ವಾಹನ ಓಡಿಸುವಾಗ ಅನುಸರಿಸಬೇಕಾದ ಮೂಲಭೂತ ಅಂಶಗಳು

By Nagaraja

ಅಪಘಾತಕ್ಕೆ ಕಾರಣಗಳು ಬೇಕಿಲ್ಲ. ಅಲ್ಲಿ ಯಾವ ಅದೃಷ್ಟವೂ ನಿಮ್ಮನ್ನು ಬಚಾವ್ ಮಾಡಲು ಸಾಧ್ಯವಿಲ್ಲ. ನಿಮ್ಮ ಡ್ರೈವಿಂಗ್ ಸರಿಯಿದ್ದ ಮಾತ್ರಕ್ಕೆ ಸುರಕ್ಷಿತವಾಗಿ ಗುರಿ ಮುಟ್ಟಲಿದ್ದೀರಿ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಯಾಕೆಂದರೆ ನಿಮ್ಮ ಎದುರುಗಡೆಯಿಂದ ಬರುವ ವಾಹನ ಸವಾರರ ಎಡವಿಟ್ಟಿನಿಂದಾಗಿಯೂ ಅಪಘಾತ ಸಂಭವಿಸಬಹುದಾಗಿದೆ.

ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ..!

ಹಾಗಾಗಿ 'ರಸ್ತೆ ಸುರಕ್ಷತೆ' ಎಂಬುದು ಒಂದಿಬ್ಬರು ಮಾತ್ರ ಪಾಲಿಸಬೇಕಾದ ನಿಯಮಗಳಲ್ಲ. ಪ್ರತಿಯೊಬ್ಬ ಸವಾರರು ಅತ್ಯುತ್ತಮ ಚಾಲನೆಯನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ವಾಹನ ಚಾಲನೆ ವೇಳೆ ಅನುಸರಿಸಬೇಕಾದ ಕೆಲವು ಮೂಲಭೂತ ಅಂಶಗಳನ್ನು ನಾವಿಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ನಂಬಿಕೆ ನಮ್ಮದ್ದು. (ಲೇಖನ ಮೂಲ: ಬೆಂಗಳೂರು ಟ್ರಾಫಿಕ್ ಪೊಲೀಸ್)

ವಾಹನದ ಸುಸ್ಥಿತಿಯನ್ನು ಪರೀಕ್ಷಿಸಿ

ವಾಹನದ ಸುಸ್ಥಿತಿಯನ್ನು ಪರೀಕ್ಷಿಸಿ

ನಿಮ್ಮ ವಾಹನದ ಸುಸ್ಥಿತಿಯನ್ನು ಓಡಿಸುವ ಮುನ್ನ ಪರೀಕ್ಷಿಸಿ.

ಪಾನಮತ್ತರಾಗಿ ಗಾಡಿ ಚಾಲನೆ ಬೇಡ

ಪಾನಮತ್ತರಾಗಿ ಗಾಡಿ ಚಾಲನೆ ಬೇಡ

ನೀವು ಕುಡಿದಿದ್ದರೆ, ಆಯಾಸ ಗೊಂಡಿದ್ದರೆ, ಅನಾರೋಗ್ಯವಿದ್ದರೆ ವಾಹನ ಓಡಿಸಬೇಡಿ.

ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ

ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ

ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕಿಕೊಳ್ಳಿ.

ಶಿರಸ್ತ್ರಾಣ ಧರಿಸಿ
 

ಶಿರಸ್ತ್ರಾಣ ಧರಿಸಿ

ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ.

ಮೊಬೈಲ್ ಬಳಕೆ ಬೇಡ

ಮೊಬೈಲ್ ಬಳಕೆ ಬೇಡ

ವಾಹನ ಓಡಿಸುವಾಗ ಮೊಬೈಲ್ ಫೋನ್ ಉಪಯೋಗಿಸಬೇಡಿ.

ಟ್ರಾಫಿಕ್ ನಿಯಮ ಪಾಲಿಸಿ

ಟ್ರಾಫಿಕ್ ನಿಯಮ ಪಾಲಿಸಿ

ಟ್ರಾಫಿಕ್ ನಿಯಮಗಳನ್ನು ಪಾಲಿಸಿ.

ಅಮಿತ ವೇಗ ಬೇಡ

ಅಮಿತ ವೇಗ ಬೇಡ

ಅಮಿತ ವೇಗ ಸುರಕ್ಷಿತವಲ್ಲ.

ರಸ್ತೆ ಚಿಹ್ನೆಗಳನ್ನು ಪಾಲಿಸಿ

ರಸ್ತೆ ಚಿಹ್ನೆಗಳನ್ನು ಪಾಲಿಸಿ

ನಿಲ್ಲುವ, ತಿರುಗುವ ಸೂಚನೆಗಳನ್ನು ಕೊಡಲು ಮರೆಯದಿರಿ.

ರಸ್ತೆ ಪಥ ಪಾಲಿಸಿ

ರಸ್ತೆ ಪಥ ಪಾಲಿಸಿ

ಎಡಬದಿಯಲ್ಲೇ ವಾಹನ ಓಡಿಸಿ. ತುರ್ತು ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಮಾನ್ಯತೆ ಕೊಡಿ.

ಜಾಗರೂಕ ಚಾಲನೆ

ಜಾಗರೂಕ ಚಾಲನೆ

ಶಾಲೆಗಳು, ಆಸ್ಪತ್ರೆ ಸ್ಥಳಗಳಲ್ಲಿ ಎಚ್ಚರದಿಂದ ಓಡಿಸಿ.

ಓವರ್‌ಟೇಕ್ ಬೇಡ

ಓವರ್‌ಟೇಕ್ ಬೇಡ

ತಿರುವು, ಸೇತುವೆ ಹಾಗೂ ಫ್ಲೈಓವರ್‍‌ಗಳಲ್ಲಿ ಓವರ್‌ಟೇಕ್ ಮಾಡಬೇಡಿ.

Most Read Articles
 
English summary
Some Basic Things To Follow While Driving The Vehicle
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X