ಸೇಫ್ ಡ್ರೈವಿಂಗ್‌ಗಾಗಿ ಟಾಪ್ 5 ಸಲಹೆಗಳು

ಈ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಜನರು ತಮ್ಮ ದೈನಂದಿನ ಚಟುವಟಿಕೆಗಳಿಂದ ಸ್ವಲ್ಪ ದೂರವುಳಿಯಲು ಬಯಸುತ್ತಾರೆ. ಅಂತವರು ಒಂದೆರಡು ದಿನಗಳು ಹಾಯಾಗಿರಲು ರಜಾ ದಿನಗಳಿಗಾಗಿ ಹಾತೊರೆಯುತ್ತಾರೆ. ಕಚೇರಿ ಕಲಾಪಗಳಿಂದ ಸ್ವಲ್ಪ ದೂರವುಳಿದು ತಮ್ಮ ಕುಟುಂಬದ ಜತೆ ದೂರ ಪ್ರಯಾಣ ಬೆಳೆಸಲು ಬಯಸುತ್ತಾರೆ. ಇದರಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.

ಆದರೆ ಒಂದು ಅಪಘಾತವು ಅಂತವರ ಕಾಲ ಚಕ್ರವನ್ನೇ ಬದಲಾಯಿಸಬಲ್ಲದು. ಹಾಗಾಗಿ ಸುರಕ್ಷಿತ ಪಯಣಕ್ಕಾಗಿ ತಮ್ಮ ಕಾರಿನಲ್ಲಿ ಕೆಲವೊಂದು ಸೇಫ್ ಡ್ರೈವಿಂಗ್‌ ಸಲಹೆಗಳನ್ನು ಅನುಸರಿಸುವುದು ಉತ್ತಮ.

ಡ್ರೈವಿಂಗ್ ಎಂಬುದು ಒಂದು ಉತ್ತಮ ಕಲೆಯಾಗಿದೆ. ಆದರೆ ಸ್ವಲ್ಪನೂ ಎಡವಟ್ಟಾದರೆ ಅಪಘಾತ ತಪ್ಪಿದ್ದಲ್ಲ. ಹಾಗಾಗಿ ಚಾಲನೆ ಸಂದರ್ಭದಲ್ಲಿ ನಿದ್ರಾ ದೇವಿಗೆ ಶರಣಾಗದೆ ಜಾಗರೂಕತೆಯಿಂದ ಆಲಸ್ಯ ವಹಿಸದೆ ಡ್ರೈವಿಂಗ್ ಮಾಡಬೇಕಾಗಿರುವುದು ಅತಿ ಅಗತ್ಯ.

ಮೊದಲನೆಯದಾಗಿ ಡ್ರೈವಿಂಗ್ ಮಾಡುವವರಲ್ಲಿ ಸ್ವಯಂ ಆತ್ಮವಿಶ್ವಾಸ ಹೊಂದಿರಬೇಕು. ಇತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬಲ್ಲೆನು ಎಂಬ ಆತ್ಮವಿಶ್ವಾಸ ಅವರಲ್ಲಿರಬೇಕು. ಇಂದಿನ ಆಧುನಿಕ ಯುಗದಲ್ಲಿ ಚಾಲಕನ ನೆರವಿಗಾಗಿ ಹಲವು ಸುರಕ್ಷಾ ಮಾನದಂಡಗಳನ್ನು ಕಾರಿನಲ್ಲಿ ಆಳವಡಿಸಲಾಗುತ್ತಿದೆ. ಈ ಕೆಳಗಿನ ಫೋಟೊ ಫೀಚರ್ ಮುಖಾಂತರ ಅವುಗಳ ಬಗ್ಗೆ ಚರ್ಚಿಸೋಣ.

ಸೆನ್ಸಿಟಿವ್ ಏರ್‌ಬ್ಯಾಗ್ಸ್

ಪ್ರಸ್ತುತ ಈ ವ್ಯವಸ್ಥೆ ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ತಮ್ಮ ಗಾಡಿಗಳಿಗೆ ಆಳವಡಿಸುತ್ತಿದೆ. ಆದರೆ ಇಂತಹ ಅತಿ ಸೂಕ್ಷ್ಮ ಏರ್‌ಬ್ಯಾಗ್‌ಗಳ ವಿಶೇಷತೆ ಏನೆಂದರೆ ಇದು ಚಾಲಕನ ಭಾರ ಹಾಗೂ ಆಕಾರ ಹಾಗೂ ಪರಿಸ್ಥಿತಿಯನ್ನು ಅರಿತುಕೊಂಡು ಏರ್‌ಬ್ಯಾಗ್‌ಗಳಲ್ಲಿ ಗಾಳಿ ತುಂಬುತ್ತದೆ. ಚಾಲಕ ಸೀಟ್ ಬೆಲ್ಟ್ ಧರಿಸಿದ್ದಾನೆಯೋ ಇಲ್ಲವೋ ಎಂಬುದನ್ನು ಕೂಡಾ ಇದರಿಂದ ಪತ್ತೆಹಚ್ಚಬಲ್ಲದು. ಆಕಸ್ಮಿಕ ಅಪಘಾತ ಸಂದರ್ಭದಲ್ಲಿ ಇದು ತುಂಬಾನೇ ಉಪಯೋಗಕ್ಕೆ ಬರುತ್ತದೆ.

ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ( Blind Spot Detection)

ನೀವು ಅಪರಿಚಿತ ರಸ್ತೆ ಮಾರ್ಗಗಳಲ್ಲಿ ಸಂಚರಿಸುವಾಗ ಅಥವಾ ರಾತ್ರಿ ವೇಳೆಯಲ್ಲಿ ಚಲಿಸುವಾಗ ಡ್ರೈವಿಂಗ್ ತುಂಬಾನೇ ಕಷ್ಟಕರವಾಗಬಹುದು. ಆದರೆ ಇಂತಹ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ಗಳಲ್ಲಿರುವ ಸೆನ್ಸಾರ್‌ಗಳು ರಸ್ತೆ ಎದುರುಗಡೆ ಇರುವ ವಸ್ತುಗಳ ಬಗ್ಗೆ ಮಾಹಿತಿಗಳನ್ನು ನೀಡಲಿದೆ. ಇದರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಪ್ಪಿಸಬಹುದು.

ನೈಟ್ ವಿಷನ್ ಸಿಸ್ಟಂ

ನೈಟ್ ವಿಷನ್ ಸಿಸ್ಟಂ ರಾತ್ರಿ ಸಂಚಾರಕ್ಕೆ ಉಪಯೋಗಕ್ಕೆ ಬರಲಿದೆ. ಇದು ರಸ್ತೆಯಲ್ಲಿ ಅಚಾನಕ್ ಅಡ್ಡಬರಲಿರುವ ಗಾಡಿ ಅಥವಾ ಜಾನುವಾರು ಇತ್ಯಾದಿ ಪ್ರಾಣಿಗಳ ಬಗ್ಗೆ ಅಲರ್ಟ್ ಮಾಡಲಿದೆ. ಇದರಿಂದ ಚಾಲಕನ ಪ್ರಯಾಣ ಸುಲಭವಾಗಲಿದೆ.

ಟಯರ್ ಪ್ರೆಶರ್ ಮಾನಿಟರ್ ಸಿಸ್ಟಂ

ಟಯರ್ ಪ್ರೆಶರ್ ಮಾನಿಟರ್ ಸಿಸ್ಟಂ

ಇದೊಂದು ಅತ್ಯುತ್ತಮ ವಿಧಾನವಾಗಿದೆ. ಟಯರ್ ಪಂಚರ್ ಆಗುವ ಸಮಸ್ಯೆಗಳ ಬಗ್ಗೆ ಚಾಲಕ ಮೊದಲೇ ಮಾಹಿತಿ ಹೊಂದಿರಬೇಕು. ಕೆಲವೊಂದು ಬಾರಿ ಇದು ಬಹುದೊಡ್ಡ ಅಪಘಾತಗಳಿಗೂ ಕಾರಣವಾಗಬಲ್ಲದು. ಹಾಗಾಗಿ ಇದನ್ನು ಸುಲಭವಾಗಿ ಆಳವಡಿಸಬಹುದಾಗಿದೆ. ಅಲ್ಲದೆ ಚಾಲನೆಯ ಸಂದರ್ಭದಲ್ಲಿ ಕಾರಿನ ನಾಲ್ಕು ಚಕ್ರಗಳಲ್ಲಿ ಉಂಟಾಗುವ ಒತ್ತಡದ ಬಗ್ಗೆ ಚಾಲಕನಿಗೆ ಮಾಹಿತಿ ದೊರೆಯುವುದು.

ರೋಲ್‌ಓವರ್ ಪ್ರಿವೆನ್ಷನ್ ಸಿಸ್ಟಂ

ರೋಲ್‌ಓವರ್ ಪ್ರಿವೆನ್ಷನ್ ಸಿಸ್ಟಂ

ಇಂದೊಂದು ಅದ್ಭುತ ಯೋಜನೆಯಾಗಿದ್ದು, ಎಸ್‌ಯುವಿ ಕಾರಿನಲ್ಲಿ ಅತಿ ಹೆಚ್ಚು ಬಳಕೆ ಬರುತ್ತದೆ. ಹಾಗಿದ್ದರೂ ಇವತ್ತಿನ ಎಲ್ಲ ಎಸ್‌ಯುವಿ ಕಾರುಗಳು ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಿಂದ ರಚಿಸಲ್ಪಟ್ಟಿದೆ. ಗಾಡಿ ವೇಗದಲ್ಲಿ ಚಲಿಸುವ ಸಂದರ್ಭದಲ್ಲಿ ಚಾಲಕ ಸಡನ್ ಬ್ರೇಕ್ ಹಾಕುವ ಸಂದರ್ಭದಲ್ಲಿ ಈ ಸಿಸ್ಟಿಂ ನೆರವಿಗೆ ಬರಲಿದೆ. ಈ ಮೂಲಕ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು.

ಸೇಫ್ ಡ್ರೈವಿಂಗ್‌ಗಾಗಿ ಟಾಪ್ 5 ಸಲಹೆಗಳು

ಮೇಲೆ ಹೇಳಲಾದ ಐದು ವಿಧಾನಗಳು ಚಾಲಕನ ಸುರಕ್ಷಿತ ಡ್ರೈವಿಂಗ್‌ಗೆ ನೆರವಾಗಲಿದೆ. ಈ ಎಲ್ಲ ವಿಧಾನಗಳನ್ನು ವಾಹನಗಳಿಗೆ ಸುಲಭವಾಗಿ ಆಳವಡಿಸಬಹುದು. ಕಂಪನಿಗಳು ಸಮಯಾನುಸಾರವಾಗಿ ಇಂತಹ ಉಪಕರಣಗಳ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದೆ.

Most Read Articles

Kannada
English summary
Our cars are becoming chicer, more fuel efficient and safer every day, as car manufacturers search for ways to satisfy our desire for the best and the safest. Here are our picks for the top 5 best new innovations in cars safety technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X