Just In
- 1 hr ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 2 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 2 hrs ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆ ಕಾರು ಖರೀದಿಗೆ ಟಾಪ್ 8 ಸಲಹೆಗಳು!
ಹೊಸ ಕಾರುಗಳ ಮಾರಾಟಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಳೆ ಕಾರುಗಳು ಮಾರಾಟವಾಗುತ್ತಿವೆ. ಇದಕ್ಕೆ ಕಾರಣ ಹಲವಾರು. ಅಧ್ಯಯನ ವರದಿಯೊಂದರ ಪ್ರಕಾರ ಮೊದಲಾಗಿ ಕಾರು ಖರೀದಿ ಮಾಡಬಯಸುವವರು ಹೊಸ ಕಾರಿಗಿಂತಲೂ ಹಳೆ ಕಾರುಗಳನ್ನು ಖರೀದಿಸಲು ಬಯಸುತ್ತಾರೆ.
ಇದರ ಸಾರಾಂಶ ತುಂಬಾನೇ ಸರಳ. ಯಾವುದೇ ವಸ್ತು ಖರೀದಿಸುವುದಕ್ಕಿಂತ ಮೊದಲು ಅದರ ಸ್ಯಾಂಪಾಲ್ ನೋಡುವುದು ನಮ್ಮ ಜಾಯಮಾನ. ಇದೇ ರೀತಿಯಲ್ಲಿ ಚಿಂತಿಸುತ್ತಾ ಸಾಗಿದರೆ ಹಳೆ ಕಾರು ವಿಚಾರದಲ್ಲೂ ಗ್ರಾಹಕರ ಟೇಸ್ಟ್ ಅರಿಯಬಹುದು. ಖಂಡಿತವಾಗಿಯೂ ಹಳೆ ಕಾರು ಕೊಳ್ಳುವವನಿಗೆ ಹೊಸ ಕಾರು ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ.
ಆದರೆ
ಹೊಸ
ಕಾರುಗಳನ್ನು
ಹೋಲಿಸಿದರೆ
ಬಳಕೆಯಾದ
ಕಾರುಗಳನ್ನು
ಖರೀದಿಸುವುದು
ತುಂಬಾನೇ
ಕಷ್ಟಕರ.
ಹೊಸ
ಕಾರು
ಖರೀದಿಸುವಾಗ
ನಮಗೆ
ನೈಜ
ಮಾಹಿತಿ
ಗಿಟ್ಟಿಸಿಕೊಳ್ಳುವುದು
ತುಂಬಾನೇ
ಸುಲಭ.
ಆದರೆ
ಹಳೆ
ಕಾರು
ಖರೀದಿ
ವಿಚಾರಕ್ಕೆ
ಬಂದಾಗ
ಅನೇಕ
ಅಂಶಗಳ
ಬಗ್ಗೆ
ಗಮನ
ಹರಿಸಬೇಕಾಗುತ್ತದೆ.
ಈ
ನಿಟ್ಟಿನಲ್ಲಿ
ತುಂಬಾನೇ
ಜಾಗರೂಕರಾಗಿರಬೇಕಾಗುತ್ತದೆ.
ಇಂದಿನ
ಈ
ಲೇಖನದ
ಮೂಲಕ
ಹಳೆ
ಕಾರು
ಖರೀದಿಸುವಾಗ
ಗಮನಹರಿಸಬೇಕಾದ
ಮಹತ್ವಪೂರ್ಣ
ವಿಚಾರಗಳ
ಬಗ್ಗೆ
ನಮ್ಮ
ಡ್ರೈವ್
ಸ್ಪಾರ್ಕ್
ತಂಡ
ಮಾಹಿತಿ
ಕೊಡುವ
ಪ್ರಯತ್ನ
ಮಾಡಲಿದೆ.
ಈ
ಬಗ್ಗೆ
ನಿಮ್ಮ
ಅನಿಸಿಕೆಗಳನ್ನು
ನಮ್ಮ
ಜತೆ
ಹಂಚಿಕೊಳ್ಳಲು
ಮರೆಯದಿರಿ...
ಬಟೆಟ್
ಹೊಸ ಕಾರಿನಂತೆ ಹಳೆ ಕಾರು ಖರೀದಿ ವಿಚಾರದಲ್ಲೂ ಮೊದಲು ನೀವು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕಾಗುತ್ತದೆ. ನಿಮ್ಮದ್ದು ಸಣ್ಣ ಕುಟುಂಬವಾಗಿದ್ದು, ನಾಲ್ಕು ಪ್ರಯಾಣಿಕರನ್ನಷ್ಟೇ ಹೊಂದಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುವುದು. ಅದೇ ಹೊತ್ತಿಗೆ ದೀರ್ಘ ಪಯಣ ಬಯಸುವುದಾದ್ದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಸದಸ್ಯರನ್ನು ನಿಮ್ಮ ಕುಟುಂಬ ಹೊಂದಿರುವುದಲ್ಲಿ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಆಯ್ಕೆ ಮಾಡಿಕೊಳ್ಳಬಹುದು.
