ಹೊಸ ಕಾರು ಮಾಲಿಕರು ಮೊದಲು ಕಾರಿನ ಎಬಿಸಿ ತಿಳ್ಕೊಳ್ಳಿರಿ

By Nagaraja

ನೀವು ಹೊಸದಾಗಿ ಕಾರು ಕೊಂಡಿರುವೀರಾ? ಅಥವಾ ಇನ್ನಷ್ಟೇ ನೂತನ ಕಾರು ಖರೀದಿಸಲು ಯೋಜನೆ ಹಾಕಿರುವೀರಾ? ಚಿಂತೆ ಬಿಡಿ ಮೊದಲು ಕಾರು ಸಂರಕ್ಷಣೆಯ ಬಗೆಗಿನ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿರಿ. ಇದಕ್ಕಾಗಿ ನಿಮ್ಮ ನೆರವಿಗೆ ಬರಲಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನೂತನ ಕಾರು ಖರೀದಿಗಾರರ ಕಾರು ಕೇರ್‌ನ ಎಬಿಸಿ ವಿಚಾರಗಳ ಬಗ್ಗೆ ಮನದಟ್ಟು ಮಾಡಿಕೊಡಲಿದ್ದೇವೆ.

ಇವನ್ನೂ ಓದಿ: ನಿಮ್ಮ ಕಾರಿಗೆ 15 ಮೈಲೇಜ್ ಟಿಪ್ಸ್

ಅಷ್ಟಕ್ಕೂ ಏನಿದು ಕಾರು ಕೇರ್ ಎಬಿಸಿ ?
ಎ - ಯಾವಾಗಲೂ ಕಾರು ನಿರ್ವಹಣೆಯ ಮುನ್ನೆಚ್ಚರಿಕೆಯ ಯೋಜನೆ ಅನುಸರಿಸಿ.
ಬಿ - ನಿಮ್ಮ ಕಾರಲ್ಲಿ ತೊಂದರೆಯಿದೆ ಎಂಬ ಅನುಮಾನ ಬಂದ ತಕ್ಷಣ ಪರೀಶೀಲಿಸಲಿದ್ದೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಸಿ - ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ಈ ಮೂಲಕ ಅನಿರೀಕ್ಷಿತವಾಗಿ ಎದುರಾಗುವ ಅನಾನುಕೂಲತೆಗಳನ್ನು ತಪ್ಪಿಸಿ.

ಇವನ್ನೂ ಓದಿ: ಕಾರಿನ ಜಾಕಿ ಬಳಕೆ ಮಾಡುವ ವಿಧಾನ

ಬಹುತೇಕ ಯುವ ಗ್ರಾಹಕರು ಕಾರು ಖರೀದಿ ಮಾಡಿ ಜಾಲಿ ರೈಡ್ ಹೊಡೆಯಲು ಉತ್ಸುಕರಾಗಿರುತ್ತಾರೆ. ಅಂತವರಿಗೆ ನುರಿತ ತಜ್ಞರಿಂದ ಆರಂಭದಲ್ಲೇ ಕಾರ್ ಕೇರ್ ಬಗ್ಗೆ ಹೇಳಿಕೊಡುವುದು ಅತಿ ಮುಖ್ಯ. ಕಾರು ಸಂರಕ್ಷಣೆಯ ಮೂಲಭೂತ ತತ್ವಗಳನ್ನು ಅರಿಯುವ ಮೂಲಕ ನಿಮ್ಮ ಕಾರಿಗೆ ಎದುರಾಗುವ ಸಂಭಾವ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಅಷ್ಟೇ ಅಲ್ಲದೆ ಇದು ನಿಮ್ಮ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ.

ಹೊಸ ಕಾರು ಮಾಲಿಕರಿಗೆ ಸರಳ ಕಾರ್ ಕೇರ್ ಗೈಡ್

ಇಲ್ಲಿ ಕೊಟ್ಟಿರುವ ಚಿತ್ರ ಸಂಪುಟದ ಮುಖಾಂತರ ಕಾರ್ ಕೇರ್ ಬಗ್ಗೆ ಅನುಸರಿಸಬೇಕಾದ ಟಾಪ್ 10 ವಿಷಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟಿದ್ದೇವೆ. ಎಲ್ಲ ವಾಹನ ಪ್ರೇಮಿಗಳು ಇದರ ಗರಿಷ್ಠ ಪ್ರಯೋಜನ ಗಿಟ್ಟಿಸಿಕೊಳ್ಳಲಿದ್ದಾರೆಂಬ ನಂಬಿಕೆ ನಮ್ಮದ್ದು.

