ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು 10 ಕಾರು ಆಕ್ಸೆಸರಿಗಳು

By Nagaraja

ಸಾಕಪ್ಪಾ ಸಾಕು, ಕೂಲ್ ಸಿಟಿ ಬೆಂಗಳೂರಿನಲ್ಲೂ ಬಿಸಿಲಿನ ದೆಗೆ ನೆತ್ತಿಗೇರುತ್ತಿದೆ. ಈ ಸುಡು ಬಿಸಿಲಿನಲ್ಲಿ ವಾಹನಗಳಲ್ಲಿ ಸಂಚರಿಸುವುದಂತೂ ಇನ್ನಷ್ಟು ಪ್ರಯಾಸದ ವಿಷಯ. ಇದರಿಂದಾಗಿ ಮಕ್ಕಳಿಗೆ ರಜಾ ಸಮಯವಾಗಿದ್ದರೂ ಬಹಳಷ್ಟು ಕುಟುಂಬಗಳು ದೂರ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ.

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಹೀಗಾಗಿ ಈ ಬೇಸಿಗೆ ಸಮಯವನ್ನು ಸರಿಯಾಗಿ ಎದುರಿಸುವುದರಿಂದ ನಿಮಗಾಗುವ ತೊಂದರೆಯನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು, ಬೇಸಿಗೆ ಸಮಯದಲ್ಲಿ ಕಾರಿನಲ್ಲಿ ಬಳಕೆ ಮಾಡಬಹುದಾದ 10 ಮಹತ್ವಪೂರ್ಣ ಕಾರು ಆಕ್ಸೆಸರಿಗಳ ಬಗ್ಗೆ ಪಟ್ಟಿ ಮಾಡಿ ಕೊಟ್ಟಿರುತ್ತೇವೆ. ಇದಕ್ಕಾಗಿ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದೆ ಸಾಗಿರಿ...

ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು 10 ಕಾರು ಆಕ್ಸೆಸರಿಗಳು

ಇಲ್ಲಿ ಕೊಡಲಾಗಿರುವ 10 ಕಾರು ಆಕ್ಸೆಸರಿಗಳು ಬೇಸಿಗೆ ಕಾಲದಲ್ಲಿ ನಿಮ್ಮ ಕಾರನ್ನು ತಂಪಾಗಿಸಲು ನೆರವಾಗಲಿದೆ. ಹಾಗೆಯೇ ನಿಮ್ಮ ಪಯಣವನ್ನು ಇನ್ನಷ್ಟು ಆನಂದದಾಯಕವಾಗಿಸಲಿದೆ.

ಸನ್‌ಗ್ಲಾಸ್ ಹೋಲ್ಡರ್

ಸನ್‌ಗ್ಲಾಸ್ ಹೋಲ್ಡರ್

ಸನ್‌ಗ್ಲಾಸ್, ಡ್ಯಾಶ್‌ಬೋರ್ಡ್‌ನಲ್ಲಿಡುವುದರ ಬದಲು ವಿಶೇಷವಾಗಿ ಸಜ್ಜೀಕರಿಸಲಾದ ಸನ್‌ಗ್ಲಾಸ್ ಹೋಲ್ಡರ್‌ನಲ್ಲಿಡುವುದು ಉತ್ತಮ. ಇದು ಸನ್‌ಗ್ಲಾಸ್‌ಗೆ ಗೀಚು ಬೀಳುವುದನ್ನು ತಪ್ಪಿಸುವುದಲ್ಲದೇ ಚಾಲನೆ ವೇಳೆ ನಿಮಗೆ ಸುಲಭವಾಗಿ ಕೈಗೆಟಕುವಂತೆ ಮಾಡಲಿದೆ. ನೀವು ಸನ್ ಗ್ಲಾಸ್ ಹೋಲ್ಡರ್ ಬಯಸುವುದಾದ್ದಲ್ಲಿ ಒನ್‌ಲೈನ್ ಶಾಪಿಂಗ್ ಜಾಲಜಾಣ ಇ ಬೇಯಲ್ಲಿ ರು. 350ರ ಅಸುಪಾಸಿನಲ್ಲಿ ದೊರಕಲಿದೆ.

