ಕಾರಿಗೆ ದೋಷವನ್ನುಂಟು ಮಾಡುವ 10 ಕೆಟ್ಟ ಡ್ರೈವಿಂಗ್ ಚಟಗಳು

By Nagaraja

ಜಾಗರೂಕರಾಗಿರಿ! ನೀವು ತಿಳಿದೋ ತಿಳಿಯದೆಯೋ ಮಾಡುವ ಕೆಲವು ಡ್ರೈವಿಂಗ್ ಚಟಗಳಿಂದಾಗಿ ಕಾರಿಗೆ ಕೆಡುಕನ್ನುಂಟು ಮಾಡುವ ಭೀತಿಯಿದೆ. ಮಾನವ ತನ್ನ ಜೀವನೋಪಾಯಕ್ಕಾಗಿ ಆಹಾರವನ್ನು ಸೇವಿಸುತ್ತಾನೋ, ಅನಾರೋಗ್ಯ ಬಂದಾಗ ವೈದ್ಯರನ್ನು ಸಂದರ್ಶಿಸುತ್ತಾನೆಯೋ ಅದೇ ರೀತಿ ಕಾರುಗಳ ಆರೋಗ್ಯವನ್ನು ಸಮಯಕ್ಕೆ ತಕ್ಕಂತೆ ಪರಿಶೀಲಿಸುವುದು ಅತ್ಯವಶ್ಯಕವಾಗಿದೆ.

ವಿವಿಧ ರೀತಿಯ ಎಂಜಿನ್ ಗಳು ಹಲವು ವಿಧಧ ಇಂಧನ, ಎಂಜಿನ್ ಒಯಿಲ್, ಕೂಲಂಟ್ ಗಳಿಂದ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಏರುಪೇರಾದರೂ ಎಂಜಿನ್ ನಿರ್ವಹಣೆಗೆ ತೊಂದರೆಯುಂಟಾಗಲಿದೆ. ಈ ನಿಟ್ಟಿನಲ್ಲಿ ಮಾಲಿಕರ ಮ್ಯಾನುವಲ್ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೋಧಿಸುವುದು ಅತ್ಯುತ್ತಮ.

ಓವರ್ ಲೋಡ್

ಓವರ್ ಲೋಡ್

ನಿಯಮಿತ ಭಾರಕ್ಕಿಂತಲೂ ಹೆಚ್ಚು ಲಗ್ಗೇಜ್ ಹೊತ್ತೊಯ್ಯುವುದು ಕಾರಿನ ಒಟ್ಟಾರೆ ನಿರ್ವಹಣೆಗೆ ತೊಂದರೆಯನ್ನುಂಟು ಮಾಡಲಿದೆ. ಇದರಿಂದ ಕಾರಿನ ಇಂಧನ ಕ್ಷಮತೆ ಮೇಲೆ ಪರಿಣಾಮ ಬೀರುವುದಲ್ಲದೆ ಸಸ್ಪೆನ್ಷನ್ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಲಿದೆ.

ಅಸಮರ್ಪಕ ಕ್ಲಚ್ ಬಳಕೆ

ಅಸಮರ್ಪಕ ಕ್ಲಚ್ ಬಳಕೆ

ಅಸಮರ್ಪಕವಾದ ಕ್ಲಚ್ ಬಳಕೆಯಿಂದಾಗಿ ಗೇರ್ ಬಾಕ್ಸ್ ಮೇಲೆ ಪೆಟ್ಟಾಗುವ ಭೀತಿಯಿರುತ್ತದೆ. ನಗರ ಪ್ರದೇಶದಲ್ಲಿ ಟ್ರಾಫಿಕ್ ತೀರಾ ಸಾಮಾನ್ಯವಾದ ದೃಶ್ಯ. ಇಂತಹ ದುಸ್ಥಿತಿಯಲ್ಲಿ ಕ್ಲಚ್ ಬಳಕೆ ಜಾಸ್ತಿಯಿರುವುದರಿಂದ ಹೆಚ್ಚು ಜಾಗರೂಕರಾಗಿ ಗಾಡಿ ಓಡಿಸತಕ್ಕದ್ದು.

ಚಕ್ರ ಸಮತೋಲನೆ

ಚಕ್ರ ಸಮತೋಲನೆ

ರಸ್ತೆಗೆ ನೇರವಾಗಿ ಸಂಪರ್ಕ ಹೊಂದಿರುವ ಚಕ್ರಗಳು ವಾಹನಗಳು ಮುಂದೆ ಸಾಗಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಚಕ್ರಗಳಿಗೆ ಅತಿ ಹೆಚ್ಚು ಕೇಡು ಸಂಭವಿಸುವ ಭೀತಿಯಿರುತ್ತದೆ. ಹಾಗಾಗಿ ನಿರಂತರ ಅಂತರಾಳದಲ್ಲಿ ಚಕ್ರಗಳ ಜೋಡಣೆಯನ್ನು ಪರಿಶೀಲಿಸುವುದು ಒಳ್ಳೆಯದು.

