ಹದಿ ಹರೆಯದ ಯುವತಿಯರಿಗೆ 'ಡ್ರೈವಿಂಗ್ ಟಿಪ್ಸ್'

ಕಾರು ಡ್ರೈವಿಂಗ್ ಎಂಬುದು ಅದ್ಭುತ ಕಲೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಕೇವಲ ಯುವಕರು ಮಾತ್ರವಲ್ಲ ಯುವತಿಯರು ಸಹ ಡ್ರೈವಿಂಗ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಹದಿ ಹರೆಯದಲ್ಲಿ ನಿಸರ್ಗ ಪ್ರದೇಶದಲ್ಲಿ ಗಾಳಿ ಜೊತೆ ಸಂಭಾಷಣೆ ಮಾಡುತ್ತಾ ಡ್ರೈವಿಂಗ್ ಮಾಡುವ ಅನುಭವವೇ ಬೇರೆ. ಇದೀಗ 18ರ ಪ್ರಾಯ ತುಂಬುವ ಹರೆಯದವರೂ ತಮ್ಮದೇ ವಾಹನಗಳಲ್ಲಿ ಓಡಾಡುತ್ತಾರೆ. ಯೌವನದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲದಲ್ಲಿರುವ ಟಿನೇಜ್ ಹುಡುಗಿಯರು ಕೆಲವೊಂದು ಡ್ರೈವಿಂಗ್ ಕೊರತೆಗಳನ್ನು ಅನುಭವಿಸುತ್ತಾರೆ.

ಹಾಗೆಂದ ಮಾತ್ರಕ್ಕೆ ಟಿನೇಜ್ ಗರ್ಲ್ಸ್‌ಗಳೆಲ್ಲ ಉತ್ತಮ ಚಾಲನಾ ಕೌಶಲ್ಯಗಳನ್ನು ಹೊಂದಿಲ್ಲವೆಂಬ ಅರ್ಥ ಬರುವುದಿಲ್ಲ. ಬದಲಾಗಿ ಟಿನೇಜ್ ಹುಡುಗಿಯರು ಎಚ್ಚರ ವಹಿಸಬೇಕಾದ ಕೆಲವೊಂದು ಅಂಶಗಳನ್ನು ಇಲ್ಲಿ ಬೊಟ್ಟು ಮಾಡಿ ತೋರಿಸಲಿದ್ದೇವೆ.

ಮೊಬೈಲ್ ಚಿಟ್-ಚಾಟ್ ಬಿಟ್ಟುಬಿಡಿ

ಮೊಬೈಲ್ ಚಿಟ್-ಚಾಟ್ ಬಿಟ್ಟುಬಿಡಿ

ಟಿನೇಜ್ ಹುಡುಗಿಯರಲ್ಲಿ ನಮ್ಮ ಮೊದಲ ವಿನಂತಿ ಏನೆಂದರೆ ಕನಿಷ್ಠ ಪಕ್ಷ ಡ್ರೈವಿಂಗ್ ಸಂದರ್ಭದಲ್ಲಾದರೂ ಮೊಬೈಲ್ ಚಾಟಿಂಗ್‌ಗಳಿಂದ ದೂರವಿರಿ. ಹಾಗೆಯೇ ಒಳಬರುವ ಯಾವುದೇ ಕಾಲ್‌ಗಳನ್ನು ಸ್ವೀಕರಿಸದೆ ಮೊಬೈಲ್ ಸೈಲಂಟ್ ಮೋಡ್‌ನಲ್ಲಿರಿಸಿದರೆ ಒಳಿತು.

ಗಾಜು ಮೆಕಪ್ ಮಿರರ್ ಅಲ್ಲ

ಗಾಜು ಮೆಕಪ್ ಮಿರರ್ ಅಲ್ಲ

ಇನ್ನು ಕಾರಿನ ಗಾಜುಗಳನ್ನು ಮೆಕಪ್ ಮಿರರ್ ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಳ್ಳದಿರಿ. ಚಾಲನೆ ಸಂದರ್ಭದಲ್ಲಿ ಸಂಪೂರ್ಣ ಗಮನ ರಸ್ತೆ ಮೇಲಿರಲಿ.

ವೇಗದ ಮಿತಿ ಮೀರದಿರಲಿ

ವೇಗದ ಮಿತಿ ಮೀರದಿರಲಿ

ಸಾಮಾನ್ಯವಾಗಿ ಟಿನೇಜ್ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಿದ್ದು, ತೆಳ್ಳಗಿರಲು ಬಯಸುತ್ತಾರೆ. ಅದೇ ರೀತಿ ನಿಮ್ಮ ಕಾರಿನ ವೇಗದ ಮಿತಿ ಮೀರದಿರಲಿ ಎಂಬುದು ನಮ್ಮ ಆಶಯವಾಗಿದೆ.

