಬೇಕು. ಹಳೆಯ ಕಾರುಗಳು ಗಟ್ಟಿಯಾದ ಸಬ್ ಫ್ರೇಮ್‌ಗಳನ್ನು ಹೊಂದಿದ್ದರೆ ಆಧುನಿಕ ಕಾರುಗಳು ಬಾಡಿ ವಿನ್ಯಾಸದ ಫ್ರೇಮ್ ಪಡೆದುಕೊಂಡಿರುತ್ತದೆ. ಹಾಗಿರುವಾಗ ಸರಿಯಾಗಿ ಜಾಕಿ ಲಗತ್ತಿಸದಿದ್ದಲ್ಲಿ ವಾಹನಕ್ಕೆ ಹಾನಿಯಾಗುವ ಸಂಭವವಿದೆ. ಹೊಸ ಕಾರುಗಳು ಕಾರಿನ ಜಾಕಿ ಲಗತ್ತಿಸಲು ಸರಿಯಾದ ಗುರುತುಗಳನ್ನು ಹೊಂದಿರುತ್ತದೆ. ಇಷ್ಟಾದರೂ ಸರಿಯಾದ ಜಾಗ ಗೊತ್ತಾಗದಿದ್ದಲ್ಲಿ ಒಮ್ಮೆ ಕಾರಿನ ಮ್ಯಾನುವಲ್ ಓದಿ ಬಿಡಿ. ಅಲ್ಲದೆ ಮುಂದಿನ ಬಾರಿ ಸರ್ವೀಸ್‌ಗೆ ನೀಡುವಾಗ ಮೆಕ್ಯಾನಿಕ್ ಬಳಿ ವಿಚಾರಿಸಿ ಸರಿಯಾದ ಸಲಹೆ ಪಡೆಯಲು ಮರೆಯದಿರಿ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಜಾಕಿ ಲಗತ್ತಿಸದ ಬಳಿಕ ನಿಧಾನವಾಗಿ ಕಾರನ್ನು ಮೇಲೆತ್ತಿರಿ. ಮಾರುಕಟ್ಟೆಯಲ್ಲಿ ಅನೇಕ ವಿಧಗಳ ಜಾಕಿಗಳು ಲಭ್ಯವಿರುತ್ತದೆ. ಸಾಮಾನ್ಯವಾಗಿ ಕಾರುಗಳಲ್ಲಿ ಸೀಸರ್ ಜಾಕಿಗಳು (scissor jack) ಇರುತ್ತದೆ. ನೀವು ಸಹ ಇದನ್ನೇ ಬಳಕೆ ಮಾಡುತ್ತಿದ್ದಲ್ಲಿ ರಾಡ್ ಹಾಕಿಸಿ, ಗಡಿಯಾರ ಮುಳ್ಳಿನ ದಿಶೆಯತ್ತ ತಿರುಗಿಸಿರಿ.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಇನ್ನು ನಿಮ್ಮಲ್ಲಿರುವುದು ಹೈಡ್ರಾಲಿಕ್ ಜಾಕಿ ಆಗಿದ್ದಲ್ಲಿ ಹ್ಯಾಂಡಲ್ ಬಾರ್ ಲಗತ್ತಿಸಿ ಮೇಲಿಂದ ಕೆಳಕ್ಕೆ ಪಂಪ್ ಮಾಡಿರಿ. ಹೀಗೆ ಮಾಡುವಾಗ ಯಾವುದೇ ಅವಸರಕ್ಕೊಳಗಾಗದೇ ನಿಧಾನವಾಗಿ ಕೆಲಸ ಮುಂದುವರಿಸಿ. ಇದರಿಂದ ಆಯಾಸವನ್ನು ತಪ್ಪಿಸಬಹುದು.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಸರಿಯಾದ ರೀತಿಯಲ್ಲಿ ಚಕ್ರಗಳನ್ನು ಬದಲಾಯಿಸಿದ ಬಳಿಕ ಜಾಕಿ ಕೆಳಗಡೆ ರಿಲೀಸ್ ಮಾಡಿದರಾಯಿತು. ಈ ಮೊದಲೇ ತಿಳಿಸಿರುವಂತೆಯ ಸೀಸರ್ ಜಾಕಿಯಲ್ಲಿ ಮೊದಲಿನ ಹಾಗೆಯೇ ರಾಡ್ ಲಗತ್ತಿಸಿ ಗಡಿಯಾರ ಪ್ರದಕ್ಷಿಣೆಯ ವಿರುದ್ಧ ದಿಶೆಯತ್ತ ತಿರುಗಿಸಿದಾಯಿತು.