1. ಇಂಧನ ಪರಿಶೀಲಿಸಿ

1. ಇಂಧನ ಪರಿಶೀಲಿಸಿ

ಕಾರಿನಲ್ಲಿ ಬಳಕೆಯಾಗುವ ಎಲ್ಲ ವಿಧ ಇಂಧನ ಸೇರಿದಂತೆ, ಪವರ್ ಸ್ಟೀರಿಂಗ್, ಬ್ರೇಕ್, ಟ್ರಾನ್ಸ್‌ಮಿಷನ್, ವಿಂಡ್‌ಶೀಲ್ಡ್ ವಾಶರ್ ದ್ರಾವಕ ಮತ್ತು ಕೂಲಂಟ್‌ಗಳನ್ನು ನಿಖರವಾಗಿ ಪರಿಶೀಲಿಸಿ

2. ಕಾರಿನ ಪಂಪ್, ಬೆಲ್ಟ್ ಪರಿಶೀಲಿಸಿ

2. ಕಾರಿನ ಪಂಪ್, ಬೆಲ್ಟ್ ಪರಿಶೀಲಿಸಿ

ಕಾರಿನ ಪಂಪ್, ಬೆಲ್ಟ್ ಮುಂತಾದವುಗಳಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲವೆಂಬುದನ್ನು ಖಾತ್ರಿಪಡಿಸಲು ಸಮಯ ಸಿಕ್ಕಿದಾಗಲೆಲ್ಲ ನಿರಂತರ ಅಂತರಾಳದಲ್ಲಿ ಪರಿಶೀಲಿಸುವುದನ್ನು ಅಭ್ಯಾಸಿಸಿಕೊಳ್ಳಿ.

3. ಬ್ಯಾಟರಿ ಪರಿಶೀಲಿಸಿ

3. ಬ್ಯಾಟರಿ ಪರಿಶೀಲಿಸಿ

ಅದೇ ರೀತಿ ಬ್ಯಾಟರಿ ಪರಿಶೀಲನೆಗೂ ಆದ್ಯತೆ ಕೊಡಿ. ಅಗತ್ಯಬಿದ್ದಲ್ಲಿ ಬದಲಾಯಿಸಲು ಹಿಂದು ಮುಂದು ನೋಡದಿರಿ.

4. ಬ್ರೇಕ್ ಸಿಸ್ಟಂ ಪರಿಶೀಲಿಸಿ

4. ಬ್ರೇಕ್ ಸಿಸ್ಟಂ ಪರಿಶೀಲಿಸಿ

ಇದು ಎಲ್ಲದಕ್ಕಿಂತಲೂ ಮುಖ್ಯವಾಗಿದ್ದು, ಕಡಿಮೆ ಪಕ್ಷ ವರ್ಷಕ್ಕೊಂದು ಬಾರಿಯಾದರೂ ಓಯಿಲ್ ಬದಲಾವಣೆ ಸಂದರ್ಭದಲ್ಲಿ ಬ್ರೇಕ್ ಲೈನಿಂಗ್, ರೋಟಾರ್ ಹಾಗೂ ಡ್ರಮ್ ಪರಿಶೀಲಿಸಬೇಕಾಗಿದೆ.

5. ಎಕ್ಸಾಸ್ಟ್ ಸಿಸ್ಟಂ ಪರಿಶೀಲಿಸಿ

5. ಎಕ್ಸಾಸ್ಟ್ ಸಿಸ್ಟಂ ಪರಿಶೀಲಿಸಿ

ನಿಮ್ಮ ಕಾರಿನ ಎಕ್ಸಾಸ್ಟ್ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಹಾನಿ ಅಥವಾ ಸೋರಿಕೆಯಿಲ್ಲ ಎಂಬುದನ್ನು ಖಾತ್ರಪಡಿಸಿ. ಸಾಮಾನ್ಯಕ್ಕಿಂತಲೂ ವಿಭಿನ್ನವಾದ ಶಬ್ದ ಹೊರಬಂದ್ದಲ್ಲಿ ತಕ್ಷಣವೇ ಸರಿಪಡಿಸಿಕೊಳ್ಳಿ.

