ನಿಮ್ಮ ಕಾರಿನಲ್ಲಿರಿಸಬೇಕಾದ ಪ್ರಮುಖ 20 ವಸ್ತುಗಳು

ನೀವು ನಿಮ್ಮ ಕಾರಿನಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದೀರಿ ಎಂದು ಊಹಿಸಿಕೊಳ್ಳಿರಿ. ರಾತ್ರಿ ಸಮಯದಲ್ಲಿ ಸರ್ರನೆ ಸಾಗುತ್ತಿರುವ ಆಕಸ್ಮಾತ್ ನಿಮ್ಮ ಕಾರಿನ ಟೈರ್ ಪಂಚರ್ ಆಯಿತು. ತಕ್ಷಣ ನೀವು ಬ್ರೇಕ್ ಅದುಮುತ್ತೀರಿ. ಅಷ್ಟರ ವೇಳೆ ನಿಮ್ಮ ಕಾರು ಪಂಚರ್ ಆಗಿರುವ ವಿಚಾರ ಮನಗಾನುವಿರಿ.

ಆ ನಿರ್ಜನ ಅಂಧಕಾರ ಪ್ರದೇಶದಲ್ಲಿ ನಿಮ್ಮ ನೆರವಿಗೆ ಯಾರು ಬರುತ್ತಾರೆ? ಇಂತಹ ಸಂದರ್ಭದಲ್ಲಿ ನಾವೇ ಸ್ವಾವಲಂಬಿಗಳಾಗಿರಬೇಕಾರಿವುದು ಅತಿ ಅಗತ್ಯ. ಹೌದು, ನೀವು ಕಾರಿನ ಮಾಲಿಕರಾದರಷ್ಟೇ ಸಾಲದು. ಸಣ್ಣ ಪುಣ್ಣ ಮೆಕ್ಯಾನಿಕಲ್ ಕೆಲಸ ಕೂಡಾ ಅರಿತಿರಬೇಕಾಗಿರುವುದು ಅಷ್ಟೇ ಮುಖ್ಯ.

ಇಲ್ಲಿ ಇನ್ನೊಂದು ಘಟನೆಯನ್ನು ನೆನಪಿಸಿಕೊಳ್ಳಿ. ಇದೇ ರೀತಿ ಕಾರಿನಲ್ಲಿ ಸಾಗುತ್ತಿರುವಾಗ ಅಪಘಾತ ಸಂಭವಿಸಿದ್ದಲ್ಲಿ ಏನು ಮಾಡುವೀರಾ? ಗಾಯಾಳುವಿಗೆ ತಕ್ಷಣ ಪ್ರಥಮ ಚಿಕಿತ್ಸೆ ಕೊಡುವುದು ಅತಿ ಅಗತ್ಯ. ಇದಕ್ಕಾಗಿ ಫಸ್ಟ್ ಏಡ್ ಬಾಕ್ಸ್‌‌ನ ಅಗತ್ಯವಿರುತ್ತದೆ.

ಹೀಗೆ ಪ್ರಶ್ನೆ ಮಾಡುತ್ತಾ ಸಾಗಿದರೆ ಕಾರಿನಲ್ಲಿ ಇರಲೇಬೇಕಾದ ಅತ್ಯಗತ್ಯ ವಸ್ತುಗಳನ್ನು ಪಟ್ಟಿ ಮಾಡಬಹುದು. ಇಂದಿನ ಈ ಲೇಖನ ಮುಖಾಂತರ ಕಾರಿನಲ್ಲಿ ಅಗತ್ಯವಾಗಿ ಇರಿಸಬೇಕಾದ 20 ವಸ್ತುಗಳ ಬಗ್ಗೆ ವಿವರಣೆ ಕೊಡಲಿದ್ದೇವೆ. ನೀವು ಕೂಡಾ ಕಾರೊಂದರ ಮಾಲಿಕರಾಗಿದ್ದಲ್ಲಿ ಖಂಡಿತ ಈ ಲೇಖನ ಇಷ್ಟಪಡುವೀರಾ ಎಂಬ ನಂಬಿಕೆ ನಮ್ಮಲ್ಲಿದೆ.