ಚಕ್ರದೊತ್ತಡ

ಚಕ್ರದೊತ್ತಡ

ಪ್ರತಿಯೊಂದು ವಾಹನಗಳಿಗೂ ನಿರ್ದಿಷ್ಟ ಪ್ರಮಾಣದ ಚಕ್ರದೊತ್ತಡವಿರುತ್ತದೆ. ಇದರಲ್ಲಿ ಏರು ಪೇರಾದಲ್ಲಿ ಕಾರಿನ ಒಟ್ಟಾರೆ ಹ್ಯಾಂಡ್ಲಿಂಗ್ ಮೇಲೆ ಪರಿಣಾಮ ಬೀರಲಿದೆ.

ಸರ್ವೀಸ್ ಕೊರತೆ

ಸರ್ವೀಸ್ ಕೊರತೆ

ಇನ್ನು ಕೆಲವು ಮಾಲಿಕರು ಸರ್ವಿಸ್ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ನಿರಂತರ ಅಂತರಾಳದಲ್ಲಿ ಸರ್ವಿಸ್ ಮಾಡಿಸದಿದ್ದಲ್ಲಿ ಕಾರಿನ ಒಟ್ಟಾರೆ ಬಾಳ್ವಿಕೆಯ ಮೇಲೆ ದೋಷವನ್ನುಂಟು ಮಾಡಲಿದೆ.

ಅತಿಯಾಗಿ ಬ್ರೇಕ್ ಬಳಕೆ

ಅತಿಯಾಗಿ ಬ್ರೇಕ್ ಬಳಕೆ

ಬ್ರೇಕ್ ಕಾರಿಗೆ ಭದ್ರತೆಯನ್ನು ಒದಗಿಸುವುದಾದರೂ 'ಅತಿಯಾದರೆ ಅಮೃತವೂ ವಿಷ' ಎಂಬಂತೆ ಅತಿಯಾದ ಬಳಕೆಯು ಬ್ರೇಕ್ ಪೆಡಲ್ ಮೇಲೆ ಹಾನಿಯನ್ನುಂಟು ಮಾಡಲಿದೆ.

ವಿಶ್ರಮವಿಲ್ಲದ ಕೆಲಸ

ವಿಶ್ರಮವಿಲ್ಲದ ಕೆಲಸ

ಯಾರೇ ಆದರೂ ವಿಶ್ರಮವಿಲ್ಲದ ಕೆಲಸವು ತೊಂದರೆಯನ್ನುಂಟು ಮಾಡಲಿದೆ ತಾನೇ? ಹಾಗೆಯೇ ಎಂಜಿನ್‌ಗೆ ವಿಶ್ರಮವಿಲ್ಲದೆ ಬಳಕೆ ಮಾಡಿದರೆ ದೀರ್ಘವಾಧಿಯಲ್ಲಿ ತೊಂದರೆಯನ್ನುಂಟು ಮಾಡಲಿದೆ.

ಅಂತರ ಪಾಲಿಸಿ

ಅಂತರ ಪಾಲಿಸಿ

'ಅವಸರವೇ ಅಪಘಾತಕ್ಕೆ ಕಾರಣ' ಎಂಬ ವಾಕ್ಯ ಇಲ್ಲಿ ಹೆಚ್ಚು ಮಹತ್ವ ಗಿಟ್ಟಿಸಿಕೊಳ್ಳುತ್ತದೆ. ಹಾಗಾಗಿ ವಾಹನಗಳ ನಡುವೆ ಅಂತರವನ್ನು ಪಾಲಿಸುವುದರ ಮೂಲಕ ಸಂಭವನೀಯ ಅಪಘಾತವನ್ನು ತಪ್ಪಿಸಬಹುದಾಗಿದೆ.

ಹ್ಯಾಂಡ್ ಬ್ರೇಕ್ ಮಹತ್ವ

ಹ್ಯಾಂಡ್ ಬ್ರೇಕ್ ಮಹತ್ವ

ಕಾರಿನಿಂದ ಇಳಿಯುವ ತರಾತುರಿಯಲ್ಲಿ ಗೇರ್ ನಲ್ಲಿಟ್ಟುಕೊಂಡು ಹ್ಯಾಂಡ್ ಬ್ರೇಕ್ ಹಾಕದೇ ಚಾಲಕರು ಜಾಗ ಖಾಲಿ ಮಾಡುತ್ತಾರೆ. ತನ್ಮೂಲಕ ಅಪಾಯವನ್ನು ಆಹ್ವಾನಿಸುತ್ತಾರೆ.

ಮನೋಸ್ಥಿತಿ

ಮನೋಸ್ಥಿತಿ

ಇಷ್ಟೆಲ್ಲ ಆದರೂ ಚಾಲಕನ ಮನೋಸ್ಥಿತಿ ಡ್ರೈವಿಂಗ್ ಮೇಲೆ ಪರಿಣಾಮ ಬೀರಲಿದೆ ಎಂದು ಅಧ್ಯಯನ ವರದಿ ತಿಳಿಸುತ್ತದೆ. ಹಾಗಾಗಿ ನೀವು ಒಳ್ಳೆಯ ಮೂಡ್ ನಲ್ಲಿರದಿದ್ದಲ್ಲಿ ಡ್ರೈವಿಂಗ್ ಮಾಡುವ ಗೋಜಿಗೆ ಹೋಗಬೇಡಿರಿ.

Most Read Articles

Kannada
English summary
10 bad driving habits that you should not have
Story first published: Friday, July 22, 2016, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X