ಎಚ್ಚರ; ಇಂಥ ಸಹ ಪ್ರಯಾಣಿಕರು ಅವಘಡಕ್ಕೆ ಕಾರಣವಾಗಬಲ್ಲರು!

ಸುರಕ್ಷಿತ ಕಾರು ಸವಾರಿಗೆ ಸಹ ಪ್ರಮಾಣಿಕರ ಪಾತ್ರ ಅತಿ ಪ್ರಾಮುಖ್ಯ ವಹಿಸುತ್ತದೆ. ಕೆಲವರಿಗಂತೂ ಸಹ ಪ್ರಯಾಣಿಕರಿಲ್ಲದೆ ಒಬ್ಬನೇ ಡ್ರೈವಿಂಗ್ ಮಾಡಲು ತುಂಬಾನೇ ಬೋರಿಂಗ್ ಆಗಿರುತ್ತದೆ. ಇದನ್ನು ತಪ್ಪಿಸಲು ಸುಮ್ ಸುಮ್ನೆ ಜಾಲಿ ರೈಡ್ ಮೂಡ್‌ನಲ್ಲಿದ್ದಾಗ ತಮ್ಮ ಸ್ನೇಹಿತರನ್ನು ಡ್ರೈವಿಂಗ್‌ಗಾಗಿ ಆಹ್ವಾನಿಸುತ್ತಾರೆ.

ಅದೇ ಹೊತ್ತಿಗೆ ಇಂತಹ ಸಹ ಪ್ರಯಾಣಿಕರು ಕಿರುಕುಳ ನೀಡಲು ಆರಂಭಿಸಿದರೆ ಪರಿಸ್ಥಿತಿ ಏನಾಗಬಹುದು? ನೀವು ಯೋಚಿಸಿ ನೋಡಿದ್ರಾ? ಇಲ್ಲೂ ಸೇಫ್ ಡ್ರೈವಿಂಗ್‌ನಲ್ಲಿ ಸಹ ಪ್ರಮಾಣಿಕರ ಪಾತ್ರ ಬಹುದೊಡ್ಡದಾಗಿರುತ್ತದೆ.

ಸಹ ಪ್ರಯಾಣಿಕರು ವಿಭಿನ್ನ ವಿಧಾನಗಳಲ್ಲಿ ಚಾಲಕನ ಮೇಲೆ ಪ್ರಭಾವ ಬೀರಬಹುದು. ಇದರಲ್ಲಿ ಪ್ರಮುಖವಾಗಿಯೂ ಮಾನಿಸಿಕ ಪರಿಣಾಮ ಅತಿ ದೊಡ್ಡ ಅನಾಹುತಗಳಿಗೂ ಎಡೆಮಾಡಿಕೊಡಬಹುದು. ಮೇಲ್ನೋಟಕ್ಕೆ ವಿಷಯ ಕಿರಿದೆನಿಸಿದರೂ ಈ ಬಗ್ಗೆ ಚಾಲಕರು ಗಂಭೀರವಾಗಿ ಯೋಚಿಸುವುದು ಒಳ್ಳೆಯದು!

ಪ್ರಯಾಣದ ನಡುವೆ ನಿದ್ರೆಗೆ ಜಾರುವ ಸಹ ಪ್ರಯಾಣಿಕ

ಪ್ರಯಾಣದ ನಡುವೆ ನಿದ್ರೆಗೆ ಜಾರುವ ಸಹ ಪ್ರಯಾಣಿಕ

ಇಂತಹ ಹಲವು ಪ್ರಸಂಗಗಳನ್ನು ನೀವು ಕಣ್ಣಾರೆ ನೋಡಿರಬಹುದು ಅಥವಾ ಅನುಭವಕ್ಕೆ ಬಂದಿರಬಹುದು. ಚಾಲಕನ ಬಳಿ ಕುಳಿತುಕೊಳ್ಳುವ ಸಹ ಪ್ರಯಾಣಿಕರು ಕಾರು ಸಂಚರಿಸುತ್ತಿರುವಂತೆಯೇ ನಿದ್ರಾ ದೇವಿಗೆ ಶರಣಾಗುತ್ತಾನೆ. ಇದು ಚಾಲಕನ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದ್ದು, ಚಾಲಕ ನಿದ್ರೆಯ ಅಮಲಿಗೆ ಜಾರುವ ಸಾಧ್ಯತೆಯಿದೆ. ಇದರಿಂದ ಅಪಾಯ ಸೃಷ್ಟಿಯಾಗುವ ಸಾಧ್ಯತೆಗಳೇ ಹೆಚ್ಚಾಗಿದ್ದು, ಈ ಬಗ್ಗೆ ಚಾಲಕ ಎಚ್ಚರದಿಂದಿರಬೇಕಾಗಿರುವುದು ಅತಿ ಅಗತ್ಯ.

ಚಾಲಕನ ಗಮನ ಬೇರೆಡೆಗೆ ಸೆಳೆಯುವ ಯತ್ನ

ಚಾಲಕನ ಗಮನ ಬೇರೆಡೆಗೆ ಸೆಳೆಯುವ ಯತ್ನ

ಇನ್ನು ಕೆಲವು ಬಾರಿ ನೋಡು ನೋಡುತ್ತಿರುವಂತೆ ಕಾರಿನಲ್ಲಿ ಸಂಚರಿಸುವ ವೇಳೆಯಲ್ಲಿ ನಿಮ್ಮ ಬಳಿ ಕುಳಿತುಕೊಳ್ಳುವ ಸಹ ಪ್ರಮಾಣಿಕ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಾನೆ. ಮಾರ್ಗದ ಬದಿಗಳಲ್ಲಿರುವ ದೃಶ್ಯದ ಬಗ್ಗೆ ವರ್ಣಿಸುತ್ತ ನಿಮ್ಮನ್ನು ತೊಂದರೆ ಕೊಡುತ್ತಾರೆ. ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡುತ್ತಿಲ್ಲವಾದರೂ ಇಂತಹ ವರ್ತನೆಗಳು ಚಾಲಕನ ಸೇಫ್ ಡ್ರೈವಿಂಗ್‌ಗೆ ಅಡ್ಡಿ ತರಬಲ್ಲದ್ದು.