ನಿಮ್ಮ ಕಾರಿನಲ್ಲಿರಬೇಕಾದ ಪ್ರಮುಖ 20 ವಸ್ತುಗಳು

ಪಯಣ ಎಂಬುದು ಅನಿಶ್ಚಿತತೆಯ ವಿಷಯ. ಚಾಲನೆ ವೇಳೆ ಮುಂದೇನು ಆಗಬಹುದು ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಆದರೆ ಈ ವಿಷಯಗಳನ್ನು ಜತೆಯಲ್ಲಿರಿಸಿದರೆ ನೀವು ಎದುರಿಸಬಹುದಾದ ಕೆಲವೊಂದು ತೊಂದರೆಗಳನ್ನು ನಿವಾರಿಸಬಹುದಾಗಿದೆ.

  • ಆರ್‌ಸಿ ಬುಕ್,
  • ಡ್ರೈವಿಂಗ್ ಲೈಸನ್ಸ್,
  • ಎಮಿಷನ್ ಟೆಸ್ಟ್ ಕಾರ್ಡ್,
  • ವಿಮಾ ಕಾರ್ಡ್,
  • (ಡ್ರೈವಿಂಗ್ ದಸ್ತಾವೇಜುಗಳು) Driving Documents

    (ಡ್ರೈವಿಂಗ್ ದಸ್ತಾವೇಜುಗಳು) Driving Documents

    ಈ ಕೆಳಗಿನ ಪ್ರಮುಖ ಡ್ರೈವಿಂಗ್ ದಸ್ತಾವೇಜುಗಳನ್ನು ನಿಮ್ಮ ಜತೆಯಲ್ಲಿರಿಸಲು ಮರೆಯದಿರಿ. ಇದು ಟ್ರಾಫಿಕ್ ಪೊಲೀಸರಿಂದ ಎದುರಾಗಬಹುದಾದ ತೊಂದರೆಯನ್ನು ತಪ್ಪಿಸಬಹುದು.

    ಡಕ್ಟ್ ಟೇಪ್ (Duct Tape)

    ಡಕ್ಟ್ ಟೇಪ್ (Duct Tape)

    ನಿಮ್ಮ ಪಯಣದ ಸಂದರ್ಭದಲ್ಲಿ ಡಕ್ಟ್ ಟೇಪ್ ಜತೆಯಲ್ಲಿರಿಸುವುದು ಉತ್ತಮ. ಯಾಕೆಂದರೆ ಪ್ರಯಾಣದ ವೇಳೆ ನಿಮ್ಮ ಕಾರಿನ ಗಾಜುಗಳು ಆಕಸ್ಮಿಕವಾಗಿ ಒಡೆದ್ದಲ್ಲಿ ಡಕ್ಟ್ ಟೇಪ್ ಬಳಸಿ ತಾತ್ಕಾಲಿಕವಾಗಿ ಸರಿಪಡಿಸಬಹುದು. ಆ ಬಳಿಕ ಮೆಕ್ಯಾನಿಕ್ ಬಳಿ ತೆರಳಿ ಸಮಸ್ಯೆ ಬಗೆಹರಿಸಬಹುದು.

    ಅಗ್ನಿಶಾಮಕ-ಯಂತ್ರ (Fire Extinguisher)

    ಅಗ್ನಿಶಾಮಕ-ಯಂತ್ರ (Fire Extinguisher)

    ಚಿತ್ರ ನೋಡುತ್ತಿರುವಂತೆಯೇ ಇದರ ಉಪಯೋಗವನ್ನು ಬಹುತೇಕರು ಅರಿಯಬಲ್ಲರು. ಹೌದು ಬೆಂಕಿ ಆರಿಸಲು ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ ಈ ಅಗ್ನಿಶಾಮಕ ಯಂತ್ರವನ್ನು ಕಾರಿನಲ್ಲಿ ಇರಿಸಬೇಕಾಗಿರುವುದು ಅತಿ ಅಗತ್ಯವಾಗಿದೆ.