ಎಸಿ ಕಪ್ ಹೋಲ್ಡರ್

ಎಸಿ ಕಪ್ ಹೋಲ್ಡರ್

ಈಗ ಬಹುತೇಕ ಕಾರುಗಳಲ್ಲಿ ಎಸಿ ಕಪ್ ಹೋಲ್ಡರ್ ಬಳಕೆ ತುಂಬಾನೇ ಸಾಮಾನ್ಯವಾಗಿಬಿಟ್ಟಿದೆ. ಇದು ಎಸಿ ವೆಂಟ್ಸ್‌ಗೆ ಬಂಧಿಸಲ್ಪಟ್ಟಿದ್ದು, ತಂಪಾದ ಗಾಳಿ ಹೊರಬರುವಾಗ ನಿಮ್ಮ ಪಾನೀಯವನ್ನು (ನೀರಿನ ಬಾಟಲಿ) ತಂಪಾಗಿರಿಸುತ್ತದೆ. ಮಾರುಕಟ್ಟೆಯಲ್ಲಿ ನಿಸ್ಸಾನ್ ಇವಾಲಿಯಾ ಎಸಿ ಕಪ್ ಹೋಲ್ಡರ್‌ಗಳು ರು. 200ರಿಂದ ಲಭ್ಯವಾಗುತ್ತದೆ.

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್

ನಿಮ್ಮ ಕಾರಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸ್ಟಾಂಡರ್ಡ್ ಆಗಿ ದೊರಕದಿದ್ದಲ್ಲಿ ಗಾಬರಿಯಾಗದಿರಿ. ಯಾಕೆಂದರೆ ಕ್ರಿಶ್‌ಟೆಕ್ ಬಿಲ್ಡ್‌ನಂತಹ ಕಂಪನಿಗಳು ಕ್ಲೈಮೇಟ್ ಕಂಟ್ರೋಲ್ ಮೊಡ್ಯೂಲ್ ಒದಗಿಸುತ್ತಿದ್ದು, ಇದನ್ನು ನಿಮ್ಮ ಕಾರಿನ ಎಸಿಗೆ ಸಂಪರ್ಕಿಸಬಹುದಾಗಿದೆ. ಇ ಬೇದಲ್ಲಿ ಇದರ ದರ ರು. 4000ದಷ್ಟಿದೆ.

ಏರ್ ಫ್ರೆಶ್‌ನರ್

ಏರ್ ಫ್ರೆಶ್‌ನರ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬೆವರು ಹಾಗೂ ಧೂಳಿನಿಂದಾಗಿ ಕಾರಿನೊಳಗೆ ಕೆಟ್ಟ ವಾಸನೆ ಪಸರಿಸುತ್ತಿರಬಹುದು. ಇದನ್ನು ನಿವಾರಿಸಲು ಏರ್ ಫ್ರೆಶನರ್ ನಿಮ್ಮ ನೆರವಿಗೆ ಬರಲಿದೆ.