ಕಾರಿನ ಜಾಕಿ ಬಳಕೆ ಮಾಡುವ ವಿಧಾನ ಹೇಗೆ?

ಇನ್ನೊಂದೆಡೆ ಹೈಡ್ರಾಲಿಕ್ ಜಾಕಿ ಬಳಕೆ ಮಾಡುತ್ತಿದ್ದಲ್ಲಿ ಚಕ್ರ ಬದಲಾಯಿಸಿದ ಬಳಿಕ ಪ್ರೆಷರ್ ರಿಲೀಸ್ ಮಾಡುವ ವಾಲ್ವೆಗೆ ಹ್ಯಾಂಡಲ್ ಬಾರ್ ಕನೆಕ್ಟ್ ಮಾಡಿ ತಿರುಗಿಸಿದರಯಾಯಿತು. ಕಾರು ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಲಿದೆ.

ಸೀಸರ್ ಜಾಕಿ

ಸೀಸರ್ ಜಾಕಿ

ಸೀಸರ್ ಜಾಕಿಗಳನ್ನು ಕಾರನ್ನು ಮೇಲೆತ್ತುವ ಪ್ರಕ್ರಿಯೆಯಲ್ಲಿ ಬಳಕೆ ಮಾಡಲಾಗುತ್ತದೆ. ಓರೆಯಾದ ಲೋಹದ ಎರಡು ಬಾರ್ ಹೊಂದಿರುವುದರಿಂದಲೇ ಇದನ್ನು ಸೀಸರ್ ಅಥವಾ ಕತ್ತರಿ ಜಾಕಿ ಎನ್ನುತ್ತಾರೆ. ಅಲ್ಲದೆ ಇದು ಕತ್ತರಿ ವಿನ್ಯಾಸಕ್ಕೆ ಸಾದೃಶವನ್ನು ಹೊಂದಿದೆ.

ಹೈಡ್ರಾಲಿಕ್ ಫ್ಲೋರ್ ಜಾಕಿ

ಹೈಡ್ರಾಲಿಕ್ ಫ್ಲೋರ್ ಜಾಕಿ

ಕೈಯಿಂದಲೇ ನಿರ್ವಹಿಸಬಹುದಾದ ಹೈಡ್ರಾಲಿಕ್ ಫ್ಲೋರ್ ಜಾಕಿಗಳನ್ನು ಕೇವಲ ಕಾರು ಮಾತ್ರವಲ್ಲದೆ, ಟ್ರಕ್ ಹಾಗೂ ಇನ್ನಿತರ ಘನ ವಾಹನಗಳನ್ನು ಮೇಲೆತ್ತಲು ಬಳಕೆ ಮಾಡಲಾಗುತ್ತದೆ. ಇದು ಉದ್ದವಾದ ಹ್ಯಾಂಡಲ್ ಬಾರ್ ಹೊಂದಿದ್ದು ಬಳಕೆ ಸುಲಭವಾಗಿದೆ. ಸಾಮಾನ್ಯವಾಗಿ ಇದರಲ್ಲಿ ನಾಲ್ಕು ಚಕ್ರಗಳು ಸಹ ಇರುತ್ತದೆ.

Most Read Articles

Kannada
English summary
How many of us can say that we are fully aware how to use a car jack? One of the main reasons to jack up a car is to change a tyre. Before you jack up your car make sure you are aware of proper lifting procedures.
Story first published: Friday, April 11, 2014, 15:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X