ಅವಲೋಕನ
ಎರಡನೇಯದಾಗಿ ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಸದ್ಯ ಕಾರಿನ ಮಾಡೆಲ್ ಕುರಿತು ಸರಿಯಾದ ಮಾಹಿತಿ ಪಡೆಯಲು ಇಂಟರ್ ನೆಟ್ ನಿಮ್ಮ ನೆರವಿಗೆ ಬರಲಿದೆ. ಹಾಗಾಗಿ ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು.
ಸರಿಯಾದ ಡೀಲರುಗಳ ಆಯ್ಕೆ
ನೀವು ಮಾಡಬೇಕಾಗಿರುವ ಇನ್ನೊಂದು ಮಹತ್ವಪೂರ್ಣ ಕೆಲಸವೆಂದರೆ ಹಳೆ ಕಾರು ಖರೀದಿ ವೇಳೆ ಸರಿಯಾದ ವಿತರಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡುವ ಸಾಧ್ಯತೆಯಿದ್ದು, ಹಾಗಾಗಿ ಸ್ಟಾಂಡರ್ಡ್ ಡೀಲರುಗಳನ್ನು ಆಯ್ಕೆ ಮಾಡಿಕೊಳ್ಳಿರಿ...
ಹಣಕಾಸು ನೆರವು
ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫಿನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಾಗಿರುವಾಗ ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳುವುದು ಉತ್ತಮ. ಉದಾಹರಣೆಗೆ ನಿಮ್ಮ ಆದಾಯಕ್ಕೆ ಅನುಸರಿಸಿ ಹೆಚ್ಚು ನಂಬಿಕೆಗ್ರಸ್ಥ ಫಿನಾನ್ಸ್‌ಗಳಿಂದ ಸ್ಪಷ್ಟ ಮಾಹಿತಿ ಪಡೆದು ಸಾಲ ಪಡೆದುಕೊಳ್ಳಿರಿ.
ಟೆಸ್ಟ್ ಡ್ರೈವ್
ನೀವು ಖರೀದಿಸುವ ಹಳೆ ಕಾರು ನೋಡಲು ತುಂಬಾನೇ ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡುವುದು ಹೆಚ್ಚು ಸೂಕ್ತ. ಇಲ್ಲೂ ನೀವು, ನಿಮಗೆ ಪರಿಚಯಿವಿರುವ ಮೆಕ್ಯಾನಿಕ್ ಅಥವಾ ಡ್ರೈವಿಂಗ್ ಮತ್ತು ಕಾರಿನ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುವ ನಿಮ್ಮ ಆಪ್ತ ಸ್ನೇಹಿತರ ನೆರವು ಪಡೆದುಕೊಳ್ಳಬಹುದು. ಈ ಮೂಲಕ ಕಾರು ಎಷ್ಟು ಕೀ.ಮೀ. ಓಡಾಟ ನಡೆಸಿದೆ, ಆಕ್ಸಿಡೆಂಟ್ ಏನಾದರೂ ಸಂಭವಿಸಿದೆಯೇ, ಬಿಡಿಭಾಗ ಡ್ಯಾಮೇಜ್ ಆಗಿದೆಯೇ ಹೀಗೆ ಹಲವಾರು ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳತಕ್ಕದ್ದು.
ಹಳೆ ಕಾರಿನ ದಾಖಲೆ ಪತ್ರ
ಇನ್ನು ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಷ್ಟು ಮಾಲಿಕರು ಹಸ್ತಾಂತರದ ಬಳಿಕ ನಿಮ್ಮ ಬಳಿಗೆ ತಲುಪುತ್ತಿದೆ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿರಿ. ನೆನಪಿರಲಿ ಕಳವಾದ ಕಾರು ಮಾರಾಟ ಮಾಡುವ ಸಾಧ್ಯತೆ ಜಾಸ್ತಿಯಾಗಿದ್ದು, ಹಾಗಾಗಿ ಕಾರು ಸರ್ವಿಸ್ ಬುಕ್ ಬಗ್ಗೆಯೂ ಸರಿಯಾದ ಮಾಹಿತಿ ಪಡೆಯಿರಿ.
ಚೌಕಾಶಿ, ಕಾರ್ ಡೀಲ್
ಮೇಲೆ ತಿಳಿಸಿದ ಎಲ್ಲ ವಿಷಯವೂ ಓಕೆ ಆಗಿದ್ದಲ್ಲಿ ಕಾರು ಉತ್ತಮ ಕಂಡೀಷನ್‌ನಲ್ಲಿದ್ದು, ಖರೀದಿಗೆ ಸೂಕ್ತ ಎಂಬ ವಿಚಾರ ಮನಗಂಡಲ್ಲಿ ಮಾತ್ರ ಡೀಲ್‌ಗೆ ಸಿದ್ಧರಾಗಿರಿ. ಆದರೆ ಡೀಲರುಗಳು ಮುಂದಿಡುವ ಆಫರ್‌ಗೆ ಮುಂದಾಗದೇ ಆದಷ್ಟು ಚೌಕಾಶಿ ಮಾಡಿಕೊಂಡು ಡೀಲ್ ಮುಗಿಸಿ...
ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿ
ಅಂತಿಮವಾಗಿ ವ್ಯವಹಾರ ಮುಗಿದ ಮೇಲೆ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ. ಹ್ಯಾಪಿ ಡ್ರೈವಿಂಗ್..!