ಡ್ಯಾಶ್‌ಬೋರ್ಡ್ ಕವರ್

ಡ್ಯಾಶ್‌ಬೋರ್ಡ್ ಕವರ್

ನೀವು ಹೋದ ಕಡೆಯೆಲ್ಲ ನೆರಳಲ್ಲೇ ಕಾರು ಪಾರ್ಕಿಂಗ್ ಮಾಡುವುದು ಕಷ್ಟ. ಬೇಸಿಗೆ ಕಾಲದ ಪರಿಸ್ಥಿತಿಯಂತೂ ಹೇಳತೀರದು. ಸೂರ್ಯನಿಂದ ನೇರವಾಗಿ ಬೀಳುವ ಕಿರಣಗಳು ನಿಮ್ಮ ಕಾರಿನ ಡ್ಯಾಶ್‌ಬೋರ್ಡ್ ಮಸುಕಾಗಿಸುವ ಇನ್ನು ಕೆಲವು ಸಂದರ್ಭದಲ್ಲಿ ಬಿರುಕು ಬೀಳುವ ಸಂಭವವಿದೆ. ಇದರಿಂದಾಗಿ ಕಾರಿನೊಳಗಿನ ತಾಪಮಾನವು ಹೆಚ್ಚಲಿದೆ. ಇದನ್ನು ಡ್ಯಾಶ್‌ಬೋರ್ಡ್ ಕವರ್ ತಪ್ಪಿಸಲಿದ್ದು, ಸೂರ್ಯ ಶಾಖವನ್ನು ಹೀರಿಕೊಳ್ಳಲಿದೆ.

ಸನ್ ಶೇಡ್

ಸನ್ ಶೇಡ್

ಸೂರ್ಯ ಶಾಖವನ್ನು ಹೀರುವಂತಹ ಈ ಬೇರ್ಪಡಿಸಬಹುದಾದ ಸನ್ ಶೇಡ್‌ಗಳು ವ್ಯಾಪಕವಾಗಿ ದೊರೆಯುತ್ತದೆ. ಬಹುತೇಕ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಇದರ ಮಾರಾಚವನ್ನು ನೀವು ನೋಡಿರಬಹುದು. ಇದು ಸಹ ಕಾರಿನೊಳಗೆ ಸೂರ್ಯ ಶಾಖದ ನೇರ ಹಾವಳಿಯನ್ನು ತಪ್ಪಿಸುತ್ತದೆ.

ಕೂಲರ್

ಕೂಲರ್

ಇನ್ನು ಮುಂದೆ ಕಾರಿನಲ್ಲೂ ತಂಪಾದ ಪದಾರ್ಥ ಇರಿಸುವುದು ಕಷ್ಟದ ವಿಚಾರವೇನಲ್ಲ. ಯಾಕೆಂದೆರ ಕಾರು ಕೂಲರ್‌ಗಳು ನಿಮಗೆ ಹಲವು ಗಾತ್ರಗಳಲ್ಲಿ ದೊರಕಲಿದೆ. ಇದರಲ್ಲಿ 12 ವೋಲ್ಟ್ ಸಾಕೆಟ್‌ಗೆ ಸಂಪರ್ಕಿಸಬಹುದಾದ ಸಿಂಗಲ್ ಪರ್ಸನ್ ಕಪ್ ಕೂಲರಿಂದ ಹಿಡಿದು ಎಂಟು ಲೀಟರ್ ಸಾಮರ್ಥ್ಯದ ದೊಡ್ಡದಾದ ಕಪ್ ಕೂಲರ್ ವರೆಗೂ ಲಭ್ಯವಿರುತ್ತದೆ. ಈ ಪೈಕಿ ಟ್ರೊಪಿಕೂಲ್ ವಿಶ್ವಾಸಾರ್ಹ ಸಂಸ್ಥೆಯಾಗಿದ್ದು, ಇದರ ದರ 4500 ರು.ಗಳಿಂದ ಆರಂಭಿಸುತ್ತದೆ. ಇನ್ನು ಕಾರು ಫ್ರೀಝರ್‌ಗಳು ಸಹ ದೊರಕುತ್ತಿದ್ದು, ಆದರೆ ಇವುಗಳು ದುಬಾರಿ ಹಾಗೂ ಹೆಚ್ಚು ವಿದ್ಯುತ್ ವ್ಯಯವಾಗುತ್ತದೆ.