    ಘರ್ಷಣೆ ಕಡಿಮೆ ಮಾಡುವ ಎಣ್ಣೆ (Lubricant)

    ಘರ್ಷಣೆ ಕಡಿಮೆ ಮಾಡುವ ಎಣ್ಣೆ (Lubricant)

    ಘರ್ಷಣೆಯನ್ನು ಕಡಿಮೆ ಮಾಡುವಂತಹ ಡಬ್ಲ್ಯು-40ಗಳಂತಹ ಲ್ಯೂಬ್ರಿಕಂಟ್ ಎಣ್ಣೆಗಳನ್ನು ಬಳಸುವುದರಿಂದ, ಪಂಚರ್ ಇತ್ಯಾದಿ ಚಕ್ರಗಳ ಬೋಲ್ಟ್ ಬಿಚ್ಚಲು ಸಹಕರಿಸಲಿದೆ. ಇದು ಚಾಲನೆಯನ್ನು ಸುಲಭಗೊಳಿಸುವಂತಹ ಎಣ್ಣೆಯಾಗಿದೆ.

    ಕಂಬಳಿ ( Blankets)

    ಕಂಬಳಿ ( Blankets)

    ಅನೇಕರು ಕಾರಿನಲ್ಲಿ ಕಂಬಳಿ ಇತ್ಯಾದಿ ಹೊದಿಕೆಗಳನ್ನಿಡಲು ಮರೆತುಬಿಡುತ್ತಾರೆ. ಆದರೆ ದೂರ ಪ್ರಯಾಣ ಅಥವಾ ಪ್ರವಾಸದ ವೇಳೆ ಹವಾಮಾನ ವೈಪರೀತಕ್ಕೆ ಅನುಸಾರವಾಗಿ ಇಂತಹ ಕಂಬಳಿಗಳ ಉಪಯೋಗ ಪಡೆಯಬಹುದಾಗಿದೆ.

    Owner's Manual

    Owner's Manual

    ಪ್ರತಿಯೊಂದು ಕಾರು ಕಂಪನಿಯು ಸಹ ಖರೀದಿ ವೇಳೆ ಗ್ರಾಹಕರಿಗೆ ಮಾಲಿಕರ ಮ್ಯಾನುವಲ್ ಮಾರ್ಗದರ್ಶಿ ಪುಸ್ತಕವನ್ನು ಹಸ್ತಾಂತರಿಸುತ್ತಾರೆ. ಆದರೆ ಇದನ್ನು ಸುಮ್ಮನೆ ಅಲ್ಲಲ್ಲಿ ಬಿಸಾಕದೆ ಕಾರಿನಲ್ಲೇ ಇಟ್ಟಕೊಂಡಲ್ಲಿ, ಚಕ್ರಗಳನ್ನು ಬದಲಾಯಿಸಲು, ಕಾರುಬಿಸಿಯಾದ ಪರಿಸ್ಥಿತಿಯಲ್ಲಿ ಏನು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

    Lug Wrench

    Lug Wrench

    ಕಾರಿನಲ್ಲಿ ತೆರಳುವಾಗ ಲಗ್ ವ್ರೆಚ್ ಕೊಂಡೊಯ್ಯುವುದು ಉತ್ತಮ. ಇದು ಚಕ್ರಗಳನ್ನು ಬದಲಾಯಿಸುವಾಗ ಚಕ್ರಗಳನ್ನು ಬಿಚ್ಚಲು ಸಹಕಾರಿಯಾಗಲಿದೆ.

    ಆಹಾರ (Food)

    ಆಹಾರ (Food)

    ಹಾಗೆಯೇ ಉಪಹಾರ ಸೇವಿಸಲು ಸಣ್ಣ ಪ್ರಮಾಣದಲ್ಲಿ ಆಹಾರಗಳನ್ನು ಒಯ್ಯುವುದು ಉತ್ತಮ. ಆದರೆ ಚಿತ್ರದಲ್ಲಿ ತೋರಿಸಿರುವಂತೆಯೇ ಯಾವುದೇ ಕಾರಣಕ್ಕೂ ಚಲಿಸುವ ಗಾಡಿಯಲ್ಲಿ ಉಪಹಾರ ಸೇವಿಸುವ ಪ್ರಯತ್ನಕ್ಕೆ ಕೈಹಾಕದಿರಿ.