6. ಎಂಜಿನ್ ಟ್ಯೂನ್ ಮಾಡಿ

6. ಎಂಜಿನ್ ಟ್ಯೂನ್ ಮಾಡಿ

ಗರಿಷ್ಠ ನಿರ್ವಹಣೆ, ಇಂಧನ ಕ್ಷಮತೆ ಹಾಗೂ ಕನಿಷ್ಠ ಹೊಗೆ ಹೊರಸೂಸುವ ನಿಟ್ಟಿನಲ್ಲಿ ಎಂಜಿನ್ ಟ್ಯೂನ್ ಮಾಡುವುದು ಅಷ್ಟೇ ಅಗತ್ಯ.

7. ಶಾಖ, ವೆಂಟಿಲೇಷನ್, ಎಸಿ ಪರಿಶೀಲಿಸಿ

7. ಶಾಖ, ವೆಂಟಿಲೇಷನ್, ಎಸಿ ಪರಿಶೀಲಿಸಿ

ಕಾರಿನೊಳಗಿನ ಆರಾಮದಾಯಕತೆಗೂ ಆದ್ಯತೆ ಕೊಡಬೇಕಾಗಿದ್ದು, ಸರಿಯಾದ ಕೂಲಿಂಗ್ ಹಾಗೂ ಹೀಟಿಂಗ್‌ಗಾಗಿ ಪರಿಶೀಲನೆ ಅಗತ್ಯ.

8. ಸ್ಟೀರಿಂಗ್, ಸಸ್ಫೆಷನ್ ಪರಿಶೀಲಿಸಿ

8. ಸ್ಟೀರಿಂಗ್, ಸಸ್ಫೆಷನ್ ಪರಿಶೀಲಿಸಿ

ವಾರ್ಷಿಕ ಪರಿಶೀಲನೆಯ ಭಾಗವಾಗಿ ಶಾಕ್ ಅಬ್ಸಾರ್ಬರ್ ಹಾಗೂ ಚಾಸೀ ಭಾಗಗಳಾದ ಬಾಲ್ ಜಾಯಿಂಟ್, ಟೈ ರಾಡ್ ಎಂಡ್ ಮುಂತಾದವುಗಳನ್ನು ಪರಿಶೀಲಿಸತಕ್ಕದ್ದು.

9. ಚಕ್ರ ಪರಿಶೀಲನೆ

9. ಚಕ್ರ ಪರಿಶೀಲನೆ

ಇವೆಲ್ಲದರ ಜೊತೆಗೆ ಟೈರ್ ಪ್ರೆಶರ್ ಹಾಗೂ ಥ್ರೆಡ್ ಪರಿಶೀಲನೆಗೆ ಒಳಪಡಿಸತಕ್ಕದ್ದು. ಹಾಗೆಯೇ ಯಾವುದೇ ಕೇಡು ಸಂಭವಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ವೈಪರ್, ಲೈಟಿಂಗ್ ಪರಿಶೀಲಿಸಿ

10. ವೈಪರ್, ಲೈಟಿಂಗ್ ಪರಿಶೀಲಿಸಿ

ಅಂತಿಮವಾಗಿ ಸ್ಪಷ್ಟ ಗೋಚರತೆಗಾಗಿ ವೈಪರ್ ಹಾಗೂ ಹೆಡ್ ಲೈಟ್ ಪರಿಶೀಲಿಸಿ. ಕಾರಿನ ಹೊರಮೈ ಜತೆಗೆ ಒಳಗಿರುವ ಲೈಟ್‌ಗಳು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಖಾತ್ರಿಪಡಿಸಿ. ಇನ್ನು ಅಗತ್ಯವಿದ್ದಲ್ಲಿ ವೈಪರ್ ಬ್ಲೇಡ್ ಬದಲಾಯಿಸಿಕೊಳ್ಳಿರಿ.

ಹೊಸ ಕಾರು ಮಾಲಿಕರಿಗೆ ಸರಳ ಕಾರ್ ಕೇರ್ ಗೈಡ್

ಈ ಎಲ್ಲ ವಿಚಾರಗಳು ನಿಮ್ಮ ಕಾರು ಸಂರಕ್ಷಿಸಲು ನೆರವಾಗಲಿದೆಯೆಂಬ ವಿಶ್ವಾಸ ನಮ್ಮದ್ದು. ಸದ್ಯ ನಮ್ಮ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೊಳ್ಳಲು ಹಂಚಿಕೊಳ್ಳಲು ಮರೆಯದಿರಿ...

Most Read Articles

Kannada
English summary
Most modern cars are hassle free, however, it is good to know some simple basic car care steps. We list out some important car care inspection procedures, and we are sure it will help you and your car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X