ಕಾರು ಕವರ್

ಕಾರು ಕವರ್

ಒಂದು ಕಾರು ಕವರ್ ಧೂಳಿನಿಂದ ನಿಮ್ಮ ಕಾರನ್ನು ಸ್ವಚ್ಫವಾಗಿಸುತ್ತದೆಯಲ್ಲದೆ ಈ ಬೇಸಿಗೆ ಕಾಲದಲ್ಲಿ ತೀವ್ರ ತರಹದ ಸೌರ ವಿಕಿರಣಗಳಿಂದಲೂ ರಕ್ಷಣೆ ಒದಗಿಸಲಿದೆ.

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ಈಗ ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ಕಾರುಗಳಿಗೂ ಸನ್ ಸ್ಕ್ರೀನ್‌ಗಳು ಲಭ್ಯವಿರುತ್ತದೆ. ಇದು ಯಾಂತ್ರಿಕೃತ ಅಥವಾ ಕೈಯಿಂದಲೇ ನಿರ್ವಹಿಸಬಹುದಾದ ಎರಡು ವಿಧಗಳಲ್ಲಿ ದೊರಕುತ್ತದೆ. ಇದು ಪ್ರಾಯೋಗಿಕವಾಗಿಯೂ ಉತ್ತಮವಾಗಿದ್ದು, ತಾಜಾ ಗಾಳಿ ಒಳ ಪ್ರವೇಶಿಸುವಂತೆ ಮಾಡುತ್ತದೆ. ಅಲ್ಲದೆ ಇದರಿಂದ ನಿಮ್ಮ ಕಾರಿನ ಆಂತರಿಕ ಆಕರ್ಷಣೆ ಕಳೆದುಕೊಳ್ಳುವುದಿಲ್ಲ. ಇಂತಹ ವಿಂಡೋ ಹಾಗೂ ರಿಯರ್ ವಿಂಡ್ ಸ್ಕ್ರೀನ್ ಸನ್ ಸ್ಕ್ರೀನ್‌ ಉತ್ಪನ್ನಗಳನ್ನು ಆಮ್ರಿಟ್ರಾಸ್ ನಿರ್ಮಿಸುತ್ತಿದ್ದು, 4,000 ರು.ಗಳಷ್ಟು ದುಬಾರಿಯೆನಿಸಿದೆ.

ಸೀಟು ಕವರ್

ಸೀಟು ಕವರ್

ಬೇಸಿಗೆಯಲ್ಲಿ ಸಾಮಾನ್ಯ ಸೀಟುಗಳಿಗಿಂತಲೂ ಭಿನ್ನವಾದ ಲೆಥರ್ ಸೀಟುಗಳು ಹೆಚ್ಚು ಬಿಸಿಯಾಗುವ ಹಾಗೂ ದೇಹಕ್ಕೆ ಅಂಟಿಕೊಳ್ಳುವ ಸಂಭವವಿದೆ. ಹಾಗಾಗಿ ಸೀಟು ಕವರ್ ಲಗತ್ತಿಸುವುದರಿಂದ ಇದನ್ನು ತಪ್ಪಿಸಬಹುದಾಗಿದೆ.

ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು 10 ಕಾರು ಆಕ್ಸೆಸರಿಗಳು

ಮೇಲೆ ತಿಳಿಸಿದ ಎಲ್ಲ ವಿಚಾರಗಳು ಬೇಸಿಗೆ ಕಾಲದಲ್ಲಿ ನಿಮ್ಮ ಕಾರನ್ನು ತಂಪಾಗಿರಿಸಲು ನೆರವಿಗೆ ಬರುವ ವಿಶ್ವಾಸ ನಮ್ಮದ್ದು. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳಿಗೂ ಮನ್ನಣೆ ಕೊಡಲಾಗುವುದು. ಇದಕ್ಕಾಗಿ ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಪ್ರತಿಕ್ರಿಯಿಸಿರಿ...

Most Read Articles

Kannada
English summary
There are now a whole lot of accessories available for your car that can help provide some relief from the heat. Stay cool with this list of summer extras for your four wheels.
Story first published: Thursday, April 24, 2014, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X