ಡ್ರೈವಿಂಗ್ ವೇಳೆ ಮೇಕಪ್‌ ಬೇಡ

ಡ್ರೈವಿಂಗ್ ವೇಳೆ ಮೇಕಪ್‌ ಬೇಡ

ಇದು ಟಿನೇಜ್ ಹುಡುಗಿಯರಲ್ಲಿ ಕಂಡುಬಂದಿರುವ ಇನ್ನೊಂದು ನೆಗೆಟಿವ್ ಅಂಶ. ಎಲ್ಲೇ ಹೋದರೂ ಮೇಕಪ್ ಕಿಟ್ ತಮ್ಮ ಜತೆ ಸಾಗಿಸುವ ಯುವತಿಯರು ಕಾರು ಚಾಲನೆ ಸಂದರ್ಭದಲ್ಲೂ ಇದನ್ನು ಬಳಸುವ ಮೂಲಕ ಅಪಾಯ ಆಹ್ವಾನಿಸುತ್ತಾರೆ. ಯಾವುದೇ ಕಾರಣಕ್ಕೂ ಡ್ರೈವಿಂಗ್ ಸಂದರ್ಭದಲ್ಲಿ ಮೆಕಪ್‌ನಲ್ಲಿ ತೊಡಗದಿರಿ. ಲಿಪ್‌ಸ್ಟಿಕ್ ಹಚ್ಚುವುದು, ನೈಲ್ ಶೈನಿಂಗ್ ಇತ್ಯಾದಿ ಕಾರ್ಯಗಳನ್ನು ಸುರಕ್ಷಿತವಾಗಿ ಗುರಿ ತಲುಪಿದ ಬಳಿಕವೂ ಮಾಡಬಹುದಲ್ಲವೇ?

ಏಕಾಗ್ರತೆಗೆ ಭಂಗವುಂಟಾಗದಿರಲಿ

ಏಕಾಗ್ರತೆಗೆ ಭಂಗವುಂಟಾಗದಿರಲಿ

ಯುವತಿಯರು ತಮ್ಮ ಗೆಳೆಯ, ಗೆಳತಿಯರ ಜತೆ ಜಾಲಿ ರೈಡ್ ಹೊಡೆಯುವುದು ಅಥವಾ ವಿಕೆಂಡ್ ಪ್ರವಾಸ ತೆರಳುವುದನ್ನು ಇಷ್ಟಪಡುತ್ತಾರೆ. ಹಾಗಿರಬೇಕೆಂದರೆ ಸಹ ಪ್ರಯಾಣಿಕರು ನಿಮ್ಮ ಏಕಾಗ್ರತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆಯಿದೆ.

ನಿಧಾನವೇ ಪ್ರಧಾನ

ನಿಧಾನವೇ ಪ್ರಧಾನ

ಡ್ರೈವಿಂಗ್ ವೇಳೆಯಲ್ಲಿ 'ನಿಧಾನವೇ ಪ್ರಧಾನ' ಎಂಬ ವೇದ ವಾಕ್ಯವನ್ನು ಎಂದಿಗೂ ಮರೆಯದಿರಿ. ಹಾಗೆಯೇ ಓವರ್‌ಟೇಕ್ ಗೋಜಿಗೆ ಹೋಗದೇ ಸಂಚಾರ ನಿಯಮಗಳನ್ನು ಪಾಲಿಸುತ್ತಾ ಮುಂದಕ್ಕೆ ಸಾಗಿರಿ.

ಆತ್ಮವಿಶ್ವಾಸ

ಆತ್ಮವಿಶ್ವಾಸ

ಇಷ್ಟೆಲ್ಲ ಆಧರೂ ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ನಿಮ್ಮ ಡ್ರೈವಿಂಗ್ ಮೇಲೆ ಸಂಪೂರ್ಣ ಆತ್ಮವಿಶ್ವಾಸ ಇರಬೇಕಾಗಿರುವುದು ಅತಿ ಅಗತ್ಯವಾಗಿದೆ. ಇಂದಿನ ಯುವಕ-ಯುವತಿಯರು ತಮ್ಮ ವಯಸ್ಸಿಗೆ ತಕ್ಕದಲ್ಲದ ವಾಹನಗಳನ್ನು ಚಾಲನೆ ಮಾಡಿ ತಪ್ಪಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಟಿನೇಜ್ ಹುಡುಗಿಯರು ಹೆಚ್ಚಿನ ಗಮನ ಹರಿಸಬೇಕಾಗಿರುವುದು ಅತಿ ಮುಖ್ಯವಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮುಖಾಂತರ ಹಂಚಿಕೊಳ್ಳಿರಿ.

Most Read Articles

Kannada
English summary
Car driving is an art by itself, every teenager loves to drive their vehicle on open roads. However careless teenage driving poses certain risk. We list out important teenage driving safety tips for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X