    ಕುಡಿಯುವ ನೀರು ( Drinking Water)

    ಕುಡಿಯುವ ನೀರು ( Drinking Water)

    ಬಹುತೇಕ ಕಾರುಗಳಲ್ಲಿ ಕುಡಿಯುವ ನೀರು ಇಡುವುದಕ್ಕಾಗಿ ಬಾಟಲಿ ಹೋಲ್ಡರ್ ಲಗತ್ತಿಸಲಾಗಿರುತ್ತದೆ. ಇದರ ಉಪಯೋಗವನ್ನು ಪಡೆಯುವ ಮೂಲಕ ನಿಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಬಹುದು.

    ಸ್ಪೇರ್ ಕೀ (spare key)

    ಸ್ಪೇರ್ ಕೀ (spare key)

    ಇಂದಿನ ಬಿಡುವಿಲ್ಲದ ಸಮಯದಲ್ಲಿ ಅನೇಕರು ಕೀಯನ್ನು ಕಾರಿನಲ್ಲೇ ಮರೆತು ಬಿಡುವ ಪ್ರಸಂಗ ಬಹಳ ಬಾರಿ ನೋಡಿರುತ್ತೇವೆ. ಕಾರಿನ ಎಲ್ಲ ಡೋರ್‌ಗಳು ಲಾಕ್ ಆಗಿರುವ ಸಂದರ್ಭದಲ್ಲಿ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಹಾಗಾಗಿ ನೆನಪಿರಲಿ ಹೆಚ್ಚುವರಿ ಕೀಯೊಂದನ್ನು ನಿಮ್ಮ ಜೇಬಿನಲ್ಲಿರಿಸಿದರೆ ಉತ್ತಮ.

    ಜಂಪರ್ ಕೇಬಲ್ (Jumper Cables)

    ಜಂಪರ್ ಕೇಬಲ್ (Jumper Cables)

    ನಿಮ್ಮ ಕಾರಿನಲ್ಲಿರಬೇಕಾದ ಇನ್ನೊಂದು ಅಗತ್ಯದ ವಸ್ತು ಜಂಪರ್ ಕೇಬಲ್. ಹಾಗೊಂದು ವೇಳೆ ಆಕಸ್ಮಾತ್ ನಿಮ್ಮ ಕಾರಿನ ಬ್ಯಾಟರಿ ಡೌನ್ ಆದ್ದಲ್ಲಿ ರಿಚಾರ್ಜ್ ಮಾಡಿಸಲು ಜಂಪರ್ ಕೇಬಲ್ ನೆರವಾಗಲಿದೆ.

    Tire Pressure Gauge

    Tire Pressure Gauge

    ಹಾಗೆಯೇ ಚಕ್ರದ ಒತ್ತಡವನ್ನು ಮಾಪನ ಮಾಡಬಲ್ಲ ಟೈರ್ ಪ್ರೆಶರ್ ಗೇಜ್ ಕೂಡಾ ಕಾರಿನಲ್ಲಿಡಲು ಮರೆಯದಿರಿ. ಪರಿಶೀಲನೆ ವೇಳೆ ಯಾವುದೇ ಏರುಪೇರು ದಾಖಲಾದ್ದಲ್ಲಿ ತಕ್ಷಣ ಪೆಟ್ರೋಲ್ ಬಂಕರ್‌ಗೆ ತೆರಳಿ ಸರಿಪಡಿಸಿಕೊಳ್ಳಿ. ನೆನಪಿಡಿ ಇದು ನಿಮ್ಮ ಕಾರಿನ ಮೈಲೇಜ್ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು.

    ಇಂಧನ ಡಬ್ಬಿ (Fuel Can)

    ಇಂಧನ ಡಬ್ಬಿ (Fuel Can)

    ಇಂಧನ ಡಬ್ಬಿಯಲ್ಲಿ ಹೆಚ್ಚುವರಿ ಇಂಧನವನ್ನು ಹೊತ್ತೊಯ್ಯುವುದರಿಂದ ಎದುರಿಸಬಹುದಾದ ಸಮಸ್ಯೆಯನ್ನು ನಿವಾರಿಸಬಹುದು.

    ಪ್ರಥಮ ಚಿಕಿತ್ಸಾ ಪೆಟ್ಟಿಗೆ ( First Aid Kit)

    ಪ್ರಥಮ ಚಿಕಿತ್ಸಾ ಪೆಟ್ಟಿಗೆ ( First Aid Kit)

    ಇದರ ಉಪಯೋಗ ಎಲ್ಲರಿಗೂ ತಿಳಿದಿದೆ. ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಒದಗಿಸಲು ಪ್ರಥಮ ಚಿಕಿತ್ಸಾ ಪೆಟ್ಟಿಗೆ ನಿಮ್ಮ ನೆರವಿಗೆ ಬರಲಿದೆ.