ಕಾಮೆಂಟ್ ಕೊಡುತ್ತಿರುವ ಸಹ ಪ್ರಯಾಣಿಕ

ಕಾಮೆಂಟ್ ಕೊಡುತ್ತಿರುವ ಸಹ ಪ್ರಯಾಣಿಕ

ಇಂತಹ ಸಹ ಪ್ರಯಾಣಿಕರನ್ನು ಕರದೊಯ್ದುವುದು ಬಹಳ ಡೇಜಂರ್! ಅಚಾನಕ್ ಆಗಿ ಬರುವ ತಿರುವುಗಳು ಅಥವಾ ಸಡನ್ ಬ್ರೇಕ್ ಸನ್ನಿವೇಶಗಳಲ್ಲಿ ಇಂಥ ಪ್ರಯಾಣಿಕರು ನಕರಾತ್ಮಕ ರೀತಿಯಲ್ಲಿ ಕಾಮೆಂಟ್‌ ಕೊಡುತ್ತಾರೆ. ಇದರಿಂದ ಚಾಲಕನಲ್ಲಿ ಭಯ ಹುಟ್ಟಿಕೊಳ್ಳುವ ಸಾಧ್ಯತೆಯಿದೆ. ಡ್ರೈವಿಂಗ್ ಸಂದರ್ಭದಲ್ಲಿ ಇಂಥ ಪ್ರಯಾಣಿಕರನ್ನು ದೂರವಿಡುವುದು ಒಳಿತು.

ಕೀಟಲೆ ಮಾಡುವ ಸಹ ಪ್ರಯಾಣಿಕ

ಕೀಟಲೆ ಮಾಡುವ ಸಹ ಪ್ರಯಾಣಿಕ

ಇನ್ನು ಕೆಲವರಂತೂ ಕಾರಿನ ಎದುರುಗಡೆ ಕುಳಿತುಕೊಂಡು ಸ್ಟೀರಿಯೊ ಆನ್ ಮಾಡುವುದು, ವೊಲ್ಯಮ್ ಹೆಚ್ಚು ಕಡಿಮೆ ಇತ್ಯಾದಿ ಕೀಟಲೆ ಪ್ರಕ್ರಿಯೆಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಚಾಲಕನ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭಾರಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಯಿದೆ.

ಅನಗತ್ಯ ಶಬ್ದ ಮಾಡುವ ಯಾತ್ರಿಕರು

ಅನಗತ್ಯ ಶಬ್ದ ಮಾಡುವ ಯಾತ್ರಿಕರು

ಇನ್ನು ಕೆಲವರು ಹಿಂದುಗಡೆ ಸೀಟ್‌ನಲ್ಲಿ ಕುಳಿತುಕೊಂಡರೂ ಸಹ ಅನಗತ್ಯ ಶಬ್ಧಗಳನ್ನು ಮಾಡುತ್ತಿರುತ್ತಾರೆ. ಕಾರಿನಲ್ಲಿ ಸ್ಟಿರಿಯೊ ರನ್ನಿಂಗ್ ಇದ್ದರೂ ಅವರು ಜೋರಾಗಿ ಹಾಡುಗಳನ್ನು ಹಾಡುತ್ತಿರುತ್ತಾರೆ. ಅಷ್ಟೇ ಅಲ್ಲದೆ ಹಿಂದೆ ಕುಳಿತುಕೊಂಡು ಚಾಲಕನ ಬಗ್ಗೆ ಕಾಮೆಂಟ್ ಮಾಡುತ್ತಿರುತ್ತಾರೆ. ನೀನಗೇನು ಕಾರು ನಿಧಾನವಾಗಿ ಡ್ರೈವ್ ಮಾಡಲು ಗೊತ್ತಿಲ್ಲವೇ ಎಂದು ಕೇಳುತ್ತಾರೆ. ಇದರಿಂದ ಚಾಲಕನ ಗಮನ ವಿಚಲಿತವಾಗುವ ಸಾಧ್ಯತೆಯಿದೆ.

ಇಂಥ ಯಾತ್ರಿಕರಿಂದ ದೂರವಿರಿ

ಇಂಥ ಯಾತ್ರಿಕರಿಂದ ದೂರವಿರಿ

ಕಾರು ಪಯಣದ ಸಂದರ್ಭದಲ್ಲಿ ಇಂಥ ಪ್ರಯಾಣಿಕರಿಂದ ದೂರವಿರುವುದು ಒಳಿತು. ಈ ಮೂಲಕ ಅಚಾನಕ್ ದುರ್ಘಟನೆಯನ್ನು ತಪ್ಪಿಸಲು ಡ್ರೈವ್ ಸ್ಪಾರ್ಕ್ ಕೊಟ್ಟಿರುವ ಮೇಲಿನ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ.

Most Read Articles

Kannada
English summary
Here we highlight some dangersome car passengers to have in your car while driving. Does our list, match-up with an annoying car passenger type you had while driving?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X