    ಟಾರ್ಚು (Torch)

    ಟಾರ್ಚು (Torch)

    ರಾತ್ರಿ ಸಮಯದ ಚಾಲನೆಯ ವೇಳೆ ಕಾರಿನಿಂದ ಇಳಿಯಬೇಕಾದ ಪರಿಸ್ಥಿತಿ ಬಂದ್ದಲ್ಲಿ ಟಾರ್ಚು ನಿಮ್ಮ ನೆರವಿಗೆ ಬರಲಿದೆ.

    Extra Money

    Extra Money

    ಹಾಗೆಯೇ 500ರಿಂದ 1000 ರು.ಗಳಷ್ಟು ಹೆಚ್ಚುವರಿ ಹಣಗಳನ್ನು ಕಾರಿನಲ್ಲಿ ಸುರಕ್ಷಿತವಾಗಿರಿಸುವುದರಿಂದ ನಿಮಗೆ ಎದುರಾಗಬಹುದಾದ ಹಣಕಾಸು ಸಮಸ್ಯೆ ನಿವಾರಿಸಬಹುದು.

    Extra Clothes

    Extra Clothes

    ಇದು ನಿಮ್ಮ ಆಯ್ಕೆಗೆ ಬಿಟ್ಟ ವಿಚಾರವಾದರೂ ಕೆಲವೊಂದು ಸಂದರ್ಭದಲ್ಲಿ ಕಾರನ್ನು ದುರಸ್ಥಿಗೊಳಿಸುವ ಪರಿಸ್ಥಿತಿ ಬಂದ್ದಲ್ಲಿ ಹೆಚ್ಚುವರಿ ಬಟ್ಟೆಯು ನಿಮ್ಮ ನೆರವಿಗೆ ಬರಲಿದೆ.

    ಕಾರು ಜಾಕಿ (Car Jack)

    ಕಾರು ಜಾಕಿ (Car Jack)

    ಇದು ಕಾರಿನಲ್ಲಿರಬೇಕಾದ ಮತ್ತೊಂದು ಅಗತ್ಯ ವಸ್ತುವಾಗಿದೆ. ಕಾರಿನ ಚಕ್ರಗಳನ್ನು ಬದಲಾಯಿಸುವಾಗ ಇದು ಹೆಚ್ಚು ಸಹಕಾರಿಯಾಗಲಿದೆ.

    ಹೆಚ್ಚುವರಿ ಚಕ್ರ (Spare Tire)

    ಹೆಚ್ಚುವರಿ ಚಕ್ರ (Spare Tire)

    ಈ ಮೊದಲೇ ತಿಳಿಸಿರುವಂತೆಯೇ ಹೆಚ್ಚುವರಿ ಚಕ್ರ ಖಂಡಿತ ನಿಮ್ಮ ನೆರವಿಗೆ ಬರಲಿದೆ. ಅಷ್ಟೇ ಅಲ್ಲದೆ ಇದರ ಉಪಯೋಗವನ್ನು ಬಹುತೇಕರು ಅರಿಯಬಲ್ಲರು.

    ಒರೆಸುವ ಬಟ್ಟೆ (Towel)

    ಒರೆಸುವ ಬಟ್ಟೆ (Towel)

    ಇದು ಅನೇಕ ಪ್ರಕಾರದಲ್ಲಿ ನಿಮ್ಮ ಬಳಕೆಗೆ ಬರಲಿದೆ. ಕೈ ಒರೆಸುವ ಬಟ್ಟೆಯನ್ನು ನಿಮ್ಮ ಅಗತ್ಯಕ್ಕಾನುಸಾರವಾಗಿ ಬಳಸಬಹುದಾಗಿದೆ.

Most Read Articles

Kannada
English summary
Car Car punctured? Loose Knobs? Engine Cranky? Jumpers needed? Spark Plug? We got the essentials that's going to save you from disaster - suggesting must haves that can keep you smiling and the engines rustling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X